Friday, 17 June 2022

ವಿದ್ಯಾ ಪ್ರವೇಶ ದಿನ - 5

 *ವಿದ್ಯಾಪ್ರವೇಶ ದಿನ-5* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)  


ದಿನ - ೪ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ಚಟುವಟಿಕೆಯನ್ನು ಪುನರಾವರ್ತಿಸಿ.



*ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

 ದಿನ - ೪ರ ಮಾತುಕತೆ ಚಟುವಟಿಕೆಯನ್ನು ಪುನರಾವರ್ತಿಸಿ

---–------------------------------

 

ಅವಧಿ-2 (40ನಿ)

*ನನ್ನ ಸಮಯ* 


ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.

ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


----------------------------–----–-

ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ 

ನಿರ್ದೇಶಿತ ಚಟುವಟಿಕೆ)

 ಸಾಮರ್ಥ್ಯ : ವಿಂಗಡಣೆ, ಪರಿಸರದ ಅರಿವು.

ಚಟುವಟಿಕೆ : ಗುಂಪು ಮಾಡುವುದು. (ಗುರಿ-೩)

ಉದ್ದೇಶ:- ವಸ್ತುವಿನ ಭೌತಿಕ ಲಕ್ಷಣಗಳನ್ನು ಆಧರಿಸಿ ವಿಂಗಡಿಸುವುದು.

ಅಗತ್ಯ ಸಾಮಗ್ರಿಗಳು : ವಿವಿಧ ತರಹದ ಬ್ಲಾಕ್‌ಗಳು, ಗುಂಡಿಗಳು, ಗೋಲಿಗಳು, ಬೀಜಗಳು, ರಿಂಗ್ಸ್, ಆಟಿಕೆಗಳು/ 

ಗಣಿತ ಕಲಿಕಾ ಆಂದೋಲನದ ಕಿಟ್

ವಿಧಾನ : ವಸ್ತುವಿನ ಭೌತಿಕ ಲಕ್ಷಣಗಳನ್ನು ಆಧರಿಸಿ ಹೋಲಿಕೆ ಮಾಡಿ ಅದಕ್ಕೆ ಅನುಗುಣವಾಗಿ ವಸ್ತುಗಳನ್ನು 

ಗುಂಪುಗಳಾಗಿ ವಿಂಗಡಿಸಿ, ಅವುಗಳ ವ್ಯತ್ಯಾಸಗಳನ್ನು ಗಮನಿಸುವುದು.

ಉದಾ: ವಿವಿಧ ತರಹದ ಬ್ಲಾಕ್‌ಗಳು, ಗುಂಡಿಗಳು, ಗೋಲಿಗಳು, ಬೀಜಗಳು, ರಿಂಗ್ಸ್, ಆಟಿಕೆಗಳು. ಇವುಗಳನ್ನು 

ಆಕಾರ, ಗಾತ್ರ, ಬಣ್ಣ ಆಧಾರದ ಮೇಲೆ ಗುಂಪುಗಳಾಗಿ ವಿಂಗಡಿಸುವುದು.

ಈ ಪ್ರಕ್ರಿಯೆಯ ಅನುಭವ ಪಡೆದ ನಂತರ ಯಾವ ಲಕ್ಷಣಗಳ ಆಧಾರದ ಮೇಲೆ ವಿಂಗಡಿಸಲಾಗಿದೆ ಎಂದು 

ತಿಳಿಸಲಿ.

ತರಗತಿ-೨

೧. ಶಾಲೆಯಲ್ಲಿ ಲಭ್ಯವಿರುವ ವಿವಿಧ ವಸ್ತು ಮತ್ತು ಆಟೋಪಕರಣಗಳನ್ನು ಗಾತ್ರ, ಆಕಾರ ಮತ್ತು ಬಣ್ಣಗಳ ಆಧಾರದ ಮೇಲೆ ವಿಂಗಡಿಸಲು ಹೇಳುವುದು.

೨. ವಸ್ತುಗಳನ್ನು ಯಾವ ಆಧಾರದ ಮೇಲೆ ವಿಂಗಡಿಸಿದಿರಿ ಎಂದು ಪ್ರಶ್ನಿಸುವುದು.

ತರಗತಿ-೩

ಬಾಲ್, ರಿಂಗ್, ಹುಣಸೆಬೀಜ, ಗೋಲಿ, ಮಣಿಗಳು ಇತ್ಯಾದಿ ವಸ್ತುಗಳನ್ನು ತೋರಿಸಿ ಅವುಗಳ ಹೆಸರು ಮತ್ತು 

ಅವುಗಳ ಗುಣಲಕ್ಷಣಗಳ ಬಗ್ಗೆ ಹೇಳಿಸುವುದು.

* ಬಳಸಬೇಕಾದ ಅಭ್ಯಾಸ ಹಾಳೆಗಳು: I.L-೪ (೦೧, ೦೨, ೦೩ನೇ ತರಗತಿ)

----------------------–---------


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

 ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.

ಚಟುವಟಿಕೆ : ಕ್ಲೇ/ ಮಣ್ಣು ಅಥವಾ ಹಿಟ್ಟಿನಿಂದ ಅಚ್ಚು ತೆಗೆಯುವುದು. ಗುರಿ-೧

ಉದ್ದೇಶಗಳು:

ಸೂಕ್ಮ ಸ್ನಾಯುಗಳ ಅಭಿವೃದ್ದಿಯಾಗುವುದು.

ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.

ತಮ್ಮ ಕಲ್ಪನೆಯ ಆಕೃತಿ ಮೂಡಿಸುವುದರ ಜೊತೆಗೆ ಸೃಜನ ಶೀಲತೆಯನ್ನು ಅಭಿವ್ಯಕ್ತಗೊಳಿಸಲು ಸಹಕಾ-

ರಿಯಾಗುವುದು.

ಸಾಮಗ್ರಿಗಳು : ಕ್ಲೇ ಅಥವಾ ಕಲಸಿದ ಹಿಟ್ಟು.

ವಿಧಾನ: ಮಕ್ಕಳಿಗೆ ಕ್ಲೇ/ ಮಣ್ಣು ಅಥವಾ ಕಲಸಿದ ಹಿಟ್ಟನ್ನು ನೀಡಿ ಅದರೊಂದಿಗೆ ತಮ್ಮ ಆಯ್ಕೆಯ ಮಾದರಿಗಳನ್ನು 

ಮಾಡಲು ಹೇಳುವುದು. ಹಬ್ಬಗಳಿಗೆ ಸಂಬಂದಿಸಿದ0ತೆ ದೀಪಾ ಇತ್ಯಾದಿ ಮಾದರಿಗಳನ್ನು ಮಾಡಲು ಹೇಳಿ 

ನಂತರ ಬಣ್ಣ ತುಂಬಲು ಹೇಳುವುದು. ಮಕ್ಕಳು ಕ್ಲೇ ಅಥವಾ ಹಿಟ್ಟಿನಲ್ಲಿ ಮಾದರಿಗಳನ್ನು ತಯಾರಿಸುವಾಗ 

ಸುಗಮಕಾರರು ಗಮನಿಸುತ್ತಿರಬೇಕು. ಚಟುವಟಿಕೆ ಮುಗಿದ ಮೇಲೆ ಮಕ್ಕಳು ತಯಾರಿಸಿದ ಮಾದರಿಯನ್ನು 

ವಿವರಿಸಲು ಹೇಳುವುದು. ಸುಗಮಕಾರರು ಮಕ್ಕಳಿಗೆ ವಿವಿಧ ಮಾದರಿಗಳನ್ನು ತಯಾರಿಸಲು ಸಣ್ಣ ಮೊಂಡಾದ 

ಪ್ಲಾಸ್ಟಿಕ್ ಚಾಕು , ಅಚ್ಚುಗಳು ಮತ್ತು ರೋಲಿಂಗ್ ಪಿನ್ನುಗಳು ಅಥವಾ ಮರದ ಚಿಗುರುಗಳು , ಹೂಗಳು, ಬಣ್ಣ 

ಮುಂತಾದ ಇತರ ಪರಿಕರಗಳನ್ನು ಒದಗಿಸಬಹುದು. ಮಾದರಿಗಳನ್ನು ವೈವಿದ್ಯಮಯವಾಗಿ ಮಾಡಲು ಬೀಜಗಳು, 

ಚಿತ್ರಗಳು, ಕಲ್ಲುಗಳು, ಚಿಪ್ಪುಗಳು ಇತ್ಯಾದಿಗಳನ್ನು ಒದಗಿಸುವುದು.ಚಟುವಟಿಕೆಯ ನಂತರ ಮಕ್ಕಳು ತಮ್ಮ ಕೈಗಳನ್ನು 

ತೊಳೆದುಕೊಳ್ಳುವಂತೆ ನೋಡಿಕೊಳ್ಳುವುದು.

ವಿವರ : ೨ ಮತ್ತು ೩ನೇ ತರಗತಿಗೆ ವಿಷಯ (ಹಬ್ಬ, ಸಮಾರಂಭ, ಅಡುಗೆ ಮನೆಯ ಪರಿಕರಗಳು) ವನ್ನು ನೀಡಿ 

ಅದಕ್ಕೆ ತಕ್ಕಹಾಗೆ ಮಾದರಿಗಳನ್ನು ತಯಾರಿಸಲು ಪ್ರೋತ್ಸಾಹ ನೀಡುವುದು.

-------------------------------


ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


 *ಆಲಿಸುವುದು ಮತ್ತುಮಾತನಾಡುವುದು* 

 ಸಾಮರ್ಥ್ಯ : ಗಮನವಿಟ್ಟು ಕೇಳುವುದು, ಸೃಜನಾತ್ಮಕ ಆಲೋಚನೆ, ಪರಿಸರ ಜಾಗೃತಿ ಮೂಡಿಸುವುದು.

ಚಟುವಟಿಕೆ : ಪದ ಊಹಿಸು (ಗುರಿ-೨) 

ಉದ್ದೇಶಗಳು :

* ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳಲ್ಲಿ ಆಲಿಸುವ ಸಾಮರ್ಥ್ಯ ಹೆಚ್ಚಿಸುವುದು.

* ಸೃಜನಶೀಲ ಆಲೋಚನೆಯ ಮೂಲಕ ಮಾತನಾಡಲು ಅವಕಾಶ ಕಲ್ಪಿಸುವುದು.

* ತಮ್ಮ ಸುತ್ತಲಿನ ಪರಿಸರದ ಬಗೆಗಿನ ಅರಿವನ್ನು ಪಡೆದುಕೊಳ್ಳುವುದು.

ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವುದು.

ಹೌದು/ ಇಲ್ಲ ಎನ್ನುವ ಪ್ರಶ್ನೆಗಳನ್ನು ಕೇಳುವುದರ ಮೂಲಕ ಊಹಿಸಿದ ಪದವನ್ನು ಕಂಡುಹಿಡಿಯುವುದು ಹೇಗೆ 

ಎನ್ನುವುದನ್ನು ತೋರಿಸಿಕೊಡುವುದು.

ಉದಾ : ಮಕ್ಕಳಿಗೆ ಊಹೆ ಮಾಡಿ ಹೇಳುವಂತೆ ಪ್ರೇರೇಪಿಸುವುದು. ಇದು ಮಾವಿನ ಹಣ್ಣು ಎಂದು ಊಹಿಸುವುದು. 

ಈ ರೀತಿಯ ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸುವುದು.s ಶಿಕ್ಷಕರು ಮಾವಿನ ಹಣ್ಣು ಎನ್ನುವ ಪದವನ್ನು ಊಹಿಸಿ 

ಮಕ್ಕಳು ಹೌದು/ ಇಲ್ಲ ಎಂಬ ಪ್ರಶ್ನೆಗಳನ್ನು ಕೇಳುವ ಮೂಲಕ ಉತ್ತರವನ್ನು ಪತ್ತೆ ಹಚ್ಚಲು ಹೇಳುವುದು.

ಉದಾಹರಣೆಗಾಗಿ:

• ಇದು ಒಂದು ವಸ್ತುವೇ? ಹಣ್ಣೇ? ತರಕಾರಿಯೇ? ಪ್ರಾಣಿಯೇ? ವ್ಯಕ್ತಿಯೇ?

• ಇದು ಚಲಿಸುವುದೇ?

• ಇದು ತರಗತಿಯಲ್ಲಿ ಇದೆಯೇ?

• ಉದ್ಯಾನವನದಲ್ಲಿ ಸಿಗುತ್ತದೆಯೇ?

ಮಕ್ಕಳಿಗೆ ಈ ಚಟುವಟಿಕೆ ಪರಿಚಿತವಾದ ನಂತರ ಇದೇ ರೀತಿ ಸರಿಯಾದ ಉತ್ತರ ಊಹಿಸುವವರೆಗೂ ಪ್ರಶ್ನೆಗಳನ್ನು 

ಕೇಳಲು ಪ್ರೇರೇಪಿಸುವುದು.

ತರಗತಿವಾರು ವಿವರ: ೨ನೇ ತರಗತಿ ಮಕ್ಕಳು ಪ್ರಶ್ನೆಗಳನ್ನು ಕೇಳುವುದು. ೩ನೇ ತರಗತಿಯ ಮಕ್ಕಳು ತಾವು ಉತ್ತರ 

ಪಡೆಯಲೆತ್ನಿಸಿದ ಪದಕ್ಕೆ ಸಂಬ0ಧಿಸಿದ ಪ್ರಶ್ನೆಗಳನ್ನು ಸಿದ್ಧಪಡಿಸಿ ಕೇಳಿ ಉತ್ತರ ಪಡೆಯುವುದು.


*ಅರ್ಥಗ್ರಹಿಕೆಯೊಂದಿಗಿನ ಓದು*

 

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು 

ಪರಿಸರದ ಅರಿವು.

ಚಟುವಟಿಕೆ:

ಚಿತ್ರಸಂಪುಟ (ಗುರಿ-೨) ವಿಷಯ: ‘ಉದ್ಯಾನದಲ್ಲಿ ನೀವು ನೋಡಿರುವ ವಸ್ತುಗಳು/ ವಿಷಯಗಳು’.

ಉದ್ದೇಶಗಳು:

ಮಕ್ಕಳು ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು ಮತ್ತು ವೈಯಕ್ತಿಕ ಚಿತ್ರ ಸಂಪುಟಗಳನ್ನು 

ರಚಿಸುವರು.

ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು.

ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್, ಅಂಟು, ಉದ್ಯಾನವನಕ್ಕೆ ಸಂಬ0ಧಿಸಿದ ಚಿತ್ರಗಳು, ಉದ್ಯಾನವನದಲ್ಲಿ 

ನೋಡಬಹುದಾದ ವಿಷಯವಸ್ತುಗಳ ಕುರಿತ ಕಥನ/ ಕವಿತೆ/ ಹಾಡುಗಳ ಪಟ್ಟಿ.

ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬ0ಧಿಸಿದ ಚಿತ್ರಗಳನ್ನು ಗುರುತಿಸುವುದು.

* ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೇಳುವರು. ಶಿಕ್ಷಕರು ಮಕ್ಕಳು ಗ್ರಹಿಸಿ ಹೇಳಿದ 

ಪದಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವುದು ಆ ಪದಗಳ ಕುರಿತು ಚರ್ಚಿಸುವರು ಹಾಗೂ ಆಯಾ 

ಪರಿಚಿತ ಪದಗಳ ಆಧಾರದಲ್ಲಿ ಪದಜಾಲಗಳನ್ನು ಕಪ್ಪುಹಲಗೆ ಅಥವಾ ಚಾರ್ಟಗಳಲ್ಲಿ ಬರೆದು ಚರ್ಚಿಸುವರು.

* ಮಕ್ಕಳಿಗೆ ಹಾಳೆ ಕ್ರೇಯಾನ್ಸ್ ಇನ್ನಿತರ ಸಾಮಗ್ರಿಗಳನ್ನು ನೀಡಿ ಉದ್ಯಾನವನದ ಚಿತ್ರ ನೋಡಿ ಅಥವಾ 

ಉದ್ಯಾನವನದಲ್ಲಿ ಈ ಹಿಂದಿನ ಅನುಭವದ ಮೇಲೆ ಮಕ್ಕಳು ಚಿತ್ರಗಳನ್ನು ಬರೆಯಲು ಮತ್ತು ಬಣ್ಣ ಹಚ್ಚಲು 

ಅವಕಾಶ ನೀಡುವುದು.

ವೈಯಕ್ತಿಕ ಚಿತ್ರಸಂಪುಟ:– ಮಕ್ಕಳು ರಚಿಸಿದ ಚಿತ್ರಗಳನ್ನು ತಮ್ಮ ಕೃತಿ ಸಂಪುಟದಲ್ಲಿ ಸಂಗ್ರಹಿಸಲು ತಿಳಿಸುವುದು 

ಮತ್ತು ಅವುಗಳನ್ನು ಮುಂದಿನ ೬ನೇ ದಿನದಲ್ಲಿ ಚರ್ಚಿಸುವುದಾಗಿ ತಿಳಿಸುವುದು.

ಉದಾ: ಹೂಗಳು, ಮರಗಳು, ಪಕ್ಷಿಗಳು ಮಕ್ಕಳ ಆಟಿಕೆಯ ಸಾಮಗ್ರಿಗಳು, ಕುಳಿತುಕೊಳ್ಳುವ ಆಸನಗಳು ಇತ್ಯಾದಿ. 

ಚಿತ್ರಗಳು/ ವಿಡಿಯೋಗಳು/ಕ್ಷೇತ್ರಭೇಟಿಯ ಅನುಭವದ ಆಧಾರದ ಮೇಲೆ ಮಕ್ಕಳು ವೈಯಕ್ತಿಕವಾಗಿ ಚಿತ್ರ ಬರೆಯಲು 

ಅವಕಾಶವಿರುವಂತೆ ನೋಡಿಕೊಳ್ಳುವುದು.

ಉದ್ಯಾನವನಕ್ಕೆ ಸಂಬ0ಧಿಸಿದ ಚಿತ್ರಗಳನ್ನು/ ಚಿತ್ರಪಟಗಳನ್ನು/ ವಿಡಿಯೋ/ಹಾಡು/ ಕಥೆಗಳನ್ನೂ ಬಳಸಿ ಅಥವಾ 

ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸಬಹುದು.

*ಉದ್ದೇಶಿತ ಬರಹ*  

ಸಾಮರ್ಥ್ಯ : ಕೈ-ಕಣ್ಣುಗಳ ನಡುವೆ ಹೊಂದಾಣಿಕೆ

ಚಟುವಟಿಕೆ : ಚಿತ್ರ ರಚಿಸಿ. (ಗುರಿ ೦೧) ECW-೫

ಉದ್ದೇಶಗಳು:

• ಸೂಕ್ಷö್ಮ ಚಲನಾ ಕೌಶಲಗಳನ್ನು ಬೆಳೆಸುವುದು.

• ಕಣ್ಣು-ಕೈಗಳ ಸಮನ್ವಯವನ್ನು ಅಭಿವೃದ್ಧಿಪಡಿಸುವುದು.

ಸಾಮಗ್ರಿಗಳು: ಕಪ್ಪು ಹಲಗೆ/ ಸ್ಲೇಟು, ಸೀಮೆಸುಣ್ಣ

ವಿಧಾನ: ಮಕ್ಕಳಿಗೆ ವಿವಿಧ ಚಿತ್ರ/ ಆಕೃತಿಗಳನ್ನು ರಚಿಸಲು ಅವಕಾಶ ನಿಡುವುದು. ತಮ್ಮ ಕಲ್ಪನೆಯಂತೆ ಚಿತ್ರ 

ರಚಿಸಲು ಹೇಳುವುದು. ಮಕ್ಕಳು ತಮ್ಮ ಇಷ್ಟದಂತೆ ಚಿತ್ರ ರಚಿಸಿ ಬಣ್ಣ ತುಂಬಲು ಹೇಳುವುದು. ಸೃಜನಾತ್ಮಕತೆ 

ಪ್ರೋತ್ಸಾಹಿಸಲು ಶಿಕ್ಷಕರು ತಮ್ಮ ಆಲೋಚನೆಗಳನ್ನು ಮಕ್ಕಳ ಮೇಲೆ ಒತ್ತಡ ತರಬಾರದು. 

ತರಗತಿವಾರು ವಿವರ : ೧ನೇ ತರಗತಿ ಮಕ್ಕಳು ರಚಿಸಿದ ಚಿತ್ರ/ ಆಕೃತಿಗಳನ್ನು ೨ನೇ ತರಗತಿಯ ಮಕ್ಕಳು ಹೆಸ-

ರಿಸುವುದು. ೩ನೇ ತರಗತಿಯ ಮಕ್ಕಳು ಚಿತ್ರಗಳಿಗೆ ಪೂರಕವಾಗಿ ಒಂದೆರಡು ವಾಕ್ಯಗಳಲ್ಲಿ ಮಾತನಾಡುವುದು.

--------------------------------


ಅವಧಿ - 6(40ನಿ)

*ಹೊರಾಂಗಣ ಆಟಗಳು*

  ಚಟುವಟಿಕೆ : ಕಣ್ಣಾ ಮುಚ್ಚಾಲೆ 

ಸಾಮರ್ಥ್ಯ : ಸೂಕ್ಷ್ಮ ಮನೋಭಾವ, ಅನ್ವೇಷಣೆ ಮನೋಭಾವ ಬೆಳೆಸಲು.

ವಿಧಾನ: • ಒಂದು ಮಗುವಿನ ಕಣ್ಣನ್ನು ಮುಚ್ಚಿ ಉಳಿದ ಮಕ್ಕಳಿಗೆ ಬಚ್ಚಿಟ್ಟುಕೊಳ್ಳಲು ಸೂಚಿಸುವುದು.

• ನಿಗದಿತ ಸಮಯದಲ್ಲಿ ಬಚ್ಚಿಕೊಂಡ ಮಕ್ಕಳನ್ನು ಹುಡುಕಲು ತಿಳಿಸುವುದು.

• ಕಣ್ಣು ಮುಚ್ಚಿಕೊಂಡ ಮಗು ಅಡಗಿಕೊಂಡ ಮಕ್ಕಳಲ್ಲಿ ಮೊದಲು ಯಾರು ಸಿಗುತ್ತಾರೋ ಅವರು ಈ ಆಟವನ್ನು 

ಮುಂದುವರೆಸುತ್ತಾರೆ.

ಎರಡನೇ ಹಾಗೂ ಮೂರನೇ ತರಗತಿಯ ಮಕ್ಕಳಿಗೂ ಈ ಆಟವನ್ನೇ ಮುಂದುವರೆಸಿ ಆಡಿಸುವುದು.

-------------------------------- 


ಅವಧಿ - 7(40ನಿ)

*ಕಥಾ ಸಮಯ*

 ಕಥೆ ಹೇಳುವುದು ಪ್ರತಿ ದಿನ ನಡೆಯುವ ಒಂದು ಪ್ರಕ್ರಿಯೆ. ಇದು ಮಕ್ಕಳಲ್ಲಿ ಮುದ್ರಿತ ಸಾಮಗ್ರಿಗಳ ಬಗ್ಗೆ 

ಜಾಗೃತಿ, ಶಬ್ದಸಂಪತ್ತಿನ ಬೆಳವಣಿಗೆ, ಆಲಿಸುವ ಸಾಮರ್ಥ್ಯ ಮತ್ತು ಗ್ರಾಂಥಿಕ ಶಬ್ದಗಳನ್ನು ಗ್ರಹಿಸುವುದರ 

ಜೊತೆಗೆ ಮೌಲ್ಯಗಳನ್ನು ಮತ್ತು ಸಂಸ್ಕಾರವನ್ನು ಕಲಿಸುತ್ತದೆ.

ಕಥೆಯ ಶೀರ್ಷಿಕೆ : ಸಿಂಹ ಮತ್ತು ಇಲಿ

ಸಾಮಗ್ರಿಗಳು : ಸಂಭಾಷಣೆ ಇರುವ ಮಿಂಚಪಟ್ಟಿಗಳು

ಉದ್ದೇಶಗಳು :

 ಆಲೋಚನಾ ಶಕ್ತಿಯನ್ನು ವೃದ್ಧಿಸುವುದು

 ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.

 ಊಹಿಸುವ ಕೌಶಲವನ್ನು ಹೆಚ್ಚಿಸುವುದು.

 ಕಥೆಗೆ ಸಂಬ0ಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.

 ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು. 

 ನಿರರ್ಗಳವಾಗಿ ಮಾತನಾಡುವ ಕೌಶಲವನ್ನು ರೂಢಿಸುವುದು.

ವಿಧಾನ :

 ಕಥೆಯನ್ನು ಪುನರಾವಲೋಕನ ಮಾಡಿಕೊಳ್ಳುವುದು.

 ಕಥೆಯ ನಿರೂಪಣೆಯನ್ನು ಮಾಡಲು ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸಹಕರಿಸುವುದು.

 ಮಕ್ಕಳು ತಪ್ಪಾಗಿ ಹೇಳಿದರೂ ತಕ್ಷಣವೇ ತಿದ್ದದೇ ಸಕಾರಾತ್ಮಕವಾಗಿ ಸ್ವೀಕರಿಸಿ ಆ ನಂತರ ಸರಿಪಡಿಸಿ ಕಥೆಯನ್ನು 

ಮುಂದುವರೆಸಲು ಹೇಳುವುದು. 

 ಮಿಂಚುಪಟ್ಟಿಗಳಲ್ಲಿ ಪಾತ್ರಗಳ ಸಂಭಾಷಣೆಯನ್ನು ಚಿಕ್ಕ ಚಿಕ್ಕದಾಗಿ ಬರೆದು ನೀಡುವುದು.


-----------------------------------

 

ಅವಧಿ -8(20ನಿ)

*ಮತ್ತೆ ಸಿಗೋಣ*

 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

 ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ 

ಹಂಚಿಕೊಳ್ಳಲು ಪ್ರೋತ್ಸಾಹಿಸಿ.

 ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, 

ಬೀಳ್ಕೊಡಿ.

ನೀನೇ ಮಾಡಿ ನೋಡು (ಮಾಡಿ ನೋಡು) ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ

[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

https://www.schooleducation.kar.nic.in/


------------------------------

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ


ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment