*ದಿನಕ್ಕೊಂದು ಶಿಶುಗೀತೆ*
*20.ಪುಟ್ಟು ನೆಟ್ಟ ಸಸಿ*
ತಿಪ್ಪೆಯಿಂದ ಸಸಿಯನೊಂದ
ಮನೆಗೆ ತಂದ ಪುಟ್ಟನು
ಬಾಗಿಲ ಬಳಿ ತಗ್ಗು ತೋಡಿ
ಹಿಗ್ಗಿನಿಂದ ನೆಟ್ಟನು.
'ತಿನ್ನು' ಎಂದು ಎಲೆಯ ಮೇಲೆ
ರೊಟ್ಟಿ ತುಣುಕ ಇಟ್ಟನು
'ಕುಡಿ' ಎಂದು ಚೊಂಬು ನೀರ
ಬೇರ ಬಳಿಗೆ ಬಿಟ್ಟನು.
ಅಯ್ಯೋ ಪಾಪ ನಡುಗುತಿಹುದು
ಎಂದು ಬೆಚ್ಚಿ ಬಿದ್ದನು
ಹೊದ್ದ ರಗ್ಗು ಸರಿಸಿ ಪುಟ್ಟ
ಕನಸಿನಲ್ಲಿ ಎದ್ದನು.
ಸುಮ್ಮ ಮಲಗು ನಡುಗಬೇಡ
ಎಂದು ಟವಲು ಹೊಚ್ಚಿದ
ಯಾರು ನೋಡಬಾರದೆಂದು
ಮೇಲೆ ಮಣ್ಣು ಮುಚ್ಚಿದ.
................'ಸಿಸು' ಸಂಗಮೇಶ
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
_ಹಾಡಿದವರು_
ರೇಣುಕಾರಾಧ್ಯ ಮತ್ತು
ಎಂ.ಕೊಪ್ಪಲು ಮಕ್ಕಳು
*ಆಡಿಯೋ ಲಿಂಕ್*
https://drive.google.com/file/d/1gvUYjry5qESD_y4QFWpntUDc1vR2tMeR/view?usp=drivesdk
No comments:
Post a Comment