Monday, 17 February 2025

ದಿನಕ್ಕೊಂದು ಶಿಶುಗೀತೆ

 ದಿನಕ್ಕೊಂದು ಶಿಶುಗೀತೆ* 

 *ಆಡಿಯೋ ಲಿಂಕ್* 

https://drive.google.com/file/d/1j0aWwwIM82Se-d7YbW4m3ddX_nQeyZkf/view?usp=drivesdk

📘 *22.ಶಾಲೆಗೆ ಹೋಗೋಣ* 📗

ಬನ್ನಿರಿ ಶಾಲೆಗೆ ಹೋಗುವ

ಸಂತಸದಿಂದ ಕಲಿಯುವ

ಚಿಣ್ಣರೆಲ್ಲರೂ ಕೂಡಿ ಆಡುತ

ನಾಳೆ ನಮ್ಮದೇ ಎನ್ನುವಾ||


ನಿತ್ಯ ಜಳಕವ ಮಾಡೋಣ

ಸಮವಸ್ತ್ರವನು ಧರಿಸೋಣ

ಪಾಠಿಯ ಚೀಲವ ಹೆಗಲಗೆ ಏರಿಸಿ

ಶಾಲೆಯ ಕಡೆಗೆ ನಡೆಯೋಣ||


ಗೆಳೆಯರೆಲ್ಲರೂ ಒಟ್ಟಿಗೆ ಕೂಡಿ

ಬಗೆ ಬಗೆ ಆಟವ ಆಡೋಣ

ಪ್ರೀತಿ ಸ್ನೇಹ ಹಂಚುತ ನಾವು

ಬೇಧ ಭಾವನೆ ತೊಡೆಯೋಣ||


ನಾಳಿನ ಉಜ್ವಲ ಭವಿಷ್ಯಕಾಗಿ

ತಪ್ಪದೆ ಶಾಲೆಗೆ ಹೋಗೋಣ

ಅಂದಿನ ಪಾಠವ ಅಂದೇ ಕಲಿತು

ಪ್ರಗತಿಯ ಹೆಜ್ಜೆಯ ಇರಿಸೋಣ||


ಅಂದದ ಚಂದದ ನಮ್ಮೂರ ಶಾಲೆ

ಕಣ್ಮನ ತಣಿಸುವ ದೇಗುಲವು!

ಬಗೆ ಬಗೆ ಹೂಗಳು ಪರಿಮಳ ಚೆಲ್ಲಿವೆ

ಮನದಲಿ ಮೂಡಿದ ಸಂಭ್ರಮವು||


ಸಕ್ಕರೆ ಮಾತಲಿ ಅಕ್ಕರೆ ತೋರಿದ

ಗುರುಗಳನೆಂದೂ ಸ್ಮರಿಸೋಣ

ಶಿಸ್ತು ಸಂಯಮ ವಿನಯವ ಕಲಿತು

ಜ್ಞಾನದೀವಿಗೆ ಎನಿಸೋಣ||


ಕನ್ನಡ ನಾಡಿನ ಚಿನ್ನದ ನುಡಿಯಲಿ

ಸವಿ ಮಾತುಗಳನು ಆಡೋಣ

ನಮ್ಮ ಏಳಿಗೆ ರಾಷ್ಟ್ರದೇಳಿಗೆ

ಅನುದಿನ ಮುಂದೆ ಸಾಗೋಣ||

●●●●●●●●●●●●●●●●●●

ರಚನೆ: ಮತ್ತು ಹಾಡಿದವರು

*ಎಂ.ಜಿ.ಪರಮೇಶ್ ಮಡಬಲು*

ಕ್ಷೇತ್ರ ಸಂಪನ್ಮೂಲ ವ್ಯಕ್ತಿ,

ಬಿ.ಆರ್.ಸಿ.ಕೇಂದ್ರ, ಹೊಳೆನರಸೀಪುರ


 _ಸಂಗ್ರಹ_

ರೇಣುಕಾರಾಧ್ಯ

GLPS M KOPPALU 

ARSIKERE 

No comments:

Post a Comment