Thursday, 20 March 2025

ದಿನಕ್ಕೊಂದು ಶಿಶುಗೀತೆ

 *ದಿನಕ್ಕೊಂದು ಶಿಶುಗೀತೆ*

*45.ಗುಬ್ಬಿ ಮರಿ*

ಪುಟ್ಟ ಪುಟ್ಟ ಗುಬ್ಬಿ ಮರಿ
ಕಟ್ಟೆ ಮೇಲೆ ಬಂದವು
ಅಜ್ಜಿ ಹಸನು ಮಾಡುತ್ತಿದ್ದ ಕಾಳನ್ನೆಲ್ಲಾ ಕಂಡವು
ಹಾರಿ  ಬಂದು ನೆಗೆದು ನೆಗೆದು ಕಾಳ ಹೆಕ್ಕುತ್ತಿದ್ದವು

ಒಂದೇ ಒಂದು ಕಾಳು ತಿಂದು
ಹಾರಿ ಹೋಗುತ್ತಿದ್ದವು
ಮತ್ತೆ ಬಂದು ಕುಕ್ಕಿ ತಿಂದು
ಕುಣಿದು ನಲಿಯುತ್ತಿದ್ದವು

ಜಗಲಿ ಮೇಲೆ ತಾತ
ನಿದ್ದೆಯಲ್ಲಿ ಜಾರಿದ
ಚಿಂವ್ ಚಿಂವ್ ಎಂದು
ಕಿವಿಯ ಬಳಿಗೆ ಬಂದವು

ಅಕ್ಕ ಅಲ್ಲೇ ಕಟ್ಟೆ ಮೇಲೆ
ಬಟ್ಟೆ ಒಗೆಯುತ್ತಿದ್ದಳು
ಹರಿವ ನೀರಿನಲ್ಲಿ ಗುಬ್ಬಿ
ಮಿಂದು ಮಿಂದು ಎದ್ದವು

ಗದ್ದೆ ಅಟ್ಟದಲ್ಲಿ ಅಣ್ಣ
ಪೈರ ಕಾಯುತ್ತಿದ್ದನು
ಕವಣೆ ಬೀಸಿದಾಗ ಓಡಿ ಮತ್ತೆ ಬಂದು ಕುಳಿತವು

ಶಾಲೆಯಿಂದ ಬಂದ ಪುಟ್ಟ ನೀರಬಟ್ಟಲಿಟ್ಟನು
ದಾಹದಿಂದ ಬಂದ ಗುಬ್ಬಿ
ನೀರು ಹೀರಿಬಿಟ್ಟವು
ಪುಟಿದು ಗುಬ್ಬಿ ಆಡುವಾಟ ನೋಡಲೆಷ್ಟು ಚಂದವು.

     ರಚನೆ:
        ಉಷಾ ಗೋಪಿ, ಕರಣಂ.
         ಶಿಕ್ಷಕಿ. ಸ. ಕಿ. ಪ್ರಾ. ಶಾಲೆ.
ಕಾಟಪ್ಪನಹಟ್ಟಿ. ಹಿರಿಯೂರು ತಾ.

*ಆಡಿಯೋ ಲಿಂಕ್*

https://drive.google.com/file/d/1MR0aTGnO4MpnlWh-_gqP5gGzBzBwvePF/view?usp=drivesdk

*ಸಂಗ್ರಹ*
ರೇಣುಕಾರಾಧ್ಯ
GLPS M KOPPALU ARSIKERE

No comments:

Post a Comment