Sunday, 7 July 2024

ವಿದ್ಯಾ ಪ್ರವೇಶ ದಿನ 31

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 


*ವಿದ್ಯಾಪ್ರವೇಶ ದಿನ-31* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ-1- ಮಕ್ಕಳು ನಿಧಾನವಾಗಿ ಓಡುತ್ತಾ ತರಗತಿಯನ್ನು ಪ್ರವೇಶಿಸಲಿ. (slow motion)


1. ರಾಕೆಟ್ ಚಪ್ಪಾಳೆಯನ್ನು ಹೇಳಿಕೊಡುವುದು.


2.ಮಕ್ಕಳು ರಾಕೆಟ್ ಚಪ್ಪಾಳೆ ತಟ್ಟುತ್ತಾ ತರಗತಿಯಲ್ಲಿ ವೃತ್ತಾಕಾರವಾಗಿ ನಿಲ್ಲುವುದು.


*ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ : ಚಿಹ್ನೆಗಳು


ಸಾಮಗ್ರಿ : ವಿವಿಧ ಚಿಹ್ನೆಗಳ ಫ್ಲಾಶ್ ಕಾರ್ಡುಗಳು


ವಿಧಾನ:


  • ಮಕ್ಕಳನ್ನು ವೃತ್ತ ಅಥವಾ ಅರ್ಧವೃತ್ತಾಕಾರದಲ್ಲಿ ಕೂರಿಸಿ,


 • ಶಿಕ್ಷಕರು ಚಿತ್ರವನ್ನು ತೋರಿಸುತ್ತಾರೆ ಮತ್ತು ಚಿಹ್ನೆಯನ್ನು ಊಹಿಸಲು ಮಕ್ಕಳಿಗೆ ಕೇಳುತ್ತಾರೆ.


ಉದಾ : ಕುಡಿಯುವ   ನೀರು, ಅಪಾಯ, ಹ್ಯಾಂಡ್ ವಾಷ್, ಶೌಚಾಲಯ.ಮುಂದೆ ಪ್ರತಿ ಮಗುವೂ ನಿಂತು ಚಿಹ್ನೆಗಳು ಅಥವಾ ಸಹಿಯ ಫ್ಲ್ಯಾಶ್ ಕಾರ್ಡ್ ಗಳನ್ನು ತೋರಿಸಬೇಕು ಮತ್ತು ಊಹಿಸಲು ತಮ್ಮ ಸ್ನೇಹಿತರಿಗೆ ಕೇಳಬೇಕು.


•   ಶಿಕ್ಷಕರು ಪ್ರತಿ ಮಗುವಿಗೆ ಅವಕಾಶ ನೀಡಬೇಕು.

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯಗಳು:- ಹಗುರ, ಭಾರದ ಪರಿಕಲ್ಪನೆಯೊಂದಿಗೆ ಹೋಲಿಸುವುದು


ಚಟುವಟಿಕೆ :


ಹೋಲಿಕೆ – ಭಾರ ಮತ್ತು ಹಗುರ ( ಗುರಿ-3 )


ಉದ್ದೇಶ:- ಭಾರ ಮತ್ತು ಹಗುರಗಳಿಗೆ ಹೋಲಿಕೆ ಮಾಡುವುದು.


ಸಾಮಗ್ರಿಗಳು: ಹತ್ತಿಚೆಂಡು, ಟೆನ್ನಿಸ್ ಬಾಲ್ / ಫುಟ್ ಬಾಲ್, ಕಲ್ಲು, ಕಬ್ಬಿಣ, ಹತ್ತಿ ಬಟ್ಟೆ (ಹತ್ತಿಚೆಂಡು ಮತ್ತು ಫುಟ್ ಬಾಲ್ / ಟೆನಿಸ್ ಚೆಂಡಿನ ಗಾತ್ರವು ಒಂದೇ ತೆರನಾಗಿರಬೇಕು.)


