*ದಿನಕ್ಕೊಂದು ಶಿಶುಗೀತೆ*
*ಆಡಿಯೋ ಲಿಂಕ್*
https://drive.google.com/file/d/1UrOfC5elaJ-EK226z99qg_LgaF7O2Z3U/view?usp=drivesdk
*12.ನನ್ನ ಪಟ*
ಮರದಡಿ ಬಿದ್ದ ಸೋಗೆಯ ತಂದು
ಕಡ್ಡಿಗಳೆರಡನು ಬಿಡಿಸಿದೆನು/
ಅಣ್ಣನು ತಂದ ಬಣ್ಣದ ಹಾಳೆಯ
ಚೌಕಾಕಾರದಿ ಮಡಿಸಿದೆನು//
ಕಡ್ಡಿಗೆ ಬಣ್ಣದ ಹಾಳೆಯ ಅಂಟಿಸಿ
ಮಾಡಿದೆ ಸುಂದರ ಗಾಳಿಪಟ/
ಸೂತ್ರವ ಬಿಗಿದು ತೂರಲು ನಾನು
ಮೆಲ್ಲನೆ ಸೇರಿತು ಬಾನತಟ//
ಹಾರುವ ಹಕ್ಕಿಯ ಬೆದರಿಸಿತು
ಓಡುವ ಮೋಡವ ಚುಂಬಿಸಿತು/
ಏಳು ಬಣ್ಣದ ಕಾಮನ ಬಿಲ್ಲಿಗೆ
ರಂಗನು ತೋರಿಸಿ ಅಣಕಿಸಿತು//
ಸಂಜೆಯು ಆಗಲು ಸೂತ್ರವು ಅರಿಯಲು
ಹಾರಿತು ದೂರಕೆ ನನ್ನ ಪಟ/
ರಾತ್ರಿಗೆ ಚಂದಿರ ಲೋಕವ ಸೇರಿ
ಹಾರಲಿ ಸರಪರ ಗಾಳಿಪಟ//
ರಚನೆ ಮತ್ತು ಹಾಡಿದವರು
ಜಯಲಕ್ಷ್ಮೀ ಎನ್ ಎಸ್ ಕೋಳಗುಂದ
ಕವನ ಸಂಕಲನ: ಪುಟ್ಟಗೌರಿ
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
No comments:
Post a Comment