*ವಿದ್ಯಾಪ್ರವೇಶ ದಿನ-3*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
ದಿನ-೨ ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ಚಟುವಟಿಕೆಯನ್ನು ಪುನರಾವರ್ತಿಸಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ - ೧ : ಸ್ಟ್ಯಾಚ್ಯೂ ಆಟ...: (ಗುರಿ-೧)
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.
ಉದ್ದೇಶ: ಮಗು ತನ್ನ ಹೆಸರನ್ನು ಹೇಳುವುದು.
ಸಾಮಗ್ರಿ: ಸಂಗೀತ ಪ್ಲೇಯರ್ (ಮೊಬೈಲ್ / ತಂಬೂರಿ)
ವಿಧಾನ :
• ಸಂಗೀತವನ್ನು ನುಡಿಸಿ ಮತ್ತು ಸಂಗೀತವನ್ನು ನುಡಿಸುತ್ತಿದ್ದಂತೆ ನೃತ್ಯ ಮಾಡಲು ಮಕ್ಕಳಿಗೆ ಸೂಚನೆ ನೀಡುತ್ತಾರೆ.
• ಸಂಗೀತವು ನಿಂತಾಗ ಪ್ರತಿ ಮಗುವು ತಕ್ಷಣವೇ ವಿಗ್ರಹದಂತೆ ನಿಲ್ಲಬೇಕು ಮತ್ತು ಸಂಗೀತವು ಮತ್ತೆ
ಪ್ರಾರಂಭವಾಗುವವರೆಗೆ ಅದೇ ಸ್ಥಿತಿಯಲ್ಲಿರಬೇಕು.
• ಸ್ಥಿರವಾಗಿ ನಿಲ್ಲದೇ ಇರುವ ಮಗುವನ್ನು ಗುರುತಿಸಿ ಮತ್ತು “ಹಲೋ, ಗುಡ್ ಮಾರ್ನಿಂಗ್, ನನ್ನ ಹೆಸರು
______” ಎಂದು ಹೇಳಲು ತಿಳಿಸಿ. ಆ ಮಗು ಆಟದಿಂದ ಔಟ್ ಆಗುತ್ತದೆ.
• ಸಂಗೀತವನ್ನು ನುಡಿಸಿ ಮತ್ತು ಚಟುವಟಿಕೆಯನ್ನು ಪುನರಾವರ್ತಿಸಿ. ಪ್ರತಿಯೊಬ್ಬರೂ ತಮ್ಮನ್ನು ತಾವು
ಪರಿಚಯಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.
---–------------------------------
ಅವಧಿ-2 (40ನಿ)
*ನನ್ನ ಸಮಯ*
ಕಲಿಕಾ ಸಿದ್ಧತಾ ಭಾಗವಾಗಿ ೮ ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ
ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯಿಸುವರು. ಮಕ್ಕಳಿಗೆ
ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳುವರು.
(ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ
ಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.)
ಬಿಲ್ಡಿಂಗ್ ಬ್ಲಾಕ್ಸ್ ಮೂಲೆ:-
ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವರು.
ಚಟುವಟಿಕೆ: ವಸ್ತುಗಳ ವರ್ಗೀಕರಣ
ಉದ್ದೇಶ : ವಸ್ತುವಿನ ಗಾತ್ರದ ಆಧಾರದ ಮೇಲೆ ವರ್ಗೀಕರಣ ಮಾಡುವುದು.
ಸಾಮಗ್ರಿ:- ಕಲಿಕಾ ಕಿಟ್‌ನ ಬ್ಲಾಕ್ಸ್ಗಳು
(ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್, ಬೆಂಕಿ ಪೊಟ್ಟಣಗಳು, ಪೇಸ್ಟ್ ಬಾಕ್ಸ್, ರಟ್ಟಿನ ಬಾಕ್ಸ್ ಗಳು ಇತ್ಯಾದಿ)
ವಿಧಾನ :
೧ ನೇ ತರಗತಿ
ವಿವಿಧ ಗಾತ್ರದ ಸಾಮಗ್ರಿಗಳನ್ನು ಗಾತ್ರದ ಆಧಾರದ ಮೇಲೆ (ದೊಡ್ಡ, ಚಿಕ್ಕ) ವರ್ಗೀಕರಿಸುವುದು.
೨ ನೇ ತರಗತಿ & ೩ ನೇ ತರಗತಿ :
ವಿವಿಧ ಗಾತ್ರದ ಸಾಮಗ್ರಿಗಳನ್ನು ಗಾತ್ರದ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸುವುದು.
