Friday, 7 March 2025

ದಿನಕ್ಕೊಂದು ಶಿಶುಗೀತೆ

*ದಿನಕ್ಕೊಂದು ಶಿಶುಗೀತೆ*

*35.ಬಾನಿನಲ್ಲಿ ಮೂಡಿ ಬಂದ ಚಂದಮಾಮ*

ಬಾನಿನಲ್ಲಿ ಮೂಡಿ ಬಂದ ಚಂದಮಾಮ 

ಮೂಡಿ ಬಂದ ಮೂಡಿ ಬಂದ ಚಂದಮಾಮ 

ಕತ್ತಲನ್ನು ದೂಡಿ ನಿಂದ ಚಂದ ಮಾಮಾ ||

ಮೋಡದೊಡನೆ ಓಡಿ ಬಂದ ಚಂದಮಾಮ 

ಓಡಿ ಬಂದ ಓಡಿ ಬಂದ ಚಂದಮಾಮ 

ನಮ್ಮನ್ನು ನೋಡಿ ನಿಂದ ಚಂದ ಮಾಮಾ ||1||

ಮುಗಿಲ ಬೆಟ್ಟವೇರಿ ಬಂದ ಚಂದಮಾಮ 

ಏರಿ ಬಂದ ಏರಿ ಬಂದ ಚಂದಮಾಮ 

ತಾರೆಗಳನು ಸೇರಿ ನಿಂದ ಚಂದ ಮಾಮಾ ||2||

ತಂಪು ಬೆಳಕು ಬೀರಿ ಬಂದ ಚಂದಮಾಮ 

ಬೀರಿ ಬಂದ ಬೀರಿ ಬಂದ ಚಂದಮಾಮ 

ಜಗಕೆ ಚೆಲುವ ತೋರಿ ನಿಂದ ಚಂದ ಮಾಮಾ ||3||

ರಚನೆ - ಸೀತಾರಾಮ ಭಟ್ಟ

*ಸಂಗ್ರಹ*
ರೇಣುಕಾರಾಧ್ಯ
GLPS M KOPPALU ARSIKERE

*ಹಾಡಿದವರು*
ಆರೋಗ್ಯ ಮೇರಿ. ಜೆ.
Glps ಚಿಕ್ಕಗನ್ನಿ. ಚನ್ನರಾಯಪಟ್ಟಣ

ಆಡಿಯೋ ಲಿಂಕ್

https://drive.google.com/file/d/1-RrjnRWodA_-rnArgcDK9tuVuWZOb7s6/view?usp=drivesdk

No comments:

Post a Comment