*ದಿನಕ್ಕೊಂದು ಶಿಶುಗೀತೆ*
*ಆಡಿಯೋ ಲಿಂಕ್*
https://drive.google.com/file/d/1KGXAqtvYAnQZ0tRweWpK7681jn0JFKpX/view?usp=drivesdk
*43.ಏರಿಕೆ ಇಳಿಕೆ*
ಹತ್ತೋಣ ಹತ್ತೋಣ ಬೆಟ್ಟವನ್ನು ಹತ್ತೋಣ
ಏರೋಣ ಏರೋಣ ಬೆಟ್ಟವನ್ನು ಏರೋಣ
ಬೆಟ್ಟವನ್ನು ಏರಲು ನಾವು ಮೆಟ್ಟಿಲುಗಳನ್ನು ಬಳಸೋಣ
ಲಾ ಲಾ ಲಾ ಲಾ
ಒಂದು ಎರಡು ಮೂರು ನಾಲ್ಕು ಐದು ಆರು ಏಳು ಎಂಟು ಒಂಬತ್ತು ಹೇಳುತ್ತಾ ಬೆಟ್ಟದ ತುದಿಯ ಮುಟ್ಟೋಣ ಬೆಟ್ಟದ ತುದಿಯ ಮುಟ್ಟಿದ ಒಡನೆ 10 ಎಂದು ಹೇಳೋಣ ಲಾಲಾ ಲಾಲಲಲಲ
ಇಳಿಯೋಣ ಇಳಿಯೋಣ ಬೆಟ್ಟದಿಂದ ಇಳಿಯೋಣ ಬೆಟ್ಟದಿಂದ ಇಳಿಯಲು ನಾವು ಮತ್ತೆ ಮೆಟ್ಟಿಲು ಬಳಸೋಣ
ಲಾ ಲಾ ಲಾ ಲಾ......
10 9 8 7 6 5 4 3 2 ಹೇಳುತ್ತಾ ಒಂದು ಎಂದು ಹೇಳೋಣ ಒಂದು ಎಂದು ಹೇಳಿದೊಡನೆ ನೆಲವ ನಾವು ಮುಟ್ಟೋಣ
ಲಾ ಲಾ ಲಾ ಲಾ.......
ಏರುತ ಹೇಳಿದ ಎಣಿಕೆಗಳನ್ನು *1 2 3 4 5 6 7 8 9 10*
ಏರುತ ಹೇಳಿದ ಎಣಿಕೆಗಳನ್ನು *ಏರಿಕೆ ಕ್ರಮ* ಎಂದು ಹೇಳೋಣ ಇಳಿಯುತ ಹೇಳಿದ ಎಣಿಕೆಗಳನ್ನು
*10 9 8 7 6 5 4 3 2 1* *ಇಳಿಕೆ ಕ್ರಮ* ಎಂದು ಹೇಳೋಣ ಹತ್ತೋಣ ಹತ್ತೋಣ ಬೆಟ್ಟವನ್ನು ಹತ್ತೋಣ,
ಇಳಿಯೋಣ ಇಳಿಯೋಣ ಬೆಟ್ಟವನ್ನು ಇಳಿಯೋಣ
ಲಾ ಲಾ ಲಾ ಲಾ ಲಾ
_ರಚನೆ ಮತ್ತು ಗಾಯನ_
ಸಂಧ್ಯಾ ಎಂ ಹೆಗಡೆ
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಬ್ಯಾಟರಾಯನಪುರ, ಬೆಂಗಳೂರು ದಕ್ಷಿಣ ವಲಯ -2
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU ARSIKERE
No comments:
Post a Comment