https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/16eGvo1oCbziLoDGEI30c0pswz49jYgnQ/view?usp=drivesdk
*ವಿದ್ಯಾಪ್ರವೇಶ ದಿನ-33*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1:
1. ಶಾಲೆಗೆ ಮೊದಲು ಆಗಮಿಸಿದ ಮಗುವಿಗೆ ಪೇಪರಿನಿಂದ ಮಾಡಿದ ಕಿರೀಟ ಹಾಕಿ ಸ್ವಾಗತಿಸುವುದು.
2. ಹೀಗೆ ಮಗುವಿಗೆ ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಪ್ರೇರೆಪಿಸುವುದು
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ : ನೆನಪಿಡಬಹುದೇ?
ವಿಧಾನ:
ಮಕ್ಕಳನ್ನು ಅರ್ಧ-ವೃತ್ತಾಕಾರದಲ್ಲಿ ಕೂರಿಸಿ.
ಹುಟ್ಟುಹಬ್ಬದ ಆಚರಣೆಗೆ ಸಂಬಂಧಿಸಿದಂತೆ ಮಗುವಿನ ಕಿವಿಯಲ್ಲಿ ಒಂದು ವಾಕ್ಯವನ್ನು ಮೆಲ್ಲನೆ ಹೇಳಿ.
ನಂತರ ಪ್ರತಿ ಮಗುವು ಕೊನೆಯ ಮಗುವಿಗೆ ಸಂದೇಶವನ್ನು ತಲುಪಿಸುವವರೆಗೆ ವೃತ್ತದಲ್ಲಿರುವ ಮುಂದಿನಮಗುವಿಗೆ ಸಂದೇಶವನ್ನು ಪಿಸುಗುಟ್ಟುತ್ತದೆ.
ಕೊನೆಯ ಮಗುವಿಗೆ ಸಂದೇಶವನ್ನು ಜೋರಾಗಿ ಹೇಳಲು ಹೇಳಿ.
ಆಟ ಮುಂದುವರಿಯುತ್ತದೆ.
ಈ ಬಾರಿ ನೀವು ಸಂದೇಶವನ್ನು ಪಿಸುಗುಟ್ಟಲು ಮತ್ತೊಂದು ಮಗುವನ್ನು ಆಯ್ಕೆ ಮಾಡಬಹುದು.
ಚಟುವಟಿಕೆ : ನನ್ನ ಜನ್ಮದಿನದಂದು
ಸಾಮಗ್ರಿಗಳು: ಜನ್ಮದಿನವನ್ನು ಆಚರಿಸಲು ಬಳಸುವ ವಸ್ತುಗಳನ್ನು ಇರಿಸಿ: ಪಾರ್ಟಿ ಹ್ಯಾಟ್, ಮೇಣದ ಬತ್ತಿಗಳು, ಬಲೂನ್ ಗಳು, ಚಾಕೊಲೇಟ್ ಗಳು, ರಿಬ್ಬನ್‌ಗಳು, ಉಡುಗೊರೆ-ಹೊದಿಕೆಗಳು, ಹೂವುಗಳು, ಅಲರಿಕಾರಕಾಗದಗಳು ಇತ್ಯಾದಿ.
ವಿಧಾನ:
ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ.
ಪಟ್ಟಿ ಮಾಡಿದ ವಸ್ತುಗಳನ್ನು ವೃತ್ತದ ಮಧ್ಯದಲ್ಲಿ ಇರಿಸಿ.
ನಂತರ ಒಂದು ಮಗುವನ್ನು ಕರೆದು ವಸ್ತುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಹೆಸರಿಸಲು ತಿಳಿಸಿ.ನಂತರ ಪಟ್ಟಿಮಾಡಿದ
ವಸ್ತುಗಳ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಲು ಕೆಲವು ಪ್ರಶ್ನೆಗಳನ್ನು ಕೇಳಿ
ನೀವು ಅವರನ್ನು ಎಲ್ಲಿ ನೋಡಿದ್ದೀರಿ? ನಾವು ಅವುಗಳನ್ನು ಎಲ್ಲಿ ಬಳಸುತ್ತೇವೆ?
ನೀವು ಎಂದಾದರೂ ಅವುಗಳನ್ನು ಬಳಸಿದ್ದೀರಾ?
ನೀವು ನಿಮ್ಮ ಜನ್ಮದಿನವನ್ನು ಆಚರಿಸುತ್ತೀರಾ?
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಕ್ರಮಾನುಗತ ಎಣಿಕೆಯ ಜ್ಞಾನ
ಚಟುವಟಿಕೆ. : ಸಂಖ್ಯೆಗಳ ಹಿಮ್ಮುಖ ಎಣಿಕೆ (ಗುರಿ 3)
ಉದ್ದೇಶ:- ಹಿಮ್ಮುಖ ಎಣಿಕೆ ಕ್ರಮವನ್ನು ರೂಢಿಸುವುದು.
ಅಗತ್ಯ ಸಾಮಗ್ರಿಗಳು : ಎಣಿಸಬಹುದಾದ ಲಭ್ಯ ವಸ್ತುಗಳು/ಮಿಂಚುಪಟ್ಟಿಗಳು
ವಿಧಾನ : 9 ವಸ್ತುಗಳನ್ನು ಸಾಲಾಗಿ ಜೋಡಿಸುವುದು.ಜೋಡಿಸಿದ ವಸ್ತುಗಳನ್ನು ಮಕ್ಕಳಿಂದ ಎಣಿಸುವುದು. ಅದೇರೀತಿ 1 ರಿಂದ 9ರ ವರೆಗಿನ ಮಿಂಚುಪಟ್ಟಿಗಳನ್ನು ನೀಡಿ ಕ್ರಮಾಗತವಾಗಿ ಜೋಡಿಸಿ ಹಿಮ್ಮುಖವಾಗಿ ಎಣಿಸುವುದು. ಇದೇ ರೀತಿ ಮುಮ್ಮುಖ - ಹಾಗೂ ಹಿಮ್ಮುಖ ಎಣಿಕೆಯ ಕ್ರಮವನ್ನು ಅಭ್ಯಾಸ ಮಾಡಿಸುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ,ಆಕಾರಗಳ
ಪರಿಕಲ್ಪನೆ.
ಚಟುವಟಿಕೆ: ಅಕ್ಷರಗಳ ಮೇಲೆ ತಿದ್ದುವುದು. ಗುರಿ - 1
ಉದ್ದೇಶಗಳು:
ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು
ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
ಸಾಮಗ್ರಿಗಳು : ಮರಳು.
ವಿಧಾನ : ಮಕ್ಕಳಿಗೆ ತಮಗೆ ಗೊತ್ತಿರುವ ಸರಳ ಇಂಗ್ಲಿಷ್ ಪದಗಳನ್ನು ಬರೆಸಿ ಅದರ ಮೇಲೆ ಕಲ್ಲು /ಕಡ್ಡಿ/ಮಣಿ/ ಸ್ಟ್ರಾಗಳನ್ನು ಜೋಡಿಸಲು ಹೇಳುವುದು.
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅವಧಾನ ಮತ್ತು ಆಲಿಸುವುದು.ಚಟುವಟಿಕೆ :
ಮಧ್ಯದ ಅಕ್ಷರ ಗುರ್ತಿಸು (ಅ ರ ಸ) (ಗುರಿ-2) ECL-21 ಉದ್ದೇಶಗಳು:
# * ಪದಗಳಲ್ಲಿಯ ಅಕ್ಷರಗಳ ಅಕ್ಷರ-ಧ್ವನಿ ಸಹಸಂಬಂಧ ಗುರುತಿಸುವುದು. ಈ ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹಸಂಬಂಧ ಅರ್ಥೈಸಿಕೊಳ್ಳುವುದು.
ಆಗತ್ಯ ಸಾಮಗ್ರಿಗಳು : ಕಪ್ಪು ಹಲಗೆ, ಮಿಂಚುಪಟ್ಟಿ
ವಿಧಾನ: ಮಿಂಚುಪಟ್ಟಿಯಲ್ಲಿ ಬರೆದ ಪದಗಳನ್ನು ಪ್ರದರ್ಶಿಸುವುದು. ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಸ್ವರಾಕ್ಷರಗಳನ್ನು ಪರಿಚಯಿಸುವುದು. ಪದದ ಮಧ್ಯದಲ್ಲಿರುವ ತಿಳಿಸುವುದು. ಕಪ್ಪುಹಲಗೆಯಲ್ಲಿ ಬರೆಯುವುದು. ಮಕ್ಕಳಿಂದ ಹೇಳಿಸುವುದು. ಅಕ್ಷರ ಮತ್ತು ಶಬ್ದಗಳನ್ನು ಸಂಯೋಜಿಸುವುದು ಮತ್ತು ಗುರ್ತಿಸುವುದು.
ಅ.ಹಾ: E.C-15 ಧ್ವನಿ ಆಲಿಸು ಅಕ್ಷರ ಗುರುತಿಸು
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ. ಅರ್ಥ ಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಚಟುವಟಿಕೆ : ಚಿತ್ರ ಸಂಪುಟ (ಗುರಿ-2) ವಿಷಯ: ಮಕ್ಕಳ ಇಷ್ಟದ ಯಾವುದೇ ವಿಷಯ
ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್, ಅಂಟು, ವಿವಿಧ ಚಿತ್ರಗಳು.
ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.
ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು.
ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು ಹೇಳುವುದು/ ಬರೆಯುವುದು.
ಚಿತ್ರ ಸಂಪುಟವನ್ನು ವೈಯಕ್ತಿಕ ಮತ್ತು ಗುಂಪಿನಲ್ಲಿ ಮಕ್ಕಳಿಂದ ತಯಾರಿಸುವುದು.
ವೈಯಕ್ತಿಕ ಚಿತ್ರ ಸಂಪುಟ: ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿಮಗು ಚಿತ್ರಿಸಲು
ಅನುವು ಮಾಡಿಕೊಡುವುದು.
ಉದಾ:- ಮರ, ಬಸ್ಸು, ಪ್ರಾಣಿ ಇತ್ಯಾದಿ ಚಿತ್ರಗಳು.
ಗುಂಪು ಚಿತ್ರ ಸಂಪುಟ: ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸಿ ವಿವಿಧ ವಿಷಯಗಳ ಕುರಿತು ಚರ್ಚಿಸಲು ಅವಕಾಶ
ಕಲ್ಪಿಸುವುದು. ಉದಾ-ಉದ್ಯಾನವನದಲ್ಲಿ ನೋಡಿರುವ ವಸ್ತುಗಳು, ರಾತ್ರಿಯ ವೇಳೆ ನೋಡಬಹುದಾದ ವಸ್ತುಗಳು, ನೀರಿನಲ್ಲಿ ಕಾಣಬಹುದಾದ
ವಸ್ತುಗಳು, ಭೂಮಿಯೊಳಗೆ ಹುಡುಕಬಹುದಾದ ವಸ್ತುಗಳು ಇತ್ಯಾದಿ ಚಿತ್ರಗಳು.
ತಮಗಿಷ್ಟವಾದ ವಿಷಯದ ಕುರಿತು ತಮ್ಮದೇ ಕಲ್ಪನೆಯಲ್ಲಿ ಚಿತ್ರ ಬಿಡಿಸಲು ತಿಳಿಸುವುದು.
ಮಕ್ಕಳು ಬರೆದ ಚಿತ್ರಗಳನ್ನು ಹೆಸರಿಸಲು ತಿಳಿಸುವುದು.
ನಂತರ ಎಲ್ಲಾ ಚಿತ್ರಗಳನ್ನು ಸೇರಿಸಿ ಚಿತ್ರ ಸಂಪುಟವನ್ನು ಸಿದ್ಧಪಡಿಸಲು ಅವಕಾಶ ಮಾಡಿಕೊಡುವುದು.
ಮಕ್ಕಳು ತಯಾರಿಸಿದ ಚಿತ್ರಸಂಪುಟವನ್ನು ತರಗತಿಯಲ್ಲಿ ಪ್ರದರ್ಶಿಸುವುದು.
ನೀನೇ ಮಾಡಿನೋಡು: ಮಕ್ಕಳ ಸ್ನೇಹಿ ಕತ್ತರಿಯನ್ನು ನೀಡಿ, ಸೂಕ್ತ ಚಿತ್ರಗಳನ್ನು ಕತ್ತರಿಸಿ ಅವರ ಸ್ವಂತ ಚಿತ್ರಕೋಶವನ್ನುರಚಿಸಲು ಪ್ರೇರೇಪಿಸುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥಮಾಡಿಕೊಳ್ಳುವುದು. ಪರಿಸರದ ಅರಿವು.
ಚಟುವಟಿಕೆ : ಪಟ್ಟಿ ಮಾಡೋಣ (ಗುರಿ-2)
ಉದ್ದೇಶಗಳು:
ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು.
ಸೃಜನಶೀಲ ಚಿಂತನೆಯನ್ನು ಬೆಳೆಸುವುದು.
ಪರಿಸರದ ಅರಿವು ಮೂಡಿಸುವುದು.
ಪದಸಂಪತ್ತನ್ನು ಹೆಚ್ಚಿಸುವುದು.
ಸೂಚನೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು.
ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಕಾಗದೆ. ಕ್ರೇಯಾನ್ಸ್,
ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು ಮಕ್ಕಳಿಗೆ
ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ.
ಸೂಚಿತ ವಿಷಯ: ಅಡುಗೆ ಮನೆಯ ಪರಿಕರಗಳು
ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್ ಪೇಪರ್ನನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು. ಈ
ಚಾರ್ಟ್‌ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ದಪಡಿಸಿ, ಮಕ್ಕಳು ಇವುಗಳನ್ನು ನೋಡಲು ಹಾಗೂ
ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು
ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ
ಸ್ಥಿರ ಸಮತೋಲನ (static balance)
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗಿ, ದೇಹದ ಬೇರೆ ಬೇರೆ ಭಾಗಗಳ ಸಮತೋಲನ ಸಾಧಿಸುವುದು.
ಬೇಕಾಗುವ ಸಾಮಗ್ರಿ: ಮೃದುವಾದ ಜಾಗ, ಚಾಪೆ, ಜಮಖಾನ
ವಿಧಾನ
ಈ ಚಟುವಟಿಕೆಯನ್ನು ತರಗತಿ ಕೋಣೆಯೊಳಗೆ/ ಸಭಾಂಗಣದಲ್ಲಿ ಮಾಡಿಸುವುದು, ಚಾಪೆಯನ್ನು/ಜಮಖಾನ ಹಾಸಿ
ಮಕ್ಕಳಿಗೆ ಅಗತ್ಯವಿದಷ್ಟು ಜಾಗವನ್ನು ನೀಡುವುದು.
ಮಕ್ಕಳು ಚಾಪೆಯ ಮೇಲೆ ಬೆನ್ನ ಮೇಲೆ ಮಲಗಲು ಸೂಚಿಸುವುದು.
ಸ್ವಲ್ಪ ಸಮಯದ ನಂತರ ಹೊಟ್ಟೆಯ ಮೇಲೆ ಮಲಗಲು ಸೂಚಿಸುವುದು
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಒಂಟೆ ಮತ್ತು ನರಿ
ಸಾಮಗ್ರಿಗಳು : ಕಥೆಯ ಸಾಹಿತ್ಯ
ಉದ್ದೇಶಗಳು :
> ಆಲಿಸುವ ಸಾಮರ್ಥ್ಯ ಬೆಳೆಸುವುದು.
> ಆಲೋಚನಾ ಶಕ್ತಿಯನ್ನು ಹೆಚ್ಚಿಸುವುದು.
ವಿಧಾನ : ಕಥಾ ಸಾಹಿತ್ಯ ನಿರೂಪಣೆ
> ಶಿಕ್ಷಕರು ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅರ್ಥೈಸಿಕೊಳ್ಳಬೇಕು.
ಸೂಕ್ತ ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲ್ಲಿ ಕಥೆಯನ್ನು ಹೇಳಬೇಕು.
ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.
> ಸರಳ ಪ್ರಶ್ನೆಗಳನ್ನು ಕೇಳಿ ಕಥೆಯನ್ನು ಅರ್ಥೈಸಬೇಕು. ಕಥೆ :
ಒಂಟಿ ಮತ್ತು ನರಿ ಇಬ್ಬರೂ ಉತ್ತಮ ಸ್ನೇಹಿತರಾಗಿದ್ದವು. ಅವು ಪ್ರತಿ ದಿನ ಇಬ್ಬರೂ ಸೇರಿ ಆಹಾರ ಹುಡುಕುತ್ತಾ ಹೋಗುತ್ತಿದ್ದವು. ಒಂದು ದಿನ ಆಹಾರ ಹುಡುಕುತ್ತಾ ಹುಡುಕುತ್ತಾ ಊರ ಸಮೀಪ ಇರುವ ಕಬ್ಬಿನ ಗದ್ದೆಯ ಹತ್ತಿರ ಬಂದವು. ಕಬ್ಬನ್ನು ಕಂಡ ನರಿಗೆ ಅದನ್ನು ತಿನ್ನುವ ಆಸೆ ಆಯಿತು. ಇದನ್ನು ತನ್ನ ಗೆಳೆಯ ಒಂಟೆಯ ಹತ್ತಿರ ಹೇಳಿತು. ಒಂಟಿ ಈ ಮಾತನ್ನು ಒಪ್ಪಲಿಲ್ಲ. ಯಾರಾದರೂ ಕಾವಲುಗಾರರು ಬಂದರೆ ನಮ್ಮನ್ನು ಸುಮ್ಮನೇ ಬಿಡುವುದಿಲ್ಲ ಎಂದು ನರಿಗೆ ತಿಳಿ ಹೇಳಿತ್ತು. ಆದರೂ ಸಹ ನರಿಯು ಒಂಟೆಯನ್ನು ಪುಸಲಾಯಿಸಿ ಕಬ್ಬನ್ನು ತಿನ್ನಲು ಹೊರಟೇ ಬಿಟ್ಟಿತು. ಇಬ್ಬರೂ ಸಹ ಬಹಳ ಸಂತೋಷದಿಂದ ಕಬ್ಬನ್ನು ತಿನ್ನುತ್ತಿದ್ದವು. ಜೊತೆಗೆ ಗದ್ದೆಯಲೆಲ್ಲಾ ಬಿಡಾಡಿ ಕಬ್ಬನ್ನು ಹಾಳುಮಾಡಿತ್ತು. ಹೊಟ್ಟೆ ತುಂಬಿದ ನಂತರ ನರಿಯು ಒಂಟೆಯ ಹತ್ತಿರ ನನಗೆ ಹೊಟ್ಟೆ ತುಂಬಿದೆ. ಈಗ ನಾನು ಹಾಡನ್ನು ಹಾಡಬೇಕು ಎಂದಿತು. ಒಂಟೆಯು ಬೇಸರದಿಂದ ನನ್ನ ಹೊಟ್ಟೆ ದೊಡ್ಡದು ಇನ್ನೂ ತುಂಬಿಲ್ಲ ನೀನು ಹಾಡು ಹೇಳಿದರೆ ಕಾವಲುಗಾರರು ಬರುತ್ತಾರೆ. ಬೆನ್ನ ಮೇಲೆ ಬಾಸುಂಡೆ ಬರುವಂತೆ ಹೊಡೆಯುತ್ತಾರೆ ಎಂದಿತು. ಆದರೂ ನರಿಯು ಒಂಟೆಯ ಮಾತನ್ನು ಲೆಕ್ಕಿಸದೇತನ್ನ ಪಾಡಿಗೆ ತಾನು ಕೂಗಲು ಪ್ರಾರಂಭಿಸಿತು. ಈ ವೇಳೆಗೆ ನರಿಯ ಕೂಗನ್ನು ಕೇಳಿದ ಕಾವಲುಗಾರರು ದೊಣ್ಣೆಯನ್ನು ಹಿಡಿದು ಓಡಿ ಬಂದರು. ಕಾವಲುಗಾರರನ್ನು ನೋಡಿದ ನರಿಯು ಮೊದಲೇ ಓಡಿಹೋಯಿತು. ತಿನ್ನುವ ಭರದಲ್ಲಿದ್ದ ಒಂಟೆಗೆ ಕಾವಲುಗಾರರು ಬರುತ್ತಿರುವುದು ತಿಳಿಯುವಷ್ಟರಲ್ಲಿ ಅವರು ಬಂದು ಒಂಟೆಯನ್ನು ದೊಣ್ಣೆಯಿಂದ ಚೆನ್ನಾಗಿ ಹೊಡೆದರು.ವಿಟನ್ನು ತಿಂದ ಒಂಟೆ ನೋವಿನಿಂದ ಕೂಗುತ್ತ ನರಿಯ ಸ್ವಾರ್ಥ ಬುದ್ಧಿಯನ್ನು ಶಪಿಸುತ್ತ ತನ್ನ ದಾರಿಯನ್ನು ಹಿಡಿಯಿತು. ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
> ನರಿಗೆ ಏನನ್ನು ತಿನ್ನುವ ಆಸೆಯಾಯಿತು?
> ಮೊದಲಿಗೆ ಕಬ್ಬನ್ನು ತಿನ್ನಲು ಒಂಟೆಯು ಏಕೆ ಇಷ್ಟಪಡಲಿಲ್ಲ?
(ಕಥೆಯನ್ನು ಆನಂದಿಸುವುದರೆ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment