ದಿನಕ್ಕೊಂದು ಶಿಶುಗೀತೆ*
*ಆಡಿಯೋ ಲಿಂಕ್*
https://drive.google.com/file/d/1JVU5idq6jFaeDchDjadQ1uQw16E-1H4o/view?usp=drivesdk
*42.ರೈಲು ಗಾಡಿ*
ಚುಕು ಬುಕು ಚುಕು ಬುಕು ರೈಲುಗಾಡಿ!
ಬನ್ನಿರಿ ಹತ್ತಿರಿ ಸವಾರಿ ಮಾಡಿ॥
ಬೆಂಗಳೂರಿಗೆ ಹೋಗೋಣ
ವಿಧಾನಸೌಧ ನೋಡೋಣ
ಮೈಸೂರಿಗೆ ಹೋಗೋಣ
ಅರಮನೆಯನ್ನು ನೋಡೋಣ
ಧಾರವಾಡಕ್ಕೆ ಹೋಗೋಣ!
ಪೇಡಾವನ್ನು ಸವಿಯೋಣ
ವಿಜಯಪುರಕ್ಕೆ ಹೋಗೋಣ!
ಗೋಳಗುಮ್ಮಟ ನೋಡೋಣ॥
ಕೊಡಗಿಗೆ ನಾವು ಹೋಗೋಣ!
ಚಂದದ ಕಿತ್ತಳೆ ಸವಿಯೋಣ॥
ಚಿಕ್ಕಮಗಳೂರಿಗೆ ಹೋಗೋಣ
ರುಚಿ ರುಚಿ ಕಾಫಿ ಸವಿಯೋಣ।
ಮಂಗಳೂರಿಗೆ ಹೋಗೋಣ
ಅಂದದ ಬಂದರು ನೋಡೋಣ
ಚಿತ್ರದುರ್ಗಕ್ಕೆ ಹೋಗೋಣ!
ಕೋಟೆಯ ಬಗ್ಗೆ ತಿಳಿಯೋಣ॥
*ಸಂಗ್ರಹ*
ರೇಣುಕಾರಾಧ್ಯ
GLPS M KOPPALU ARSIKERE
*ಹಾಡಿದವರು*
ಶ್ರೀಮತಿ ಮಧುಸುಮ
GHPS BAIRAMBUDI
ಅರಸೀಕೆರೆ
No comments:
Post a Comment