ಗಣಿತ ಮೂಲೆ:-
ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ
ಆಧಾರದ ಮೇಲೆ ವರ್ಗೀಕರಿಸುವರು ಹಾಗೂ
ಚಿತ್ರ/ಸಂಖ್ಯೆಗಳ ಹೋಲಿಕೆ ಮಾಡುವರು.
ಚಟುವಟಿಕೆ: ಆಕೃತಿಗಳ ಚಿತ್ರಪಟಕ್ಕೆ ಆಕೃತಿ ಕಾರ್ಡ್ ಗಳ ಜೋಡಣೆ
ಉದ್ದೇಶ : ಸಮತಲಾಕೃತಿಗಳನ್ನು ಹೋಲಿಸಿ ಜೋಡಿಸುವುದು.
ಸಾಮಗ್ರಿ:-
* ವಿವಿಧ ಸಮತಲಾಕೃತಿಗಳನ್ನೊಳಗೊಂಡ ಚಿತ್ರಪಟಗಳು
* ಬಣ್ಣದ ಹಾಳೆಯಿಂದ ಕತ್ತರಿಸಲಾದ ವಿವಿಧ ಸಮತಲಾಕೃತಿಗಳು
(ಬಣ್ಣದ ಹಾಳೆಯಿಂದ ಕತ್ತರಿಸಿದ ಆಕೃತಿಗಳು ಚಿತ್ರಪಟದಲ್ಲಿನ ಆಕೃತಿಗಳಿಗೆ
ಸಮನಾಗಿರಬೇಕು ಅಥವಾ ಚಿಕ್ಕದಾಗಿರಬೇಕು)
ವಿಧಾನ:
೧ನೇ ತರಗತಿ:
ವಿವಿಧ ಆಕೃತಿಗಳನ್ನೊಳಗೊಂಡ ಚಿತ್ರಪಟವನ್ನು ನೆಲದ ಮೇಲೆ ಇಡಬೇಕು. ಚಿತ್ರಪಟದಲ್ಲಿನ ಆಕೃತಿಗಳಿಗೆ
ಹೊಂದಿಕೆಯಾಗುವ ಬಣ್ಣದ ಹಾಳೆಯ ಸಮತಲಾಕೃತಿಗಳನ್ನು ಚಿತ್ರಪಟಕ್ಕೆ ಹೊಂದಿಸುವರು.
೨ ನೇ & ೩ ನೇ ತರಗತಿ :
ಹೋಲಿಕೆಯುಳ್ಳ ಆಕೃತಿಗಳ ತುಂಡುಗಳನ್ನು ಚಿತ್ರಪಟಕ್ಕೆ ಹೊಂದಿಸುವರು ಮತ್ತು ತರಗತಿ ಕೋಣೆಯಲ್ಲಿರುವ ವಿವಿಧ
ವಸ್ತುಗಳೊಂದಿಗೆ ಆಕೃತಿಗಳನ್ನು ಹೋಲಿಕೆ ಮಾಡುವರು.
ನನ್ನ ಸಮಯ
ಅನ್ವೇಷಣೆ ಅಥವಾ ವಿಜ್ಞಾನ ಮೂಲೆ:
ಸಾಮರ್ಥ್ಯ: ವೈಜ್ಙಾನಿಕ, ಅನ್ವೇಷಣಾ ಮನೋಭಾವ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸಿಕೊಳ್ಳುವರು.
ಚಟುವಟಿಕೆ : ರಂಗಿನಾಟ
ಉದ್ದೇಶ : * ಸ್ವತಂತ್ರöವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಅನ್ವೇಷಣಾ ಮನೋಭಾವ ಬೆಳೆಸಿಕೊಳ್ಳುವುದು.
ಸಾಮಗ್ರಿ:-
* ಪಾರದರ್ಶಕ ಲೋಟಗಳು
* ನೀರು
* ಬಣ್ಣಗಳು
ವಿಧಾನ :
೧ ನೇ ತರಗತಿ :
ನೀರಿನಲ್ಲಿ ಬಣ್ಣಗಳನ್ನು ಬೆರೆಸುವುದರಿಂದ ಆಗುವ ಬದಲಾವಣೆಗಳನ್ನು
ಮಕ್ಕಳು ಗಮನಿಸುವರು.
೨ &೩ ನೇ ತರಗತಿ :
ನೀರಿನಲ್ಲಿ ಬಣ್ಣಗಳನ್ನು ಬೆರೆಸುವುದರಿಂದ ಆಗುವ ಬದಲಾವಣೆಗಳನ್ನು ಗಮನಿಸುತ್ತಾರೆ ಹಾಗೂ ಬದಲಾದ ನೀರಿನ
ಬಣ್ಣವನ್ನು ಕೋಣೆಯಲ್ಲಿರುವ ವಸ್ತುಗಳೊಂದಿಗೆ ಹೋಲಿಕೆ ಮಾಡುವರು.
ಗೊಂಬೆಗಳ ಮೂಲೆ :
ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ
ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವರು.
ಚಟುವಟಿಕೆ: ಗೊಂಬೆ ಹೆಜ್ಜೆ .. ನನ್ನ ಹೆಜ್ಜೆ.
ಉದ್ದೇಶ : * ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳುವುದು.
* ಕಣ್ಣು ಮತ್ತು ಕೈ ಸಹಸಂಬ0ಧದ ಅಭಿವೃದ್ಧಿ.
ಸಾಮಗ್ರಿ:-
ಪ್ರಾಣಿ-ಪಕ್ಷಿ, ಮನುಷ್ಯನ ಬೊಂಬೆಗಳು, ಬಣ್ಣಗಳು,
ಡ್ರಾಯಿಂಗ್ ಶೀಟ್‌ಗಳು, ಪ್ಲೇಟ್ ಗಳು
ವಿಧಾನ:
೧ನೇ ತರಗತಿ :
ಬೊಂಬೆಗಳ ಪಾದಗಳನ್ನು ಬಣ್ಣದಲ್ಲಿ ಅದ್ದಿ ಪಾದದ ಅಚ್ಚುಗಳನ್ನು ಡ್ರಾಯಿಂಗ್ ಹಾಳೆಯ ಮೇಲೆ ಮೂಡಿಸುವರು.
೨ನೇ & ೩ನೇ ತರಗತಿ :
ಬೊಂಬೆಗಳ ಪಾದಗಳನ್ನು ಬಣ್ಣಗಳಲ್ಲಿ ಅದ್ದಿ ಪಾದದ ಅಚ್ಚುಗಳನ್ನು ಡ್ರಾಯಿಂಗ್ ಹಾಳೆಯ ಮೇಲೆ
ಮೂಡಿಸುವುದರೊಂದಿಗೆ ಪಾದದ ಅಚ್ಚುಗಳ ಗಾತ್ರವನ್ನು ಹೋಲಿಸುವರು.
ಓದುವ / ತರಗತಿ ಗ್ರಂಥಾಲಯ ಮೂಲೆ :
ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು,
ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು.
ಚಟುವಟಿಕೆ: ಚಿತ್ರ ಓದು
ಉದ್ದೇಶ : ಚಿತ್ರ ಗುರುತಿಸುವುದರೊಂದಿಗೆ ಸ್ಪಷ್ಟವಾಗಿ ಓದುವುದು.
ಸಾಮಗ್ರಿ:- ಪ್ರಾಣಿ-ಪಕ್ಷಿ, ವಸ್ತುಗಳ ಚಿತ್ರಗಳು
೧ನೇ ತರಗತಿ : ಚಿತ್ರಗಳನ್ನು ಗುರುತಿಸಿ, ಸ್ಪಷ್ಟವಾಗಿ ಹೆಸರಿಸುವರು.
೨ ನೇ & ೩ ನೇ ತರಗತಿ :
ಚಿತ್ರಗಳನ್ನು ಗುರುತಿಸಿ, ಸ್ಪಷ್ಟವಾಗಿ ಓದುವುದರೊಂದಿಗೆ ಮೊದಲ ಅಕ್ಷರವನ್ನು
ಉಚ್ಚರಿಸುವರು.
ಕಲೆಗೊಂದು ನೆಲೆ/ಕರಕುಶಲ ಮೂಲೆ:
ಸಾಮರ್ಥ್ಯ: ಸೂಕ್ಷö್ಮ ಸ್ನಾಯು ಬೆಳವಣಿಗೆಯೊಂದಿಗೆ
ಸೌ0ದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸಿಕೊಳ್ಳುವರು. .
ಚಟುವಟಿಕೆ: ಬಣ್ಣದ ಬೆರಳು
ಉದ್ದೇಶ : ಬೆರಳಚ್ಚಿನಿಂದ ವಿನ್ಯಾಸಗಳನ್ನು ರಚಿಸುವುದು.
ಸಾಮಗ್ರಿ:- ಬಣ್ಣ, ರೇಖಾ ಚಿತ್ರಗಳು,
ಹಳೆಯ ಪುಸ್ತಕದ ಗೊಂಬೆ ಚಿತ್ರಗಳು (ಆಕೃತಿ, ಪ್ರಾಣಿ)
ವಿಧಾನ :
೧ನೇ ತರಗತಿ :
ಬೆರಳಿಗೆ ಬಣ್ಣ ಹಚ್ಚಿ ಆಕೃತಿಗಳ ರೇಖಾ ಚಿತ್ರದ ಅಂಚುಗಳಿಗೆ ಬೆರಳಚ್ಚು ಒತ್ತುವರು.
೨ನೇ & ೩ನೇ ತರಗತಿ :
ಆಕೃತಿಗಳ ಜೊತೆಗೆ ಪ್ರಾಣಿ ಪಕ್ಷಿಗಳ ಚಿತ್ರ ಬಳಸುವುದು.
ಸಮಂಜಸ ಬಣ್ಣಗಳನ್ನು ಬಳಸುವರು.
ಬರೆಯುವ ಮೂಲೆ :
ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು
ರಚಿಸುವರು.
ಚಟುವಟಿಕೆ: “ಸೀತಾಫಲ ಚಿತ್ರಿಸು”
ಉದ್ದೇಶ: ಬೆರಳುಗಳ ಸರಳ ಚಲನೆ ರೂಢಿಸಿಕೊಳ್ಳುವುದು.
ಸಾಮಗ್ರಿಗಳು: ಸೀತಾಫಲ/ ಕೊರೆಯಚ್ಚುಗಳು, ಬಿಳಿಹಾಳೆ, ಕ್ರೇಯಾನ್ಸ್
ವಿಧಾನ : ೧ನೇ ತರಗತಿ
“ಸೀತಾಫಲ” ವನ್ನು ಬಿಳಿಹಾಳೆಯ ಮೇಲಿಟ್ಟು ಕೊರೆದ ಭಾಗಗಳಲ್ಲಿ ಕ್ರೇಯಾನ್ಸ್ ನ
ಸಹಾಯದಿಂದ ಗೆರೆಗಳನ್ನು ಎಳೆಯುವರು
(೨ & ೩ ನೇ ತರಗತಿ)
ಬಿಳಿಹಾಳೆಯ ಮೇಲೆ ಸುರುಳಿಯಾಕಾರಗಳನ್ನು ಚಿತ್ರಿಸುವರು.
ಆಟಿಕೆ / ಮಾಡಿ ನೋಡು ಮೂಲೆ :
ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯನಿರ್ವಹಿಸುವರು.
ಚಟುವಟಿಕೆ: ಗುರಿ ಮುಟ್ಟು
ಉದ್ದೇಶ : ಸ್ನಾಯುಗಳ ಸಮತೋಲನದೊಂದಿಗೆ ನಿರ್ದಿಷ್ಠ ಗುರಿ ಸಾಧಿಸುವುದು.
ಸಾಮಗ್ರಿ:- ದೊಡ್ಡ ಚಮಚ, ಬಾಲ್, ಬುಟ್ಟಿ, ರಟ್ಟು
ವಿಧಾನ: ೧ನೇ ತರಗತಿ
ದೊಡ್ಡ ಚಮಚದಲ್ಲಿ ಬಾಲ್ ನ್ನು ಹಿಡಿದು ಬೀಳಿಸದಂತೆ ಸಮತೋಲನದೊಂದಿಗೆ ಸಾಗುತ್ತ
ನಿರ್ದಿಷ್ಠ ಪಡಿಸಿದ ಸ್ಥಳದಲ್ಲಿ ಇಡಲಾದ ಬುಟ್ಟಿಯಲ್ಲಿ ಹಾಕುವುದು. ಕನಿಷ್ಠ ೫-೬ ಬಾರಿ
ಪುನರಾವರ್ತಿಸುವುದು.
೨ನೇ & ೩ನೇ ತರಗತಿ :
ಮೇಲಿನ ಚಟುವಟಿಕೆಯಂತೆಯೇ ಚಮಚದ ಬದಲು ರಟ್ಟನ್ನು ಹಾಗೂ ಸಾಗುವ ಅಂತರವನ್ನು
ಹೆಚ್ಚಿಸಿ ಚಟುವಟಿಕೆ ನಿರ್ವಹಿಸುವರು.
----------------------------–----–-
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ
ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಹೊಂದಿಸುವುದು, ಬಣ್ಣದ ಕಲ್ಪನೆ
ಚಟುವಟಿಕೆ... ಬಣ್ಣಗಳನ್ನು ಹೊಂದಿಸು (ಗುರಿ ೩)
ಉದ್ದೇಶ:- ಬಣ್ಣಗಳನ್ನು ಗುರುತಿಸುವುದು.
ಅಗತ್ಯ ಸಾಮಗ್ರಿಗಳು : ಡೊಮಿನೋ ಕಾರ್ಡುಗಳು/ ವಿವಿಧ ಬಣ್ಣಗಳ ಮಿಂಚು ಪಟ್ಟಿಗಳು
ವಿಧಾನ : ಎಲ್ಲಾ ಮಕ್ಕಳು ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವಂತೆ ಹೇಳುವುದು. ಪ್ರತಿ ಮಗುವಿಗೆ ಒಂದೊ0ದು
ಬಣ್ಣದ ಡೊಮಿನೊ ಕಾರ್ಡ್ನ್ನು ವಿತರಿಸುವುದು. ವೃತ್ತದ ಮಧ್ಯದಲ್ಲಿ ಬೇರೆ ಬೇರೆ ಬಣ್ಣದ ಡೊಮಿನೊ
ಕಾರ್ಡ್ಗಳನ್ನು ಇರಿಸುವುದು. ನಂತರ ಒಂದೇ ಬಣ್ಣದ ಕಾರ್ಡ್ ಹೊಂದಿರುವ ಮಕ್ಕಳನ್ನು ಮುಂದೆ ಬರಲು
ಹೇಳುವುದು. ಅವರಲ್ಲಿರುವ ಬಣ್ಣಕ್ಕನುಗುಣವಾಗಿ ಕಾರ್ಡ್ಗಳನ್ನು ವೃತ್ತದಲ್ಲಿರುವ ಬಣ್ಣದ ಕಾರ್ಡ್ ಮೇಲೆ ಇರಿಸಲು
ಹೇಳುವುದು. ಇದೇ ರೀತಿ ಉಳಿದ ಮಕ್ಕಳು ಕೂಡ ಮುಂದೆ ಬಂದು ತಮ್ಮ ತಮ್ಮ ಡೊಮಿನೊ ಕಾರ್ಡ್ಗಳ ಬಣ್ಣ
ಅರ್ಥಮಾಡಿಕೊಂಡು ಹೊಂದಿಸುತ್ತಾರೆ. ನಂತರ ಒಂದು ಗುಂಪಿನಲ್ಲಿ ಒಂದೇ ಬಣ್ಣದ ಕಾರ್ಡ್ ಮಾತ್ರ ಒಟ್ಟಿಗೆ
ಇರುವಂತೆ ಜೋಡಿಸಲು ಮಕ್ಕಳಿಗೆ ಹೇಳುವುದು.
ಉದಾ: ಹಸಿರು, ಕೆಂಪು, ಹಳದಿ ಇತ್ಯಾದಿ.
ಹೀಗೆಯೇ ವಿವಿಧ ಬಣ್ಣದ ಮಿಂಚು ಪಟ್ಟಿಗಳು, ವಿವಿಧ ಬಣ್ಣದ ವಸ್ತುಗಳು, ಹೂವುಗಳು ಇತ್ಯಾದಿಗಳನ್ನು
ಬಣ್ಣಕ್ಕನುಗುಣವಾಗಿ ಹೊಂದಿಸಲು ತಿಳಿಸುವುದು.
ತರಗತಿ-೨
ಪ್ರತಿ ಬಣ್ಣಕ್ಕೆ ತಾನು ನೋಡಿದ ಕನಿಷ್ಟ ೨ ವಸ್ತುಗಳನ್ನು ಹೇಳಲು ತಿಳಿಸುವುದು.
ತರಗತಿ-೩
ಕೆಂಪು, ಹಸಿರು, ನೀಲಿ ಕಪ್ಪು ಮತ್ತು ಬಿಳಿ ಬಣ್ಣವಿರುವ ಸ್ಥಳೀಯವಾಗಿ ತಾನು ನೋಡಿದ ವಸ್ತು/ಪ್ರಾಣಿ/ಪಕ್ಷಿ/ಸಸ್ಯ ಪಟ್ಟಿ
ಮಾಡಲು ಹೇಳುವುದು.
----------------------–---------
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ.
ಚಟುವಟಿಕೆ : ಕೊಲ್ಯಾಜ್ ಮಾಡುವುದು. (ಗುರಿ : ೧)
ಉದ್ದೇಶಗಳು :
• ಸೂಕ್ಮ ಸ್ನಾಯುಗಳ ಬೆಳವಣಿಗೆಗೆ ಅನುಕೂಲವಾಗುವುದು.
• ತಮ್ಮಲ್ಲಿರುವ ಕಲೆಯನ್ನು ಅಭಿವ್ಯಕ್ತಗೊಳಿಸಲು ಸಹಾಯವಾಗುವುದು.
• ಒಂದು ಚೌಕಟ್ಟಿನೊಳಗೆ (ಸ್ಥಳದ ಪರಿಕಲ್ಪನೆ) ಕೆಲಸ ಮಾಡುವ ವಿಧಾನ ತಿಳಿಯುವುದು.
• ವಸ್ತುಗಳನ್ನು ಕತ್ತರಿಸಲು, ಹಿಡಿಯಲು ಹಿಡಿತ ಸಾಧಿಸುವುದು.
ಸಾಮಗ್ರಿಗಳು : ಬಣ್ಣದ ಹಾಳೆಗಳು ಮತ್ತು ಅಂಟು.
ವಿಧಾನ : ಕಾಗದವನ್ನು ಸಣ್ಣ ಸಣ್ಣ ತುಂಡುಗಳಾಗಿ ಹರಿದು ಹಾಕಲು ಮಕ್ಕಳಿಗೆ ಹೇಳುವುದು. ನಂತರ ಹರಿದ
ಹಾಳೆಗಳನ್ನು ನೀಡಿರುವ ರೇಖಾ ಚಿತ್ರಗಳಿಗೆ ಅಂಟಿಸಲು ಹೇಳುವುದು. ಆ ರೇಖಾ ಚಿತ್ರಗಳು ಮರ, ಗುಡಿಸಲು
ಪ್ರಾಣಿ ಅಥವಾ ಯಾವುದೇ ಇತರ ವಸ್ತುಗಳ ಚಿತ್ರಗಳು ಆಗಿರಬಹುದು. ಮಕ್ಕಳು ರಚಿಸಿದ ವಿನ್ಯಾಸದಲ್ಲಿ ಕಾಗದದ
ಚೂರುಗಳನ್ನು ಅಂಟಿಸಿ ತಮ್ಮದೇ ಆದ ಕೊಲ್ಯಾಜ್ ಮಾಡಲು ಅವಕಾಶ ಮಾಡಿಕೊಡುವುದು. ಹಳೆಯ ಬಟ್ಟೆಯ
ತುಂಡುಗಳು ಅಥವಾ ಇತರ ತ್ಯಾಜ್ಯ ವಸ್ತುಗಳು ಅಥವಾ ಎಲೆಗಳು ಅಥವಾ ದಳಗಳು ಇತ್ಯಾದಿಗಳನ್ನು ಕೊಲ್ಯಾಜ್
ಚಟುವಟಿಕೆಯಲ್ಲಿ ಅಂಟಿಸಲು ಬಳಸಬಹುದಾಗಿದೆ.
ವಿವರ: ೨ ಮತ್ತು ೩ ನೇ ತರಗತಿಗೆ ಇದೇ ಚಟುವಟಿಕೆಯನ್ನು ಮಾಡಿಸಿ ಕೊಲ್ಯಾಜ್‌ಗೆ ಸಂಬ0ಧಿಸಿದ ವಿವರಣೆಯನ್ನು
ತಮ್ಮದೇ ಆದ ಶೈಲಿ ಮತ್ತು ಭಾಷೆಯಲ್ಲಿ ಹೇಳುವಂತೆ ತಿಳಿಸುವುದು.
-------------------------------
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ
ಬೆಳವಣಿಗೆ
ಚಟುವಟಿಕೆ : ಹಾಡು, ಪ್ರಾಸಗೀತೆ, ಪದ್ಯ/ ನಾಟಕ. (ಗುರಿ-೨) ಇಅಐ-೩
ಉದ್ದೇಶಗಳು:
* ಧ್ವನಿ ಸಂಕೇತಗಳ ಅರಿವನ್ನು ಮೂಡಿಸುವುದು.
* ಪ್ರಾಸಗಳ ಅರಿವನ್ನು ಉಂಟು ಮಾಡುವುದು.
* ಕ್ರಿಯಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.
* ತನ್ನ ಸುತ್ತಲಿನ ಪರಿಸರದೊಂದಿಗೆ ಸಂಬ0ಧೀಕರಿಸುವುದು.
ಅಗತ್ಯ ಸಾಮಗ್ರಿಗಳು- ಇಲ್ಲ
ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ. ಶಿಕ್ಷಕರು ಮಕ್ಕಳಿಗೆ ಪರಿಚಿತ ಪ್ರಾಸಗೀತೆಯನ್ನು ಹಾಡಿ ತೋರಿಸಲಿ.
ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಚರಿಸಲು ತಿಳಿಸಿ. ಉದಾ..ಬೇಕೇ ಬೇಕೇ ತರಕಾರಿ
ನೆನಪಿಡಬೇಕಾದ ಅಂಶಗಳು:
* ಮಕ್ಕಳು ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.
* ಮಗುವಿಗೆ ತಿಳಿದಿರುವ ಹಾಡನ್ನು ಹೇಳಲು ಉತ್ತೇಜಿಸಿ.
ತರಗತಿವಾರು ವಿವರ: ೨ ಹಾಗೂ ೩ನೇ ತರಗತಿ ಮಕ್ಕಳು ಶಿಕ್ಷಕರನ್ನು ಅನುಕರಿಸುತ್ತಾ ರಾಗಬದ್ಧವಾಗಿ
ಅಭಿನಯದೊಂದಿಗೆ ಹಾಡುವುದು. (೯ನೇ ದಿನಕ್ಕೆ ಮುಂದುವರೆದಿದೆ)
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಓದಿನೆಡೆಗೆ ಮಕ್ಕಳ ಆಸಕ್ತಿ
ಚಟುವಟಿಕೆ: ಓದುವ ಮೂಲೆ
ಅಗತ್ಯ ಸಾಮಗ್ರಿಗಳು: ವಿವಿಧ ಪುಸ್ತಕಗಳು, ಕಥೆ ಪುಸ್ತಕಗಳು, ದಿನ ಪತ್ರಿಕೆಗಳು, ಓದುವೆ ನಾನು ಕಾರ್ಡು, ಕಾಗದ
ಹಾಳೆ,ಸ್ಕೆಚ್ಚ ಪೆನ್ನುಗಳು, ಸಚಿತ್ರ ಕೋಶ, ಕಥಾ ಸರಣಿ ಚಿತ್ರಗಳು, ಇತ್ಯಾದಿ.
ಉದ್ದೇಶ: ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು. ಓದುವಿಕೆಗೆ ತರಗತಿ ವಾತಾವರಣವನ್ನು
ಸಿದ್ದಗೊಳಿಸುವುದು.
ವಿಧಾನ :
* ಮಕ್ಕಳನ್ನು ಓದುವ ಮೂಲೆಗೆ ಕಳುಹಿಸುವುದು.
* ಮಕ್ಕಳು ತಮಗಿಷ್ಟವಾದ ಪುಸ್ತಕ ಆಯ್ದು ಕೊಳ್ಳಲು ಅವಕಾಶ ಕಲ್ಪಿಸುವುದು.
* ಪುಸ್ತಕ ಓದಲು / ಊಹಾತ್ಮಕವಾಗಿ ಓದಲು ಪ್ರೇರೇಪಿಸುವುದು.
೨ ಮತ್ತು ೩ನೇ ತರಗತಿ: ಮಕ್ಕಳು ಓದಿರುವುದನ್ನು ಅಭಿವ್ಯಕ್ತಿಸುವುರು ಉದಾಹರಣೆಗೆ ತಮಗಿಷ್ಟವಾದ ಪುಸ್ತಕ/ ಪಾತ್ರ/
ಸನ್ನಿವೇಶದ ಕುರಿತು ಮಾತನಾಡುತ್ತಾರೆ.
*ಉದ್ದೇಶಿತ ಬರಹ*
ಸಾಮರ್ಥ್ಯ: ಸೂಕ್ಷö್ಮ ಸ್ನಾಯು ಕೌಶಲಗಳ ಅಭಿವೃದ್ಧಿ,
ಚಟುವಟಿಕೆ : ಚಿತ್ರಿಸುವುದು ಮತ್ತು ಹೆಸರಿಸುವುದು (ಗುರಿ-೨) ಇಅW-೩
ಉದ್ದೇಶಗಳು:
* ಚಿತ್ರ ಬಿಡಿಸುವ ಮೂಲಕ ಸೂಕ್ಷö್ಮ ಸ್ನಾಯುಗಳ ಬೆಳವಣಿಗೆ ಆಗುವಂತೆ ನೋಡಿಕೊಳ್ಳುವುದು.
