ದಿನಕ್ಕೊಂದು ಶಿಶುಗೀತೆ*
*34.ಆರೋಗ್ಯ ಭಾಗ್ಯ*
ಮುದ್ದು ಮಗುವೆ ಹೇಳುವೆ ಕೇಳು
ಉತ್ತಮ ಆರೋಗ್ಯದ ಗುಟ್ಟು॥
ಹೊರಗಿನ ತಿಂಡಿಯು ಹಾನಿಕಾರಕವು
ತಿಂದರೆ ಆರೋಗ್ಯಕೆ ಪೆಟ್ಟು ॥೧॥
ಅಮ್ಮನ ಕೈರುಚಿ ಅಮೃತದಂತೆ
ಆರೋಗ್ಯಕೆ ಸೋಪಾನ॥
ಪ್ಲಾಸ್ಟಿಕ್ ಮಿಶ್ರಿತ ಕುರುಕುರೆಯಿಂದ
ಕರುಳಬೇನೆಗೆ ಆಹ್ವಾನ॥೨॥
ಪ್ಯಾಕ್ ಮಾಡಿದ ಪಾನೀಯ ಕುಡಿಯದೆ
ಮನೆಯಲೆ ಹಣ್ಣಿನ ರಸವನು ಸೇವಿಸು॥
ಹೃದಯದ ಬೇನೆ,ಬೊಜ್ಜಿನ ಖಾಯಿಲೆ,
ಹಲ್ಲಿನ ಸಮಸ್ಯೆಯ ದೂರವಿರಿಸು॥೩॥
ಫಿಜ್ಜಾ,ಬರ್ಗರ್,ಬೀದಿ ಬದಿಯ
ಕೃತಕ ಬಣ್ಣದ ತಿಂಡಿ ತ್ಯಜಿಸು॥
ಅಮ್ಮನು ಮಾಡುವ ಹಪ್ಪಳ,ಸಂಡಿಗೆ
ಸವಿಯುತ ಬಾಯಿಚಪಲವ ತಣಿಸು॥೪॥
ಹೆಚ್ಚು ಉಪ್ಪು , ಖಾರ, ಸಿಹಿ
ಇರುವ ತಿಂಡಿಗಳು ಅಪಕಾರಿ॥
ಹಸಿತರಕಾರಿ,ಹಣ್ಣು,ಮೊಳಕೆ ಕಾಳು,
ನಿನ್ನಯ ಬೆಳವಣಿಗೆಗೆ ಉಪಕಾರಿ॥೫॥
ಒಳ್ಳೆಯ ಊಟ,ಒಂದಿಷ್ಟು ನಡಿಗೆ,
ಧ್ಯಾನ,ವ್ಯಾಯಾಮ ಮಾಡು ಮಗು॥
ಒಳ್ಳೆಯ ದಿನಚರಿ ಪಾಲಿಸಿಕೊಂಡು
ಆರೋಗ್ಯ ಭಾಗ್ಯದಿ ನೀ ಸಾಗು॥೬॥
*ರಚನೆ ಮತ್ತು ಗಾಯನ*
ವೇದಾ ಅಶೋಕ್,
ಶಿಕ್ಷಕಿ ,ಸ.ಕಿ.ಪ್ರಾ,ಶಾಲೆ ,ಗೋವಿನಹಳ್ಳಿ,ಬೇಲೂರು[ತಾ],ಹಾಸನ[ಜಿ].
*ಆಡಿಯೋ ಲಿಂಕ್*
https://drive.google.com/file/d/1xzJsnlhhHf3d7ukQqWqb0X4OFYMxw8IN/view?usp=drivesdk
*ಸಂಗ್ರಹ*
ರೇಣುಕಾರಾಧ್ಯ
GLPS M KOPPALU
ARSIKERE
No comments:
Post a Comment