*ವಿದ್ಯಾಪ್ರವೇಶ ದಿನ-6*
✒️🚁🎮🎨🎲🧮📏🔍
*ನನ್ನ ಸಾಧನೆ*
(ಶನಿವಾರ)
ಪ್ರತಿಬಿಂಬ
● ಪ್ರತಿ ಮಗುವಿನ ತೊಡಗಿಸಿಕೊಳ್ಳುವಿಕೆ ಮತ್ತು ಕಲಿಕೆಯ
ಮೌಲ್ಯಾಂಕನ ಮಾಡುವುದು.
• ಕಲಿಕಾ ಕೊರತೆಯನ್ನು ಗುರುತಿಸಿ ಪ್ರತಿ ಮಗುವಿನ
ಅಗತ್ಯತೆಗನುಗುಣವಾಗಿ ಬೋಧನಾ ವಿಧಾನ/
ಚಟುವಟಿಕೆಯನ್ನು ರೂಪಿಸುವುದು ಮತ್ತು
ಬದಲಾಯಿಸಿಕೊಳ್ಳುವುದು.
• ಮುಂದಿನ ವಾರದ ಚಟುವಟಿಕೆಗಳನ್ನು
ಯೋಜಿಸುವುದು.
• ಸಾಧನೆಯ ಮೌಲ್ಯಮಾಪನವನ್ನು ಎಲ್ಲ ಮೂರು
ಅಭಿವೃದ್ಧಿ ಗುರಿಗಳಲ್ಲಿಯೂ ಮಾಡುವುದು.
*ಪ್ರತಿ ಮಗುವು ತರಗತಿ ಕೋಣೆ ಅಥವಾ
ಹೊರಾಂಗಣದಲ್ಲಿ ನಡೆಯುವ ಆಟ/ಚಟುವಟಿಕೆ/
ಕಲಿಕಾ ಅನುಭವದಲ್ಲಿ ಭಾಗವಹಿಸುವ ರೀತಿಯನ್ನು
ಅವಲೋಕಿಸಿ ಪ್ರಗತಿ ದಾಖಲಿಸುವುದು.
* ಆಸಕ್ತಿಗಳನ್ನು ಪತ್ತೆಹಚ್ಚುವುದು ಮತ್ತು ವಿರಳವಾಗಿ
ಭಾಗವಹಿಸುವ ಅಥವಾ ಭಾಗವಹಿಸದೇ ಇರುವ
ಚಟುವಟಿಕೆಗಳನ್ನು ಗುರುತಿಸಿ ಸೂಕ್ತ ಬದಲಾವಣೆ
ಮಾಡಿಕೊಳ್ಳುವುದು.
* ನಿರೀಕ್ಷಿತ ಕಲಿಕಾಫಲಗಳ ಸಾಧನೆಯ ಪ್ರಮಾಣವನ್ನು
ನಿಖರವಾಗಿ ನಮೂದಿಸುವುದು.
(ತರಗತಿಯಲ್ಲಿನ ನಿರಂತರ
ಮೌಲ್ಯಮಾಪನ)
* ವಿವಿಧ ತಂತ್ರಗಳ ಮೂಲಕ (ವೀಕ್ಷಣೆ, ತಪಶೀಲು ಪಟ್ಟಿ, ಮಕ್ಕಳು ಮಾಡಿದ ಅಭ್ಯಾಸದ ಹಾಳೆಗಳು,
ವೀಡಿಯೋ, ಆಡಿಯೋ ತುಣುಕುಗಳು, ಸಾಂದರ್ಭಿಕ ಟಿಪ್ಪಣಿಗಳು ಇತ್ಯಾದಿ) ನೀವು ಸಂಗ್ರಹಿಸಿದ
ಮೌಲ್ಯಮಾಪನ ದತ್ತಾಂಶವನ್ನು ಪುನರಾವಲೋಕಿಸಿ.
* ಪ್ರತಿ ಮಗುವಿನ ವೈಯಕ್ತಿಕ ಅಗತ್ಯತೆಗನುಗುಣವಾಗಿ ಮುಂದಿನ ವಾರದ ಕಲಿಕಾ ಪ್ರಕ್ರಿಯೆಯನ್ನು
ಯೋಜಿಸಿ.
* ಕಲಿಕೆಯ ಮೂರೂ ಅಭಿವೃದ್ಧಿ ಗುರಿಗಳಲ್ಲಿ ಸಾಧನೆಯ ಮೌಲ್ಯಮಾಪನವನ್ನು ಪುನರಾವಲೋಕಿಸಿ.
ಗಳಿಸಿದ ಕಲಿಕಾ ಫಲಗಳು
*ಅಪರೂಪಕ್ಕೆ
*ಕೆಲವೊಮ್ಮೆ
*ಯಾವಾಗಲೂ
೧ ಶಾಲೆಯ ದಿನಚರಿಗೆ ಹೊಂದಿಕೊಳ್ಳುವರು.
೨ ಸಂತೋಷದಿ೦ದ ಶಾಲೆಗೆ ಬರುವರು.
೩ ಶಿಕ್ಷಕರಿಗೆ ಮತ್ತು ಸ್ನೇಹಿತರಿಗೆ ಶುಭ ಕೋರುವರು.
೪ ಗುಂಪು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವರು.
೫ ಸರಳ ಸೂಚನೆಗಳನ್ನು ಅನುಸರಿಸುವರು.
೬ ತನ್ನ ಸುತ್ತಮುತ್ತಲಿನ ಪರಿಸರದ ಬಗ್ಗೆ ಕುತೂಹಲ ತೋರಿಸುವರು.
೭ ಜೇಡಿಮಣ್ಣು/ಹಿಟ್ಟಿನಿಂದ ಮಾದರಿ ತಯಾರಿಸುವುದನ್ನು
ಆನಂದಿಸುವರು.
೮ ಒಂದೇ ರೀತಿಯ ವಸ್ತುಗಳನ್ನು ಗುಂಪು ಮಾಡುವರು.
೯ ಇಂದ್ರಿಯಗಳ ಸಹಾಯದಿಂದ ವಸ್ತುಗಳನ್ನು ಗುರುತಿಸುವರು.
೧೦ ಪ್ರಾಸಗೀತೆಗಳನ್ನು ಆನಂದಿಸುವರು.
೧೧ ಚಿತ್ರಪಟದಲ್ಲಿನ ವಸ್ತುಗಳನ್ನು ಹೆಸರಿಸುವರು.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
https://www.schooleducation.kar.nic.in/
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment