*ವಿದ್ಯಾಪ್ರವೇಶ ದಿನ-4*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ
ಮಾಡಿ.
• ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ.
• “ಗುಡ್ ಮಾರ್ನಿಂಗ್ ಮಕ್ಕಳೇ, ಹೇಗಿದ್ದೀರಿ?” ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಮತ್ತು
“ಗುಡ್ ಮಾರ್ನಿಂಗ್ ಟೀಚರ್” ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ನಾವು
ಚೆನ್ನಾಗಿದ್ದೇವೆ, ಧನ್ಯವಾದಗಳು”.
• ಶುಭಾಶಯಗಳಿಗೆ ಮಕ್ಕಳು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸುವವರೆಗೆ ಚಟುವಟಿಕೆಯನ್ನು ಪುನರಾವರ್ತಿಸಿ.
*ಮಾತುಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ : ಕ್ಲಾಪ್ ಆಂಡ್ ಕ್ಲಾಪ್
ವಿಧಾನ:
• ಮಕ್ಕಳನ್ನು ವೃತ್ತದಲ್ಲಿ ಕೂರಿಸಿ.
• ಚಪ್ಪಾಳೆಯನ್ನುಪರಿಚಯಿಸಿ, ತಾಳಬದ್ಧವಾಗಿ ಚಪ್ಪಾಳೆ ತಟ್ಟುವುದನ್ನು ರೂಢಿಸಿ.
• ಇದನ್ನು ಕೆಲವು ಬಾರಿ ಪುನರಾವರ್ತಿಸಿ. ನಂತರ ನಿಧಾನವಾಗಿ, ನಿಧಾನವಾಗಿ ಮಕ್ಕಳು ನಿಮ್ಮೊಂದಿಗೆ ಮಾಡುವಂತೆ
ಮಾಡಿ.
• ನಂತರ ಅದೇ ಲಯದೊಂದಿಗೆ ನಿಮ್ಮ ಹೆಸರನ್ನು ಪರಿಚಯಿಸಿ : “ನನ್ನ ಹೆಸರು ______-” (ಚಪ್ಪಾಳೆ
ಜೊತೆಗೆ)
• ಮಗುವಿಗೆ ಅದೇ ಲಯದೊಂದಿಗೆ ಅವನ/ಅವಳ ಹೆಸರನ್ನು ಪರಿಚಯಿಸುವ ಮೂಲಕ ಅದೇ ರೀತಿ ಮಾಡಲು
ಹೇಳಿ.
• ಪ್ರತಿ ಮಗುವು ಲಯವನ್ನುಕಾಯ್ದುಕೊಂಡು ಅವನ/ಅವಳ ಹೆಸರನ್ನು ಪರಿಚಯಿಸಲು ಅವಕಾಶ ನೀಡಿ.
ಅವಧಿ-2 (40ನಿ)
*ನನ್ನ ಸಮಯ*
ಅನುಪಾಲನಾ ಸೂಚಿ:-
* ಮಗು ತನ್ನ ಆದ್ಯತೆಯಂತೆ ಕಲಿಕಾ ಮೂಲೆಗೆ ಸಾಗಿ ನೀಡಲಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ
ಬಗ್ಗೆ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳುವುದು.
* ಅಗತ್ಯವಿರುವ ಕಡೆಗಳಲ್ಲಿ ಮಗುವಿಗೆ ಸೂಕ್ತ ಮಾರ್ಗದರ್ಶನ ನೀಡುವುದು.
* ಅಗತ್ಯ ಸಾಮಗ್ರಿಗಳ ಲಭ್ಯತೆ ಬಗ್ಗೆ ಗಮನ ಹರಿಸುವುದು.
* ದಿವ್ಯಾಂಗ ಮಕ್ಕಳು ಮೂಲೆಗಳಿಗೆ ಸಾಗುವಲ್ಲಿ ಹಾಗೂ ಚಟುವಟಿಕೆ ನಿರ್ವಹಣೆಯು ಸುಗಮವಾಗಿರುವಂತೆ
ಕ್ರಮವಹಿಸುವುದು.
* ಚಟುವಟಿಕಾ ಸಾಮಗ್ರಿಗಳನ್ನು ಬಳಸುವಾಗ ಮಕ್ಕಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು. (ಬಣ್ಣಗಳನ್ನು ಬ್ಲಾಕ್
ಗಳನ್ನು ಬಾಯಿಗೆ ಹಾಕಿಕೊಳ್ಳದಂತೆ.....ಎಸೆಯದ0ತೆ ..ಇತ್ಯಾದಿ)
* ಮಗುವು ಹಿಂದಿನ ದಿನ ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಬಗ್ಗೆ ಮಾರ್ಗದರ್ಶನ
ನೀಡುವುದು.
* ಮಕ್ಕಳ ಆಸಕ್ತಿ, ಸೃಜನಶೀಲತೆ ಬಗ್ಗೆ ಶಿಕ್ಷಕರು ಗಮನಹರಿಸಿ ಪ್ರಶಂಸಿಸಿ ಅಗತ್ಯವಿರುವಲ್ಲಿ ಪ್ರೇರಣೆ ಒದಗಿಸುವುದು.
* ಒದಗಿಸಲಾಗಿರುವ ಚಟುವಟಿಕೆ ಹಾಗೂ ಸಾಮಗ್ರಿಗಳನ್ನು ಬಳಸಿ ಮಗುವಿಗೆ ಕಲಿಕಾ ವೇದಿಕೆ ಒದಗಿಸಿರುವ ಬಗ್ಗೆ
ಶಿಕ್ಷಕರು ಸ್ವಯಂ ಅವಲೋಕನ ಮಾಡಿಕೊಳ್ಳುವುದು.
* ಮಕ್ಕಳು ಸಂತಸದಿ0ದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೆಪಿಸುವುದು.
* ಮಗು ಪ್ರತಿದಿನವೂ ನಿರ್ದಿಷ್ಠ ಮೂಲೆಗೆ ಮಾತ್ರ ಸೀಮಿತವಾಗದಂತೆ ಹಾಗೂ ಎಲ್ಲಾ ಮೂಲೆಯ ಚಟುವಟಿ-
ಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಕಾಳಜಿ ವಹಿಸುವುದು.
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ*
(ಶಿಕ್ಷಕರಿ0ದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಆಕೃತಿಯ ಪರಿಕಲ್ಪನೆ
ಚಟುವಟಿಕೆ ಆಕೃತಿಗಳನ್ನು ಗುರುತಿಸು ಮತ್ತು ಹೆಸರಿಸು (ಗುರಿ-೩)
ಉದ್ದೇಶ:- ವಿವಿಧ ಆಕೃತಿಗಳನ್ನು ಗುರುತಿಸಿ ಹೆಸರಿಸುವುದು.
ಅಗತ್ಯ ಸಾಮಗ್ರಿಗಳು: ವಿವಿಧ ಆಕೃತಿಗಳು, ಢಪ್ಲಿ, ಆಡಿಯೋ ಪ್ಲೇಯರ್, ಟಿ.ವಿ
ವಿಧಾನ : ವಿವಿಧ ಆಕೃತಿಗಳನ್ನು ಪ್ರತಿ ಮಗುವಿಗೆ ನೀಡಿರಿ. ಆಕೃತಿಗಳ ಬಗ್ಗೆ ಒಂದು ಹಾಡು/ಪದ್ಯವನ್ನು ಹಾಕಿರಿ
ಅಥವಾ ಹಾಡಿಸಿರಿ. ಮಕ್ಕಳು ಹಾಡು/ಪದ್ಯದಲ್ಲಿ ಬರುವ ಆಕೃತಿಗಳನ್ನು ತೋರಿಸುತ್ತಾ ಹಾಡನ್ನು ಪುನರಾವರ್ತಿಸಲಿ.
ಪ್ರತಿ ಮಗು ಹಾಡುವಾಗ ಪ್ರಸ್ತಾಪವಾಗುವ ಆಕೃತಿಯನ್ನು ಮುಟ್ಟಿ ನೋಡಲು ಪ್ರೋತ್ಸಾಹಿಸಿ. ನಂತರ ಮಕ್ಕಳಿಗೆ
ಯಾವುದಾದರೂ ಆಕೃತಿಯ ಬಗ್ಗೆ ಮಾತನಾಡಲು ಪ್ರೇರೇಪಿಸಿ.
ಗಣಿತ ಕಿಟ್‌ನಲ್ಲಿರುವ ಆಕೃತಿಗಳನ್ನು ಪರಿಚಯಿಸುವುದು.
ಗಣಿತ ಕಲಿಕಾ ಆಂದೋಲನದ ಆಕೃತಿಗಳನ್ನು ಬಳಸಿ ಆಟ ಆಡಿಸುವುದು.
ತರಗತಿ-೨
ತಾನು ನೋಡಿದ ವಿವಿಧ ಆಕೃತಿಯ ವಸ್ತುಗಳ ಹೆಸರನ್ನು ಹೇಳಿಸುವುದು.
ಉದಾ:- ರೊಟ್ಟಿ/ ತಟ್ಟೆ/ಸೂರ್ಯ/ಚಂದ್ರ-ವೃತ್ತ ಆಕೃತಿ, ಕಪ್ಪುಹಲಗೆ-ಆಯತ ಆಕೃತಿ, ಹಾಸುಗಲ್ಲು-ಚೌಕ ಆಕೃತಿ,
ಗ್ಯಾಸ್ ಸಿಲಿಂಡರ್- ಸಿಲಿಂಡರ್ ಆಕೃತಿ, ಹುಟ್ಟುಹಬ್ಬದ ಕಾಗದದ ಟೋಪಿ- ಶಂಕು ಆಕೃತಿ ಇತ್ಯಾದಿ
ತರಗತಿ-೩
೧. ತನಗೆ ತಿಳಿದಿರುವ ಆಕೃತಿಗಳ ಹೆಸರು ಮತ್ತು ಅವುಗಳ ಬಗ್ಗೆ ಹೇಳಲು ಪ್ರೇರೇಪಿಸುವುದು.
೨. ತನಗೆ ಗೊತ್ತಿರುವ ಆಕೃತಿಯನ್ನು ಬಿಡಿಸಲು ಹೇಳುವುದು.
* ಬಳಸಬೇಕಾದ ಅಭ್ಯಾಸ ಹಾಳೆಗಳು: I.L-೨ & ೩ ( ೦೧, ೦೨,೦೩ನೇ ತರಗತಿ)
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ.
ಚಟುವಟಿಕೆ : ೦೨ ಅಭಿನಯ ಗೀತೆಗಳು/ನಾಟಕಗಳು ಗುರಿ - ೧
ಉದ್ದೇಶಗಳು :
• ಶಾರೀರಿಕ ಬೆಳವಣಿಗೆಯ ವಿಕಾಸ ಹೊಂದುವುದು.
• ಪದಸಂಪತ್ತು ಹೆಚ್ಚುವುದರೊಂದಿಗೆ ಪ್ರಾಸ, ಲಯ, ಸಂದರ್ಭ ಹಾಗೂ ಸ್ಪಷ್ಟ ಉಚ್ಛಾರಣೆ ಮಾಡುವುದು.
• ಆಂಗಿಕ ಭಾವನೆಗಳನ್ನು ಗುರ್ತಿಸುವುದು.
ಸಾಮಗ್ರಿಗಳು : ಹಾಡು (ಡಿಂಗಿ ಟಕ ಹಾಡು)
ಡಿಂಗಿ ಟಕ ಡಿಂಗಿ ಟಕ ಡಿಂಗಿ ಟಕ ಡಿಂಗ್
ಅರೇ ಡಿಂಗಿ ಟಕ ಡಿಂಗಿ ಟಕ ಡಿಂಗಿ ಟಕ ಡಿಂಗ್.
ನಾನು ನೋಡುವೆ ಕಣ್ಗಳಿಂದಲೇ [ಡಿಂಗಿ ಟಕ]
ನಾನು ಕೇಳುವೆ ಕಿವಿಗಳಿಂದಲೇ [ಡಿಂಗಿ ಟಕ]
ವಾಸನೆ ಗ್ರಹಿಸುವೆ ಮೂಗಿನಿಂದಲೇ [ಡಿಂಗಿ ಟಕ]
ರುಚಿಯ ತಿಳಿಯುವೇ ನಾಲಿಗೆಯಿಂದಲೇ [ಡಿಂಗಿ ಟಕ]
ಸ್ಪರ್ಶ ತಿಳಿಯುವೆ ಚರ್ಮದಿಂದಲೇ [ಡಿಂಗಿ ಟಕ]
ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು. ಸುಗಮಕಾರರು ತಾಳಬದ್ಧ÷ ಚಟುವಟಿಕೆಗಳನ್ನು ನಡೆಸಲು
ಮಕ್ಕಳಿಗೆ ಅವಕಾಶ ಕಲ್ಪಿಸುವುದು. ಶಿಶುಗೀತೆಗಳು, ಅಭಿನಯ ಗೀತೆಗಳು, ಹಾಡುಗಳಿಗೆ ಪರಿಕರಗಳನ್ನು ಉಪಯೋಗಿಸಿ
ಅಥವಾ ಆಂಗಿಕ ಚಲನವಲನಗಳಿಂದ ಹಾಡಿಸುವುದು. ಉದಾಹರಣೆಗೆ ದೇಹದ ಅಂಗಾ0ಗಗಳನ್ನು ಪರಿಚಯಿಸಲು
ಕಣ್ಣು, ಮೂಗು, ನಾಲಿಗೆ, ಚರ್ಮ ಮತ್ತು ಕಿವಿಗಳನ್ನು ತೋರಿಸುತ್ತ ಅಭಿನಯ ಗೀತೆಯನ್ನು ಹಾಡಿಸುವುದು.
ವಿವರ: ೨ ಮತ್ತು ೩ ನೇ ತರಗತಿಗೆ ಅಭಿನಯ ಗೀತೆಯನ್ನು ಹಾಡಿಸಿದ ನಂತರ ಪ್ರಶ್ನೆಗಳನ್ನು ಕೇಳಿ ಉತ್ತರ
ಪಡೆಯುವುದು.
* ಬಳಸಬೇಕಾದ ಅಭ್ಯಾಸ ಹಾಳೆಗಳು: H.W.-೧ ( ೦೧, ೦೨,೦೩ನೇ ತರಗತಿ)
ಅವಧಿ -60ನಿ
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತು ಮಾತನಾಡುವುದು*
ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ.
ಚಟುವಟಿಕೆ : ಪ್ರಾಸ ಪದಗಳನ್ನು ಆಲಿಸುವುದು (ಗುರಿ-೦೨) ಇಅಐ-೪
ಉದ್ದೇಶಗಳು :
• ಧ್ವನಿ ವಿಜ್ಞಾನದ ಅರಿವನ್ನು ಹೊಂದುವ0ತೆ ಮಾಡುವುದು.
• ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.
• ಸ್ಥೂಲ ಹಾಗೂ ಸೂಕ್ಷö್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು:- ಇಲ್ಲ
ವಿಧಾನ:
* ಮಕ್ಕಳಿಗೆ ಪರಿಚಿತವಿರುವ ಶಿಶು ಪ್ರಾಸಗಳನ್ನು ಆರಿಸಿಕೊಳ್ಳುವುದು
* ಹಾಡು ಹೇಳುವಾಗ ಪ್ರಾಸ ಪದಗಳನ್ನು ಸ್ವಲ್ಪ ಒತ್ತಿ ಹೇಳುವುದು.
* ಪ್ರಾಸ ಗೀತೆಗೆ ತಕ್ಕಂತೆ ಅಭಿನಯಿಸಲು ತಿಳಿಸುವುದು.
ತರಗತಿವಾರು ವಿವರ: ೨ ಹಾಗೂ ೩ ನೇ ತರಗತಿ ಮಕ್ಕಳು ಶಿಕ್ಷಕರನ್ನು ಅನುಕರಿಸುತ್ತಾ ರಾಗಬದ್ಧವಾಗಿ
ಅಭಿನಯದೊಂದಿಗೆ ಹಾಡುವುದು. (೮ ನೇ ದಿನಕ್ಕೆ ಮುಂದುವರೆದಿದೆ)
*ಅರ್ಥಗ್ರಹಿಕೆಯೊ0ದಿಗಿನ ಓದು*
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.
ಚಟುವಟಿಕೆ : ಚಿತ್ರ ಓದು (ಗುರಿ-೨)
ಉದ್ದೇಶ : ವಿವಿಧ ಘಟನೆ/ ಸನ್ನಿವೇಶಗಳ ಚಿತ್ರಗಳನ್ನು ನೋಡುವುದರ ಮೂಲಕ ಸನ್ನಿವೇಶಕ್ಕೆ ಸಂಬ0ಧಿಸಿದ0ತೆ
ಏನು? ಏಕೆ? ಹೇಗೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುವರು.
ಅಗತ್ಯ ಸಾಮಾಗ್ರಿಗಳು: ವಿವಿಧ ಘಟನೆ/ ಸ್ಥಳ/ ಜಾತ್ರೆ / ಮೇಳಗಳ ಚಿತ್ರಗಳು/ ಉದ್ಯಾನವನ/ ಪೇಟೆ/ ಶಾಲೆ / ಪ್ರಾಣಿ
ಸಂಗ್ರಹಾಲಯ / ಹಬ್ಬ / ಜಾತ್ರೆಯ ಇತ್ಯಾದಿಗಳ ಚಿತ್ರಗಳು.
ವಿಧಾನ: ದಿನ ೨ರ ಚಿತ್ರ ಓದು ಚಟುವಟಿಕೆ ಮುಂದುವರೆಸುತ್ತಾ ಮಕ್ಕಳನ್ನು ಗುಂಪುಗಳನ್ನಾಗಿ ಮಾಡಿ ಹಿಂದೆ
ಬಳಸಿರುವ ಸನ್ನಿವೇಶ ಚಿತ್ರವನ್ನು ನೀಡುವುದು. ಮಕ್ಕಳು ಚಿತ್ರವನ್ನು ನೋಡಿ ಘಟನೆಯನ್ನು ಅರ್ಥೈಹಿಸಿಕೊಳ್ಳುವುರು
ನಂತರ ಶಿಕ್ಷಕರು ಮಕ್ಕಳು ಸುತ್ತಲಿನ ಪರಿಸರಕ್ಕೆ ಹೊಂದಾಣಿಕೆಯಾಗುವ0ತೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದು.
ಶಿಕ್ಷಕರು ಸನ್ನಿವೇಶದ ಚಿತ್ರತೋರಿಸಿ ಅದರ ಬಗ್ಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಬಹುದು.
* ನೀವು ಎಂದಾದರು ಇಂತಹ ಸ್ಥಳಕ್ಕೆ ಹೋಗಿದ್ದೀರಾ?
* ಈ ಸನ್ನಿವೇಶವು ನಿಮಗೆ ಏನನ್ನು ನೆನಪಿಸುತ್ತಿದೆ?
* ಈ ಚಿತ್ರದಲ್ಲಿ ಇರುವ ಜನರು ಏನು ಆಡುತ್ತಿದ್ದಾರೆ?
* ಈ ಸನ್ನಿವೇಶದಲ್ಲಿ ಜನರು ಏನು ಮಾಡುತ್ತಿದ್ದಾರೆ? ಇತ್ಯಾದಿ
೨ ಮತ್ತು ೩ನೇ ತರಗತಿಗೆ: ಶಿಕ್ಷಕರು ಸನ್ನಿವೇಶದ ಕುರಿತು ತಾರ್ಕಿಕ ಪ್ರಶ್ನೆಗಳನ್ನು ಕೇಳುವುದರ ಮೂಲಕ ಸ್ವತಂತ್ರ
ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು
ವಿಶೇಷ ಸೂಚನೆ: ಇದೇ ಚಟುವಟಿಕೆಯನ್ನು ೨ನೇ ವಾರದ ೮ನೇ ದಿನದಂದು ಮುಂದುವರೆದಿದೆ
*ಉದ್ದೇಶಿತ ಬರೆಹ*
ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನೆ ಮತ್ತು ಸೃಜನಾತ್ಮಕ ಅಭಿವ್ಯಕ್ತಿ.
ಚಟುವಟಿಕೆ : ಚುಕ್ಕಿ ಸೇರಿಸಿ ಬಣ್ಣ ಹಾಕು (ಗುರಿ ೦೧) ECW-೪
ಉದ್ದೇಶಗಳು :
• ಸೂಕ್ಷö್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
• ಮಕ್ಕಳ ಸೃಜನಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.
ಸಾಮಗ್ರಿ: ಕ್ರೇಯಾನ್ಸ್, ಬಣ್ಣದ ಪೆನ್ಸಿಲ್, ಚಾಕ್ಪೀಸ್
ವಿಧಾನ:
ಸ್ಲೇಟ್ ಅಥವಾ ಹಾಳೆಯ ಮೇಲೆ ಚುಕ್ಕಿಗಳಿಂದ ವಿವಿಧ ಆಕಾರಗಳನ್ನು ಬಿಡಿಸುವುದು. ಮಕ್ಕಳಿಗೆ ಈ ಚುಕ್ಕಿಗಳನ್ನು
ಜೋಡಿಸಿ ಆ ಚಿತ್ರಕ್ಕೆ ಬಣ್ಣ ತುಂಬಲು ಹೇಳುವುದು.
ತರಗತಿವಾರು ವಿವರ: ೨ ಹಾಗೂ ೩ನೇ ತರಗತಿಯ ವಿದ್ಯಾರ್ಥಿಗಳು ವಿವಿಧ ಆಕಾರಗಳ ಚುಕ್ಕಿಗಳನ್ನು
ಮೂಡಿಸಿಕೊಡುವಂತೆ ತಿಳಿಸಿ ೧ನೇ ತರಗತಿ ಮಕ್ಕಳು ಅವುಗಳನ್ನು ಸೇರಿಸಿ, ಚಿತ್ರ ಪೂರ್ಣಗೊಳಿಸಿ ಸೂಕ್ತ ಬಣ್ಣಗಳನ್ನು
ತುಂಬುವ0ತೆ ಮಾಡುವುದು. ಹಿರಿಯ ತರಗತಿಯ ಮಕ್ಕಳ ಸಹಕಾರದೊಂದಿಗೆ ಗುಂಪು ಚಟುವಟಿಕೆಯನ್ನು
ಆಯೋಜಿಸುವುದು.
ಅವಧಿ- 40 ನಿ
*ಹೊರಾಂಗಣ ಆಟಗಳು*
ಚಟುವಟಿಕೆ : ಕೆರೆ ದಡ
ಸಾಮರ್ಥ್ಯ : ಏಕಾಗ್ರತೆ ಬೆಳೆಸಲು, ಆಲಿಸುವ ಕೌಶಲ್ಯ ಬೆಳೆಸಲು, ದೇಹದ ಸಮತೋಲನ ಅಭಿವೃದ್ಧಿಪಡಿಸಲು.
ಸಾಮಗ್ರಿ: ಸುಣ್ಣದಪುಡಿ
ವಿಧಾನ :
• ಮಕ್ಕಳ ಸಂಖ್ಯೆಗೆ ಅನುಗುಣವಾಗಿ ದೊಡ್ಡ ವೃತ್ತವನ್ನು ಸುಣ್ಣದಪುಡಿ ಸಹಾಯದಿಂದ ಬರೆಯುವುದು.
• ಮಕ್ಕಳನ್ನು ವೃತ್ತದ ಗೆರೆಯ ಹೊರಭಾಗದಲ್ಲಿ ನಿಲ್ಲಿಸುವುದು.
• ಶಿಕ್ಷಕರು ಕೆರೆ ದಡ ಎಂಬ ಸೂಚನೆಯನ್ನು ಅನುಸರಿಸಿ ಮಕ್ಕಳಿಗೆ ಆಡಲು ತಿಳಿಸುವುದು.
• ಸೂಚನೆಯನ್ನು ಪಾಲಿಸದವರು ಆಟದಿಂದ ಹೊರಗುಳಿಯುವರು.
ಎರಡನೇ ಹಾಗೂ ಮೂರನೇ ತರಗತಿಯ ಮಕ್ಕಳಿಗೂ ಈ ಆಟವನ್ನೇ ಮುಂದುವರೆಸಿ ಆಡಿಸುವುದು.
ಅವಧಿ - 40ನಿ
*ಕಥಾ ಸಮಯ*
ಶೀರ್ಷಿಕೆ : ಸಿಂಹ ಮತ್ತು ಇಲಿ
ಸಾಮಗ್ರಿಗಳು : ಸಂಭಾಷಣೆ ಇರುವ ಮಿಂಚುಪಟ್ಟಿಗಳು
ಉದ್ದೇಶ :
ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.
ಊಹಿಸುವ ಕೌಶಲವನ್ನು ಹೆಚ್ಚಿಸುವುದು.
ಕಥೆಗೆ ಸಂಬ0ಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.
ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು.
ನಿರರ್ಗಳವಾಗಿ ಮಾತನಾಡುವ ಕೌಶಲವನ್ನು ರೂಢಿಸುವುದು.
ವಿಧಾನ : ಪಾತ್ರಾಭಿನಯ
ಶಿಕ್ಷಕರು ಕಥೆಯನ್ನು ಪುನರಾವಲೋಕನ ಮಾಡುವುದು.
ಕಥೆಯ ನಿರೂಪಣೆಯನ್ನು ಮಾಡಲು ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸಹಕರಿಸುವುದು.
ಮಿಂಚುಪಟ್ಟಿಗಳನ್ನು ನೀಡಿ, ಪಾತ್ರಗಳ ಸಂಭಾಷಣೆಯನ್ನು ಹೇಳಿಸುವುದು.
ಮಕ್ಕಳು ತಪ್ಪಾಗಿ ಹೇಳಿದರೂ ಸಕಾರಾತ್ಮಕವಾಗಿ ಸ್ವೀಕರಿಸಿ ಆ ನಂತರ ಸರಿಪಡಿಸಿ ಕಥೆಯನ್ನು ಮುಂದುವರೆಸಲು
ಹೇಳುವುದು.
ಅವಧಿ -8(20ನಿ)
**ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ
ಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,
ಬೀಳ್ಕೊಡಿ.
“ನೀನೇ ಮಾಡಿ ನೋಡು” ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
https://www.schooleducation.kar.nic.in/
----------------------------–----–-
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment