ದಿನಕ್ಕೊಂದು ಶಿಶುಗೀತೆ**
*44.ಮೊಲದ ಮರಿ*
ಮೊಲದ ಮರಿ ಮೊಲದ ಮರಿ
ಆಡು ಬಾರೆ
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ
ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ
ಗಿಡ್ಡ ಬಾಲ ದೊಡ್ಡ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೋ ಕಂದ
ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೆ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೆ
ಕೆಮ್ತೂರು ದೊಡ್ಡಣ್ಣ ಶೆಟ್ಟಿ
*ಸಂಗ್ರಹ*
ರೇಣುಕಾರಾಧ್ಯ
GLPS M KOPPALU ARSIKERE
*ಆಡಿಯೋ ಲಿಂಕ್*
https://drive.google.com/file/d/1Ky6EGVmZB-wAlh9uWOBcwTyFhEC3GDHW/view?usp=drivesdk
*ಹಾಡಿದವರು*
ಶ್ರೀಮತಿ ರಾಧಾಮಣಿ
ಸ ಹಿ ಪ್ರಾ ಶಾಲೆ, ಪೇಟೆ ಬಾಣಾವರ
No comments:
Post a Comment