https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1aSBcYlXNmZJS6zqEU_Lv0tw8NlhqbSdy/view?usp=drivesdk
*ವಿದ್ಯಾಪ್ರವೇಶ ದಿನ-9*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ 1. ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು "Good morning, welcome wonderful Wednesday” 20 you. Same to you" . "Have a , "Good morning, Thank
ಚಟುವಟಿಕೆ 2
ಚಟುವಟಿಕೆ : ಕದಮ್ ತಾಲ್
ಸಾಮಗ್ರಿಗಳು: ಡ್ರಮ್/ತಂಬೂರಿ
1. ಮೂರು ಬಾರಿ ಚಪ್ಪಾಳೆ ತಟ್ಟುವ ಮೂಲಕ ತರಗತಿ
ಪ್ರವೇಶಿಸಲು ಮಕ್ಕಳಿಗೆ ಹೇಳಿ- ಮತ್ತು 'ಹಾಯ್ ಟೀಚರ್' ಎಂದು ಹೇಳಿಸಿ, "ಹಲೋ,- ಎಂದು ಮಕ್ಕಳ ಹೆಸರು ಹೇಳಿ ಅವರನ್ನು ಸ್ವಾಗತಿಸಿ.
ಹಿಂದಿನ ದಿನದಂತೆ ಕದಮ್ ತಾಲ್ ಚಟುವಟಿಕೆ ಮಾಡುವುದು.
ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು "Good morning, welcome "Have a magical Monday" ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಅವರು "Thank you. Same to you" 2 ಅವರಿಗೆ Fist Bump ನೀಡಲು ಹೇಳಿ.
ಚಟುವಟಿಕೆ : ನಿಮ್ಮನ್ನು ನೀವು ತಿಳಿದುಕೊಳ್ಳಿ
ಸಾಮಗ್ರಿಗಳು: ವಿವಿಧ ದೇಹದ ಭಾಗಗಳ ಫ್ಲ್ಯಾಶ್ ಕಾರ್ಡ್‌ಳು, ಚೆಂಡು, ಸಂಗೀತ ಪ್ಲೇಯರ್.
ವಿಧಾನ:
1. ಮಕ್ಕಳನ್ನು ವೃತ್ತದಲ್ಲಿ ಕೂರಿಸಿ ಮತ್ತು ಫ್ಲ್ಯಾಶ್ ಕಾರ್ಡ್ ಗಳನ್ನು ಮಧ್ಯದಲ್ಲಿ ಇರಿಸಿ.
2. ಪಾಸಿಂಗ್ ದ ಬಾಲ್ ಆಟವನ್ನು ಆಡಿಸಿ.
3. ಸಂಗೀತ ನಿಂತಾಗ ಯಾವ ಮಗುವಿನ ಕೈಯಲ್ಲಿ ಚೆಂಡು ಉಳಿಯುವುದೊ ಆ ಮಗು ಫ್ಲಾಶ್ ಕಾರ್ಡ್ ಅನ್ನು ಆರಿಸಿ ಮತ್ತು ಅದು ಯಾವ ಭಾಗಎಂದು ಹೇಳಬೇಕು ಮತ್ತು ಅವರ ದೇಹದ ಮೇಲೆ ತೋರಿಸುವ ಮೂಲಕ ಸೂಚಿಸಬೇಕು. ಉದಾಹರಣೆಗೆ ಅವನು/ಅವಳು ಕೈ ಯನ್ನು ಎತ್ತಿಕೊಂಡಿದ್ದರೆ, ಅವನು/ಅವಳು ಕೈಯನ್ನು ಮೇಲಕ್ಕೆತ್ತಿ ಜೋರಾಗಿ ಕೈ ಎಂದು ಹೇಳಬೇಕು. ದೇಹದ ಭಾಗಗಳು ಇಂಗ್ಲೀಷ್ ನಲ್ಲಿಯೂ ಪರಿಚಯಿಸಿ.
4. ಸಂಗೀತವನ್ನು ನುಡಿಸಿ ಮತ್ತು ಚಟುವಟಿಕೆಯನ್ನು ಪುನರಾವರ್ತಿಸಿ, ಎಲ್ಲರಿಗೂ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಿ
5. ದೇಹದ ವಿವಿಧ ಭಾಗಗಳ ಕೆಲಸ ಏನು ಎಂದು ಮಕ್ಕಳನ್ನು ಕೇಳಿ ನಾನು ನನ್ನ ಬಾಯಿಯಿಂದ ಮಾತನಾಡುತ್ತೇನೆ.ಕಾಲುಗಳು ನಾನು ನಡೆಯುತ್ತೇನೆ/ನೃತ್ಯ ಮಾಡುತ್ತೇನೆ /ಒಡುತ್ತೇನೆ/ಜಿಗಿಯುತ್ತೇನೆ. ಕೈಗಳು- ನಾನು
ಬರೆಯುತ್ತೇನೆ/ಕೆಲಸ ಮಾಡುತ್ತೇನೆ/ನನ ಕೈಗಳಿಂದ ಆಡುತೇನೆ ಇತ್ಯಾದಿ.
(ಸೂಚನೆ: ಶಿಕ್ಷಕರು ತಮ್ಮದೇ ಆದ ಪ್ರಶ್ನೆಗಳನ್ನು ಸೇರಿಸಬಹುದು ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿಯೂಮಾತನಾಡಲು ಪ್ರೋತ್ಸಾಹಿಸಬಹುದು)
ಚಟುವಟಿಕೆ: ರೈಮ್
. Head, shoulders, knees and toes ರೈಮ್ ಅನ್ನು ಅಭಿನಯದೊಂದಿಗೆ ಮಕ್ಕಳಿಗೆ ಹೇಳಿ ಕೊಡಿ.
• ದೇಹದ ಭಾಗಗಳನ್ನು ಇಂಗ್ಲೀಷ್ ನಲ್ಲಿ ಪರಿಚಯಿಸಿ,
• ಸರಳ ಪ್ರಶ್ನೆಗಳನ್ನು ಕೇಳಿ.
ಅವಧಿ-2 (40ನಿ)
*ನನ್ನ ಸಮಯ*
ಕಲಿಕಾ ಸಿದ್ಧತಾ ಭಾಗವಾಗಿ ಸ್ಥಳಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಸ್ಥಳವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು.ಮಕ್ಕಳಿಗೆ
ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. (* ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.)
ಸಾಮರ್ಥ್ಯ : ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವರು.ಚಟುವಟಿಕೆ :
ಗಾತ್ರದ ಆಧಾರದ ಮೇಲೆ ವಸ್ತುಗಳ ಜೋಡಣೆ ಉದ್ದೇಶ : 4ರಿಂದ 5 ವಸ್ತು.
ಬ್ಲಾಕ್‌ಗಳನ್ನು ಜೋಡಿಸುವುದು.
ಸಾಮಗ್ರಿ :- ಕಲಿಕಾ ಕಿಟ್ ನ ಬಿಲ್ಡಿಂಗ್ ಬ್ಲಾಕ್ಸ್
(ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್‌ಗಳು, ಬೆಂಕಿ ಪೊಟ್ಟಣಗಳು, ಪೇಸ್ಟ್ ಬಾಕ್ಸ್ ಗಳು, ವಿವಿಧ ಅಳತೆಯ ಪುಸ್ತಕಗಳು)
ವಿಧಾನ: 1ನೇ ತರಗತಿ
ಗಾತ್ರದ ಆಧಾರದ ಮೇಲೆ ಸಾಮಗ್ರಿಗಳನ್ನು ಒಂದರ ಮೇಲೊಂದರಂತೆ ಜೋಡಿಸುವರು.
ಗಣಿತ ಮೂಲೆ:-
ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವುದು ಹಾಗೂ ಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವರು.
ಚಟುವಟಿಕೆ: ನಡೆ...ನಡೆ....ನಡಿಗೆ ಉದ್ದೇಶ : ನಿರ್ದಿಷ್ಟ ನಿರ್ದೇಶನವನ್ನು ಪಾಲಿಸುತ್ತ ಸ್ವತಂತ್ರವಾಗಿ ಕಾರ್ಯೋನ್ಮುಖರಾಗುವುದು.
ವಿಧಾನ: 1ನೇ ತರಗತಿ
ತರಗತಿ ಕೋಣೆಯೊಳಗೆ ವಕ್ರ, ನೇರ ರೇಖೆಗಳನ್ನು ಎಳೆದು ಅದರ ಮೇಲೆಯೆ ನಡೆಯುತ್ತ ಸಾಗುವರು.
ಅನ್ವೇಷಣಿ ಅಥವಾ ವಿಜ್ಞಾನ ಮೂಲೆ:
ಸಾಮರ್ಥ್ಯ: ವೈಜಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸಿಕೊಳ್ಳುವರು.
ಚಟುವಟಿಕೆ - ಬಣ್ಣದ ಮೋಜಿನಾಟ
ಉದ್ದೇಶ : ಬಣ್ಣಗಳನ್ನು ಸೇರಿಸುವ ಮೂಲಕ ಹೊಸ ಬಣ್ಣಗಳ ಸೃಷ್ಟಿಯ ಬಗ್ಗೆ ತಿಳಿಯುವುದು.
ಸಾಮಗ್ರಿ :- ಪಾರದರ್ಶಕ ಲೋಟಗಳು
ನೀರು
ಬಣ್ಣಗಳು
ವಿಧಾನ: 1ನೇ ತರಗತಿ
ಮಕ್ಕಳು ನೀರಿನಲ್ಲಿ ಬಣ್ಣವನ್ನು ಬೆರೆಸುವುದರಿಂದ ಆಗುವ ಬದಲಾವಣೆಯನ್ನು ಗಮನಿಸುವರು.
ಗೊಂಬೆಗಳ ಮೂಲೆ :
ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕ್ತಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವುದು.
ಚಟುವಟಿಕೆ: ಗೊಂಬೆ ಜೋಡಿಸು
ಉದ್ದೇಶ : ಗೊಂಬೆಗಳನ್ನು ವಿವಿಧ ಆಧಾರಗಳಲ್ಲಿ ವರ್ಗೀಕರಿಸುವುದು.
ಸಾಮಗ್ರಿ :- ವಿವಿಧ ರೀತಿಯ ಗೊಂಬೆಗಳು. (ವಿವಿಧ ಗಾತ್ರದ ಪ್ರಾಣಿ, ಪಕ್ಷಿ, ಮನುಷ್ಯ, ವಾಹನಗಳು.
ವಿಧಾನ: 1ನೇ ತರಗತಿ,
ಗೊಂಬೆಗಳ ಗುಂಪು ರಚನೆ ಮಾಡಿಸುವುದು. ತಮ್ಮದೇ ಆದ ಕಲ್ಪನೆಯಲ್ಲಿ ಮಕ್ಕಳು ಗೊಂಬೆಗಳನ್ನು ಜೋಡಿಸುತ್ತಾರೆ.( ಗಾತ್ರದ ಆಧಾರದ ಮೇಲೆ ಪ್ರಾಣಿಗಳ, ಮನುಷ್ಯ ಗೊಂಬೆಗಳ, ವಾಹನಗಳ ಗುಂಪಾಗಿ, ಮನುಷ್ಯನೊಂದಿಗೆ ನಾಯಿಯನ್ನು, ಪಕ್ಷಿಯೊಂದಿಗೆ ಮರವನ್ನು,) ಮಕ್ಕಳು ಗುಂಪು ಮಾಡಿದ ಕಾರಣಗಳನ್ನು ತಿಳಿಸುವರು.
ಓದುವ ಮೂಲೆ ಗ್ರಂಥಾಲಯ ಮೂಲೆ:
ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವರು. ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು.
ಚಟುವಟಿಕೆ: ಚಿತ್ರ ಓದು
ಉದ್ದೇಶ : ಚಿತ್ರ ಗುರುತಿಸುವುದರೊಂದಿಗೆ
ಸಾಮಗ್ರಿ :- ಕ್ರಿಯಾ ಪದಗಳನ್ನು ಬಿಂಬಿಸುವ ಚಿತ್ರಗಳು / ಚಾರ್ಟ್
ವಿಧಾನ:
ಸಷ್ಟವಾಗಿ ಓದುವುದು.
ಚಿತ್ರವನ್ನು ನೋಡಿ ಕ್ರಿಯಾಪದಗಳನ್ನು ಗುರುತಿಸುವರು.
ಕಲೆಗೊಂಡು ನೆಲೆ/ಕರಕುಶಲ ಮೂಲೆ:
ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು
ಬೆಳೆಸಿಕೊಳ್ಳುವರು.
ಚಟುವಟಿಕೆ: ಹತ್ತಿ ಉಂಡೆ ಅಂಟಿಸುವುದು.
ಉದ್ದೇಶ : ನೀಡಲಾದ ಮಾರ್ಗದರ್ಶನವನ್ನು ಅರ್ಥೈಸಿಕೊಂಡು ಕಾರ್ಯೋನ್ಮುಖರಾಗುವುದು.
ಸಾಮಗ್ರಿ :- ಹತ್ತಿ, ಗೊಂದು, ಡ್ರಾಯಿಂಗ್ ಶೀಟ್ಸ್
ವಿಧಾನ:
ಶಿಕ್ಷಕರು ಅಕ್ಷರ / ಆಕೃತಿ / ರೇಖಾ ಚಿತ್ರ ಬರೆದ ಡ್ರಾಯಿಂಗ್ ಶೀಟ್ ಒದಗಿಸುವರುಮಕ್ಕಳು ಅದರ
ಮೇಲೆ ಹತ್ತಿ ಉಂಡೆಗಳನ್ನು ಗೆರೆಯ ಮೇಲೆಯೆ ಅಂಟಿಸುವರು.
బರೆಯುವ ಮೂಲೆ :
ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ
ವಿನ್ಯಾಸವನ್ನು ರಚಿಸುವುದು. ಚಟುವಟಿಕೆ: ಬರೆಯೋಣ ಬಾ
ಉದ್ದೇಶ : ಅಕ್ಷರ ರಚನಾ ವಿನ್ಯಾಸಕ್ಕೆ ಆಗತ್ಯ ಪೂರ್ವ ತಯಾರಿ ಹೊಂದುವುದು.
ಸಾಮಗ್ರಿ :- ಸ್ಯಾಂಡ್ ಟ್ರೇ (ಮರಳಿನ ಹಲಗೆ)
ಮರಳಿನ ಟ್ರೇ ಯಲ್ಲಿ ಮಗು ಕೈ ಬೆರಳನ್ನು ಬಳಸಿ ವಿವಿಧ ಅಕ್ಷರ ವಿನ್ಯಾಸ
ಸಂಬಂಧಿತ ರೇಖಾಭ್ಯಾಸಗಳನ್ನು ಮಾಡುವರು.
ಅಟಿಕೆ | ಮಾಡಿ ನೋಡು ಮೂಲೆ :
ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವರು.
ಚಟುವಟಿಕೆ: ಜೋಡಿಸಿ ನೋಡು.
ಉದ್ದೇಶ : ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿವಸ್ತುಗಳನ್ನು ಜೋಡಿಸುವುದು.
ಸಾಮಗ್ರಿ :- ಹುಣಸೆ ಬೀಜ, ಮುಚ್ಚಳಗಳು, ಗುಂಡಿಗಳು, ಮಣಿಗಳು.
ವಿಧಾನ :
ಶಿಕ್ಷಕರು ಎಳೆದ / ಬರೆದ ರೇಖೆ, ವಕ್ರ ರೇಖೆ, ಆಕೃತಿಗಳನ್ನು ಬರೆದು ಅದರ ಮೇಲೆಮಕ್ಕಳು ಮೇಲ್ಕಂಡ ಸಾಮಗ್ರಿಗಳನ್ನು ಜೋಡಿಸುವರು.
ಆಟಿಕೆ / ಮಾಡಿಕಲಿ ಸ್ಥಳ
ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವರು.
ಚಟುವಟಿಕೆ: ಜೋಡಿಸಿ ನೋಡು.
ಉದ್ದೇಶ : ವ್ಯವಸ್ಥಿತವಾಗಿ ಮತ್ತು ಕ್ರಮಬದ್ಧವಾಗಿವಸ್ತುಗಳನ್ನು
ಜೋಡಿಸುವುದು.
ಸಾಮಗ್ರಿ :- ಹುಣಸೆ ಬೀಜ, ಮುಚ್ಚಳಗಳು, ಗುಂಡಿಗಳು, ಮಣಿಗಳು.
ಶಿಕ್ಷಕರು ಎಳೆದ / ಬರೆದ ರೇಖೆ, ವಕ್ರ ರೇಖೆ, ಆಕೃತಿಗಳನ್ನು ಬರೆದು ಅದರ ಮೇಲೆಮಕ್ಕಳು ಮೇಲ್ಕಂಡ ಸಾಮಗ್ರಿಗಳನ್ನು ಜೋಡಿಸುವರು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಗುರುತಿಸುವಿಕೆ, ಸ್ಮರಣೆ. ಪರಿಸರದ ಅರಿವು ಚಟುವಟಿಕೆ : ಗುಂಪಿಗೆ ಸೇರದ ವಸ್ತು ಗುರುತಿಸು. (ಗುರಿ 3)ಉದ್ದೇಶ:- ಗುಂಪಿಗೆ ಸೇರದ
ವಸ್ತುವನ್ನು ಗುರುತಿಸುವುದು.
ಅಗತ್ಯ ಸಾಮಗ್ರಿಗಳು : ಹಣ್ಣುಗಳು ಮತ್ತು ತರಕಾರಿಗಳ ಮಾದರಿಗಳ ಸೆಟ್, ಪೆನ್ಸಿಲ್ ಮತ್ತು ಪೆನ್ನುಗಳ ಸೆಟ್ ತ್ರಿಭುಜಾಕಾರದ
ಆಕೃತಿಗಳ ಕಟೌಟ್ ಸೆಟ್ ಮತ್ತು ಒಂದು ವೃತ್ತ, ಪ್ರಾಣಿಗಳು ಮತ್ತು ಪಕ್ಷಿ ಚಿತ್ರಗಳ ಸೆಟ್ ( ಪ್ರತಿ ಸಾಮಗ್ರಿಗಳು 3 ಸೆಟ್ ) ವಿಧಾನ : ಪ್ರತಿ ಸೆಟ್‌ನಲ್ಲಿ ಮೂರು ಒಂದೇ ರೀತಿಯ ವಸ್ತುಗಳು ಮತ್ತು ಒಂದು ವಿಭಿನ್ನ ವಸ್ತು ಇರುವಂತೆ ಷಗಳನ್ನು ಸಿದ್ಧಪಡಿಸುವುದು. ಮಕ್ಕಳಿಗೆ ಗುಂಪಿನಲ್ಲಿ ಒಂದೊಂದು ಸೆಟ್ ನೀಡುವುದು. ನೀಡಿದ ನಾಲ್ಕುವಸ್ತುಗಳನ್ನು 29 / 121 ಹೇಳುವುದು. ವಿಭಿನ್ನವಾದ ಅಥವಾ ಗುಂಪಿಗೆ ಸೇರದ ಒಂದು ವಸ್ತುವನ್ನು ಗುರುತಿಸಿ ಅದಕ್ಕೆ ಕಾರಣ ಕೇ। ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸಿ ತಮಗೆ ನೀಡಿದವಸ್ತುಗಳಲ್ಲಿ ಗುಂಪಿಗೆ ಸೇರದ ವಸ್ತುವನ್ನು ಹೇಗೆ ಆಯ್ಕೆ ಮಾಡಿದರು
ಎಂಬುದನ್ನು ವಿವರಿಸಲು ಹೇಳುವುದು.
ಆಹಾ:-IL-6 ಇದು ಗುಂಪಿಗೆ ಸೇರುವುದಿಲ್ಲ
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ,
ಚಟುವಟಿಕೆ : ಬ್ರಶ್ ನಿಂದ ಚಿತ್ರಕಲೆ. (ಗುರಿ - 1)
ಉದ್ದೇಶಗಳು:
ಬ್ರಶ್‌ನ್ನು ಹಿಡಿಯುವ ಮತ್ತು ಬಳಸುವ ವಿಧಾನವನ್ನು ತಿಳಿಯುವುದು.
ಕಣ್ಣು ಕೈಗಳ ನಡುವೆ ಸಮನ್ವಯತೆ ರೂಢಿಯಾಗುವುದು.
ಸಾಮಗ್ರಿಗಳು : ಬ್ರಶ್, ಪೇಂಟ್, ಈಸಲ್ ಬೋರ್ಡ(ಲಭ್ಯತೆ ಇದ್ದಲ್ಲಿ)
ವಿಧಾನ : ಬಿಳಹಾಳೆಯ ಮೇಲೆ ಪೇಂಟ್ ಮತ್ತು ಬ್ರಶ್‌ನ್ನು ಹೇಗೆ ಬಳಸಬೇಕೆಂದು ಮಕ್ಕಳಿಗೆ ತೋರಿಸುವುದು.ಮಕ್ಕಳು ತಮ್ಮ ಆಯ್ಕೆಯ ವಿವಿಧ ಚಿತ್ರಗಳನ್ನು ಚಿತ್ರಿಸಲು ಅವಕಾಶ ಮಾಡಿಕೊಡುವುದು. ಆ ಚಿತ್ರಕ್ಕೆ ಬ್ರಶ್‌ನಿಂದ ಬಣ್ಣ ತುಂಬಲು ಹೇಳಿ ಚಿತ್ರವನ್ನು ವಿವರಿಸಲು ತಿಳಿಸುವುದು.
ಅ.ಹಾ:-HW-4 ಹೇಳಿದ ಸಂಖ್ಯೆಗಳಿಗೆ ನೀಡಿದ ಬಣ್ಣ ಹಾಕು
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ- ಚಿತ್ರ ಓದು
ಚಟುವಟಿಕೆ : ಈ ಮುಖ ಏನನ್ನು ಹೇಳುತ್ತಿದೆ? (ಗುರಿ 2)
ಉದ್ದೇಶಗಳು:
ಹೇಳಿದ ಪದಕ್ಕೆ ಸೂಕ್ತ ಭಾವನೆಗಳನ್ನು ಮುಖದಲ್ಲಿ ಪ್ರದರ್ಶಿಸುವುದು.
ಆಂಗಿಕ ಅಭಿನಯದ ಮೂಲಕ ವಿವಿಧ ಭಾವನೆಗಳನ್ನು ಮುಖದಲ್ಲಿ ಅಭಿವ್ಯಕ್ತಿಸುವುದು.
ಅಗತ್ಯ ಸಾಮಗ್ರಿಗಳು-ಕಥಾ ಪುಸ್ತಕಗಳು/ ಚಿತ್ರ ಪುಸ್ತಕಗಳು
ವಿಧಾನ: ವಿವಿಧ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವ ಚಿತ್ರಗಳನ್ನು ಹೊಂದಿರುವ ಕಥಾ ಪುಸ್ತಕವನ್ನು ಆಯ್ಕೆಮಾಡಿಕೊಳ್ಳಿ. ಮಕ್ಕಳಿಗೆ ಚಿತ್ರವನ್ನು ತೋರಿಸುತ್ತಾ ಚಿತ್ರದಲ್ಲಿರುವ ವ್ಯಕ್ತಿಗಳು ಯಾವ ಭಾವನೆಯನ್ನು ವ್ಯಕ್ತಪಡಿಸುತ್ತಿರುವರು ಎಂಬುದನ್ನು ಗುರುತಿಸಲು ತಿಳಿಸಿ. ಉದಾಹರಣೆಗಾಗಿ- ಚಿತ್ರದಲ್ಲಿರುವ ಹುಡುಗಿ ಸಂತೋಷವಾಗಿದ್ದಾಳೆ. ಚಿತ್ರದಲ್ಲಿರುವ ಹುಡುಗ ದುಃಖಿತನಾಗಿದ್ದಾನೆ ಇತ್ಯಾದಿ. ಈ ಭಾವನೆಗಳನ್ನು ಚಿತ್ರರೂಪದಲ್ಲಿ ಬಿಡಿಸಲು ಬೇರೆ ಬೇರೆ ಭಾವನೆಗಳನ್ನು ಮಕ್ಕಳು ಚಿತ್ರರೂಪದಲ್ಲಿ ಬಿಡಿಸಲು ಸಮರ್ಥರಾಗುವವರೆಗೂ ಈ ಚಟುವಟಿಕೆಯನ್ನು
ಮುಂದುವರೆಸಿ ನಂತರ ಕಥೆಯನ್ನು ಓದಿ ಅದರಲ್ಲಿ ಬಂದಿರುವ ವಿವಿಧ
ಭಾವನೆಗಳಿಗೆ ಸಂಬಂಧಿಸಿದ ಪದಗಳನ್ನು ಗುರುತಿಸಲು ತಿಳಿಸಿ. ಕೊನೆಯಲ್ಲಿ ಕಥೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಿರಿ.
ಉದಾ:- ಘಟನೆ ನಡೆದಾಗ.
_ರಿಗೆ ಏನನ್ನಿಸಿತು?
ಹೊಸ ಬಟ್ಟೆ ಧರಿಸಿದಾಗ ಹೇಗೆ ಪ್ರತಿಕ್ರಿಯಿಸಿದಳು ಇತ್ಯಾದಿ.
ಮುಂದಿನ ಹಂತದಲ್ಲಿ ಮಕ್ಕಳು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಈ ಪ್ರಶ್ನೆಗಳಿಗೆ ಭಾವಾಭಿನಯದ ಮೂಲಕ ಉತ್ತರಿಸಲು ಹೇಳಿ. ನಂತರದ ಹಂತದಲ್ಲಿ ಮುದ್ರಣದ ಪರಿಕಲ್ಪನೆ ಮೂಡಿಸಲು ಭಾವನೆಗಳ ಚಾರ್ಟನ್ನು ತಯಾರಿಸಲು ಮಾರ್ಗದರ್ಶಿಸಿ, ವಿದ್ಯಾರ್ಥಿಗಳು ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಮುಖಗಳನ್ನು ಪೇಪರ್‌ನಲ್ಲಿ ಚಿತ್ರಿಸಲು ಅವಕಾಶ ಕಲ್ಪಿಸಿ,
ಅಭ್ಯಾಸ ಹಾಳೆ EC 3
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ : ಪದ ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ,
ಚಟುವಟಿಕೆ : ಹೆಸರಿನ ಜಗತ್ತು (ಗುರಿ 2)
ಉದ್ದೇಶ: ಪರಿಚಿತ ಸನ್ನಿವೇಶದಲ್ಲಿನ ವಸ್ತುಗಳನ್ನು ಲಿಪಿಸಂಕೇತಗಳೊಂದಿಗೆ ಸಹ ಸಂಬಂಧೀಕರಿಸಿಕೊಳ್ಳುವುದು. ಸಾಹಿತ್ಯ ಮತ್ತು ವಸ್ತು ಒಂದೇ ಇದೆ ಎಂಬ ತೀರ್ಮಾನಕ್ಕೆ ಬಂದು ಓದುವಿಕೆಯಲ್ಲಿ ಆಸಕ್ತಿ ಬೆಳಸಿಕೊಳ್ಳುವುದು.
ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಚಾರ್ಟ್ ಪೇಪರ್, ಪೆನ್ಸಿಲ್, ಕ್ರೇಯಾನ್ಸ್, ನಮಗೆ ಕಣ್ಣಿಗೆ ಕಾಣುವ
ಸುತ್ತಮುತ್ತಲಿನ ಸಾಮಾಗ್ರಿಗಳು
ವಿಧಾನ
ಮಕ್ಕಳ ಸಹಾಯದಿಂದ ತರಗತಿಯಲ್ಲಿರುವ ಸಾಮಾನ್ಯ/ ಪರಿಚಿತ ವಸ್ತುಗಳಹೆಸರನ್ನು ಪಟ್ಟಿ ಮಾಡುವುದು.
ಉದಾ- ಮೇಜು, ಕುರ್ಚಿ, ಬಾಗಿಲು ಇತ್ಯಾದಿ.
ಸಿದ್ಧಪಡಿಸಿದ ನಾಮ ಫಲಕಗಳನ್ನು ಆಯಾ ವಸ್ತುಗಳ ಮೇಲೆ ಅಂಟಿಸುವುದು.
ಇನ್ನೊಂದು ಸೆಟ್ ನಾಮ ಫಲಕಗಳ ಮಿಂಚುಪಟ್ಟಿಗಳನ್ನು ತಯಾರಿಸಿಟ್ಟು ಕೊಳ್ಳುವುದು. ಪದಗಳ ಮಿಂಚುಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುತ್ತಾ, ಮಕ್ಕಳಿಂದ ಗಟ್ಟಿಯಾಗಿ ಹೇಳಿಸುವುದು.
ಪದ ಉಚ್ಛರಿಸುತ್ತಾ ಆ ವಸ್ತುವಿನ ಬಳಗೆ ಮಗು ಹೋಗಲು ತಿಳಿಸುವುದು.
. ಮಗು ಕನಿಷ್ಠ ನಾಲೈದು ವಸ್ತುಗಳನ್ನಾದರೂ ಹೆಸರಿಸಲು ಅವಕಾಶ ಕಲ್ಪಿಸುವುದು..
ಆ ಪದಗಳನ್ನು ಕಥೆಯಲ್ಲಿ ಗುರುತಿಸಲು ಅವಕಾಶ ಕಲ್ಪಿಸುವುದು.
ಚಿತ್ರ ಸಹಿತ ನಾಮಫಲಕ/ ಮಿಂಚುಪಟ್ಟಿಗಳನ್ನು ಸಿದ್ಧಪಡಿಸಿ, ಚಟುವಟಿಕೆ ಸ್ಥಳದಲ್ಲಿ/ ಸಮಯದಲ್ಲಿ ಮಕ್ಕಳಿಗೆಗುರುತಿಸಿ ಓದಲು (ಚಿತ್ರಗಳ ಸಹಾಯದಿಂದ) ಅವಕಾಶ ಕಲ್ಪಿಸುವುದು.
ಬರುವ ಪದಗಳನ್ನು ಬಳಸಿ ಚಟುವಟಿಕೆಯನ್ನು ನಿರ್ವಹಿಸುವುದು.
ಗಮನಿಸಿ : ಈ ಹಿಂದೆ ಈ ಚಟುವಟಿಕೆಗಳಲ್ಲಿ ಬಳಸಿದ ಪದಗಳನ್ನು ಹೊರತುಪಡಿಸಿ ಬೇರೆ ಬೇರೆ ಸ್ಥಳ, ಸನ್ನಿವೇಶದಲ್ಲಿ ಬರುವ ಪದಗಳನ್ನು ಉಪಯೋಗಿಸಿ ಚಟುವಟಿಕೆ ನಿರ್ವಹಿಸುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ
ಚಟುವಟಿಕೆ : ಚಿತ್ರಿಸುವುದು ಮತ್ತು ಹೆಸರಿಸುವುದು. (ಗುರಿ-2)
ಉದ್ದೇಶಗಳು:
ಉದ್ದೇಶಿತ ಬರಹ
ಸೂಕ್ಷ್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
ಉದ್ದೇಶಿತ ಬರವಣಿಗೆಗೆ ಅಣಿಗೊಳಿಸುವುದು.
• ಆಯ್ಕೆಯ ಚಿತ್ರ ಬಿಡಿಸುವುದು.
ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್, ಪೆನ್ಸಿಲ್
ವಿಧಾನ : ಮಕ್ಕಳು ತಮ್ಮ ಆಯ್ಕೆಯ ಹೂವು ಹಣ್ಣುಗಳ ಚಿತ್ರ ಬಿಡಿಸುವುದು. ಬರೆದ ಚಿತ್ರಕ್ಕೆ ಬಣ್ಣ ತುಂಬಿಹೆಸರಿಸಲು ತಿಳಿಸುವುದು.
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ
ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರುತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ: ಕುಂಟೆಬಿಲ್ಲೆ
ಸಾಮರ್ಥ್ಯ : ದೇಹದ ಸಮತೋಲನ ಬೆಳೆಸಲು.
ವಿಧಾನ : ನೆಲದ ಮೇಲೆ ಬಳಪದ ಸಹಾಯದಿಂದ ಆಟಕ್ಕೆ ಬೇಕಾದ ಚೌಕಗಳನ್ನು ಎಳೆಯುವುದು.
ಸಾಮಗ್ರಿ : ಬಿಲ್ಲೆ, ಬಳಪ
ಮಕ್ಕಳು ಚೌಕದ ಗೆರೆಯ ತುಳಿಯದಂತೆ ಬಿಲ್ಲೆಯನ್ನು ಕಾಲಿನಿಂದ ಚೌಕದಿಂದ ಚೌಕಕ್ಕೆ ದೂಡುತ್ತಾ ಆಟ ಆಡಲು ಸೂಚಿಸುವುದು.
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಸೋನಿ & ಟೊಮೆಟೋಸ್
ಸಾಮಗ್ರಿಗಳು : ಸಾಹಿತ್ಯ, ಚಿತ್ರಗಳು
ಉದ್ದೇಶಗಳು :
> ಆಲಿಸುವ ಸಾಮರ್ಥ್ಯ ಬೆಳೆಸುವುದು.
> ಪದಸಂಪತ್ತನ್ನು ಹೆಚ್ಚಿಸುವುದು.
ಸಾಹಿತ್ಯದಲ್ಲಿನ ಚಿತ್ರಗಳನ್ನು ಮಕ್ಕಳಿಗೆ ಪ್ರದರ್ಶಿಸಿ ಕಥೆಯ ಪಾತ್ರಗಳನ್ನು/ವಸ್ತುಗಳನ್ನು ಹೆಸರಿಸಲು ಸರಳ ಪ್ರಶ್ನೆಗಳನ್ನು ಕೇಳುತ್ತಾ ಕಥೆಯನ್ನು ಪುನಃ ಹೇಳುವುದು.
ವಿಧಾನ :
> ಕಥೆಯ ವಾಕ್ಯಗಳನ್ನು ಓದುವಾಗ ಕಥೆಯ ನಡುವೆ ಬರುವ ಸೋನಿ, ಟೊಮೆಟೋ ಇತ್ಯಾದಿ ಚಿತ್ರಗಳನ್ನುಮಕ್ಕಳು ಹೆಸರಿಸುವಂತೆ ಪ್ರಶ್ನೆಗಳನ್ನು ಕೇಳುತ್ತ ಕಥೆಯನ್ನು ನಿರೂಪಿಸುವುದು.
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
> ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
> ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
"ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ,
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
Super👌👌👌👌👌👌sir🙏🙏🙏🙏🙏🙏🙏
ReplyDelete