Saturday, 8 February 2025

ದಿನಕ್ಕೊಂದು ಶಿಶುಗೀತೆ

 ದಿನಕ್ಕೊಂದು ಶಿಶುಗೀತೆ* 


 *13.ತಟ್ಟು ಚಪ್ಪಾಳೆ ಪುಟ್ಟ ಮಗು* 

ತಟ್ಟು ಚಪ್ಪಾಳೆ ಪುಟ್ಟ ಮಗು

ತಕ್ಕೋ ಕೈ, ಇಕ್ಕೋ ಕೈ

ಗಾಂಧಿಗಿಂದು ಜನುಮದಿನ

ತಟ್ಟು ಚಪ್ಪಾಳೆ ಪುಟ್ಟ ಮಗು.

ನೂರ ಹತ್ತು ಕೋಟಿ ಜನರ

ನಾಡಿಯಲ್ಲಿ ನುಡಿಯುತ್ತಿದೆ

ಗಾಂಧೀಜಿ, ಬಾಪೂಜಿ,-

ತಟ್ಟು ಚಪ್ಪಾಳೆ ಪುಟ್ಟ ಮಗು.

ಮಿಂದು ಖದ್ದರಿಂದು ಉಡು

ಗಾಂಧಿಗೊಂದು ಹೂವು ಇಡು

ತಕ್ಕೋ ಕೈ, ಇಕ್ಕೋ ಕೈ

ತಟ್ಟು ಚಪ್ಪಾಳೆ ಪುಟ್ಟ ಮಗು.

ಆಡು ಹಾಲು ಹೆಸರು ಖೀರು

ಬೇವು ಚಟ್ನಿ ಗೋಧಿ ರೊಟ್ಟಿ

ಅಷ್ಟು ನೀರು ಅವನಿಗಿಡು

ತಟ್ಟು ಚಪ್ಪಾಳೆ ಪುಟ್ಟ ಮಗು.

ಇಂಡಿಯಾದ ಮಗುವು ಗಾಂಧಿ

ಇಂಡಿಯಾದ ದೀಪ ಗಾಂಧಿ

ಕಂಡು ಅವನ ಕುಣಿವ ಬಾರೋ-

ತಟ್ಟು ಚಪ್ಪಾಳೆ ಪುಟ್ಟ ಮಗು-

.....ಹೋಯಿಸಳ 


 _ಸಂಗ್ರಹ_

ರೇಣುಕಾರಾಧ್ಯ

GLPS M KOPPALU 

ARSIKERE 


 *ಆಡಿಯೋ ಲಿಂಕ್* 

https://drive.google.com/file/d/1XzhqIg7Rueg1FdH4Yoq6WlRNMJ187cUN/view?usp=drivesdk


 

No comments:

Post a Comment