ವಿಧಾನ : ಮಕ್ಕಳಿಗೆ ಎರಡೂ ಚೆಂಡುಗಳನ್ನು ಕೈಯಲ್ಲಿ ಎತ್ತಿ ಹಿಡಿಯಲು ಹೇಳುವುದು.


* ಹಗುರ ಯಾವುದು? ಭಾರ ಯಾವುದೆಂದು ಕೇಳುವುದು.


*ಭಾರ ಮತ್ತು ಹಗುರಕ್ಕೆ ಹೋಲಿಕೆ ಮಾಡಲು ಹೇಳುವುದು ಮತ್ತು ಮಕ್ಕಳು ಅವುಗಳನ್ನು ಗುರುತಿಸಲು ಹೇಳುವುದು.


ಅ.ಹಾ:-IL-17 ಇವರಿಬ್ಬರಲ್ಲಿ ಯಾರು ಭಾರ? ಯಾರು ಹಗುರ?


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಆಕಾರಗಳ ಪರಿಕಲ್ಪನೆ.


ಚಟುವಟಿಕೆ: ಟ್ರೇಸ್ ಮಾಡುವುದು. (ಗುರಿ - 1)


ಉದ್ದೇಶಗಳು:


*  ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು.


*ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.


*ಅಕ್ಷರಗಳ ಆಕಾರಕ್ಕೆ ಅನುಗುಣವಾಗಿ ಚಿತ್ರಗಳನ್ನು ಊಹಿಸುವುದು.


ಅ.ಹಾ:-HW-12 ಹೊಂದಿಸು.


ಸಾಮಗ್ರಿಗಳು : ಮರಳು.


ವಿಧಾನ: ಮಕ್ಕಳು ತಾವು ತಿದ್ದಿದ ಅಕ್ಷರಗಳಿಗೆ ಚಿತ್ರಗಳನ್ನು ರಚಿಸಲು ಹೇಳುವುದು ಮತ್ತು ಸಂಖ್ಯೆಗಳಿಗನುಗುಣವಾಗಿ ವಸ್ತುಗಳನ್ನು ಜೋಡಿಸುವುದು.


    ಮಕ್ಕಳಿಗೆ ತಮಗೆ ಗೊತ್ತಿರುವ ಕನ್ನಡ,ಇಂಗ್ಲೀಷ್ ಹಾಗೂ ಅಂಕಿಗಳಿಂದ ಚಿತ್ರ ರಚಿಸಲು ಪ್ರೋತ್ಸಾಹಿಸುವುದು.


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ : ಆಲಿಸುವಿಕೆ, ಸೃಜನಾತ್ಮಕ, ಸ್ವ-ಅಭಿವ್ಯಕ್ತಿ, ಔಪಚಾರಿಕ ಮಾತುಗಾರಿಕೆ,


ಚಟುವಟಿಕೆ: ಆಶುಭಾಷಣ (ಗುರಿ-2)


ಉದ್ದೇಶಗಳು :


ಆಯ್ದುಕೊಂಡ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡುವುದು.


* ಔಪಚಾರಿಕ ಮಾತುಗಾರಿಕೆಯ ಕೌಶಲವನ್ನು ಬೆಳೆಸುವುದು.


* ಆಲಿಸಿದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವುದು.


*   ಸೃಜನಾತ್ಮಕ ಸ್ವ-ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.


ಸಾಮಗ್ರಿಗಳು : ಪ್ರಾಣಿ, ಪಕ್ಷಿ, ವಾಹನಗಳ ಚಿತ್ರಗಳ ಮಿಂಚುಪಟ್ಟಿಗಳು


ವಿಧಾನ :


  *ಡಬ್ಬದಲ್ಲಿ ಪ್ರಾಣಿ, ಪಕ್ಷಿ, ವಿವಿಧ ವಾಹನಗಳ ಚಿತ್ರಗಳ ಮಿಂಚುಪಟ್ಟಿಗಳನ್ನು ಹಾಕುವುದು.


  *ಮಕ್ಕಳಿಗೆ ಡಬ್ಬದಲ್ಲಿ ಕೈ ಹಾಕಿ ಯಾವುದಾದರೂ ಒಂದು ಮಿಂಚುಪಟ್ಟಿಯನ್ನು ತೆಗೆದುಕೊಂಡು ಅದರಲ್ಲಿರುವ ಚಿತ್ರದ ಬಗ್ಗೆ ತಮ್ಮದೇ ಮಾತುಗಳಲ್ಲಿ ಹೇಳಲು ಅವಕಾಶ ನೀಡುವುದು


*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.


ಚಟುವಟಿಕೆ :-ಚಿತ್ರ ಸಂಪುಟ (ಗುರಿ-2)


ವಿಷಯ: ನೀರಿನ ಆಕರಗಳು ಮತ್ತು ಅವುಗಳಲ್ಲಿ ನೋಡಬಹುದಾದ ಪ್ರಾಣಿಗಳು/ಪಕ್ಷಿಗಳು/ ವಸ್ತುಗಳು, 


ಉದ್ದೇಶ :


*ಮಕ್ಕಳು ಗುಂಪಿನಲ್ಲಿ ಕುಳಿತು ತಯಾರಿಸಿದ ಗೋಡೆ ಪತ್ರಿಕೆಗಳನ್ನು ರಚಿಸಿ ಮಂಡಿಸುವುದು


ಅಗತ್ಯ ಸಾಮಗ್ರಿಗಳು : ಚಾರ್ಟ್‌ಗಳು, ಸ್ವರಚಿತ ಚಿತ್ರಗಳು, ಕ್ರೇಯಾನ್ಸ್, ಅಂಟು, ಸ್ಟೇಲ್, ಟ್ಯಾಗ್


ವಿಧಾನ :


*ಮಕ್ಕಳು ಗುಂಪುಗಳಲ್ಲಿ ಅಗತ್ಯ ಸಾಮಗ್ರಿ ಬಳಸಿ ನೀರಿನ ಆಕರಗಳು ಮತ್ತು ಅವುಗಳಲ್ಲಿ ನೋಡ ಬಹುದಾದ ಪ್ರಾಣಿಗಳು ಪಕ್ಷಿಗಳು/ ವಸ್ತುಗಳ ಬಗ್ಗೆ ಗೋಡೆ ಪತ್ರಿಕೆ ತಯಾರಿಸಲು ಅಗತ್ಯ ಸಹಾಯ ನೀಡುವುದು.


*ರಚಿಸಿದ ಗೋಡೆಪತ್ರಿಕೆಯನ್ನು ತರಗತಿಯಲ್ಲಿ ಮಂಡಿಸಲು ಅವಕಾಶ ನೀಡುವುದು.


*ಸಿದ್ಧವಾದ ಗೋಡೆಪತ್ರಿಕೆಗಳನ್ನು ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.



*ಉದ್ದೇಶಿತ ಬರಹ*  

ಸಾಮರ್ಥ್ಯ:-ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥಮಾಡಿಕೊಳ್ಳುವುದು,ಪರಿಸರದ ಅರಿವು.


ಚಟುವಟಿಕೆ : ಪಟ್ಟಿ ಮಾಡೋಣ (ಗುರಿ-2)


ಉದ್ದೇಶಗಳು:


*ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು.


*ಸೃಜನಶೀಲ ಚಿಂತನೆಯನ್ನು ಬೆಳೆಸುವುದು.


*ಪರಿಸರದ ಅರಿವು ಮೂಡಿಸುವುದು.


*ಪದಸಂಪತ್ತನ್ನು ಹೆಚ್ಚಿಸುವುದು.


*ಸೂಚನೆಗಳನ್ನು ಆಲಿಸಿ ಅರ್ಥ ಮಾಡಿಕೊಳ್ಳುವುದು.


ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಕಾಗದ, ಕ್ರೇಯಾನ್ಸ್,


ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ.


ಸೂಚಿತ ವಿಷಯ: ತಿಂಡಿಗಳು


 ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್‌ಪೇಪರ್‌ನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು.


     ಈ ಚಾರ್ಟ್‌ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸುವುದು.


    ಮಕ್ಕಳು ಇವುಗಳನ್ನು ನೋಡಲು ಹಾಗೂ ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.


               *ಬರವಣಿಗೆಯ ಮಾದರಿ*


    ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


   ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ :  ಹಗ್ಗದ ಆಟ


ಸಾಮರ್ಥ್ಯ: ಚುರುಕುತನ, ಕ್ಷಿಪ್ರ ಚಲನೆಯ ಅಭಿವೃದ್ಧಿ


ಸಾಮಗ್ರಿ: ಸ್ಕಿಪ್ಪಿಂಗ್ ರೋಪ್


ವಿಧಾನ :


*ಇಬ್ಬರು ಮಕ್ಕಳು ಹಗ್ಗದ ಎರಡು ತುದಿಗಳನ್ನು ಹಿಡಿದು ಎದುರು ಬದುರಾಗಿ ಕೂರುವುದು .


*ಉಳಿದ ಮಕ್ಕಳು ಓಡಿ ಬಂದು ಹಗ್ಗದ ಮೇಲಿನಿಂದ ನೆಗೆಯಲು ಸೂಚಿಸುವುದು.




ಅವಧಿ - 7(40ನಿ)

*ಕಥಾ ಸಮಯ*

ಶೀರ್ಷಿಕೆ » ಕೊಕ್ಕರೆ ಮತ್ತು ಏಡಿ

ಸಾಮಗ್ರಿಗಳು : ಕಥೆಯ ಸಾಹಿತ್ಯ

ಉದ್ದೇಶಗಳು :

ಆಲಿಸುವ ಸಾಮರ್ಥ್ಯ ಬೆಳೆಸುವುದು.

ನಿರರ್ಗಳವಾಗಿ ಮಾತನಾಡುವ ಕೌಶಲ ರೂಢಿಸುವುದು.

ವಿಧಾನ : ಕಥಾ ಸಾಹಿತ್ಯ ನಿರೂಪಣೆ

*ಶಿಕ್ಷಕರು ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅಥೈಸಿಕೊಳ್ಳಬೇಕು.

*ಸೂಕ್ತ ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲ್ಲಿ ಕಥೆಯನ್ನು ಹೇಳಬೇಕು.

*ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.

*ಸರಳ ಪ್ರಶ್ನೆಗಳು ಕೇಳಿ ಕಥೆಯನ್ನು ಅರ್ಥೈಸಬೇಕು.


     ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.

*ಕೊಕ್ಕರೆ ಜೊತೆ ಯಾವ ಯಾವ ಪ್ರಾಣಿಗಳು ವಾಸಿಸುತ್ತಿದ್ದವು?

*ಮೀನುಗಳನ್ನು ತಿನ್ನಲು ಕೊಕ್ಕರೆ ಹೂಡಿದ ಉಪಾಯವೇನು?

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)




ಅವಧಿ -8(20ನಿ)

*ಮತ್ತೆ ಸಿಗೋಣ*

* ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


 * ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


 ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.


    ಮುಂದಿನ ವಾರದಲ್ಲಿ “ಹೊರಸಂಚಾರಕ್ಕೆ ಯೋಜನೆ” ರೂಪಿಸಿ ಮಕ್ಕಳು ವಿವಿಧ ಸಸ್ಯಗಳನ್ನು, ಮರಗಳನ್ನು ವೀಕ್ಷಿಸಲಿ ಇದಕ್ಕಾಗಿ ಅಗತ್ಯ ಸಿದ್ಧತೆ ತಯಾರಿ ಮಾಡಿಕೊಳ್ಳುವುದು.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment