https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1xsgT83Xkyh49t_4lVyYjXhnGDbMoWlnu/view?usp=drivesdk
*ವಿದ್ಯಾಪ್ರವೇಶ ದಿನ-27*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
35 ನೇ ದಿನದ ಚಟುವಟಿಕೆ ಮಾಡಿಸುವುದು.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
43 ನೇ (ವಿ.ಪ್ರ 2022-23 ರ ಕೈಪಿಡಿ) ಆಧರಿಸಿ ದಿನದ ಚಟುವಟಿಕೆ ಮಾಡಿಸುವುದು.
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು,
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಪ್ರಯೋಗ ಮತ್ತು ವೀಕ್ಷಿಸುವುದು
ಚಟುವಟಿಕೆ : ಗುಳ್ಳೆಗಳ ಆಟ (ಬಬಲ್ ಬೋವರ್) ಮತ್ತು ಅನ್ವೇಷಣೆ (ಗುರಿ -3)
ಉದ್ದೇಶ:- ಸರಳ ಪ್ರಯೋಗವನ್ನು ಮಾಡುವುದು.
ಅಗತ್ಯ ಸಾಮಗ್ರಿಗಳು :ಸೋಪು, ಡಿಟಜೆರ್ಂಟ್ ಪೌಡರ್/ಶ್ಯಾಂಪು, ಸ್ಟ್ರಾ/ ತಂತಿ
ವಿಧಾನ: ಸೋಪ್ / ಡಿಟಜೆರ್ಂಟ್ / ಶಾಂಪೂ ಮಿಶ್ರಣವನ್ನು ತಯಾರಿಸಿಕೊಳ್ಳುವುದು. ಸ್ವಾತಂತಿಯನ್ನು ಬಳಸಿ ಮಿಶ್ರಣದಲ್ಲಿ ಅದ್ದಿ ಗುಳ್ಳೆಗಳನ್ನು ರಚಿಸುವುದು. ಮಕ್ಕಳು ಗುಳ್ಳೆಯನ್ನು ಮುಟ್ಟಿದಾಗ ಏನಾಗುತ್ತದೆ ಎಂಬುದನ್ನು ಗಮನಿಸಲಿ. ಪಾಲಕರ ಮಾರ್ಗದರ್ಶನದಲ್ಲಿ ಮಕ್ಕಳು ಇದೇ ರೀತಿಯ ಗುಳ್ಳೆಗಳ ಆಟವನ್ನು (ಬಬಲ್ ಬೋವರ್) ಮನೆಯಲ್ಲಿಯೇ ಮಾಡಲು ಪ್ರೇರೇಪಿಸುವುದು. ಮತ್ತು ಚಟುವಟಿಕೆಯ ಅನುಭವಗಳನ್ನು ಹೇಳಿಸುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ ಆಕಾರಗಳ ಪರಿಕಲ್ಪನೆ. ಚಟುವಟಿಕೆ; ಅಕ್ಷರಗಳ ಆಕಾರದ ಒಳಗೆ ಬಣ್ಣ ತುಂಬುವುದು. (ಗುರಿ - 1)
ಉದ್ದೇಶಗಳು: ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು.
ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
ಸ್ಥಳದ ಪರಿಕಲ್ಪನೆಯನ್ನು ತಿಳಿಯುವುದು.
ಸಾಮಗ್ರಿಗಳು : ರಬ್ಬರ್ ಅಕ್ಷರಗಳು, ರಟ್ಟಿನಲ್ಲಿ ಕತ್ತರಿಸಿದ ಅಕ್ಷರಗಳು.
ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವುದು.ಬಿಳಿಹಾಳೆ ಮತ್ತು ರಬ್ಬರ್ ಅಕ್ಷರ/ರಟ್ಟಿನಲ್ಲಿ ಕತ್ತರಿಸಿದ ಅಕ್ಷರಗಳನ್ನು ನೀಡಿ ಅದರ ಆಕಾರದ ರೇಖಾ ಚಿತ್ರಗಳನ್ನು ರಚಿಸಲು ಹೇಳುವುದು. ತಾವು ರಚಿಸಿದ ಚಿತ್ರಗಳಿಗೆ ತಮಗೆ ಇಷ್ಟಬಂದ
ಬಣ್ಣ ತುಂಬಲು ಹೇಳುವುದು.
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.
ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2)
ಉದ್ದೇಶಗಳು:-
* ಧ್ವನಿ ಸಂಕೇತಗಳ ಅರಿವು ಮೂಡಿಸುವುದು.
* ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು. ಪದಗಳನ್ನು ಗ್ರಹಿಸಿ ಗುರುತಿಸುವುದು.
ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.
ಅಗತ್ಯ ಸಾಮಗ್ರಿಗಳು- ಇಲ್ಲ
ಸಲಹಾತ್ಮಕ ವಿಷಯ : ವಾಹನಗಳು
ವಿಧಾನ:- ಸುಳಿವುಗಳ ಮೂಲಕ ವಾಹನಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ, ಉದಾಹರಣೆಗಾಗಿ ಶಿಕ್ಷಕರು 'ನನ್ನ ಮನಸ್ಸಿನಲ್ಲಿರುವ ವಾಹನ ನೀರಿನಲ್ಲಿ ತೇಲುತ್ತಾ ಹೋಗುವಂತಹದ್ದು, ಅದರ ಹೆಸರು ದೋ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ದೋಣಿ ಎಂದು ಗುರುತಿಸುವುದು.
ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಪದ ಸಂಪತ್ತು ಅಭಿವೃದ್ಧಿ ಸ್ವಯಂ ಅಭಿವ್ಯಕ್ತಿ ನಟನಾ ಓದು
ಚಟುವಟಿಕೆ : ಊಹಾತ್ಮಕ ಓದು (ಗುರಿ-2)
ಉದ್ದೇಶ: ಮಕ್ಕಳು ಪುಸ್ತಕದಲ್ಲಿನ ಚಿತ್ರ ಸನ್ನಿವೇಶವನ್ನು ನೋಡುವುದರ ಮೂಲಕ ಚತ್ರಸಂಕೇತಗಳನ್ನು ಅರ್ಥಹಿಸಿಕೊಂಡು ಸಂಬಂಧೀಕರಿಸಿಕೊಂಡು ಅಭಿವ್ಯಕ್ತಿಸುವುದು.
ಅಗತ್ಯ ಸಾಮಗ್ರಿಗಳು: ಸಚಿತ್ರ ಕೋಶ, ಸರಣಿ ಚಿತ್ರ ಕಥೆ ಪುಸ್ತಕ
ವಿಧಾನ: ಮಕ್ಕಳು ಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನ ಸಚಿತ್ರ ಕೋಶ, ಸರಣಿ ಚಿತ್ರ ಕಥೆ ಪುಸ್ತಕ ನೋಡಿ ಅಲ್ಲಿರುವ ಸನ್ನಿವೇಶ ವನ್ನು ಊಹೆ ಮಾಡಿ ಓದುವರು
*ಉದ್ದೇಶಿತ ಬರಹ*
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,
ಚಟುವಟಿಕೆ : ಹವಾಮಾನ ನಕ್ಷೆ (ಗುರಿ-2)
ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು, ವೀಕ್ಷಣಾ ಕೌಶಲವನ್ನು ಬೆಳೆಸುವುದು.
ಉದ್ದೇಶಗಳು:
ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.
ಪರಿಸರ ಪ್ರಜ್ಞೆ ಮೂಡಿಸುವುದು. ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್
ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.
ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುವುದು,
ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗುರುತಿಸಲು ತಿಳಿಸುವುದು.
ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ ಖಾಲಿ ಹಾಳೆಗಳನ್ನ ನೀಡಿ ಆ ದಿನದ ಹವಾಮಾನದ ಚಿತ್ರವನ್ನು ಬರೆಯಲು ತಿಳಿಸುವುದು.
ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು. (52ನೇ ದಿನಕ್ಕೆ ಮುಂದುವರೆದಿದೆ)
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲುಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು. ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ಸಮತೋಲನ (ಗುರಿ-1 ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ,
ಬೇಕಾಗುವ ಸಾಮಗ್ರಿ: ಪುಸ್ತಕ, ನೀರಿನ ಲೋಟ, ಹಗ್ಗ ವಿಧಾನ:
ಮಕ್ಕಳು ತಮ್ಮ ತಲೆಯ ಮೇಲೆ ಪುಸ್ತಕವನ್ನು ಬ್ಯಾಲೆನ್ಸ್ ಮಾಡುತ್ತ ಈ ಓಟವನ್ನು ಮುಗಿಸಬೇಕು ಎಂದು ಸೂಚಿಸುವುದು.
• ಮಕ್ಕಳಿಗೆ ಓಟವನ್ನು ಆಯೋಜಿಸುವುದು.
ಯಾರು ಪುಸ್ತಕವನ್ನು ಬೀಳಿಸದೆ ಮುಕ್ತಾಯದ ಗೆರೆಗೆ ಮೊದಲು ತಲುಪುತ್ತಾರೋ ವಿಜೇತರಾಗುತ್ತಾರೆ
ಅವಧಿ - 7(40ನಿ)
*ಕಥಾ ಸಮಯ*
ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.
ಕಥಾ ಸಾಹಿತ್ಯದ ನಿರೂಪಣೆ
ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕ ಕಥೆಯನ್ನು ಪೂರ್ಣ ಗೊಳಿಸುವುದು.
ಉದಾ: ಇದಾದ ಮೇಲೆ ಏನಾಗಿತ್ತು? ನಂತರ ಯಾರು ಏನು ಹೇಳಿದರು? ಇತ್ಯಾದಿ
ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
ಸಿಗ್ನಲ್ ದೀಪವನ್ನು ನೋಡಿದ ಕಾಗೆ ಏನೆಂದು ಯೋಚಿಸಿತು?
ಕೆಂಪು ದೀಪ ಬಂದಾಗ ಕಾಗೆ ಏನು ಹೇಳಿತು?
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ
ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ. "ಸಿಪ್ಪೆ ಸಹಿತ ನೇರವಾಗಿ ತಿನ್ನುವ ಹಣ್ಣುಗಳ ಬಗ್ಗೆ" ಮಕ್ಕಳು ತಮ್ಮ ಮನೆಗಳಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಬರಲಿ.
ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment