Friday, 21 March 2025

ದಿನಕ್ಕೊಂದು ಶಿಶುಗೀತೆ

 *50ನೇ ದಿನದ ವಿಶೇಷ*

ಮಕ್ಕಳ ನೆಚ್ಚಿನ ಶ್ರೀಮತಿ ವಂದನಾ ರೈ ಮೇಡಂ ಕಾರ್ಕಳ ರವರು ಬರೆದು ಹಾಡಿರುವ  ಚಂದದ ಶಿಶು ಗೀತೆ

*ದಿನಕ್ಕೊಂದು ಶಿಶುಗೀತೆ*

*50.ಹಣ್ಣುಗಳ ಹಾಡು*

ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು
ಹಣ್ಣುಗಳೆಲ್ಲ ಸೇರಿಕೊಂಡು
ದಿಬ್ಬಣ ಹೊರಟಿತ್ತು//
// ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//
ಸೇಬಿನ ಹಣ್ಣು ಮದುಮಗಳಾಗಿ
ಸಿಂಗಾರಗೊಂಡಿತ್ತು//
ಮೊಸಿಂಬೆ ಹಣ್ಣು ಮದುಮಗನಾಗಿ
ಮುಂಡಾಸು ಕಟ್ಟಿತ್ತು//
//ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//
ಕಿತ್ತಳೆ ಹಣ್ಣು ಬಂದೋರ್ಗೆಲ್ಲ
ಶರಬತ್ತು ಕೊಟ್ಟಿತ್ತು//
ಪೇರಳೆ ಹಣ್ಣು ಬಂದೋರ್ಗೆಲ್ಲ  
ಪನ್ನೀರು ಹಾಕಿತ್ತು//
//ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//
ಚೋಟು ಉದ್ದದ ದ್ರಾಕ್ಷಿ ಹಣ್ಣು
ಸ್ಯಾಕ್ಸೋ ಫೋನ್ ನುಡಿಸ್ತಿತ್ತು//
ದಪ್ಪಗೆ ಇದ್ದ ಕಲ್ಲಂಗಡಿ ಹಣ್ಣು
ತಬಲ ಬಾರಿಸ್ತಿತ್ತು//
//ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//
ಕೆಂಪನೆ  ಇದ್ದ ದಾಳಿಂಬೆ ಹಣ್ಣು 
ಮಂತ್ರವ ಹೇಳ್ತಿತ್ತು//
ಉದ್ದಗೆ ಇದ್ದ  ಅನಾನಸ್ ಹಣ್ಣು
ಅಕ್ಷತೆ ಹಾಕ್ತಿತ್ತು//
//ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//
ಕರೋನದಿಂದ ನೆಂಟರ ಸಂಖ್ಯೆ
ಕಡಿಮೆಯಾಗಿತ್ತು//
ವಧುವಿನ ತಾಯಿ ಮೌನಣ್ಣು ಕೂಡ 
ಮಾಸ್ಕ್ ಹಾಕಿತ್ತು//
//ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//
ಲಿಚ್ಚಿ ಚಿಕ್ಕು ಲೆಹೆಂಗಾ ಹಾಕಿ
ಊಟ ಬಡಿಸ್ತಿತ್ತು//
ಬಾಳೆಹಣ್ಣು ಬಂದೋರಿಗೆಲ್ಲ
ತಾಂಬಲ ಕೊಡ್ತಿತ್ತು//
//ಕರಬೂಜ ಹಾಲಲ್ಲೊಂದು ದಿನ
  ಮದುವೆ ನಡೆದಿತ್ತು//

*ರಚನೆ ಮತ್ತು ಗಾಯನ*
ಶ್ರೀಮತಿ ವಂದನಾ ರೈ
ಕಾರ್ಕಳ

*ವಿಡಿಯೋ ಲಿಂಕ್*



_ಸಂಗ್ರಹ_
ರೇಣುಕಾರಾಧ್ಯ
GLPS M KOPPALU ARSIKERE

1 comment:

  1. Vandana Rai is Diamond of our department. She always actively participate in all activities. She is very good teacher, singer, dancer, and all. Thanq Vandana madam

    ReplyDelete