*ದಿನಕ್ಕೊಂದು ಶಿಶುಗೀತೆ*
*📙33.ಅಮ್ಮನ ಮಡಿಲು📕*
ಅಮ್ಮನ ಮಡಿಲಲಿ ಸುಮ್ಮನೆ
ಮಲಗುವ ಬಾರೇ ಚಿನ್ನಮ್ಮ!
ಗುಮ್ಮನು ಬರುವ ಹೆದರಿಕೆ ಬೇಡ
ಇರುವಳು ನಮ್ಮಮ್ಮ...!
ಮಳೆಯಲು,ಬಿಸಿಲಲು ರೆಕ್ಕೆಯ
ಬಿಚ್ಚಿ ಪೊರೆವಳು ನಮ್ಮನ್ನು
ಇಳೆಯಲಿ ಅಲೆದು,ಬುತ್ತಿಯ
ತರುವಳು ವಿಧ ವಿಧ ಹಣ್ಣನ್ನು
ತನ್ನಯ ಮರಿಯ ಮಾತನು
ಕೇಳಿ ಹಕ್ಕಿಗೆ ಸಂತಸವು
ಮುನ್ನ ಬೆಚ್ಚನೆ ಗೂಡನು ಕಟ್ಟಲು
ನಡೆಸಿತು ನಕ್ಷೆಯ ಕಸುವು
ಒಣ ಎಲೆ,ಗರಿಕೆ,ಕಡ್ಡಿಗಳೆಕ್ಕಿ
ತರುತಿರೆ ಕೊಕ್ಕಿನಲಿ
ಕ್ಷಣದಲಿ ಹಿಂದೆ ಸಾಗಿದವು
ಮರಿಗಳು ಹರುಷದಲಿ!!
ಹೆಣೆದೇ ಬಿಟ್ಟಿತು ಕಸಕಡ್ಡಿ-
ಗಳಲಿ ಬೆಚ್ಚನೆ ಗೂಡನ್ನು!
ದಣಿಯದೆ ಹಳ್ಳದ ಈಚಲು
ಮರದಲಿ ಸುಮಧುರ ಹಾಡಿನ್ನು.
●●●●●●●●●●●●●●●●●●
ರಚನೆ:*ಸೌಭಾಗ್ಯ ಮಹಾಂತೇಶ್*
ಶಿಕ್ಷಕಿ ಮತ್ತು ಕವಯಿತ್ರಿ
ಸ.ಹಿ.ಪ್ರಾ.ಶಾಲೆ,ಚಿಕ್ಕಣ್ಣನ ಕೊಪ್ಪಲು
ಅರಸೀಕೆರೆ- ತಾ||
ಗಾಯನ:*ಎಂ.ಜಿ.ಪರಮೇಶ್ ಮಡಬಲು,*
BRP,BRC ಕೇಂದ್ರ, ಹೊಳೆನರಸೀಪುರ
ಆಡಿಯೋ ಲಿಂಕ್
https://drive.google.com/file/d/1w79aJNxKawNJ9VkItSwxEx_T_IDwF_Wu/view?usp=drivesdk
ಸಂಗ್ರಹ:*ರೇಣುಕಾರಾಧ್ಯ*
GLPS M Koppalu,Arsikere
ಧನ್ಯವಾದಗಳು ರೇಣುಕಾರಾಧ್ಯ ಸರ್ ರವರಿಗೂ ಪರಮೇಶ್ ಸರ್ BRC ಕೇಂದ್ರ ಹೊಳೆನರಸೀಪುರ ರವರಿಗೂ.
ReplyDelete