Friday, 21 March 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ*

*49.ಚಂದಿರನನ್ನು ಹಿಡಿಯೋಣ*

ಅಮ್ಮಾ ಬಾರೇ.. ರೆಕ್ಕೆಯ ತಾರೆ
ತಾರೆಯ ತೋಟಕೆ ಹೋಗೋಣ||
ತಾರೆಗಳಲ್ಲಿ ಪ್ರೀತಿಯ ಕೊಡುವ
ಚಂದಿರನನ್ನು ಸೇರೋಣ...||

ತಂಪನು ತರುವ ಮಂಜಿನ ರಾಜನು
ಮುದ್ದು ಮುದ್ದು ಚಂದಿರನು.. ||
ಸುಂದರ ಮೊಗದಲಿ ಚುಕ್ಕೆಗಳೇಕೆ
ಕಾರಣ ಹೇಳದೆ ಕುಳಿತವನು.. ||

ದಿನವೂ ನನಗೆ ಊಟವ ಮಾಡಿಸಿ
ಹೋಗಲು ಬರವ ಚಂದಿರನು.. ||
ನನ್ನನು ಬರಲು ಹೇಳಿಹನಮ್ಮ
ಹೋಗುವ ಬೇಗ ಬಾರಮ್ಮ... ||

ಆಟ ಆಡುವ ಚಂಡಿನ ರೂಪವು
ನನ್ನ ಕೈಯಿಗೆ ಸಿಗನಮ್ಮ... ||
ಬೇಗ ಹೋಗಿ ಚಂಡನು ಪಡೆದು
ಭೂಮಿಗೆ ಬರುವ ಬಾರಮ್ಮಾ.. ||

_ರಚನೆ ಮತ್ತು ಗಾಯನ_
ರಂಗನಾಥ ಕ ನಾ ದೇವರಹಳ್ಳಿ ಶಿಕ್ಷಕರು ವಿಶ್ವನಗರ

*ಆಡಿಯೋ ಲಿಂಕ್*

https://drive.google.com/file/d/1NhIUF5RRxa-TRku-8vtxfIcp7zFEdjE7/view?usp=drivesdk

_ಸಂಗ್ರಹ_
ರೇಣುಕಾರಾಧ್ಯ
GLPS M KOPPALU ARSIKERE

No comments:

Post a Comment