* ಹೆಸರಿಸುವ ಮೂಲಕ ಬರವಣಿಗೆ ಕೌಶಲ ರೂಢಿಸುವುದು.
ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್ ಮತ್ತು ಬಣ್ಣದ ಪೆನ್ಸಿಲ್‌ಗಳು
ವಿಧಾನ : ಮಕ್ಕಳು ತಮ್ಮ ಆಯ್ಕೆಯ ಚಿತ್ರ ಬಿಡಿಸುವುದು
ಉದಾ : ಹಣ್ಣು, ಗೊಂಬೆ/ ಆಟಿಕೆ. ಪುಸ್ತಕ, ಹೂ ಇತ್ಯಾದಿ
* ಬರೆದ ಚಿತ್ರಕ್ಕೆ ಒಂದು ಹೆಸರು ಕೊಡಲು ತಿಳಿಸುವುದು
ತರಗತಿವಾರು ವಿವರ: ೨ ತರಗತಿಯ ವಿದ್ಯಾರ್ಥಿಗಳು ಸ್ವಲ್ಪ ಮೇಲ್ಮಟ್ಟದ ಚಿತ್ರ ಬಿಡಿಸುವುದು. ಮತ್ತು ೩ ನೇ ತರಗತಿಯ
ವಿದ್ಯಾರ್ಥಿಗಳು ಸರಳ ಸನ್ನಿವೇಶದ ಚಿತ್ರವನ್ನು ಆಯ್ದು ಬಿಡಿಸುವುದು.
--------------------------------
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ಕೆರೆ ದಡ
ಸಾಮರ್ಥ್ಯ : ಏಕಾಗ್ರತೆ ಬೆಳೆಸಲು, ಆಲಿಸುವ ಕೌಶಲ್ಯ ಬೆಳೆಸಲು, ದೇಹದ ಸಮತೋಲನ ಅಭಿವೃದ್ಧಿಪಡಿಸಲು .
ಸಾಮಗ್ರಿ: ಸುಣ್ಣದ ಪುಡಿ
ವಿಧಾನ:
• ಮಕ್ಕಳ ಸಂಖ್ಯೆಗೆ ಅನುಗುಣವಾಗಿ ದೊಡ್ಡ ವೃತ್ತವನ್ನು ಸುಣ್ಣದ ಪುಡಿಯ ಸಹಾಯದಿಂದ ಬರೆಯುವುದು.
• ಮಕ್ಕಳನ್ನು ವೃತ್ತದ ಗೆರೆಯ ಹೊರಭಾಗದಲ್ಲಿ ನಿಲ್ಲಲು ಸೂಚಿಸುವುದು.
• ಶಿಕ್ಷಕರು ಕೆರೆ ದಡ ಎಂಬ ಸೂಚನೆಯನ್ನು ಅನುಸರಿಸಿ ಮಕ್ಕಳಿಗೆ ಆಡಲು ತಿಳಿಸುವುದು.
• ಸೂಚನೆಯನ್ನು ಪಾಲಿಸದವರು ಆಟದಿಂದ ಹೊರಗುಳಿಯುವರು.
ಎರಡನೇ ಹಾಗು ಮೂರನೇ ತರಗತಿಯ ಮಕ್ಕಳಿಗೂ ಈ ಆಟವನ್ನೇ ಮುಂದುವರೆಸಿ ಆಡಿಸುವುದು.
--------------------------------
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಸಿಂಹ ಮತ್ತು ಇಲಿ
ಸಾಮಗ್ರಿಗಳು : ಮುಖವಾಡಗಳು
ಉದ್ದೇಶಗಳು :
• ಆಲೋಚನಾ ಶಕ್ತಿಯನ್ನು ವೃದ್ಧಿಸುವುದು
• ಊಹಿಸುವ ಕೌಶಲವನ್ನು ಹೆಚ್ಚಿಸುವುದು.
• ಕಥೆಗೆ ಸಂಬ0ಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.
• ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.
ವಿಧಾನ : ಮುಖವಾಡಗಳು
• ಮುಖವಾಡಗಳನ್ನು ಬಳಸಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. ಹಿರಿಯ
ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಸಹಕರಿಸಿ.
• ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
(ಕಥೆಯನ್ನು ಆನಂದಿಸುವುದರಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)
-----------------------------------
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ
ಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
“ನೀನೇ ಮಾಡಿ ನೋಡು” ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
https://www.schooleducation.kar.nic.in/
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment