https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1uclyBuLfmZ4eh0Yp4pmeBQqr3xbFRhnY/view?usp=drivesdk
*ವಿದ್ಯಾಪ್ರವೇಶ ದಿನ-25*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1:
ಸಾಮಗ್ರಿಗಳು: ಹಣ್ಣುಗಳ ಚಿತ್ರಗಳು/ ಆಟಿಕೆಗಳು
ವಿಧಾನ: ಮಕ್ಕಳನ್ನು ತರಗತಿಯ ಹೊರಗೆ ಒಂದು ಸಾಲಿನಲ್ಲಿ ನಿಲ್ಲಿಸಿ. (ಸುರಕ್ಷತಾ ಕ್ರಮಗಳನ್ನು ಗಮನಿಸಿ) ಹಣ್ಣುಗಳ ಚಿತ್ರಗಳನ್ನು ಒಂದೊಂದಾಗಿ ತೋರಿಸಿ. (ಶಿಕ್ಷಕರು ತರಗತಿಯ ಬಾಗಿಲಲ್ಲಿ ನಿಲ್ಲಬೇಕು.) ಚಿತ್ರ ನೋಡಿ ಆ ಹಣ್ಣಿನ ಹೆಸರು ಮತ್ತು ಬಣ್ಣವನ್ನು ಹೇಳುತ್ತಾ ತರಗತಿ ಪ್ರವೇಶಿಸಲು ಸೂಚಿಸಿ.
ಉದಾಹರಣೆಗೆ: ನಾನು ನಾನು ಸೇಬಿನ ಹಣ್ಣು ಕೆಂಪಾದ ಸೇಬಿನ ಹಣ್ಣು
ತರಗತಿ ಪ್ರವೇಶಿಸಿದ ನಂತರ ವೃತ್ತಾಕಾರವಾಗಿ ನಿಲ್ಲುವಂತೆ ಸೂಚಿಸಿ,ಮಕ್ಕಳು ತರಗತಿಯನ್ನು ಪ್ರವೇಶಿಸುವಾಗ ಶಿಕ್ಷಕರು ಮಕ್ಕಳಿಗೆ * ನಮಸ್ತೆ, ಗುಡ್ ಮಾರ್ನಿಂಗ್” ಎಂದು ಗ್ರೀಟ್ ಮಾಡುವುದು.
ಮಕ್ಕಳನ್ನು ಕೇಳಿ, “ಇಂದು ಯಾವ ದಿನ?” ಮತ್ತು “ಇಂದು......... "ಪ್ರತಿಕ್ರಿಯಿಸುವಂತೆ ಮಾಡಿ.
( ಚಟುವಟಿಕೆ 2
ಹವಾಮಾನ ನಕ್ಷೆಯ ಚಟುವಟಿಕೆ ಮಾಡಿಸುವುದು.)
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ : Story Talk
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಮೌಖಿಕ ಭಾಷೆ ಅಭಿವೃದ್ಧಿ, ಪದ ಸಂಪತ್ತು ಬೆಳವಣಿಗೆ,
ಸಾಮಗ್ರಿ : ದೈನಂದಿನ ದಿನಚರಿಗಳ ಚಿತ್ರ ಕಾರ್ಡ್‌ಗಳು
ವಿಧಾನ: ಚಿತ್ರ ಕಾರ್ಡ್‌ಗಳನ್ನು ಒಂದರ ನಂತರ ಒಂದರಂತೆ ಹಿಡಿದುಕೊಳ್ಳಿ ಮತ್ತು ಎಂದು ಹೇಳುವ ಮೂಲಕ ಮಕ್ಕಳನ್ನು
* ರೀನಾಳ ದೈನಂದಿನ ದಿನಚರಿಯ ಕುರಿತು ಕಥೆಯನ್ನು ಹೇಳಿ
ಉದಾಹರಣೆಗೆ: ರೀನಾ ಬೆಳಿಗ್ಗೆ ಬೇಗ ಎದ್ದು ಹಲ್ಲುಜ್ಜುತ್ತಾಳೆ ನಂತರ ಸ್ನಾನ ಮಾಡುತ್ತಾಳೆ.......
ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ.ಮಕ್ಕಳನ್ನು ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳುವಂತೆ ಸರಳವಾದ ಪ್ರಶ್ನೆಗಳನ್ನು ಕೇಳಿ,
*ಬೆಳಿಗ್ಗೆ ಎದ್ದಾಗ ನೀವು ಮೊದಲು ಏನು ಮಾಡುತ್ತೀರಿ?
*ನಿಮ್ಮ ಮುಂದಿನ ಚಟುವಟಿಕೆ ಯಾವುದು? ಇತ್ಯಾದಿ.
ಮಕ್ಕಳು ತಮ್ಮ ದೈನಂದಿನ ದಿನಚರಿಗಳನ್ನು ಮೌಖಿಕವಾಗಿ ಪಟ್ಟಿ ಮಾಡಲು ಸಹಾಯ ಮಾಡಿ,
ನಮ್ಮ ದಿನಚರಿಯು ನಮ್ಮನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡಲು ಬಹಳ ಮುಖ್ಯ ಎಂದು ವಿವರಿಸಿ.
ಎಲ್ಲಾ ಮಕ್ಕಳು ಗುಂಪು ಚರ್ಚೆಯಲ್ಲಿ ಭಾಗವಹಿಸುವುದನ್ನು ಶಿಕ್ಷಕರು ಖಚಿತಪಡಿಸಿಕೊಳ್ಳಬೇಕು.
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಸಮಸ್ಯಾ ಪರಿಹಾರ, ತಾರ್ಕಿಕತೆ,
ಚಟುವಟಿಕೆ : ಯೋಚನಾ ಪೆಟ್ಟಿಗೆ”
(ಗುರಿ -3)ಉದ್ದೇಶ:- ಅನುಕ್ರಮವಾಗಿ ಜೋಡಿಸುವುದು.
ಸಾಮಗ್ರಿಗಳು: ಆಮೆ ಮತ್ತು ನರಿಯ ಚಿತ್ರ ಕಾರ್ಡುಗಳು
ವಿಧಾನ: ನರಿ ಮತ್ತು ಆಮೆಯ ಕಥೆ,
ಒಂದು ಮುಂಜಾನೆ, ನರಿಯು ತುಂಬಾ ಹಸಿದಿತ್ತು. ಅದು ಕಾಡಿನಲ್ಲಿ ಆಹಾರವನ್ನು ಹುಡುಕಲು ಪ್ರಾರಂಭಿಸಿತು.ಇದ್ದಕ್ಕಿದ್ದಂತೆ, ನರಿ ಆಮೆ ತಿರುಗಾಡುವುದನ್ನು ನೋಡಿತು. ನರಿಯು ಆಮೆಯನ್ನು ತಿನ್ನಲು ಯೋಚಿಸಿತು.
ನರಿ ಓಡಿ ಬ೦ದು ಆಮೆಯನ್ನು ಹಿಡಿದುಕೊಂಡಿತು. ಆಮೆಯನ್ನು ತಿನ್ನಲು, ನರಿಯು ಆಮೆಯಗಟ್ಟಿಯಾದ ಚಿಪ್ಪನ್ನು ಮುರಿಯಲು ತನ್ನ ಕೈಲಾದಷ್ಟು ಪ್ರಯತ್ನಿಸಿತು ಆದರೆ ಸಾಧ್ಯವಾಗಲಿಲ್ಲ.
ಆಮೆ ಬಹಳ ಬುದ್ಧಿವಂತವಾಗಿತ್ತು. ಅದು ನರಿಗೆ ಹೇಳಿತು “ಪ್ರಿಯ ನರಿಯೇ! ನೀನು ನನ್ನನ್ನುತಿನ್ನಲು ಬಯಸುತ್ತೀಯಾ?ನೀನು ನನ್ನನ್ನು ತಿನ್ನುವುದಾದರೆ ಮೊದಲು ನನ್ನನ್ನು ಕೊಳದಲ್ಲಿ ಇರಿಸಬೇಕು ಇದರಿಂದ ನನ್ನ ಚಿಪ್ಪು ಮೃದುವಾಗುತ್ತದೆ ಆಗ ನೀನು ಅದನ್ನು ಸುಲಭವಾಗಿ ಒಡೆದು ತಿನ್ನಬಹುದು".
ಮೂರ್ಖ ನರಿಯು ಆಮೆಯನ್ನು ಹತ್ತಿರದ ಕೊಳದಲ್ಲಿ ಮುಳುಗಿಸಿತು. ಆಮೆಯನ್ನು ಕೊಳದಲ್ಲಿ ಹಾಕಿದ ತಕ್ಷಣ, ಆಮೆ ವೇಗವಾಗಿ ಈಜಿ ತಪ್ಪಿಸಿಕೊಂಡು ನರಿಯನ್ನು ನೋಡಿ ನಕ್ಕಿತು.
ಈಗ, ಪ್ರಶ್ನೆಗಳನ್ನು ಕೇಳಿ ಮತ್ತು ಆಮೆ ಹೇಗೆ ತಪ್ಪಿಸಿಕೊಂಡಿದೆ ಎಂಬುದರ ಕುರಿತು ಕಥೆಯನ್ನು ವಿವರಿಸಿದ ನಂತರ ಚರ್ಚಿಸಿ, ಮಕ್ಕಳು ಸಮಸ್ಯೆಯನ್ನು ಪರಿಹರಿಸುವ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಳ್ಳಲಿ.
ಚಟುವಟಿಕೆ : “ಕ್ರಮವಾಗಿ ಜೋಡಿಸು”
ಮಕ್ಕಳಿಗೆ ಚಿತ್ರಕಥೆ ಕಾರ್ಡುಗಳನ್ನು ಅನುಕ್ರಮವಾಗಿ ಜೋಡಿಸಲು ತಿಳಿಸಿ ವಿವರಿಸಲು ಹೇಳುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.
ಚಟುವಟಿಕೆ: ಕ್ಷೇ ಮಣ್ಣು ಮತ್ತು ಕಲಸಿದ ಹಿಟ್ಟಿನಿಂದ ಅಚ್ಚು ತೆಗೆಯುವುದು, ಗುರಿ-I
ಉದ್ದೇಶಗಳು:
-ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುವುದು,
-ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
-ತಮ್ಮ ಕಲ್ಪನೆಯ ಆಕೃತಿ ಮೂಡಿಸುವುದರ ಜೊತೆಗೆ ಸೃಜನಶೀಲತೆಯನ್ನು ಅಭಿವ್ಯಕ್ತಗೊಳಿಸಲು ಸಹಕಾರಿ ಯಾಗುವುದು.
ಸಾಮಗ್ರಿಗಳು : ಕ್ಲೇ ಅಥವಾ ಕಲಸಿದ ಹಿಟ್ಟು,
ವಿಧಾನ : ಮಕ್ಕಳಿಗೆ ಕ್ಲೇ / ಮಣ್ಣು ಅಥವಾ ಕಲಸಿದ ಹಿಟ್ಟನ್ನು ನೀಡಿ ಅದರೊಂದಿಗೆ ತಮ್ಮ ಆಯ್ಕೆಯ ಮಾದರಿಗಳನ್ನು ಮಾಡಲು ಹೇಳುವುದು, ಹಬ್ಬಗಳಲ್ಲಿ ಉಪಯೋಗಿಸುವ ವಸ್ತುಗಳಾದ ಹಣತೆ ಮುಂತಾದವುಗಳನ್ನು ಮಾಡಲು ಹೇಳುವುದು, ನಂತರ ಅವುಗಳಿಗೆ ಬಣ್ಣ ಹಚ್ಚಲು ಹೇಳುವುದು. ಮಕ್ಕಳು ಕ್ಲೇ ಅಥವಾ ಹಿಟ್ಟಿನಲ್ಲಿ ಮಾದರಿಗಳನ್ನು ತಯಾರಿಸುವಾಗ ಸುಗಮಕಾರರು ಗಮನಿಸುತ್ತಿರಬೇಕು.
ಚಟುವಟಿಕೆ ಮುಗಿದ ಮೇಲೆ ಮಕ್ಕಳು ತಯಾರಿಸಿದ ಮಾದರಿಯನ್ನು ವಿವರಿಸಲು ಹೇಳುವುದು. ಸುಗಮಕಾರರು ಮಕ್ಕಳಿಗೆ ವಿವಿಧ ಮಾದರಿಗಳನ್ನು ತಯಾರಿಸಲು ಸಣ್ಣ ಮೊಂಡಾದ ಪ್ಲಾಸ್ಟಿಕ್ ಚಾಕು, ಅಚ್ಚುಗಳನ್ನು ನೀಡಬಹುದು. ಮರದ ಚಿಕ್ಕ ಲಟ್ಟಣಿಗೆ, ಹೂ, ಗಿಡದ ಚಿಗುರು, ಬಣ್ಣ ಇತ್ಯಾದಿ, ಚಟುವಟಿಕೆಯಲ್ಲಿ ವಿವಿಧತೆಯನ್ನು ತರಲು ಕಡ್ಡಿಗಳು, ಸ್ಟಾ, ಕಲ್ಲುಗಳು, ಕಪ್ಪೆ ಚಿಪ್ಪು ಮುಂತಾದವುಗಳನ್ನು ಕೊಡಬಹುದು.
ಚಟುವಟಿಕೆಯ ನಂತರ ಮಕ್ಕಳ ಕೈಗಳನ್ನು ತೊಳೆಸುವುದು. ಸುಗಮಕಾರರು ಮಕ್ಕಳು ಚಟುವಟಿಕೆಯಲ್ಲಿ ತೊಡಗಿರುವಾಗ ಅವರ ಕಾರ್ಯ ವಿಧಾನ ಹಾಗೂ ಅವರು ಕೈಗೊಳ್ಳುವ ಸ್ವಚ್ಛತಾ ಕ್ರಮಗಳನ್ನು ಗಮನಿಸುವುದು.
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ ಸೂಚನೆಗಳ ಪಾಲನೆ.
ಚಟುವಟಿಕೆ : ವಸ್ತುವನ್ನು ಊಹಿಸು (ಗುರಿ-2)
ಉದ್ದೇಶಗಳು:
* ಸೂಕ್ತ ಪದ ರಚಿಸುವುದು.
* ಸಾಂಘಿಕ ಮನೋಭಾವನೆ ಬೆಳೆಸುವುದು.
*ಸೂಚನೆಗಳನ್ನು ಎಚ್ಚರಿಕೆಯಿಂದ ಆಲಿಸಿ ಅನುಸರಿಸುವುದು.
* ಪದ ಸಂಪತ್ತನ್ನು ಅಭಿವೃದ್ಧಿ ಪಡಿಸುವುದು.
ಅಗತ್ಯ ಸಾಮಗ್ರಿಗಳು : ಬ್ಯಾಗ್, ಲಭ್ಯ ವಸ್ತುಗಳು
ವಿಧಾನ : ತರಗತಿಯಲ್ಲಿರುವ ಸೀಮೆ ಸುಣ್ಣ, ರಬ್ಬರ್, ಡಸ್ಟರ್, ಡೈಸ್ ಮೊದಲಾದ ವಸ್ತುಗಳನ್ನು ಒಂದು ಚೀಲದಲ್ಲಿ ಹಾಕಿ.ಮಕ್ಕಳನ್ನು ಒಬ್ಬೊಬ್ಬಗಿ ಕರೆದು ಬ್ಯಾಗ್‌ನಲ್ಲಿರುವ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಸ್ಪರ್ಶಿಸಿ,ಆ ವಸ್ತುಗಳನ್ನು ಊಹಿಸಲು ಹೇಳುವುದು.
ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳು ವಸ್ತುವನ್ನು ಸರಿಯಾಗಿ ಗುರುತಿಸಲು ಸಹಾಯ ಮಾಡುವುದು.
ಉದಾಹರಣೆಗಾಗಿ:
-ನೀನು ಸ್ಪರ್ಶಿಸುತ್ತಿರುವ ವಸ್ತು ದೊಡ್ಡದೋ ಚಿಕ್ಕದೋ?
-ನೀನು ಸ್ಪರ್ಶಿಸುತ್ತಿರುವ ವಸ್ತುವಿನ ಆಕಾರ ಹೇಗಿದೆ?
-ಯಾವುದರಿಂದ ಆ ವಸ್ತು ಮಾಡಲ್ಪಟ್ಟಿದೆ?
-ನೀನು ಸ್ಪರ್ಶಿಸುತ್ತಿರುವ ವಸ್ತು ಗಟ್ಟಿಯಾಗಿದೆಯೇ? ಮೃದುವಾಗಿದೆಯೇ?
-ನೀನು ಸ್ಪರ್ಶಿಸುತ್ತಿರುವ ವಸ್ತು ಏನಿರಬಹುದು?
ಮಕ್ಕಳು ಗುರುತಿಸಿದ ವಸ್ತುಗಳ ಕುರಿತು ಅವರೊಂದಿಗೆ ಚರ್ಚಿಸುವುದು,
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ. ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಚಟುವಟಿಕೆ : ಚಿತ್ರ ಸಂಪುಟ (ಗುರಿ-2) ವಿಷಯ: ಪ್ರಾಣಿಸಂಗ್ರಹಾಲಯದಲ್ಲಿ ಮಾತ್ರ ನೋಡಬಹುದಾದ ವಸ್ತುಗಳು.
ಉದ್ದೇಶಗಳು:
ಚಿತ್ರದಲ್ಲಿನ ವಸ್ತು ವ್ಯಕ್ತಿ/ ಘಟನೆಗಳನ್ನು ಹೆಸರಿಸುವುದು ಊಹಿಸಿ ಅರ್ಥೈಸಿಕೊಳ್ಳಲು ಚಿತ್ರದೊಂದಿಗೆ ಪಠ್ಯವನ್ನು ಸಂಬಂಧಿಕರಿಸುವುದು.
ಮಕ್ಕಳು ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥಮಾಡಿಕೊಳ್ಳುವುದು ಮತ್ತು ವೈಯಕ್ತಿಕ ಚಿತ್ರ ಸಂಪುಟಗಳನ್ನು ರಚಿಸಿ ವೈಯಕ್ತಿಕವಾಗಿ ಮತ್ತು ಗುಂಪುಗಳಲ್ಲಿ ಮಂಡಿಸುವುದು ಮತ್ತು ಗುಂಪಿನಲ್ಲಿ ಕುಳಿತು ಗೋಡೆ ಪತ್ರಿಕೆಗಳನ್ನು ರಚಿಸುವುದು.
ಅಗತ್ಯ ಸಾಮಗ್ರಿಗಳು : ಮಕ್ಕಳು ರಚಿಸಿದ ಚಿತ್ರಗಳು
ವಿಧಾನ: ಪ್ರಾಣಿ ಸಂಗ್ರಹಾಲಯದಲ್ಲಿ ಮಾತ್ರ ನೋಡಬಹುದಾದ ವಸ್ತುಗಳು ಸಂಬಂಧಿಸಿದಂತೆ ಮಕ್ಕಳು ಬರೆದ ಚಿತ್ರಗಳನ್ನು ಕೃತಿಸಂಪುಟದಿಂದ ತೆಗೆದು ಅದರ ಬಗ್ಗೆ ಸಹಜವಾಗಿ ಮಾತನಾಡಲು ಪ್ರೋತ್ಸಾಹಿಸುವುದು.
ಮಕ್ಕಳೊಂದಿಗೆ ಪರಸ್ಪರ ಸಹಾಯ ಒದಗಿಸಲು ಸೂಚಿಸುವುದು ಮತ್ತು ವಿಷಯದ ವಿಸ್ತಾರವನ್ನು ಚರ್ಚಿಸುವಾಗ ಎಲ್ಲಾ ಮಕ್ಕಳೂ ಅಭಿವ್ಯಕ್ತಿಸುವುದನ್ನು ಖಾತ್ರಿಪಡಿಕೊಳ್ಳುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲಚಿಂತನೆ,
ಪದಸಂಪತ್ತಿನ ಅಭಿವೃದ್ಧಿ,
ಚಟುವಟಿಕೆ ಸಂಖ್ಯೆ : ಹಂಚಿತ ಬರಹ (ಗುರಿ : 2) ECW-8
ಉದ್ದೇಶಗಳು:
* ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.
* ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.
* ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.
* ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು.
* ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್
ವಿಧಾನ: ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು. ಒಂದು ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.
ಸಲಹಾತ್ಮಕ ಸೂಚಿತ ವಿಷಯ:- ನಮ್ಮ ಊರು
ಗಮನಿಸಬೇಕಾದ ಅಂಶಗಳು:
ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. ಮಕ್ಕಳೊಂದಿಗೆ ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು
ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ ಬರೆಯಲು ತಿಳಿಸುವುದು. ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು. ಅಂತಹ ಸನ್ನಿವೇಶದಲ್ಲಿ ಶಿಕ್ಷಕರು ಅದನ್ನು ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.
*ಬರವಣಿಗೆಯ ಮಾದರಿ*
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.ಮಕ್ಕಳ ಹೆಸರು. ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ಜಿಗಿಯುವುದು, ಕುಪ್ಪಳಿಸುವುದು, ತಿರುಗುವುದು
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು, ದೇಹದ ಸಮತೋಲನ, ಕಾಲುಗಳ ಹೊಂದಾಣಿಕೆ
ವಿಧಾನ:
@ ನೆಲದ ಮೇಲೆ ವೃತ್ತವನ್ನು ಬಿಡಿಸುವುದು .ಶಿಕ್ಷಕರು ವೃತ್ತದ ಒಳಗೆ ಹಾಗು ಹೊರಗೆ ಜಿಗಿಯುವುದನ್ನು ಪ್ರದರ್ಶಿಸುವುದು.
@ ಮಕ್ಕಳಿಗೆ ವೃತ್ತದ ಒಳಗೆ ಹಾಗೆ ಹೊರಗೆ ಜಿಗಿಯಲು ಸೂಚಿಸುವುದು.
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ನೀಲಿ ಬಣ್ಣದ ನರಿ
ಸಾಮಗ್ರಿಗಳು : ಸಂಭಾಷಣೆಯ ಹಾಳೆಗಳು,
ಉದ್ದೇಶಗಳು :
«« ಸೃಜನಶೀಲತೆಯನ್ನು ಅಭಿವೃದ್ಧಿ ಪಡಿಸುವುದು.
«ಹಾಗಾದರೆ, ಹಾಗಾಗದಿದ್ದರೆ ಇತ್ಯಾದಿ ಸಂದರ್ಭಗಳಿಗೆ ಹೋಲಿಸುವ ಕೌಶಲ ಬೆಳೆಸುವುದು.
«ಮೌಲ್ಯಗಳನ್ನು ರೂಢಿಸುವುದು.
«ಪದ ಸಂಪತ್ತನ್ನು ಹೆಚ್ಚಿಸುವುದು.
«ಊಹಿಸುವ ಕೌಶಲವನ್ನು ಹೆಚ್ಚಿಸುವುದು.
ವಿಧಾನ : ಪಾತ್ರಾಭಿನಯ
* ಕಥೆಯನ್ನು ಪುನರಾವಲೋಕನ ಮಾಡಿಕೊಳ್ಳುವುದು.
* ಮಕ್ಕಳು ಸಂಭಾಷಣೆಯನ್ನು ಸ್ಪಷ್ಟವಾಗಿ ಹೇಳದಿದ್ದರೂ ಸಕಾರಾತ್ಮಕವಾಗಿ ಸ್ವೀಕರಿಸಿ ಆ ನಂತರ ಸರಿಪಡಿಸಿ ಕಥೆಯನ್ನು ಮುಂದುವರೆಸಲು ಹೇಳುವುದು,
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ.
* ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆ ಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
* ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,ಬೀಳ್ಕೊಡಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment