*ದಿನಕ್ಕೊಂದು ಶಿಶುಗೀತೆ*
*51.ಅಮ್ಮ ಅಮ್ಮ ಉಂಡೆ ಕೊಡೆ*
ಅಮ್ಮ ಅಮ್ಮ ತಿನ್ನಲು
ನನಗೆ ಉಂಡೆ ಕೊಡಮ್ಮ,
ಉಂಡೆ ಜೊತೆ ನೆಂಚಿಕೊಳ್ಳೋಕೆ
ಚಕ್ಲಿ ಕೊಡಮ್ಮ.||ಪ ll
ಅಮ್ಮ ನನಗೆ ಹಸಿವೆ ಇಲ್ಲ
ಊಟ ಬ್ಯಾಡೆ,
ಅದಕ್ಕೆ ಬದಲು ಮೂರೆ ಮೂರು
ದೋಸೆ ಮಾಡೆ.
ಕ್ಲಾಸಿಗೆಲ್ಲ ನಾನೇ ಫಸ್ಟ್
ಎಲ್ಲಾ ಆಟದಲ್ಲಿ,
ಇನ್ನೂ ಸ್ವಲ್ಪ ಬೆಣ್ಣೆ ಹಾಕೆ
ದೋಸೆ ಪ್ಲೇಟಲ್ಲಿ.
ತುಂಬಾ ಸ್ವರಗೋಗಿದ್ದೀಯ ಅಂತ
ಮೇಡಂ ಹೇಳಿದ್ರು,
ತಿಂಡಿ ಸರಿಯಾಗಿ ತಿನ್ನಲ್ವಾ ಅಂತ
ಮೆತ್ತಗೆ ಕೇಳುದ್ರು.
ಮೇಡಂ ಮತ್ತೆ ಕೇಳದಾಗೆ
ತಿಂಡಿ ಮಾಡ್ಕೊಡೆ,
ಇಲ್ಲ ಅಂದರೆ ನಾಳೆ ಸ್ಕೂಲಿಗೆ
ನೀನೇ ಹೋಗ್ಬಿಡೆ.
*ಸಂಗ್ರಹ*
ರೇಣುಕಾರಾಧ್ಯ
GLPS M KOPPALU ARSIKERE
*ಹಾಡಿದವರು*
ಶ್ರೀಮತಿ ನಾಗಜ್ಯೋತಿ
ಸ.ಕಿ.ಪ್ರಾ.ಶಾಲೆ. ಭಕ್ತರಹಳ್ಳಿ
ಚನ್ನರಾಯಟ್ಟಣ
*ಆಡಿಯೋ ಲಿಂಕ್*
https://drive.google.com/file/d/1TCXREbygY8KmY23GcXdBOhXy2vOrGWKC/view?usp=drivesdk
No comments:
Post a Comment