https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1vs8Kxo7uH7cLiwqBBehM7STgssf-f0yi/view?usp=drivesdk
*ವಿದ್ಯಾಪ್ರವೇಶ ದಿನ-26*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1:
ಏಕ್ ದೋ ಏಕ್ / 1-2-1-2 ಎಣಿಸುವ ಮೂಲಕ ಕದಮ್ ತಾಲ್ ಮಾಡುವ ಮೂಲಕ ಒಂದು ಸಾಲಿನಲ್ಲಿ ತರಗತಿಯನ್ನು ಪ್ರವೇಶಿಸಲು ಮಕ್ಕಳಿಗೆ ತಿಳಿಸಿ.
ಚಟುವಟಿಕೆ 2:
ಸಾಮಗ್ರಿಗಳು:, ಚಪ್ಪಾಳೆ ತಟ್ಟುವುದು. ಓಡುವುದು, ಜಿಗಿಯುವುದು, ಕುಳಿತುಕೊಳ್ಳುವುದು, ನಿಂತಿರುವುದು. ತಲೆದೂಗುವುದು ಇತ್ಯಾದಿ ಕ್ರಿಯೆಗಳನ್ನು ಹೊಂದಿರುವ ಕೆಲವು ಕಾರ್ಡ್‌ಗಳು
ಸಮಯ: 5 ನಿಮಿಷಗಳು
ವಿಧಾನ:
ಮಕ್ಕಳನ್ನು ಸಾಲಿನಲ್ಲಿ ನಿಲ್ಲುವಂತೆ ಮಾಡಿ
ಕಾರ್ಡ್‌ಗಳನ್ನು ಒಂದೊಂದಾಗಿ ತೋರಿಸಿ ಮತ್ತು ಕಾರ್ಡ್‌ಗಳ ಪ್ರಕಾರ ಕ್ರಿಯೆಗಳನ್ನು ಮಾಡಲು ಮಕ್ಕಳಿಗೆ ತಿಳಿಸಿ ಉದಾಹರಣೆಗೆ, ಶಿಕ್ಷಕರು ಚಪ್ಪಾಳೆ ತಟ್ಟುವ ಕಾರ್ಡ್ ತೋರಿಸಿದರೆ ಎಲ್ಲಾಮಕ್ಕಳು ಚಪ್ಪಾಳೆ ತಟ್ಟಬೇಕು . ಇದೆ ರೀತಿ ಬೇರೆ ಕಾರ್ಡ್ಗಳನ್ನು ತೋರಿಸಿ ಚಟುವಟಿಕೆಯನ್ನು ಮುಂದುವರೆಸುವುದು
ಸೂಚನೆ: ಹೆಚ್ಚು ಸೂಚನೆಗಳನ್ನು ಬಳಸಬೇಡಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ 2: ನನ್ನ ನೆಚ್ಚಿನ ಬೊಂಬೆ
ಬೇಕಾಗುವ ಸಾಮಗ್ರಿಗಳು: ವಿವಿಧ ರೀತಿಯ ಗೊಂಬೆಗಳು. (ಕಾಗದದ ಬೊಂಬೆ, ಬೊಂಬೆಗಳು, ಮರದ ಬೊಂಬೆಗಳು, ಉಣ್ಣೆಯ ಬೊಂಬೆಗಳು, ಟೆಡ್ಡಿ ಬೇರ್, ಬಟ್ಟೆಗಳ ಬೊಂಬೆಗಳು, ಕೋಲುಗಳಿಂದ ತಯಾರಿಸಿದ ಬೊಂಬೆಗಳು,
ಸ್ಥಳೀಯ ಲಭ್ಯವಿರುವ ಬೊಂಬೆಗಳು ಇತ್ಯಾದಿ.
ವಿಧಾನ:
1. ಮಕ್ಕಳನ್ನು ಅರ್ಧ ವೃತ್ತದಲ್ಲಿ ಕೂರಿಸಿ.
2.ವಿವಿಧ ರೀತಿಯ ಬೊಂಬೆಗಳನ್ನು ಟ್ರೇನಲ್ಲಿ ಇರಿಸಿ.
3. ಮಕ್ಕಳನ್ನು ಒಬ್ಬೊಬ್ಬರಾಗಿ ಕರೆದು ಟ್ರೇನಿಂದ ಬೊಂಬೆಯನ್ನು ಆರಿಸಲು ಹೇಳಿ. (ಅವರ ಆಯ್ಕೆಯ)
4.ನಂತರ ಆಯ್ಕೆ ಮಾಡಿದ ಆಟಿಕೆಗಳ ಬಗ್ಗೆ ಅವರ ಅಭಿಪ್ರಾಯವನ್ನು ಪಡೆಯಲು ಕೆಲವು ಪ್ರಶ್ನೆಗಳನ್ನು ಕೇಳಿ.
ಪ್ರಶ್ನೆಗಳು: ಅದು ಏನು? ನೀವು ಈ ಆಟಿಕೆಯನ್ನು ಏಕೆ ಆರಿಸಿಕೊಂಡಿದ್ದೀರಿ? ನೀವು ಎಂದಾದರೂ ಈ
ಆಟಿಕೆಯೊಂದಿಗೆ ಆಡಿದ್ದೀರಾ? ನಿನಗೆ ಇದು ಇಷ್ಟಾನಾ? ನೀವು ಏಕೆ ಇಷ್ಟಪಡುತ್ತೀರಿ? ನಿಮಗೆ ಏಕೆ ಇಷ್ಟವಿಲ್ಲ?
5. ತಮ್ಮ ಮಾತೃ ಭಾಷೆಯಲ್ಲಿ ಉತ್ತರಿಸಲು ಮಕ್ಕಳನ್ನು ಪ್ರೋತ್ಸಾಹಿಸಿ.
ವ್ಯತ್ಯಾಸ: ವರ್ಗ-2 ಮತ್ತು 3 ಕ್ಕೆ
ನೀಡಲಾದ ಪ್ರಶ್ನಾವಳಿಯ ಜೊತೆಗೆ, ಈ ಪ್ರಶ್ನೆಗಳನ್ನು ಬಳಸಬಹುದು.
ಆಯ್ಕೆಮಾಡಿದ ಆಟಿಕೆಯೊಂದಿಗೆನೀವುಹೇಗೆ ಆಡುತ್ತೀರಿ?
• ನೀವುನಿಮೃಸ್ವಂತ ಆಟಿಕೆಯನ್ನು ಮಾಡುತ್ತೀರಾ?
. ನೀವು ಅದನ್ನು ಹೇಗೆ ಮಾಡುತ್ತೀರಿ?
'ನೀವು ಯಾರೊಂದಿಗೆ ಆಡಲು ಬಯಸುತ್ತೀರಿ? ಏಕೆ?
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಆಕೃತಿಯ ಪರಿಕಲ್ಪನೆ
ಚಟುವಟಿಕೆ : "ಆಕೃತಿಗಳನ್ನು ಗುರುತಿಸು ಮತ್ತು ಹೆಸರಿಸು" ( ಗುರಿ -3)
ಉದ್ದೇಶ:- ವಿವಿಧ ಆಕೃತಿಗಳ ಬಗ್ಗೆ ತಿಳಿದುಕೊಳ್ಳುವುದು.
ಸಾಮಗ್ರಿಗಳು: ವಿವಿಧ ಆಕೃತಿಗಳು, ಢಪ್ತಿ, ಆಡಿಯೋ ಪ್ಲೇಯರ್, ಟಿ.ವಿ
ವಿಧಾನ: ವಿವಿಧ ಆಕೃತಿಗಳನ್ನು ಪ್ರತಿ ಮಗುವಿಗೆ ನೀಡಿರಿ. ಆಕೃತಿಗಳ ಬಗ್ಗೆ ಒಂದು ಹಾಡು/ಪದ್ಯವನ್ನು ಹಾಕಿರಿ ಅಥವಾ ಹಾಡಿಸಿರಿ. ಮಕ್ಕಳು ಹಾಡು/ಪದ್ಯದಲ್ಲಿ ಬರುವ ಆಕೃತಿಗಳನ್ನು ತೋರಿಸುತ್ತಾ ಹಾಡನ್ನು ಪುನರಾವರ್ತಿಸಲಿ. ಪ್ರತಿ ಮಗು ಹಾಡುವಾಗ ಪ್ರಸ್ತಾಪವಾಗುವ ಆಕೃತಿಯನ್ನು ಮುಟ್ಟಿ ನೋಡಲು ಪ್ರೋತ್ಸಾಹಿಸಿ. ನಂತರ ಮಕ್ಕಳಿಗೆ ಯಾವುದಾದರೂ ಆಕೃತಿಯ ಬಗ್ಗೆ ಮಾತನಾಡಲು ಪ್ರೇರೇಪಿಸಿ,
ಅ.ಹಾ:-11-16 ಆಕೃತಿಗಳಿಗೆ ಬಣ್ಣ ತುಂಬೋಣ
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ. ಕಣ್ಣು ಕೈಗಳ ಸಮನ್ವಯತೆ ಆಕಾರಗಳ ಪರಿಕಲ್ಪನೆ.
ಚಟುವಟಿಕೆ: ಅಕ್ಷರಗಳ ಮೇಲೆ ತಿದ್ದುವುದು. (ಮರಳು) (ಗುರಿ - 1)
ಉದ್ದೇಶಗಳು:
ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು.
ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
ಇಂಗ್ಲಿಷ್ ಅಕ್ಷರಗಳನ್ನು ಬರೆಯುವ ಕ್ರಮ ತಿಳಿಯುವುದು.
ಸಾಮಗ್ರಿಗಳು : ಮರಳು ಮತ್ತು ಕಡ್ಡಿ.
ವಿಧಾನ : ಮಕ್ಕಳು ಇಂಗ್ಲಿಷ್ ಅಕ್ಷರಗಳನ್ನು ಬರೆಯುವ ಕ್ರಮದಂತೆ ತಿದ್ದಿಸಿ ಆ ಅಕ್ಷರಕ್ಕೆ ಚಿತ್ರಗಳನ್ನು ರಚಿಸಲು ಹೇಳುವುದು. ಮಗು ತನಗೆ ಇಷ್ಟವಾದ/ ಬರುವ ಇಂಗ್ಲಿಷ್ ಅಕ್ಷರಗಳನ್ನು/ ತನ್ನ ಹೆಸರಿನ ಮೊದಲ ಅಕ್ಷರ/ ತನ್ನ ಹೆಸರಿನ ಅಕ್ಷರಗಳನ್ನು
ಬರೆಯಲು ಪ್ರೋತ್ಸಾಹಿಸುವುದು.
ಅ.ಹಾ:-HW-10 ಹೊಂದಿಸು
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ, ಚಟುವಟಿಕೆ: ಪ್ರಾಸ
ಪದಗಳನ್ನು ಆಲಿಸುವುದು (ಗುರಿ-02) ECL-4 (38 ನೇ ದಿನದಿಂದ ಮುಂದುವರೆದಿದೆ)ಉದ್ದೇಶಗಳು:
* ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು. ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.
* ಸ್ಕೂಲ ಹಾಗೂ ಸೂಕ್ಷ್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು:- ಕರಿ ಹಲಗೆ, ಸೀಮೆ ಸುಣ್ಣ
ವಿಧಾನ:
ಪ್ರಾಸ ಪ್ರಾಸಪದಗಳ ವಿವಿಧ ಗುಂಪುಗಳನ್ನು, ಸಿದ್ಧಪಡಿಸಿಕೊಳ್ಳುವುದು.
ಮಕ್ಕಳನ್ನು ವಿವಿಧ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿಗೆ ಒಂದೊಂದು ಪ್ರಾಸ ಪದಗಳ ಗುಂಪನ್ನು ನೀಡುವುದು.
ಪ್ರಾಸ ಪದಗಳನ್ನು ಒಳಗೊಂಡಂತೆ ಶಿಕ್ಷಕರ ಸಹಾಯದಿಂದ ವಿವಿಧ ವಾಕ್ಯಗಳನ್ನು ರಚಿಸುವುದು. ತರಗತಿವಾರು ವಿವರ: 2ನೇ ತರಗತಿ ಮಕ್ಕಳು ಪ್ರಾಸ ಪದಗಳ ಗುಂಪಿನ ಪದಗಳಿಂದ ಸ್ವತಂತ್ರವಾಗಿ ವಾಕ್ಯಗಳನ್ನು ರಚಿಸುವುದು. 3ನೇ ತರಗತಿ ಮಕ್ಕಳು ಪ್ರಾಸ ಪದಗಳ ಗುಂಪಿನ ಪದಗಳಿಂದ ಸ್ವತಂತ್ರವಾಗಿ ವಾಕ್ಯಗಳನ್ನು ರಚಿಸುವುದು.
ಆಹಾ: E.C-12 ಗುರುತಿಸು-ಗೆರೆ ಎಳೆ
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.
ಚಟುವಟಿಕೆ: ಚಿತ್ರ ಓದು (ಗುರಿ-2)
ಅಗತ್ಯ ಸಾಮಾಗ್ರಿಗಳು: ವಿವಿಧ ಘಟನೆ/ ಸ್ಥಳ/ ಜಾತ್ರೆ/ ಮೇಳಗಳ ಚಿತ್ರಗಳು/ ಉದ್ಯಾನವನ/ ಪೇಟೆ/ ಶಾಲೆ/ ಪ್ರಾಣಿ ಸಂಗ್ರಹಾಲಯ/ ಹಬ್ಬ / ಜಾತ್ರೆಯ ಇತ್ಯಾದಿಗಳ ಚಿತ್ರಗಳು
ವಿಧಾನ: ಮಕ್ಕಳನ್ನು ಒಂದು ದೊಡ್ಡ ಹಾಗೂ ಒಂದು ಚಿಕ್ಕ ಗುಂಪುಗಳಾಗಿ ವಿಂಗಡಿಸುವುದು. ಮಕ್ಕಳಿಗೆ ತಾವು ನೋಡಿರುವ ಚಿತ್ರಗಳನ್ನು ಅವಲೋಕಿಸಿ ಅದರ ಬಗ್ಗೆ ವಿವರಣೆ ನೀಡಲು ತಿಳಿಸುವುದು. ಶಿಕ್ಷಕರು ವಿವಿಧ ದಿನ ಪತ್ರಿಕೆ, ಪುಸ್ತಕ, ನಿಯತ ಕಾಲಿಕೆ' ಮುಂತಾದವುಗಳನ್ನು ಬಳಸಿ ಅದರ ಕುರಿತು ವಿವರಣೆ ನೀಡುವುದು. ವಿವರಣೆ ನೀಡುವಲ್ಲಿ ಮಕ್ಕಳ ವಯಸ್ಸು, ಅಭಿವೃದ್ಧಿಯ ಅಗತ್ಯಗಳು ಹಾಗೂ ಮಕ್ಕಳ ಸುತ್ತಲಿನ ಪರಿಸರವನ್ನು ಗಮನದಲ್ಲಿಡುವುದು.
ಸನ್ನಿವೇಶ ಕುರಿತು ಪ್ರಶ್ನೆ ಕೇಳುವಾಗ ಅಥವಾ ವಿವರಣೆ ನೀಡುವಾಗ ಅವರ ಸ್ವಂತ ಅನುಭವಕ್ಕೆ ಹೊಂದಾಣಿಕೆ ಆಗುವಂತೆ ಸಂಬಂಧ ಕಲಿಸುವುದು. ಪ್ರಶ್ನೆಗಳನ್ನು ಕೇಳುತ್ತಾ ಸಂಭಾಷಣೆಯಲ್ಲಿ ಮಕ್ಕಳನ್ನು ತೊಡಗಿಸುವುದು ನೀಡಿದ ವಿಷಯದ ಕುರಿತು ಮಕ್ಕಳು ಸವಿವರವಾಗಿ ಗಮನಿಸಲು ಮತ್ತು ತಮ್ಮ ಸ್ವಂತ ಅನುಭವಗಳನ್ನು ಇವುಗಳ ಜೊತೆ ಜೋಡಿಸಿ ಹೇಳಲು ಸಹಾಯ ಮಾಡುವುದು. ಕೆಲವು ಘಟನೆಗಳನ್ನು ತೋರಿಸಿ ಶಿಕ್ಷಕರು ಸೂಕ್ತ ಪ್ರಶ್ನೆಗಳನ್ನು ಕೇಳುತ್ತಾ ಹುರಿದುಂಬಿಸುವುದು.
ಶಿಕ್ಷಕರು ಕೆಲವು ಘಟನೆಗಳನ್ನು ತೋರಿಸಿ ಅದರ ಬಗ್ಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಬಹುದು.
* ನೀವು ಎಂದಾದರು ಇಂತಹ ಸ್ಥಳಕ್ಕೆ ಹೋಗಿದ್ದೀರಾ?
ಈ ಚಿತ್ರದಲ್ಲಿ ಇರುವ ಜನರು ಏನು ಆಡುತ್ತಿದದಾರೆ?
ಈ ಸನ್ನಿವೇಶದಲ್ಲಿ ಜನರು ಏನು ಮಾಡುತ್ತಿದ್ದಾರೆ? ಇತ್ಯಾದಿ
*ಉದ್ದೇಶಿತ ಬರಹ*
ಸಾಮರ್ಥ್ಯ: ಕೈಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ.
ಚಟುವಟಿಕೆ : ಮುಕ್ತ ಚಿತ್ರ ರಚನೆ (ಗುರಿ-2) ECW-6
ಉದ್ದೇಶಗಳು:
ಬರವಣಿಗೆಯ ಕೌಶಲಗಳನ್ನು ರೂಢಿಸುವುದು.
ಕಣ್ಣು-ಕೈಗಳ ಸಮನ್ವಯ ಕೌಶಲವನ್ನು ಅಭಿವೃದ್ಧಿಪಡಿಸುವುದು.
ಕ್ರಿಯಾತ್ಮಕ ಅಭಿವ್ಯಕ್ತಿಗೆ ಅವಕಾಶ ನೀಡುವುದು.
• ಸೃಜನಶೀಲ ಅಭಿವ್ಯಕ್ತಿಯನ್ನು ಪ್ರೋತ್ಸಾಹಿಸುವುದು.
ಅಗತ್ಯ ಸಾಮಗ್ರಿಗಳು: ಕ್ರೇಯಾನ್ಸ್, ಬಣ್ಣದ ಪೆನ್ಸಿಲ್‌ಗಳು, ಮಾರ್ಕರ್, ಬಿಳಿಯ ಹಾಳೆಗಳು
ವಿಧಾನ: ಕಾಗದದಲ್ಲಿ ಮುಕ್ತವಾಗಿ ಚಿತ್ರಿಸಲು/ ಬರೆಯಲು. ಅನಿಸಿದ್ದನ್ನು ಬಿಡಿಸಿ ಬಣ್ಣ ಹಾಕಲು ಅವಕಾಶ ಕಲ್ಪಿಸುವುದು.ಅವರ ಬರವಣಿಗೆ ಬಗ್ಗೆ ಮಾತನಾಡಲು ತಿಳಿಸುವುದು. ಸೂಕ್ತವಾದ ಪ್ರಶ್ನೆಗಳನ್ನು ಕೇಳುತ್ತಾ ಬರವಣಿಗೆ ಬಗ್ಗೆ ಮಾಹಿತಿ ಪಡೆಯುವುದು.
ತರಗತಿವಾರು ವಿವರ: 2 ಹಾಗೂ 3ನೇ ತರಗತಿಯ ಮಕ್ಕಳು ತಮ್ಮ ಇಷ್ಟದ ಚಿತ್ರ/ ಸನ್ನಿವೇಶವನ್ನು ಚಿತ್ರಿಸಿ, ಅವುಗಳ ಬಗ್ಗೆ 4-5 ವಾಕ್ಯಗಳನ್ನು ಬರೆಯಲು ತಿಳಿಸಿ.
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು
ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ವಿವಿಧ ರೀತಿಯ ನಡಿಗೆ (ಗುರಿ-1)
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ
ಸಾಮಗ್ರಿ: ಇಲ್ಲ
ವಿಧಾನ:
ನೆಲದ ಮೇಲೆ ವಿವಿಧ ರೀತಿಯ (ಉದಾ : ನೇರ, ವಕ್ರ, ಅಂಕುಡೊಂಕಾದ. ರೇಖೆಗಳನ್ನು ಎಳೆಯುವುದು.
ಮಕ್ಕಳಿಗೆ ರೇಖೆಯ ಮೇಲೆ ನಡೆಯಲು ಸೂಚಿಸುವುದು.
ಮಕ್ಕಳು ರೇಖೆಯ ಮೇಲೆ ನಿಧಾನವಾಗಿ ಅಥವಾ ವೇಗವಾಗಿ ಮುಂದಕ್ಕೆ ಅಥವಾ ಹಿಂದಕ್ಕೆ ನಡೆಯಲು ಸೂಚಿಸುವುದು.
ವೃತ್ತವನ್ನು ಬಿಡಿಸಿ ಮಕ್ಕಳು ವೃತ್ತದಲ್ಲಿ ಸಾಗುತ್ತ ಹಾಡು ಹಾಡಲು ಸೂಚಿಸುವುದು.
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಕಾಗೆ ಮತ್ತು ಸಿಗ್ನಲ್ ದೀಪ
ಸಾಮಗ್ರಿಗಳು : ಕಥೆಯ ಸಾಹಿತ್ಯ
ಉದ್ದೇಶಗಳು :
ಆಲಿಸುವ ಸಾಮರ್ಥ್ಯ ಬೆಳೆಸುವುದು.
ಆಲೋಚನಾ ಶಕ್ತಿಯನ್ನು ವೃದ್ಧಿಸುವುದು.
ವಿಧಾನ :
ಶಿಕ್ಷಕರು ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅರ್ಥೈಸಿಕೊಳ್ಳಬೇಕು.
ಸರಳ ಭಾಷೆಯಲಿ ಕಥೆಯನ್ನು ಹೇಳಬೇಕು.
ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.
ಸರಳ ಪ್ರಶ್ನೆಗಳು ಕೇಳಿ ಕಥೆಯನ್ನು ಆರ್ಥೈಸಬೇಕು.
:
ಒಂದು ಸಿಗ್ನಲ್ ದೀಪದ ಬಳಿ ಒಂದು ಮರವಿತ್ತು. ಆ ಮರದಲ್ಲಿ ಕಾಗೆಯೊಂದು ವಾಸವಾಗಿತ್ತು. ಅದು ಪ್ರತಿ ದಿನವೂ ಸಿಗ್ನಲ್ ದೀಪವನ್ನು ಗಮನಿಸುತ್ತಿತ್ತು. ವಾಹನಗಳು ಬರುವುದು, ನಿಲ್ಲುವುದು ಹಾಗೂ ಹೋಗುವುದನ್ನು ನೋಡುತ್ತಿತು. ಒಂದು ದಿನ ಎಲ್ಲಾ ಸ್ನೇಹಿತರನ್ನು ಕರೆಯಿತು. ಎಲ್ಲರಿಗೂ ನಾನೇ ರಾಜನೆಂದಿತು. "ರಾಜನಾಗಲು ನಿನಗೆ ಯಾವ ಆರ್ಹತೆ ಇದೆ?" ಎಂದು ಎಲ್ಲಾ ಕಾಗೆಗಳು ಪ್ರಶ್ನಿಸಿದವು. ಅದಕ್ಕೆ ಆ ಕಾಗೆಯು ತನ್ನಲ್ಲಿ ವಿಶೇಷ ಶಕ್ತಿ ಇರುವುದಾಗಿ ತಿಳಿಸಿತು. ಅದನ್ನು ತೋರಿಸುವುದಾಗಿ ಹೇಳಿ ಮಂತ್ರವನ್ನು ಪಠಿಸುವಂತೆ ನಟಿಸಿತು. ಕೆಂಪು ಸಿಗ್ನಲ್ ದೀಪ ಬರುವುದನ್ನು ಗಮನಿಸಿ "ಎಲ್ಲಾ ವಾಹನಗಳು ನಿಲ್ಲಲಿ" ಎಂದಿತು. ಕೆಂಪು ದೀಪ ಬಂದಿದ್ದರಿಂದ ಎಲ್ಲಾ ವಾಹನಳು ನಿಂತವು. ಇದನ್ನು ಗಮನಿಸಿದ ಉಳಿದ ಕಾಗೆಗಳಿಗೆ ಆಶ್ಚರ್ಯವೆನಿಸಿತು. ಹಳದಿ ಬಣ್ಣದ ದೀಪ ಬಂದ ಕೂಡಲೇ ಕಾಗೆಯು ಎಲ್ಲಾ ವಾಹನಗಳು ಹೊರಡಲು ಸಿದ್ದರಾಗಿ ಎಂದಿತು. ಎಲ್ಲಾ ವಾಹನಗಳು ಬುರ್ ಬುರ್" ಎಂದು ಹೊರಡಲು ಸಿದ್ಧವಾದವು. ಹಸಿರು ದೀಪ
ಬಂದ ಕೂಡಲೇ ಎಲ್ಲಾ ವಾಹನಗಳು ಹೊರಡಲಿ ಎಂದು ಕಾಗೆಯು ಕೂಗಿತು. ಎಲ್ಲಾ ವಾಹನಗಳು ಹೊರಟವು. ಇದನ್ನು ಕಂಡ ಇತರ ಕಾಗೆಗಳು
ಆಶ್ಚರ್ಯಗೊಂಡವು. ನಂತರ ಎಲ್ಲಾ ಕಾಗೆಗಳು ಸೇರಿ ಆ ಕಾಗೆಯನ್ನು ತಮ್ಮ ರಾಜನನ್ನಾಗಿ ಆಯ್ಕೆ ಮಾಡಿದವು.
ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
1) ಕಾಗೆಗೆ ಎಂತಹ ಆಸೆ ಮೂಡಿತು?
2) ರಾಜನಾಗಲು ನಿನಗೆ ಇರುವ ಅರ್ಹತೆ ಏನು ಎಂದು ಯಾರು ಕೇಳಿದರು?
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆಹಂಚಿಕೊಳ್ಳಲು ಪ್ರೋತ್ಸಾಹಿಸಿ,
"ಸಿಪ್ಪೆ ಸುಲಿದು ನೇರವಾಗಿ ತಿನ್ನುವ ಹಣ್ಣುಗಳ ಬಗ್ಗೆ" ಮಕ್ಕಳು ತಮ್ಮ ಮನೆಗಳಲ್ಲಿ ಮಾಹಿತಿ ಸಂಗ್ರಹಿಸಿಕೊಂಡು ಬರಲಿ.
ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment