*ದಿನಕ್ಕೊಂದು ಶಿಶುಗೀತೆ*
*11.ಅಮ್ಮ*
ಅಮ್ಮ ಅಮ್ಮ ಅಮ್ಮ
ನನ್ನ ತೋಳಿಗೆ ರೆಕ್ಕೆ ಹಚ್ಚು|
ಸೊಂಟಕ್ಕೆ ಬೆಳ್ಳಿ ಪಟ್ಟಿಕಟ್ಟಿ
ಹಕ್ಕಿ ಪುಚ್ಚ ಚುಚ್ಚು||
ಹಾರುತ್ತೇವೆ ರೆಕ್ಕೆ ಬಿಚ್ಚಿ
ತೆಂಗಿನ ಮರಕೂ ಮೇಲೆ|
ಜಗಲಿ ಮೇಲೆ ನಿಂತೇ ನಮಗೆ
ಅಮ್ಮ ಟಾಟಾ ಹೇಳೆ||
ಹಾಗೆ ಹಾಗೆ ಮೇಲೆ ಹೋಗಿ
ಮುಟ್ಟುತ್ತೇವೆ ಮೋಡ|
ಕೇಳುತ್ತೇವೆ ಯಾರೂ ಕೇಳದ
ಚುಕ್ಕಿ ಹಾಡೋ ಹಾಡ||
ತಿಂಗಳ ಊರಿನ ಅಂಗಳ ಸೇರಿ
ಬೆಳ್ಳಿಯ ಮೊಲವನು ನೋಡಿ|
ಹಿಡಿಯುತ್ತೇವೆ ಹಾರೋ ಬಣ್ಣದ
ಜಿಂಕೆಯ ಹೇಗೋ ಮಾಡಿ||
ಕೊಟ್ಟೆ ಕೊಡುವನು ಚಂದಮಾಮ
ಕೆನ್ನೆ ತುಂಬ ಮುತ್ತು|
ಮುದ್ದಿಸಿ ಬೆಟ್ಟದ ತುದಿಗೆ ಇಳಿಸುವ
ಯಾರು ಇಲ್ಲದ ಹೊತ್ತು||
ಡಾ|| ಎಚ್.ಎಸ್. ವೆಂಕಟೇಶಮೂರ್ತಿ
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
*ಆಡಿಯೋ ಲಿಂಕ್*
https://drive.google.com/file/d/1TNBmAnb1EXbS42AkOG_vzdp2oCGQnSov/view?usp=drivesdk
_ಹಾಡಿದವರು_
Shubha H S
Ghps ನಾಗೇನಹಳ್ಳಿ
ಅರಸೀಕೆರೆ
ಕಲಿಕಾ ಹಬ್ಬ
ReplyDelete