*ವಿದ್ಯಾ ಪ್ರವೇಶ ದಿನ-7*
✒️🚁🎮🎨🎲🧮📏🔍
ಅವಧಿ - 40ನಿ
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
ಚಟುವಟಿಕೆ ೧: ಹಕ್ಕಿಯಂತೆ ಹಾರು.
ಸಾಮಗ್ರಿ: ಡ್ರಮ್
ವಿಧಾನ:
ಹಕ್ಕಿಯಂತೆ ಹಾರುವ ಅಭಿನಯ ಮಾಡುತ್ತಾ ತರಗತಿಗೆ ಪ್ರವೇಶಿಸಲು ಮಕ್ಕಳಿಗೆ ಹೇಳಿ- ಮತ್ತು 'ಹಾಯ್‌ಟೀಚರ್' ಎಂದು ಹೇಳಿಸಿ.
"ಹಲೋ,_______- ಎಂದು ಮಕ್ಕಳ ಹೆಸರು ಹೇಳಿ ಅವರನ್ನು ಸ್ವಾಗತಿಸಿ.
ಲೆಫ್ಟ್ ರೈಟ್ ಲೆಫ್ಟ್ ಎಂದು ಹೇಳುತ್ತಾ ಮಾರ್ಚ್ಪಾಸ್ಟ್ ಮಾಡುತ್ತಾ ತರಗತಿಯಲ್ಲಿ ವೃತ್ತವನ್ನು ರಚಿಸಲು ಮಕ್ಕಳಿಗೆ ತಿಳಿಸಿ. ಶಿಕ್ಷಕರು ಅದನ್ನು ಆಸಕ್ತಿದಾಯಕವಾಗಿಸಲು ಡ್ರಮ್‌ಅನ್ನು ಬಳಸಬಹುದು. (ಮಕ್ಕಳ ಮೊಣಕಾಲುಗಳು ಸರಿಯಾಗಿ ಬಾಗುವುದನ್ನು ಖಚಿತಪಡಿಸಿಕೊಳ್ಳಿ, ಮತ್ತು ಅವರ ಪಾದಗಳು ನೆಲವನ್ನು ಸ್ಪರ್ಶಿಸುವುದನ್ನು ಖಚಿತ ಪಡಿಸಿಕೊಳ್ಳಿ.)
ಚಟುವಟಿಕೆ ೨: ಕೆಂಪು, ಹಳದಿ ಮತ್ತು ಹಸಿರು [ಟ್ರಾಫಿಕ್ ಸಿಗ್ನಲ್]
ಅಗತ್ಯವಿರುವ ಸಾಮಗ್ರಿಗಳು: ಟ್ರಾಫಿಕ್ ಸಿಗ್ನಲ್ ದೀಪಗಳ ಮಾದರಿ / ಕೆಂಪು, ಹಳದಿ, ಹಸಿರು ಕಾರ್ಡ್ ಗಳು
ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲುವಂತೆ ಮಾಡಿ ಮತ್ತು ಸೂಚನೆಗಳನ್ನು ವಿವರಿಸಿ.
ಅವರು "ಹಳದಿ ಬೆಳಕು" ಕೇಳಿದಾಗ/ನೋಡಿದಾಗ, ಅವರು ನಡೆಯಬೇಕು,
ಅವರು "ಹಸಿರು ಬೆಳಕು" ಕೇಳಿದಾಗ ಅವರು ಹಕ್ಕಿಯಂತೆ ಹಾರಬೇಕು, ಮತ್ತು
ಅವರು "ಕೆಂಪು ಬೆಳಕು" ಕೇಳಿದಾಗ "ಅವರು ನಿಂತು ನಗಬೇಕು. ಚಟುವಟಿಕೆಯನ್ನು ೩ ರಿಂದ ನಾಲ್ಕು ಬಾರಿ ಪುನರಾವರ್ತಿಸಿ…
*ಮಾತು ಕತೆ*
ದಿನ -೧ ರ ಮಾತುಕತೆ ಚಟುವಟಿಕೆಯನ್ನು ಮಾಡಿಸಿ
ಅವಧಿ - 40ನಿ
*ನನ್ನ ಸಮಯ*
(Free indoor play) ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.
ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ - 40ನಿ
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ
ಪ್ರಾರಂಭಿಸುವ(ನಿರ್ದೇಶಿತ) ಚಟುವಟಿಕೆ) ಸಾಮರ್ಥ್ಯ : ಶಬ್ದದ ಅರಿವು, ಸ್ಮರಣೆ ಮತ್ತು ಪರಿಸರದ ಅರಿವು.
ಚಟುವಟಿಕೆ...೨ ಆಲಿಸಿ ಹೇಳು (ಗುರಿ ೩)
ಉದ್ದೇಶಗಳು:- ವಿವಿಧ ಧ್ವನಿಗಳನ್ನು ಆಲಿಸುವುದು.
ಅಗತ್ಯ ಸಾಮಗ್ರಿಗಳು : ಶ್ರವಣ ಉಪಕರಣ/ಮೋಬೈಲ್
ವಿಧಾನ : ಮಕ್ಕಳನ್ನು ವಿವಿಧ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುವುದು. ಪ್ರತಿ ಗುಂಪಿನ ಮಕ್ಕಳು ಶ್ರವಣ ಉಪಕರಣದ ಸಹಾಯದಿಂದ ಪ್ರಾಣಿಗಳ ಧ್ವನಿಗಳನ್ನು ಆಲಿಸಿ, ಯಾವ ಪ್ರಾಣಿ ಎಂದು ಗುರುತಿಸುವುದು. ಪ್ರತಿ ಮಗುವಿಗೂ ಅವಕಾಶ ಸಿಗುವವರೆಗೆ ಚಟುವಟಿಕೆ ಮುಂದುವರೆಸುವುದು.
ತರಗತಿ-೨, ೩
೧. ಶಿಕ್ಷಕರು ಪ್ರಾಣಿ ಪಕ್ಷಿಗಳ ಧ್ವನಿಯ ಅನುಕರಣೆ ಮಾಡಿ, ಇದು ಯಾವ ಪ್ರಾಣಿ ಪಕ್ಷಿಯ ಕೂಗು ಎಂದು ಗುರುತಿಸಲು ಹೇಳುವುದು.
೨. ಪ್ರಾಣಿ ಮತ್ತು ಪಕ್ಷಿಗಳ ಕೂಗುಗಳನ್ನು ಅನುಕರಿಸಲು ಹೇಳುವುದು.
ಅವಧಿ - 40ನಿ
*ಸೃಜನಶೀಲ ಕಲೆ ಹಾಗೂ ಸೂಕ್ಷö್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ) ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ನಡುವೆ ಸಮನ್ವಯತೆ.ಆಕಾರಗಳ ಪರಿಕಲ್ಪನೆ.
ಚಟುವಟಿಕೆ – ೩೩ ಟ್ರೇಸ್ ಮಾಡುವುದು.[ ಮರಳು.] ಗುರಿ - ೧
ಉದ್ದೇಶ.
ಸೂಕ್ಮ ಸ್ನಾಯುಗಳ ಅಭಿವೃದ್ದಿಯಾಗುತ್ತದೆ.
ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತದೆ.
ಬರವಣಿಗೆಗೆ ಪೂರಕ ಚಟುವಟಿಕೆಯಾಗಿರುತ್ತದೆ.
ಸಾಮಗ್ರಿಗಳು : ಮರಳು.
ವಿಧಾನ : ಮಕ್ಕಳಿಗೆ ಒಂದು ಟ್ರೇನಲ್ಲಿ ಮರಳನ್ನು ನೀಡುವುದು ಮತ್ತು ಅವರಿಗೆ ಮರಳಿನ ಮೇಲೆ ಬರೆಯಲು ಸಣ್ಣ ಕಡ್ಡಿಯನ್ನು ಕೊಡುವುದು.ಮರಳಿನ ಮೇಲೆ ವಿವಿಧ ವಕ್ರಾಕೃತಿ ರೇಖೆಗಳನ್ನು ಮಾಡಲು ಹೇಳುವುದು.
ವಿವರ; ೨ ಮತ್ತು ೩ ನೇ ತರಗತಿಗೆ ಸರಳರೇಖೆ ಮತ್ತು ವಕ್ರ ರೇಖೆಗಳನ್ನು ಬಳಸಿ ತಮ್ಮ ಇಷ್ಟದ ಚಿತ್ರ ಬರೆಯಲು ಅವಕಾಶ ಮಾಡಿಕೊಡುವುದು.
ಅವಧಿ - 60ನಿ
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತು ಮಾತನಾಡುವುದು* ಸಾಮರ್ಥ್ಯ : ಆಲಿಸುವಿಕೆ, ಸೃಜನಾತ್ಮಕ, ಸ್ವ- ಆಭಿವ್ಯಕ್ತಿ, ಔಪಚಾರಿಕ ಮಾತುಗಾರಿಕೆ,
ಚಟುವಟಿಕೆ: ೮. ಆಶುಭಾಷಣ (ಗುರಿ-೨)
ಉದ್ದೇಶ :
* ಆಯ್ದುಕೊಂಡ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡುವುದು.
* ಔಪಚಾರಿಕ ಮಾತುಗಾರಿಕೆಯ ಕೌಶಲವನ್ನು ಬೆಳೆಸುವುದು.
* ಆಲಿಸಿದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವುದು.
* ಸೃಜನಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.
ಸಾಮಗ್ರಿ : ಪ್ರಾಣಿ, ಪಕ್ಷಿ, ವಾಹನಗಳ ಚಿತ್ರಗಳ ಮಿಂಚುಪಟ್ಟಿಗಳು
ವಿಧಾನ : ಡಬ್ಬದಲ್ಲಿ ಪ್ರಾಣಿ, ಪಕ್ಷಿ, ವಿವಿಧ ವಾಹನಗಳ ಚಿತ್ರಗಳ ಮಿಂಚುಪಟ್ಟಿಗಳನ್ನು ಹಾಕುವುದು, . ಮಕ್ಕಳಿಗೆ ಡಬ್ಬದಲ್ಲಿ ಕೈ ಹಾಕಿ ಯಾವುದಾದರೂ ಒಂದು ಮಿಂಚುಪಟ್ಟಿಯನ್ನು ತೆಗೆದುಕೊಂಡು ಅದರಲ್ಲಿರುವ ಚಿತ್ರದ ಬಗ್ಗೆ ತಮ್ಮದೇ ಮಾತುಗಳಲ್ಲಿ ಹೇಳಲು ಅವಕಾಶ ನೀಡುವುದು.
ತರಗತಿವಾರು ವಿವರ: ೨ ನೇ ತರಗತಿಯ ಮಕ್ಕಳು ಆಯ್ಕೆ ಮಾಡಿಕೊಂಡ ವಿಷಯದ ಕುರಿತು ೨ ರಿಂದ ೩ ನಿಮಿಷಗಳ ಕಾಲ ಮಾತನಾಡುವುದು.. ೩ನೇ ತರಗತಿಯ ಮಕ್ಕಳು ವಿಷಯದ ದೈನಂದಿನ ಬಳಕೆ ಅಥವಾ ಅನ್ವಯಿಕ ಅಂಶಗಳ ಬಗ್ಗೆ ಮಾತನಾಡುವುದು.
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಚಟುವಟಿಕೆ....೧೮
ಚಿತ್ರ ಸಂಪುಟ (ಗುರಿ-೨) ವಿಷಯ: 'ಉದ್ಯಾನದಲ್ಲಿ ನೀವು ನೋಡಿರುವ ವಸ್ತುಗಳು/ವಿಷಯಗಳು',
ಉದ್ಧೇಶ:
ಚಿತ್ರದಲ್ಲಿನ ವಸ್ತು/ವ್ಯಕ್ತಿ/ಘಟನೆಗಳನ್ನು ಹೆಸರಿಸುವುದು ಊಹಿಸಿ ಅರ್ಥೈಸಿಕೊಳ್ಳಲು ಚಿತ್ರದೊಂದಿಗೆ ಪಠ್ಯವನ್ನು ಸಂಬ0ಧಿಕರಿಸುವುದು.
ಮಕ್ಕಳು ಚಿತ್ರಓದುವುದು ಮತ್ತು ಚರ್ಚಿಸಿ ಅರ್ಥಮಾಡಿಕೊಳ್ಳುವುದು ಮತ್ತು ವೈಯಕ್ತಿಕಚಿತ್ರ ಸಂಪುಟಗಳನ್ನು ರಚಿಸಿ ವೈಯಕ್ತಿಕವಾಗಿ ಮತ್ತು ಗುಂಪುಗಳಲ್ಲಿ ಮಂಡಿಸುವುದು ಮತ್ತು ಗುಂಪಿನಲ್ಲಿ ಕುಳಿತು ಗೋಡೆ ಪತ್ರಿಕೆಗಳನ್ನು ರಚಿಸುವುದು.
ಅಗತ್ಯ ಸಾಮಗ್ರಿಗಳು : ಮಕ್ಕಳು ರಚಿಸಿದ ಚಿತ್ರಗಳು
ವಿಧಾನ : 'ಉದ್ಯಾನದಲ್ಲಿ ನೀವು ನೋಡಿರುವ ವಸ್ತುಗಳು/ವಿಷಯಗಳಿಗೆ ಸಂಬ0ಧಿಸಿದ0ತೆ ಮಕ್ಕಳು ಬರೆದ ಚಿತ್ರಗಳನ್ನು ಕೃತಿಸಂಪುಟದಿ0ದ ತೆಗೆದು ಅದರ ಬಗ್ಗೆ ಸಹಜವಾಗಿ ಮಾತನಾಡಲು ಪ್ರೋತ್ಸಾಹಿಸುವುದು.
ಶಿಕ್ಷಕರು ೨ ಮತ್ತು ೩ನೇ ತರಗತಿಯ ಮಕ್ಕಳು ೧ನೇ ತರಗತಿಯ ಮಕ್ಕಳೊಂದಿಗೆ ಪರಸ್ಪರ ಸಹಾಯ ಒದಗಿಸಲು ಸೂಚಿಸುವುದು ಮತ್ತು ವಿಷಯದ ವಿಸ್ತಾರವನ್ನು ಚರ್ಚಿಸುವಾಗ ಎಲ್ಲಾ ಮಕ್ಕಳೂ ಅಭಿವ್ಯಕ್ತಿಸುವುದನ್ನು ಖಾತ್ರಿಪಡಿಕೊಳ್ಳುವುದು ಜೊತೆಗೆ ೨ನೇ ಮತ್ತು ೩ನೇತರಗತಿಯ ಮಕ್ಕಳಿಗೂ ಸ್ವತಂತ್ರವಾಗಿ ಮಾತನಾಡಲು ಅವಕಾಶ ನೀಡುವುದು.
(ಸದರಿ ಚಟುವಟಿಕೆಯ ಮುಂದುವರೆದ ಭಾಗವು ೧೧ನೇ ದಿನದಲ್ಲಿ ಮುಂದುವರೆಯುವುದು)
*ಉದ್ದೇಶಿತ ಬರಹ*
ಸಾಮರ್ಥ್ಯ: ಬರವಣಿಗೆಯ ಆರಂಭಿಕ ಕೌಶಲ, ಬರವಣಿಗೆಯೆಡೆಗೆ ಒಲವು/ ಆಸಕ್ತಿ
ಚಟುವಟಿಕೆ : ತೋಚಿದಂತೆ ಗೀಚು. (ಗುರಿ-೨)
ಉದ್ದೇಶಗಳು:
* ಬರವಣಿಗೆಯ ಆರಂಭಿಕ ಕೌಶಲಗಳನ್ನು ರೂಢಿಸುವುದು.
* ಬರವಣಿಗೆಯ ಬಗ್ಗೆ ಒಲವು/ ಆಸಕ್ತಿ ಮೂಡಿಸುವುದು.
ಅಗತ್ಯ ಸಾಮಗ್ರಿ :
ದಿನಪತ್ರಿಕೆಗಳು ಖಾಲಿ ಹಾಳೆಗಳು, ಕ್ರಯಾನ್ಸ್, ಪೆನ್ಸಿಲ್ ಇತ್ಯಾದಿ.
ವಿಧಾನ :
* ಮಕ್ಕಳಿಗೆ ದಿನಪತ್ರಿಕೆ/ ಖಾಲಿ ಹಾಳೆಗಳನ್ನು ಕೊಡುವುದು.
* ಅವರಿಗೆ ಇಷ್ಟಬಂದ0ತೆ ಗೀಚಲು/ ಬರೆಯಲು ತಿಳಿಸುವುದು.
* ಎಲ್ಲ ಮಕ್ಕಳ ಬರೆಹ/ ಚಿತ್ರ ರಚನೆಯನ್ನು ಪ್ರದರ್ಶಿಸಿ ಪ್ರೋತ್ಸಾಹಿಸುವುದು.
ತರಗತಿವಾರು ವಿವರ:
೨ ಮತ್ತು ೩ನೇ ತರಗತಿಯ ಮಕ್ಕಳಿಗೆ ಅಕ್ಷರ/ ಅಂಕಿಗಳನ್ನು ಬಳಸಿ ವಿವಿಧ ಚಿತ್ರಗಳನ್ನು ಬರೆಯಲು ಪ್ರೇರೇಪಿಸುವುದು.
ಅವಧಿ - 40ನಿ
*ಹೊರಾಂಗಣ ಆಟಗಳು*
ಚಟುವಟಿಕೆ -
ಚೆಂಡನ್ನು ಬುಟ್ಟಿಗೆ ಎಸೆ ಗುರಿ-೧
ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ.
ಬೇಕಾಗುವ ಸಾಮಗ್ರಿ: ಚೆಂಡು
ವಿಧಾನ:
• ಒಂದು ಬುಟ್ಟಿಯನ್ನು ಸ್ವಲ್ಪ ದೂರದಲ್ಲಿ ಇರಿಸುವುದು.
• ಬುಟ್ಟಿಯಿಂದ ಸ್ವಲ್ಪ ದೂರದಲ್ಲಿ ಒಂದು ಗೆರೆಯನ್ನೆಳೆದು ಮಕ್ಕಳಿಗೆ ಆ ಗೆರೆಯಲ್ಲಿ ನಿಂತು ಚೆಂಡನ್ನು ಬುಟ್ಟಿಗೆ ಎಸೆಯುವಂತೆ ಸೂಚಿಸುವುದು.
ಎರಡು ಮತ್ತು ಮೂರನೇ ತರಗತಿ ಮಕ್ಕಳಿಗೆ ಬುಟ್ಟಿಯ ದೂರವನ್ನು ಹೆಚ್ಚಿಸುತ್ತಾ ಆಟವಾಡಿಸುವುದು.
ಅವಧಿ - 40
*ಕಥಾ ಸಮಯ* ಶೀರ್ಷಿಕೆ :ಗೆಳೆಯರ ಬೇಸಾಯ
ಸಾಮಗ್ರಿಗಳು :ಕಥೆಯ ಸಾಹಿತ್ಯ
ಉದ್ದೇಶ :
ಆಲಿಸುವ ಸಾಮರ್ಥ್ಯ ಬೆಳೆಸುವುದು.
ಊಹಿಸುವ ಕೌಶಲವನ್ನು ಹೆಚ್ಚಿಸುವುದು.
ವಿಧಾನ :
ಶಿಕ್ಷಕರು ಕಥೆ ಹೇಳುವ ಮುನ್ನಕಥೆಯನ್ನು ಓದಿ ಅರ್ಥೈಸಿಕೊಳ್ಳಬೇಕು.
ಸೂಕ್ತ ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲ್ಲಿಕಥೆಯನ್ನು ಹೇಳಬೇಕು.
ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.
ಸರಳ ಪ್ರಶ್ನೆಗಳ್ನು ಕೇಳಿ ಕಥೆಯನ್ನುಅರ್ಥೈಸಬೇಕು.
ಕಥೆ :
ಒಮ್ಮೆನರಿ ಮತ್ತುಕರಡಿಕೂಡಿ ಬೇಸಾಯ ಮಾಡಲು ಹೊರಟವು. ಜಾಣ ನರಿಯುಭೂಮಿಯ ಮೇಲೆ ಬೆಳೆಯುವ ಭಾಗ ನನಗೆ ಇರಲಿ, ಭೂಮಿಯ ಒಳಗೆ ಬೆಳೆಯುವ ಭಾಗ ನಿನಗೆ ಎನ್ನುವಕರಾರು ಹಾಕಿತು. ಇಬ್ಬರೂ ಸೇರಿ ಸೌತೆಕಾಯಿ ಬೆಳೆದರು. ಸೌತೆಕಾಯಿಗಳೆಲ್ಲ ನರಿಯ ಪಾಲಾದವು. ಕರಡಿಗೆ ಬೇರುಗಳು, ಬಳ್ಳಿಗಳು ದೊರೆತವು. ಬೇಸರಗೊಂಡಕರಡಿ ಈ ಬಾರಿ ಭೂಮಿಯ ಮೇಲಿನ ಬೆಳೆಯಭಾಗ ನನಗೆ ಎಂದಿತು. ಹಾಗೆಯೇಆಗಲಿ ಎಂದು ನರಿಯುಒಪ್ಪಿಕೊಂಡಿತು. ನರಿಯು ಈ ಬಾರಿಯೂಜಾಣತನದಿಂದಗೆಣಸು ಬೆಳೆಯೋಣ ಎಂದಿತು.ಅದಕ್ಕೆಕರಡಿಯೂಒಪ್ಪಿತು. ಈ ಸಲವೂ ಭೂಮಿಯ ಒಳಗಿನ ಭಾಗವಾದಗೆಣಸು ನರಿಯ ಪಾಲಾಯಿತು. ಬಳ್ಳಿಗಳು ಮಾತ್ರಕರಡಿಗೆ ಸಿಕ್ಕಿತು. ನರಿಯ ಮೋಸಗಾರಿಕೆ ತಿಳಿದ ಕರಡಿಯುಅದರ ಸಹವಾಸವೇ ಬೇಡಾಎಂದುಸಪ್ಪೆ ಮೋರೆ ಹಾಕಿಕೊಂಡುಹೊರಟುಹೋಯಿತು.
ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
೩)ಬೇಸಾಯ ಮಾಡಲುಯಾರುಯಾರು ಹೊರಟರು?
೪)ಮೊದಲು ಬೆಳೆದ ಬೆಳೆ ಯಾವುದು?
(ಕಥೆಯನ್ನು ಆನಂದಿಸುವುದರಜೊತೆಗೆ, ಆಲಿಸುತ್ತಿದ್ದಾರೆಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
ಅವಧಿ - 20ನಿ
* *ಮತ್ತೆ ಸಿಗೋಣ**
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
“ನೀನೇ ಮಾಡಿ ನೋಡು” ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
https://www.schooleducation.kar.nic.in/
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment