Thursday, 27 June 2024

ವಿದ್ಯಾ ಪ್ರವೇಶ ದಿನ 23

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1qzpA50oNb0TcPIxBVFaokl6mvT_exHo-/view?usp=drivesdk

*ವಿದ್ಯಾಪ್ರವೇಶ ದಿನ-23* 



✒️🚁🎮🎨🎲🧮📏🔍



*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1:


ಸಾಮಗ್ರಿಗಳು: ಪಕ್ಷಿಗಳ ಚಿತ್ರಗಳು/ ಆಟಿಕೆಗಳು


ವಿಧಾನ: ದಿನ-27 ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ಚಟುವಟಿಕೆ 1 ನ್ನು ಪುನರಾವರ್ತಿಸಿ.


ಚಟುವಟಿಕೆ 2: TPR


  ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ, ಸೂಚನೆಗಳನ್ನು ಅನುಸರಿಸಲು ತಿಳಿಸಿ,ಸರಳ TPR ಸೂಚನೆಗಳನ್ನು ಕೊಡಿ.


ಉದಾ :


 ಕುದುರೆಯಂತೆ ಓಡು (Run like a horse)


ನವಿಲಿನ ಹಾಗೆ ಕುಣಿ (Dance like a peacock)


ಜಿಂಕೆ ಯಂತೆ ನೆಗೆ (Sprint like a deer)


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ: Hygiene Charades


ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಮೌಖಿಕ ಭಾಷೆ ಅಭಿವೃದ್ಧಿ, ಪದ ಸಂಪತ್ತು ಬೆಳವಣಿಗೆ


ಸಾಮಗ್ರಿ : ದೈನಂದಿನ ದಿನಚರಿಗಳ ಚಿತ್ರ ಕಾರ್ಡ್‌ಗಳು


ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ,


ಹಲ್ಲುಜ್ಜುವುದು, ಕೈ ತೊಳೆಯುವುದು ಇತ್ಯಾದಿ ಆರೋಗ್ಯಕರ ಅಭ್ಯಾಸಗಳ ಚಿತ್ರ ಕಾರ್ಡ್‌ಗಳನ್ನು ಹರಡಿ.


ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಆಹ್ವಾನಿಸಿ ಮತ್ತು ಚಿತ್ರ ಕಾರ್ಡ್‌ಗಳಲ್ಲಿ ಒಂದನ್ನು ತೆಗೆದುಕೊಳ್ಳಲು ಹೇಳಿ.


ಯಾವುದೇ ಪದವನ್ನು ಬಳಸದೆ ಕಾರ್ಡುಗಳಲ್ಲಿರುವ ನೈರ್ಮಲ್ಯ ಅಭ್ಯಾಸವನ್ನು ಅಭಿನಯಿಸಲು ಹೇಳಿ.


ಯಾವ ಕ್ರಿಯೆಯನ್ನು ಅಭಿನಯಿಸಲಾಗುತ್ತಿದೆ ಎಂಬುದನ್ನು ಇತರ ಮಕ್ಕಳು ಊಹಿಸಬೇಕು.


ನಂತರ ಅಭಿನಯಿಸಿದ ಮಗು ಆ ನಿರ್ದಿಷ್ಟ ನೈರ್ಮಲ್ಯ ಅಭ್ಯಾಸದ ಬಗ್ಗೆ ಮಾತನಾಡಬೇಕು.


ಉದಾಹರಣೆಗೆ: ಹಲ್ಲುಜ್ಜುವುದು ಹೇಗೆ? ಕೈ ತೊಳೆಯುವುದು ಹೇಗೆ? ಇತ್ಯಾದಿ


*ಎಲ್ಲಾ ಮಕ್ಕಳಿಗೆ ಮಾತನಾಡಲು ಅವಕಾಶ ನೀಡಿ ಮತ್ತು ಸುಳಿವುಗಳನ್ನು ನೀಡುವ ಮೂಲಕ ಉತ್ತರವನ್ನು ಪಡೆದುಕೊಳ್ಳಿ

ಅವಧಿ-2 (40ನಿ)

*ನನ್ನ ಸಮಯ* 


ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು   ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ಹಣ್ಣುಗಳ ಬಗ್ಗೆ ಅರಿವು ಬೆಳೆಸಿಕೊಳ್ಳುವುದು, ಆರೋಗ್ಯಕರ ಆಹಾರ ಅಭ್ಯಾಸ


ಚಟುವಟಿಕೆ : ಹಣ್ಣುಗಳ ಬಗ್ಗೆ ತಿಳಿಯೋಣ. (ಗುರಿ-3)


ಉದ್ದೇಶ:- ಆರೋಗ್ಯಕರ ಆಹಾರ ಅಭ್ಯಾಸದಲ್ಲಿ ಹಣ್ಣುಗಳ ಮಹತ್ವವನ್ನು ತಿಳಿಯುವುದು.


ಅಗತ್ಯ ಸಾಮಗ್ರಿಗಳು : ವಿವಿಧ ಬಣ್ಣಗಳ ಹಾಳೆಗಳು, ಕತ್ತರಿ


ವಿಧಾನ : ಹಣ್ಣುಗಳ ಬಗ್ಗೆ ಕೆಲವು ಪ್ರಶ್ನೆ ಕೇಳುವುದರ ಮೂಲಕ ತರಗತಿಯನ್ನು ಪ್ರಾರಂಭಿಸುವುದು.


ಉದಾ: » ನೀವು ತಿನ್ನುವ ಹಣ್ಣುಗಳ ಹೆಸರು ಹೇಳಿ.


            » ನಿಮ್ಮ ಇಷ್ಟದ ಹಣ್ಣು ಯಾವುದು?


  ಮಕ್ಕಳು ತಮಗೆ ಇಷ್ಟವಾದ ಚಿತ್ರ ಬಿಡಿಸಿ ಬಣ್ಣ ತುಂಬುವುದು. ಕತ್ತರಿಯ ಸಹಾಯದಿಂದ ಹಣ್ಣಿನ ಚಿತ್ರವನ್ನು ಕತ್ತರಿಸಿ ಕಟೌಟ್ ಸಿದ್ಧಪಡಿಸುವುದು. ಮಕ್ಕಳ ತಲೆಯ ಸುತ್ತ ಹಾಳೆಯ ಪಟ್ಟಿ ಧರಿಸುವುದು. ಕತ್ತರಿಸಿದ ಹಣ್ಣಿನ ಚಿತ್ರವನ್ನು ತಲೆಯ ಸುತ್ತ ಧರಿಸಿದ ಹಾಳೆಗೆ ಅಂಟಿಸಿ ಕಿರೀಟವಾಗಿ ಬಳಸುವುದು. ಹಣ್ಣುಗಳನ್ನು ಮತ್ತು ಹಸಿರು ತರಕಾರಿಗಳನ್ನು ಹೆಚ್ಚು ಸೇವಿಸಲು ಮಕ್ಕಳನ್ನು ಪ್ರೋತ್ಸಾಹಿಸುವುದು.



ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸ್ಥೂಲ ಚಲನಾ ಕೌಶಲಗಳ ಅಭಿವೃದ್ಧಿ,


ಚಟುವಟಿಕೆ : ನೃತ್ಯ (ಗುರಿ - 1)


ಸಾಮಗ್ರಿಗಳು : ಸಂಗೀತ/ ಸಂಗೀತ ವಾದ್ಯಗಳು.


ಉದೇಶಗಳು:


*ಸ್ಥೂಲ ಮತ್ತು ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುವುದು.


*ಸಂಗೀತ ವಾದ್ಯಗಳ ಪರಿಚಯವಾಗುವುದು.


*ಸೌಂದರ್ಯೋಪಾಸನೆ ವಿಕಾಸವಾಗುವುದರ ಜೊತೆಗೆ ಏಕಾಗ್ರತೆ ಬೆಳವಣಿಗೆಯಾಗುವುದು.


ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು. ಸಂಗೀತಕ್ಕೆ ತಕ್ಕ ಹಾಗೆ ನೃತ್ಯ ಮಾಡಲು ತಿಳಿಸುವುದು.


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.


ಚಟುವಟಿಕೆ: ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) (22 ನೇ ದಿನದಿಂದ ಮುಂದುವರೆದಿದೆ.)


ಉದ್ದೇಶಗಳು:-


*ಧ್ವನಿ ಸಂಕೇತಗಳ ಅರಿವು ಮೂಡಿಸುವುದು.  

*ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು.


*ಪದಗಳನ್ನು ಗ್ರಹಿಸಿ ಗುರುತಿಸುವುದು,


*ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.


ಅಗತ್ಯ ಸಾಮಗ್ರಿಗಳು- ಇಲ್ಲ


ಸಲಹಾತ್ಮಕ ವಿಷಯ : ತರಕಾರಿಗಳು


ವಿಧಾನ:- ಸುಳಿವುಗಳ ಮೂಲಕ ತರಕಾರಿಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ.


ಉದಾಹರಣೆಗಾಗಿ:- ಶಿಕ್ಷಕರು ನನ್ನ ಮನಸ್ಸಿನಲ್ಲಿರುವ ತರಕಾರಿ ನೇರಳೆ ಬಣ್ಣವನ್ನು ಹೊಂದಿದ್ದು, ಅದರ ಹೆಸರು "ಬ"ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ಬದನೆ ಎಂದು ಗುರುತಿಸುವುದು.


 ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.


ಅ.ಹಾ: EC-11 ಚಿತ್ರ ನೋಡು ಹೆಸರು ಹೇಳು


*ಅರ್ಥಗ್ರಹಿಕೆಯೊಂದಿಗಿನ ಓದು*

 

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಅವಧಾನ ಮತ್ತು ಆಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ,


ಚಟುವಟಿಕೆ : ಪದ ಹುಡುಕು (ಗುರಿ-2)


ಉದ್ದೇಶ : ಕಥೆಗಳಲ್ಲಿಯ ಪದಗಳನ್ನು ಅದರಲ್ಲಿಯ ಧ್ವನಿಗಳನ್ನು ಗುರುತಿಸುವರು.


ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ಕಪ್ಪು ಹಲಗೆ,


ವಿಧಾನ: ಶಿಕ್ಷಕರು ಯಾವುದಾದರೂ ಒಂದು ಕಥೆಯನ್ನು ಹೇಳುವುದು. ಅದರಲ್ಲಿ ಬರುವ ಪ್ರಮುಖ ಪದಗಳನ್ನು ಕಪ್ಪು ಹಲಗೆಯ ಮೇಲೆ/ಮಿಂಚು ಪಟ್ಟಿಯ ಮೇಲೆ ಬರೆದು, ಪ್ರದರ್ಶಿಸಿ ಒಂದು ವಾರದವರೆಗೆ ಮಗು ಅವುಗಳನ್ನು ನೋಡಲು ಅವಕಾಶ ಕಲ್ಪಿಸುವುದು. ಆ ಕಥೆ ಹೇಳುವಾಗ ಅಥವಾ ಬೇರೆ ಕಥೆ ಹೇಳುವಾಗ ಆ ಪದಗಳು ಬಂದಾಗಲೆಲ್ಲಾ ಪದ/ ಧ್ವನಿಗಳನ್ನು ಗುರುತಿಸಿ ತೋರಿಸುವುದು.


*ಉದ್ದೇಶಿತ ಬರಹ*  


ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ, ಚಟುವಟಿಕೆ: ಹವಾಮಾನ ನಕ್ಷೆ (ಗುರಿ-2) ECW-16 (33ನೇ ದಿನದಿಂದ ಮುಂದುವರೆದಿದೆ)


ಉದ್ದೇಶಗಳು: ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.


•ವೀಕ್ಷಣಾ ಕೌಶಲವನ್ನು ಬೆಳೆಸುವುದು,


•ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.


•ಪರಿಸರ ಪ್ರಜ್ಞೆ ಮೂಡಿಸುವುದು.


ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್


ವಿಧಾನ :


ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.


ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುವುದು,


ಹವಾಮಾನದ ಅಂಶಗಳಾದ ಮೋಡ, ಮಳೆ, ಬಿಸಿಲು, ಚಳಿ, ಬಿರುಗಾಳಿ ಇತ್ಯಾದಿ ಅಂಶಗಳನ್ನು ತರಗತಿಯ ಹವಾಮಾನ ನಕ್ಷೆಯ ಸಹಾಯದಿಂದ ಪರಿಚಯಿಸುವುದು.


* ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಿ ಗುರುತಿಸಲು ತಿಳಿಸುವುದು, 


(46 ನೇ ದಿನಕ್ಕೆ ಮುಂದುವರೆದಿದೆ)


                 *ಬರವಣಿಗೆಯ ಮಾದರಿ*


    ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.ಮಕ್ಕಳ ಹೆಸರು. ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ:- ಜಿಗಿಯುವುದು, ಕುಪ್ಪಳಿಸುವುದು, ತಿರುಗುವುದು


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ವಿನ್ಯಾಸದ ಅರಿವು, ದೇಹದ ಸಮತೋಲನ, ಕಾಲುಗಳಹೊಂದಾಣಿಕೆ


ಸಾಮಗ್ರಿ: ಇಲ್ಲ


ವಿಧಾನ:


ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸುವುದು,


ಶಿಕ್ಷಕರು ಒಂದು ವಿನ್ಯಾಸವನ್ನು ಮಕ್ಕಳಿಗೆ ಪ್ರದರ್ಶಿಸುವುದು. ಉದಾ: ಸ್ಕಿಪ್ ..ಟರ್ನ್,


ಈ ವಿನ್ಯಾಸವನ್ನು ಹೇಳುತ್ತಾ ಆಟವನ್ನು ಪ್ರಾರಂಭಿಸುವುದು 


ಅವಧಿ - 7(40ನಿ)

*ಕಥಾ ಸಮಯ*


ಶೀರ್ಷಿಕೆ : ನೀಲಿ ಬಣ್ಣದ ನರಿ


ಸಾಮಗ್ರಿಗಳು : ಮುಖವಾಡಗಳು


ಉದ್ದೇಶಗಳು :


ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು.


ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.


ಸೃಜನಶೀಲತೆಯನ್ನು ಅಭಿವೃದ್ಧಿ ಪಡಿಸುವುದು.


 ಹಾಗಾದರೆ, ಹಾಗಾಗದಿದ್ದರೆ ಇತ್ಯಾದಿ ಸಂದರ್ಭಗಳಿಗೆ ಹೋಲಿಸುವ ಕೌಶಲ ಬೆಳೆಸುವುದು.


ಮೌಲ್ಯಗಳನ್ನು ರೂಢಿಸುವುದು,


ವಿಧಾನ : ಮುಖವಾಡಗಳನ್ನು ಧರಿಸಿ ಅಭಿನಯ


    ಕಥೆಗೆ ಸಂಬಂಧಿಸಿದ ಮುಖವಾಡಗಳನ್ನು ಬಳಸಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು.  ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಪ್ರೇರೇಪಿಸಿ.


ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ,


>>ನೀಲಿ ಬಣ್ಣದ ನರಿಯನ್ನು ಮೊದಲೇ ಇತರ ಪ್ರಾಣಿಗಳು ಗುರುತಿಸಿದ್ದರೆ ಏನಾಗುತ್ತಿತ್ತು?


>>ನರಿಯ ಬಣ್ಣ ಹಾಳಾಗದಿದ್ದರೆ ಏನಾಗುತ್ತಿತ್ತು?


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)



ಅವಧಿ -8(20ನಿ)

*ಮತ್ತೆ ಸಿಗೋಣ*


 ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ.


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆ ಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


 ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,ಬೀಳ್ಕೊಡಿ.



[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment