https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1cCFnocq76AkNsRSI5oYyK1GsVjcEWsxG/view?usp=drivesdk
*ವಿದ್ಯಾಪ್ರವೇಶ ದಿನ-10*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1
ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು "Good morning, welcome "Have a thrilling Thursday" 2 you" ಎಂದು ಉತ್ತರಿಸಲಿ. "Good morning, Thank you. Same to
ಚಟುವಟಿಕೆ 2
ಚಟುವಟಿಕೆ : ಕದಮ್ ತಾಲ್
ಸಾಮಗ್ರಿಗಳು: ಡ್ರಮ್/ತಂಬೂರಿ
1.ಮೂರು ಬಾರಿ ಚಪ್ಪಾಳೆ ತಟ್ಟುವ ಮೂಲಕ ತರಗತಿ
ಪ್ರವೇಶಿಸಲು ಮಕ್ಕಳಿಗೆ ಹೇಳಿ- ಮತ್ತು 'ಹಾಯ್ ಟೀಚರ್' ಎಂದು ಹೇಳಿಸಿ, "ಹಲೋ," ಎಂದು ಮಕ್ಕಳ ಹೆಸರು ಹೇಳಿ ಅವರನ್ನು ಸ್ವಾಗತಿಸಿ.
ಹಿಂದಿನ ದಿನದಂತೆ ಕದಮ್ ತಾಲ್ ಚಟುವಟಿಕೆ ಮಾಡುವುದು.
ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು "Good morning, welcome "Have a magical Monday" ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಅವರು "Thank you. Same to you" 2 ಅವರಿಗೆ Fist Bump ನೀಡಲು ಹೇಳಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ : ಮೋಜು ಮಾಡೋ
ಸಾಮಗ್ರಿಗಳು: ಸೀಮೆಸುಣ್ಣ / ಕೋಲು
కాయవిధాన:
1. ಮಕ್ಕಳನ್ನು ಶಾಲಾ ಮೈದಾನಕ್ಕೆ ಕರೆದೊಯ್ದು ವೃತ್ತಾಕಾರದಲ್ಲಿ ನಿಲ್ಲಿಸಿ.
2. ಪ್ರತಿ ಮಗುವಿಗೆ ಕೋಲು/ಚಾಕ್ ನೀಡಿ ಮತ್ತು ಅವರು ಕುಳಿತು ತಮ್ಮ ಕೈ/ ಪಾದಗಳನ್ನು ಕೋಲು/ಚಾಕ್ ನಿಂದರಚಿಸಲು ಮಾರ್ಗದರ್ಶನ ಮಾಡಿ.
4. ಅವರ ಕಾಲುಗಳು/ಕಾಲೆರಳುಗಳು ಮತ್ತು ಕೈಗಳನ್ನು ಇತರರ ಕಾಲುಗಳು ಮತ್ತು ಕೈಗಳೊಂದಿಗೆ ಹೋಲಿಸಲುಅವರಿಗೆ ತಿಳಿಸಿ ಮತ್ತು ಅದನ್ನು ಚಿತ್ರದ ನಂತರ ಅವರು ಗಾತ್ರ, ಆಕಾರ ಮತ್ತು ಹೇಗೆ ಭಾವಿಸುತ್ತಾರೆ ಎಂಬುದರ
ಬಗ್ಗೆ ಮಾತನಾಡಲು ಬಿಡಿ.
ಚಟುವಟಿಕೆ: ರೈಮ್
Head, shoulders, knees and toes ,
Teacher: Head, shoulders, Students: knees and toes Teacher: Knees and toes, Students: Knees and toes, Teacher: Head, shoulders, Students: knees and toes Teacher: It's my body. Students: It's my body. Teacher: Eyes and ears andStudents: mouth and nose Teacher: Mouth and nose, Students: Mouth and nose, Teacher: Eyes and ears andStudents: mouth and nose Teacher: Eyes and ears andStudents: mouth and nose Teacher: It's my body. Students: It's my body.
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಬಣ್ಣ ಮತ್ತು ಆಕಾರಗಳ ಆಧಾರದ ಮೇಲೆ ವಿಂಗಡಣೆ ಮತ್ತು ಪರಿಸರದ ಅರಿವು
ಚಟುವಟಿಕೆ : ವಿಂಗಡಿಸುವುದು (ಗುರಿ 3)
ಉದ್ದೇಶ:- ಗುಣಲಕ್ಷಣಗಳ ಆಧಾರವಾಗಿ ವಿಂಗಡಿಸುವುದು.
ಅಗತ್ಯ ಸಾಮಗ್ರಿಗಳು : ಮಣ್ಣಿನ ಚೆಂಡುಗಳಂತಹ ವಸ್ತುಗಳು, ಬೆಣಚು ಕಲ್ಲುಗಳು, ಗುಂಡಿಗಳು, ಬೀಜಗಳು, ಉಂಗುರಗಳು
ವಿಧಾನ : ವಿವಿಧ ಬಣ್ಣ ಮತ್ತು ಆಕಾರಗಳುಳ್ಳ ವಸ್ತುಗಳನ್ನು ನೆಲದ ಮೇಲೆ ಹರಡಿ ಒಂದೇ ಬಣ್ಣ ಅಥವಾ ಆಕಾರದ ವಸ್ತುಗಳನ್ನು ವಿಂಗಡಿಸಿ ಪ್ರತ್ಯೇಕ ಗುಂಪು ಮಾಡಿಸುವುದು. ಒದಗಿಸಿದ ವಸ್ತುಗಳನ್ನು ಹೋಲಿಸಿ ಸಾಮ್ಯತೆ ಮತ್ತು ವ್ಯತ್ಯಾಸ ಗುರುತಿಸಲು ಸೂಚಿಸುವುದು, ಸಾಮ್ಯತೆ ಮತ್ತು ವ್ಯತ್ಯಾಸವನ್ನು ಯಾವ ಆಧಾರದ ಮೇಲೆ ಗುರುತಿಸಿದರು ಎಂಬುದನ್ನು ವಿವರಿಸಲು ಹೇಳುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ. ಕಣ್ಣು ಕೈಗಳ ಸಮನ್ವಯತೆ.
ಚಟುವಟಿಕೆ : ಆಕೃತಿಗಳನ್ನು ಆಂಟಿಸು. (ಗುರಿ - 1)
ಉದ್ದೇಶಗಳು :
ವಿವಿಧ ಆಕೃತಿಗಳನ್ನು ಗುರುತಿಸುವುದು.
ಕತ್ತರಿಯನ್ನು ಹಿಡಿದುಹಾಳೆಯನ್ನು ಕತ್ತರಿಸಿಅಂಟಿಸುವವಿಧಾನವನ್ನು ತಿಳಿಯುವುದು,
ಕೈ ಮತ್ತು ಬೆರಳುಗಳ ಕುಶಲತೆ ಹೆಚ್ಚುವುದರ ಜೊತೆಗೆ ಏಕಾಗ್ರತೆ ಉಂಟಾಗುವುದು.
ಸಾಮಗ್ರಿಗಳು : ಬಣ್ಣದ ಹಾಳೆಗಳು, ಕತ್ತರಿ ಮತ್ತು ಅಂಟು.
ವಿಧಾನ : ಬಿಳಿ ಪೇಪರಿನಲ್ಲಿ ವಿವಿಧ ಆಕೃತಿಗಳ (ವೃತ್ತ, ತ್ರಿಭುಜ.ಚೌಕ ಮತ್ತು ಆಯತ) ಚಿತ್ರಗಳನ್ನು ಕತ್ತರಿಸಿಇನ್ನೊಂದು ಬಣ್ಣದ ಹಾಳೆಯ ಮೇಲೆ ಅಂಟಿಸಲು ಹೇಳುವುದು.
.: H W 4
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಪದ ಸಂಯೋಜನೆ
ಚಟುವಟಿಕೆ : ಪದರಚನೆ (ಗುಂಪು-2)
ಉದ್ದೇಶಗಳು:
ಪದ ರಚನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು.
ಸಾಮಗ್ರಿ : ಇಲ್ಲ
ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸಿ ಸ್ಪಷ್ಟವಾದ ಸೂಚನೆಗಳನ್ನು ನೀಡಿ ಚಟುವಟಿಕೆಯನ್ನು ಆರಂಭಿಸಿ.
ನಾನು ಹೇಳುವ ಅಕ್ಷರಗಳನ್ನು ಆಲಿಸಿ.
ಉದಾಹರಣೆ : ಶಿಕ್ಷಕರು ಜೋರಾಗಿ ಸ(ವಿರಾಮ) ರ ಎಂದು ಉಚ್ಚರಿಸಿದಾಗ ಮಕ್ಕಳು ಅಕ್ಷರಗಳನ್ನು ಆಲಿಸಿ ಸರಎಂದು ಪದ ರಚಿಸಿ ಹೇಳಲಿ.
ಅಕ್ಷರಗಳನ್ನು ಸೇರಿಸಿ ಪದ ರಚಿಸಿ ಹೇಳಿ.
ಈ ಚಟುವಟಿಕೆಯಲ್ಲಿ ಶಿಕ್ಷಕರು ಹಂತ ಹಂತವಾಗಿ ಮೂರಕ್ಷರ ಹಾಗೂ ನಾಲ್ಕಕ್ಷರದ ಪದಗಳನ್ನು ಬಳಸಬಹುದಾಗಿದೆ.
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಪದ ಸಂಪತ್ತು ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು
ಚಟುವಟಿಕೆ: ಊಹಾತ್ಮಕ ಓದು (ಗುರಿ-2)ಉದ್ದೇಶ:
ಊಹಿಸಿ ಅರ್ಥೈಸಿಕೊಳ್ಳುವರು ಚಿತ್ರಗಳೊಂದಿಗೆ ಪಠ್ಯವನ್ನು ಸಂಬಂಧಿಕರಿಸುವರು.
ಅಗತ್ಯ ಸಾಮಗ್ರಿಗಳು : ಸಚಿತ್ರ ಕೋಶ.
ವಿಧಾನ: ಮಕ್ಕಳು ಚಿತ್ರಗಳನ್ನೊಳಗೊಂಡ ಪುಸ್ತಕಗಳನ್ನ ನೋಡಿ ಸ್ವತಃ ಊಹೆ ಮಾಡಿ ಓದುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲಚಿಂತನೆ,
ಪದಸಂಪತ್ತಿನ ಅಭಿವೃದ್ಧಿ,
ಚಟುವಟಿಕೆ : ಹಂಚಿತ ಬರೆಹ (ಗುರಿ :
ಉದ್ದೇಶಗಳು:
ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.
ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.
ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.
ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು. ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್
ವಿಧಾನ: ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು.ಒಂದು
ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ
ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.
ಸಲಹಾತ್ಮಕ ಸೂಚಿತ ವಿಷಯ:- ನನ್ನ ಶಾಲೆ
ಗಮನಿಸಬೇಕಾದ ಅಂಶಗಳು:
ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. ಮಕ್ಕಳೊಂದಿಗೆ
ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು
ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ ಬರೆಯಲು ತಿಳಿಸುವುದು.
ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು. ಅಂತಹ ಸನ್ನಿವೇಶದಲ್ಲಿ ಶಿಕ್ಷಕರು ಅದನ್ನು ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅ.ಹಾ: E.C-4 ಅಕ್ಷರ ಸಂಖ್ಯೆಗಳನ್ನು ಗುರುತಿಸು
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ವಿಗ್ರಹದಂತೆ ನಿಲ್ಲು
ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು, ಸೂಚನೆ ಪಾಲನೆ, ಕಾಲುಗಳ ಚಲನೆ.
ಸಾಮಗ್ರಿ : ಇಲ್ಲ
ವಿಧಾನ: ಶಿಕ್ಷಕರು Fire in the mountain Run Run Run, ಎಂದಾಗ ಮಕ್ಕಳು ಓಡುತ್ತಿರಬೇಕು. ಮಧ್ಯದಲ್ಲೇ ಶಿಕ್ಷಕರು statue ಎಂದು ಹೇಳಿದಾಗ ಮಕ್ಕಳು ಓಡುವುದನ್ನು ನಿಲ್ಲಿಸಿ ವಿಗ್ರಹದಂತೆ ನಿಲ್ಲಬೇಕು. ಚಲನೆಯಲ್ಲಿ ಇರುವ ಮಕ್ಕಳು ಆಟದಿಂದ ಹೊರಗುಳಿಯುವರು.
ಸಾಮಗ್ರಿಗಳು : ಮುಖವಾಡಗಳು
ಉದ್ದೇಶಗಳು :
ಆಲಿಸುವ ಸಾಮರ್ಥ್ಯ ಬೆಳೆಸುವುದು.
ಪದಸಂಪತ್ತನ್ನು ಹೆಚ್ಚಿಸುವುದು.
ಕುತೂಹಲ ಪ್ರವೃತ್ತಿಯನ್ನು ಹೆಚ್ಚಿಸುವುದು.
ವಿಧಾನ :
> ಕಥೆಯನ್ನು ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ಹೇಳುವುದು. > ಪಾತಗಳಿಗೆ ತಕ್ಕಂತೆ ಸಿದ್ಧಪಡಿಸಿದ ಮುಖವಾಡಗಳನ್ನು ಧರಿಸಿ ಹೇಳುವುದು.
ಅವಧಿ - 7(40ನಿ)
*ಕಥಾ ಸಮಯ*
ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಸಹಕರಿಸುವುದು,
> ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. ಕಥೆಯನ್ನು ಹೇಳಿದ ನಂತರ ಪ್ರಶ್ನೆಗಳನ್ನು ಕೇಳೆ. (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment