Thursday, 4 July 2024

ವಿದ್ಯಾ ಪ್ರವೇಶ ದಿನ 29

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/10b_r_C5S2X-0uhFv8WBDIkcDiVIGyvY7/view?usp=drivesdk

*ವಿದ್ಯಾಪ್ರವೇಶ ದಿನ-29* 

✒️🚁🎮🎨🎲🧮📏🔍

*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆಯ ವಿವರ



1. ದುಂಬಿ ಚಪ್ಪಾಳೆ ಯನ್ನು ಹೇಳಿಕೊಡುವುದು.


2. ಮಕ್ಕಳು ದುಂಬಿ ಚಪ್ಪಾಳೆ ತಟ್ಟುತ್ತಾ ತರಗತಿಯಲ್ಲಿ ವೃತ್ತಾಕಾರವಾಗಿ ನಿಲ್ಲುವುದು.



*ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಇಂಗ್ಲೀಷ್ ಪ್ರಾಸ ಪದ್ಯವನ್ನು ಹಾಡಿಸಿ.


The roots on a plant grow under ground, Underground under the ground,


Parts Of A Plant


Roots are part of a plant. The stems on a plant hold up the leaves, Up the leaves, up the leaves, Stems are part of plant.


The leaves on a plant are making food, Making food, making food, Leaves are part of plant.


The flowers on a plant are growing seeds, Growing seeds, growing seeds, Seeds are part of plant.

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯಗಳು : ಪ್ರಮಾಣಿತವಲ್ಲದ ಮಾಪನ, ವೀಕ್ಷಣೆ


ಚಟುವಟಿಕೆ:ಎರಡು ವಿಭಿನ್ನ ಹಿಡುಪುಗಳ ಸಾಮರ್ಥ್ಯ ಅಳೆದು ಹೋಲಿಸುವುದು (ಗುರಿ-3 )


ಉದ್ದೇಶ:- ವಿಭಿನ್ನ ಅಳತೆಯ ಹಿಡುಪುಗಳ ಬಗ್ಗೆ ತಿಳಿದುಕೊಳ್ಳುವುದು.


ಸಾಮಗ್ರಿಗಳು : ಬೇರೆ ಬೇರೆ ಆಳತೆಯ ಪಾತ್ರೆಗಳು, ನಾಲ್ಕು ಲೋಟಗಳು, ಬಣ್ಣದ ನೀರು


ವಿಧಾನ : ಎರಡು ವಿಭಿನ್ನ ಅಳತೆಯ ಪಾತ್ರೆಗಳನ್ನು ತೆಗೆದುಕೊಳ್ಳುವುದು ಅವುಗಳಿಗೆ 'ಆ' ಮತ್ತು 'ಬ'ಎಂದುಹೆಸರಿಡುವುದು. 'ಆ 'ಪಾತ್ರೆಗೆ ನಾಲ್ಕು ಲೋಟ ನೀರನ್ನು ಸುರಿದಾಗ ಪಾತ್ರೆ ತುಂಬುವುದು. ಈಗ 'ಬ' ಪಾತ್ರೆಗೆ ನೀರನ್ನು ತುಂಬಿಸುವುದು. 'ಬ' ಪಾತ್ರೆ ಕೇವಲ 2 ಲೋಟ ನೀರಿನಿಂದ ತುಂಬುವುದು. ಅಂದರೆ ಆ ಪಾತ್ರೆಗಿಂತ ಬ ಪಾತ್ರೆಯು ಕಡಿಮೆ ನೀರನ್ನು ಹಿಡಿಯುವುದನ್ನು ಗಮನಿಸಬಹುದು. ಹಾಗಾಗಿ 'ಆ' ಪಾತ್ರೆಯು 'ಬ' ಪಾತ್ರೆಗಿಂತದೊಡ್ಡದು.


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಚಿಕ್ಕ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಸೃಜನ ಶೀಲತೆಯ ಅಭಿವ್ಯಕ್ತಿ.


ಚಟುವಟಿಕೆ : ಕತ್ತರಿಸುವುದು.


ಉದ್ದೇಶಗಳು:


ಕತ್ತರಿಯನ್ನು ಹಿಡಿದು ಹಾಳೆಯನ್ನು ಕತ್ತರಿಸಿ ಅಂಟಿಸುವ ವಿಧಾನವನ್ನು ತಿಳಿಯುವುದು, ಕೈ ಮತ್ತು ಬೆರಳುಗಳ ಕುಶಲತೆ ಹೆಚ್ಚುವುದರ ಜೊತೆಗೆ ಏಕಾಗ್ರತೆ ಹೆಚ್ಚುವುದು.


ಸಾಮಗ್ರಿ: ಕತ್ತರಿ (ಪ್ಲಾಸ್ಟಿಕ್ ಕತ್ತರಿ ಅಪೇಕ್ಷಿತ) ಬಣ್ಣದ ಪೇಪರ್, ಅಂಟು.


ವಿಧಾನ: ಮಕ್ಕಳಿಗೆ ಒಂದು ಕೈಯಿಂದ ಕತ್ತರಿಯನ್ನು ಇನ್ನೊಂದು ಕೈಯಿಂದ ಪೇಪರನ್ನು ಹಿಡಿದುಕೊಳ್ಳುವುದನ್ನು ತೋರಿಸಿ ಬೆರಳುಗಳಿಂದ ಗಟ್ಟಿಯಾಗಿ ಕತ್ತರಿಯನ್ನು ಹಿಡಿಯುವ ಅಭ್ಯಾಸ ಮಾಡಿಸುವುದು.ಪ್ರತಿಯೊಂದು ಮಗುವಿಗೂ ಒಂದು ಕತ್ತರಿ ಮತ್ತು ಒಂದು ಪೀಸ್ ಪೇಪರನ್ನು ಕೊಟ್ಟು ಬೇರೆ ಬೇರೆ ರೀತಿಯಲ್ಲಿ ಅಂದರೆ ನೇರವಾಗಿ, ಜಿಗ್ ಜಾಗ್ ಅಥವಾ ಬೇರೆ ಬೇರೆ ಆಕಾರದಲ್ಲಿ ಕತ್ತರಿಸಲು ಹೇಳುವುದು.ನಂತರ ಅವುಗಳನ್ನು ಒಂದು ಚಾರ್ಟ ಮೇಲೆ ಅಥವಾ ಖಾಲಿ ಹಾಳೆಯ ಮೇಲೆ ಅಂಟಿಸಿ ಕೊಲ್ಯಾಜ್ ವರ್ಕ ಮಾಡಿಸುವುದು.


ಸೂಚನೆ: ಮಕ್ಕಳು ಉಪಯೋಗಿಸಲು ಸೂಕ್ತವಾದ [ಚೂಪಾಗಿಲ್ಲದ) ಕತ್ತರಿಗಳನ್ನು ಬಳಸಬೇಕು. ಶಿಕ್ಷಕರು ಎಚ್ಚರಿಕೆಯಿಂದ ಮಕ್ಕಳನ್ನು ಗಮನಿಸುತ್ತಿರಬೇಕು. ಮಕ್ಕಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನು ಅವರಿಗೆ ಮನದಟ್ಟು ಮಾಡಬೇಕು.



ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ-ಶಬ್ದ ಸಹಸಂಬಂಧ.


ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) (46ನೇ ದಿನದಿಂದ ಮುಂದುವರೆದಿದೆ.) ಉದ್ದೇಶಗಳು:-


ಧ್ವನಿ ಸಂಕೇತಗಳ ಅರಿವು ಮೂಡಿಸುವುದು.


ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು.


ಪದಗಳನ್ನು ಗ್ರಹಿಸಿ ಗುರುತಿಸುವುದು.


ಅಂತ್ಯಾಕ್ಷರಿ ಪದಗಳನ್ನು ಬರೆಯುವುದು. ಅಗತ್ಯ ಸಾಮಗ್ರಿಗಳು: ಇಲ್ಲ


ಸಲಹಾತ್ಮಕ ವಿಷಯ : ವಿದ್ಯುತ್ ಉಪಕರಣಗಳು


ವಿಧಾನ:-ಸುಳಿವುಗಳ ಮೂಲಕವಿದ್ಯುತ್ ಉಪಕರಣಗಳಹೆಸರನ್ನು ಊಹಿಸಿಹೇಳುವಚಟುವಟಿಕೆಯನ್ನು ಆಯೋಜಿಸಿ, ಉದಾಹರಣೆಗಾಗಿ ಶಿಕ್ಷಕರು 'ನನ್ನ ಮನಸ್ಸಿನಲ್ಲಿರುವ ವಿದ್ಯುತ್ ಉಪಕರಣಗಳ ನಮಗೆ ಜಗತ್ತಿನ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಒದಗಿಸುತ್ತದೆ. ಅದರ ಹೆಸರು ದೂ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ದೂರದರ್ಶನ ಎಂದು ಗುರುತಿಸುವುದು. ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.


ಅ.ಹಾ: E.C-13 ಚಿತ್ರ ಗಮನಿಸು ಹೆಸರಿಸು

*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆ, ಅನುಕ್ರಮ ಚಿಂತನೆ ಸ್ಕೂಲ ಸ್ನಾಯು ಕೌಶಲಗಳ ಅಭಿವೃದ್ಧಿ


ಚಟುವಟಿಕೆ : ಧ್ವನಿ ವ್ಯತ್ಯಾಸಗಳು (ಗುರಿ-2)


ಉದ್ದೇಶ : ಮಕ್ಕಳು ಪದಗಳನ್ನು ಆಲಿಸುವುದರ ಮೂಲಕ ಧ್ವನಿ ವ್ಯತ್ಯಾಸಗಳನ್ನು ಗುರುತಿಸುವರು.


ಅಗತ್ಯ ಸಾಮಾಗ್ರಿಗಳು : ಸೀಮೆಸುಣ್ಣ, ಮಾರ್ಕರ್, ಕ್ರೇಯಾನ್ಸ್, ಕ್ರಮಸಂಖ್ಯೆ ಬರೆದಿರುವ ಚಾರ್ಟ್


ವಿಧಾನ : ಶಿಕ್ಷಕರು ಕಪ್ಪು ಹಲಗೆಯ ಮೇಲೆ 3 ಒಂದೇ ಧ್ವನಿಯಿಂದ ಪ್ರಾರಂಭವಾಗುವ ಪದಗಳನ್ನು ಹಾಗು |


ವಿಭಿನ್ನ ರೀತಿಯ ಧ್ವನಿಯಿಂದ ಪ್ರಾರಂಭವಾಗುವ ಪದವನ್ನು ಬರೆದು ಗಟ್ಟಿಯಾಗಿ ಓದುವುವುದು ಅವುಗಳಲ್ಲಿ ವಿಭಿನ್ನ ಪದವನ್ನು ಗುರುತಿಸಿ ಮಕ್ಕಳ ಅನುಭವಕ್ಕೆ ತರವುದು. ಉದಾಹರಣೆ ಪಟ, ಪದಕ, ಚರಕ ಪುಸ್ತಕ ಇವುಗಳಲ್ಲಿ ವಿಭಿನ್ನ ಧ್ವನಿಯ ಪದ ಯಾವುದು? ಎಂದು ಕೇಳುವುದು. ಮಕ್ಕಳು ಗುರುತಿಸಿರುವ ಪದಗಳನ್ನು ಚಾರ್ಟನಲ್ಲಿ ಬರೆಯುವುದು.


*ಉದ್ದೇಶಿತ ಬರಹ*  

 ಅವಧಿ - 6(40ನಿ)

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ, ಚಟುವಟಿಕೆ:


ಹವಾಮಾನ ನಕ್ಷೆ (ಗುರಿ-2) ECW-16 (46ನೇ ದಿನದಿಂದ ಮುಂದುವರೆದಿದೆ)ಉದ್ದೇಶಗಳು:


ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.


ವೀಕ್ಷಣಾ ಕೌಶಲವನ್ನು ಬೆಳೆಸುವುದು.


ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.


ಪರಿಸರ ಪ್ರಜ್ಞೆ ಮೂಡಿಸುವುದು.


ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್


ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.


ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುವುದು.


ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗುರುತಿಸಲು ತಿಳಿಸುವುದು.


ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ ಖಾಲಿ ಹಾಳೆಗಳನ್ನ ನೀಡಿ ಆ ದಿನದ ಹವಾಮಾನದ ಚಿತ್ರವನ್ನು ಬರೆಯಲು ತಿಳಿಸುವುದು.


ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು.


- ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು


ನೋಡಲು ಅವಕಾಶ ಕಲ್ಪಿಸುವುದು.


ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು,

*ಹೊರಾಂಗಣ ಆಟಗಳು*

ಚಟುವಟಿಕೆ : ಸಂಗೀತದ ಅಕ್ಷರಗಳು


ಸಾಮರ್ಥ್ಯ : ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ,


ಸಾಮಗ್ರಿ : ಕುರ್ಚಿಗಳು


ವಿಧಾನ : ಸಂಗೀತ ಕುರ್ಚಿಗಳ ವಿಧದಲ್ಲಿ ಆಟವನ್ನು ಆಡಿಸುವುದು ಕುರ್ಚಿಗಳ ಮೇಲೆ ಅಕ್ಷರದ ಕಾರ್ಡುಗಳನ್ನು ಇರಿಸುವುದು.


ಶಿಕ್ಷಕರು ಒಂದು ಮಗುವಿನ ಹೆಸರು ಕರೆದಾಗ ಆ ಮಗು ಕುಳಿತ ಕುರ್ಚಿಯಲ್ಲಿ ಇಟ್ಟಿರುವ ಅಕ್ಷರ ಯಾವುದು ಎಂದು ಹೇಳಲು ಸೂಚಿಸುವುದು


ಅವಧಿ - 7(40ನಿ)

*ಕಥಾ ಸಮಯ*

ಶೀರ್ಷಿಕೆ : ಗ್ರಾಂಡ್ ಪಾಸ್ ಗಿಪ್ಪ ಸಾಮಗ್ರಿಗಳು : ಗೊಂಬೆಗಳು


ಉದ್ದೇಶಗಳು :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


> ಆಲೋಚನಾ ಶಕ್ತಿಯನ್ನು ವೃದ್ಧಿಸುವುದು


> ಸೃಜನ ಶೀಲತೆಯನ್ನು ಬೆಳೆಸುವುದು.


> ಪ್ರಶ್ನಿಸುವ ಮನೋಭಾವಉಂಟುಮಾಡುವದು

ವಿಧಾನ :


> ಶಿಕ್ಷಕರು ಮಾತೃಭಾಷೆ ಮತ್ತು ಇಂಗ್ಲೀಷ ಭಾಷೆಯಲ್ಲಿ ಕಥೆಯನ್ನು ಅರ್ಥೈಸುವುದು.


> ಕಥೆಯ ಪಾತ್ರಗಳನ್ನು ಶಿಕ್ಷಕರು/ಹಿರಿಯ ವಿದ್ಯಾರ್ಥಿಗಳು ಹೆಸರಿಸುವಾಗ ಕಿರಿಯ ವಿದ್ಯಾರ್ಥಿಗಳು ಪಾತ್ರಗಳಚಿತ್ರಗಳನ್ನು


ತೋರಿಸಲು ಕೇಳುವುದು.


> ನಂತರ ಶಿಕ್ಷಕರು ಇಂಗ್ಲೀಷ ಭಾಷೆಯಲ್ಲಿ ಕಥೆಯನ್ನು ಹೇಳುವುದು. ಈಗ ಕನ್ನಡದಲ್ಲಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುವುದು. ಉದಾ


: ತಾತ ಕೊಟ್ಟ ಉಡುಗೊರೆ ಯಾವುದು?


> ಗೊಂಬೆಗಳನ್ನು ಪ್ರದರ್ಶಿಸಿ ಅವುಗಳ ಹೆಸರುಗಳನ್ನು ಒಮ್ಮೆ ಮಾತೃಭಾಷೆಯಲ್ಲಿ ನಂತರ ಇಂಗ್ಲೀಷ್ ಭಾಷೆಯಲ್ಲಿ ಹೇಳಿ ಪರಿಚಯಿಸುವುದು. ಉದಾ : ತಾತ(ಆಜ್ಜ)ನ ಗೊಂಬೆ ತೋರಿಸಿ - ಗ್ರಾಂಡ್ ಫಾ ಇತ್ಯಾದಿ.


ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)


ಅವಧಿ -8(20ನಿ)

*ಮತ್ತೆ ಸಿಗೋಣ*

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮಕ್ಕಳು ಖುಷಿಯಿಂದ ತಮಾಷೆಯಿಂದ ಇರುವ ಚಟುವಟಿಕೆಗಳನ್ನು ನಿರ್ವಹಿಸಿ,


ಉದಾ : 'ಮ' ಅಕ್ಷರದಿಂದ ಪ್ರಾರಂಭವಾಗುವ ವಸ್ತುಗಳ ಹೆಸರುಗಳನ್ನು ಮನೆಯಿಂದ ತಿಳಿದುಕೊಂಡು ಬರಲಿ ಮತ್ತುಮುಂದಿನವಾರ ಅವುಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ. ಬೀಳ್ಕೊಡಿ.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment