Sunday, 16 February 2025

ದಿನಕ್ಕೊಂದು ಶಿಶುಗೀತೆ

 ದಿನಕ್ಕೊಂದು ಶಿಶುಗೀತೆ*

*21.ಅಜ್ಜಿ ಮಾಡಿದ ಬಜ್ಜಿ*

ಬೇಸಿಗೆ ರಜೆಯದು ಬರುತಿದೆ ಅಣ್ಣ
ಅಜ್ಜಿಯ ಊರಿಗೆ ಹೋಗೋಣ
ಅಜ್ಜಿ ಮಾಡುವ ಬಜ್ಜಿಯ ತಿಂದು
ಚಪ್ ಚಪ್ ಎಂದು ಚಪ್ಪರಿಸೋಣ..!!

ತೊಡೆಯನು ಏರಿ ಬಜ್ಜಿಯ ಅಗಿದು
ನಾಲಿಗೆ ಉರಿ ಉರಿ ಎಂದಳು ಪೋರಿ
ಬೊಚ್ಚು ಬಾಯ ಅಜ್ಜಿಯ ನಗುವಲಿ
ಖಾರವೇ ಮರೆತು ನಕ್ಕಳು ಅಣ್ಣನ ಜೊತೆಯಲ್ಲಿ..!!

ಕಜ್ಜಾಯ ನೋಡೇ ಅಣ್ಣನು ತಿಂದನು
ಬಜ್ಜಿಯ ಮುಟ್ಟದೆ ಎಲ್ಲವನು
ಬಜ್ಜಿ ಬೇಡ ಕಜ್ಜಾಯ ನೀಡು
ಎನ್ನುತ ಕಣ್ಣಲಿ ನೀರನು ಸುರಿಸಿದಳು...!!

ಅಜ್ಜನು ಬರುತಿರೆ ಕೊರಳಲಿ ಸುತ್ತಿ
ತನ್ನಯ ದುಃಖ ಹೊರ ಹಾಕಿದಳು
ಹಠವನು ಮಾಡಿ ಬಜ್ಜಿಯ ತ್ಯಜಿಸಿ
ಕಜ್ಜಾಯದೊಂದಿಗೆ ಕುಣಿಕುಣಿದಾಡಿದಳು...!!

ರಚನೆ 

ಟಿ.ನಿರಂಜನಮೂರ್ತಿ
ಸ ಕಿ ಪ್ರಾ ಶಾಲೆ ಕಂತೇನಹಳ್ಳಿ
ಅರಸೀಕೆರೆ

_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE

*ಆಡಿಯೋ ಲಿಂಕ್*

https://drive.google.com/file/d/1hSa7QVJBP9W__MWxDbp2lg6SsEtH5AUL/view?usp=drivesdk

_ಹಾಡಿದವರು_
ಜಾವೀದ್ ಬಾಷಾ CRP YARABALLI CLUSTER HIRIYUR TALUK Chitradurga dist

No comments:

Post a Comment