https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1cwWO_ukYfJU2s-Mp2ZIdfBIW1gpCWMxP/view?usp=drivesdk
*ವಿದ್ಯಾಪ್ರವೇಶ ದಿನ-11*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1
ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು "Good morning, welcome " "Have a Funfilled Friday" you"ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ ಅವರು . , "Good morning, Thank you. Same to ಎಂದು ಉತ್ತರಿಸಲಿ
ಚಟುವಟಿಕೆ 2
ದಿನ-15 ರಲ್ಲಿ ಉಲ್ಲೇಖಿಸಲಾದ ಶುಭಾಶಯ ವಿನಿಮಯ ಚಟುವಟಿಕೆ ಪುನರಾವರ್ತಿಸಿ
ಚಟುವಟಿಕೆ :
ಸಾಮಗ್ರಿಗಳು: ಮ್ಯೂಸಿಕ್ ಪ್ಲೇಯರ್ ಅಥವಾ ಮೊಬೈಲ್, ವಿವಿಧ ಪ್ರಾಣಿಗಳ ಫ್ಲ್ಯಾಶ್ ಕಾರ್ಡ್‌ಳು
ವಿಧಾನ: 1. ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ.
2. ಅವರ ನೆಚ್ಚಿನ ಪ್ರಾಣಿಯ ಕುರಿತಾಗಿ ಮಾತನಾಡಲು ಪ್ರೋತ್ಸಾಹಿಸಿ. (ಸಾಕು ಪ್ರಾಣಿ ಅಥವಾ ಕಾಡು ಪ್ರಾಣಿ)ಮಾದರಿಯಾಗಿ ಶಿಕ್ಷಕರೇ ಮೊದಲು ಪ್ರಾರಂಭಿಸಬಹುದು.
3. ಮಾತನಾಡಲು ಪ್ರತಿಯೊಬ್ಬರಿಗೂ ಅವಕಾಶ ಸಿಗುವುದನ್ನು ಖಚಿತಪಡಿಸಿಕೊಳ್ಳಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
(ಸೂಚನೆ: ಶಿಕ್ಷಕರು ತಮ್ಮದೇ ಆದ ಪ್ರಶ್ನೆಗಳನ್ನು ಸೇರಿಸಬಹುದು ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿಯೂ ಮಾತನಾಡಲು ಪ್ರೋತ್ಸಾಹಿಸಬಹುದು) Head, shoulders, knees and toes . ರೈಮ್ ಅನ್ನು ಮಕ್ಕಳೊಂದಿಗೆ ಅಭಿನಯದೊಂದಿಗೆ ಮಾಡಿಸಿ
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಶಬ್ದದ ಅರಿವು, ಸ್ಮರಣೆ ಮತ್ತು ಪರಿಸರದ ಅರಿವು.
ಚಟುವಟಿಕೆ : ಆಲಿಸಿ ಹೇಳು (ಗುರಿ 3) ಉದ್ದೇಶಗಳು:-
ಶಬ್ದವನ್ನು ಆಲಿಸಿ ಗುರುತಿಸುವುದು.
ಅಗತ್ಯ ಸಾಮಗ್ರಿಗಳು : ಶ್ರವಣ ಉಪಕರಣ
ವಿಧಾನ : ಮಕ್ಕಳನ್ನು ವಿವಿಧ ಗುಂಪುಗಳಲ್ಲಿ ಕುಳಿತುಕೊಳ್ಳಲು ಹೇಳುವುದು. ಪ್ರತಿ ಗುಂಪಿನ ಮಕ್ಕಳು ಶ್ರವಣಉಪಕರಣದ ಸಹಾಯದಿಂದ ಪ್ರಾಣಿಗಳ ಧ್ವನಿಗಳನ್ನು ಆಲಿಸಿ, ಯಾವ ಪ್ರಾಣಿ ಎಂದು ಗುರುತಿಸುವುದು. ಪ್ರತಿ ಮಗುವಿಗೂ ಅವಕಾಶ ಸಿಗುವವರೆಗೆ ಚಟುವಟಿಕೆ ಮುಂದುವರೆಸುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸ್ವಯಂ ಮತ್ತು ಇತರರ ಬಗ್ಗೆ ಅರಿವು. ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ,
ಚಟುವಟಿಕೆ : ಅಭಿನಯ ಗೀತೆಗಳು/ನಾಟಕಗಳು. (ಗುರಿ - 1)
ರೇಲಾ ರೇಲಾ ರೇಲಾ ರೇಲಾ ರೇಲಾ ರೇಲಾ ರೇಲಾ.... ಅಡವಿ ತಾಯಿಗೆ ವಂದನೆ ನಮ್ಮತಾಯಿ ಅಡವಿಗೆ ವಂದನೆ. ಅಡವಿ ಚೆನ್ನಾಗಿದ್ರೆ ಅನ್ನಕ್ಕೆ ಕೊರತೆಯಿಲ್ಲ. ಬೆಳೆಯು ಹಟ್ಟಿಗೆ ಬಂದ್ರೆ ಹಬ್ಬ ಮಾಡೋಣ ಎಲ್ಲ ॥ಪ॥
ಉದ್ದೇಶಗಳು:
ಶಾರೀರಿಕ ಬೆಳವಣಿಗೆಯ ವಿಕಾಸ ಹೊಂದುವುದು.
• ಪದಸಂಪತ್ತು ಹೆಚ್ಚುವುದರೊಂದಿಗೆ ಪ್ರಾಸ, ಲಯ, ಸಂದರ್ಭ ಹಾಗೂ ಸ್ಪಷ್ಟವಾಗಿ ಉಚ್ಚಾರಿಸುವುದು.
• ಆಂಗಿಕ ಭಾವನೆಗಳನ್ನು ಗುರ್ತಿಸುವುದು.
ಸಾಮಗ್ರಿಗಳು: ಪ್ರಾಸಗೀತೆಗಳ ಪ್ರತಿ.
ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು. ಸುಗಮಕಾರರು ಮಕ್ಕಳಿಗೆ ಗೊತ್ತಿರುವ ಪ್ರಾಸಗೀತೆಗಳನ್ನು ಹಾಡಲು ಅವಕಾಶ ಕಲ್ಪಿಸುವುದು. ಪ್ರಾಸಗೀತೆಗಳನ್ನು ಆಂಗಿಕ ಚಲನವಲನಗಳಿಂದ ಹಾಡಿಸುವುದು.
ಪ್ರಾಸಗೀತೆಗಳಲ್ಲಿನ ಪ್ರಾಸ ಪದಗಳನ್ನು ಆಲಿಸಿ ಆನಂದಿಸಲು ಪ್ರೋತ್ಸಾಹ ನೀಡುವುದು.
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ : ಅವಧಾನ ಮತ್ತು ಆಲಿಸುವಿಕೆ. ಅನುಕ್ರಮ ಚಿಂತನೆ, ಸ್ಕೂಲ ಸ್ನಾಯು ಕೌಶಲಗಳ ಅಭಿವೃದ್ಧಿ.
| ಚಟುವಟಿಕೆ : ಧ್ವನಿ ವ್ಯತ್ಯಾಸಗಳನ್ನು ಗುರುತಿಸುವುದು.(ಗುರಿ-2)
ಉದ್ದೇಶಗಳು : ಭಿನ್ನ ಪದಗಳನ್ನು ಆಲಿಸಿ ವ್ಯತ್ಯಾಸ ಗುರುತಿಸುವುದು.
ಪದಗಳನ್ನು ಅನುಕ್ರಮವಾಗಿ ಹೇಳುವುದನ್ನು ರೂಢಿಸುವುದು.
. ಧ್ವನಿಗೆ ಸಂಬಂಧಿಸಿದಂತೆ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು.
ಅಗತ್ಯ ಸಾಮಗ್ರಿಗಳು : ಸೀಮೆ ಸುಣ್ಣ, ಮಾರ್ಕರ್, ಕ್ರೇಯಾನ್ಸ್, ಕ್ರಮಸಂಖ್ಯೆ ಬರೆದಿರುವ ಚಾರ್ಟ್
ವಿಧಾನ : ಶಿಕ್ಷಕರು ನಾಲ್ಕು ಪದಗಳನ್ನು ಗಟ್ಟಿಯಾಗಿ ಹೇಳುವುದು ಅವುಗಳಲ್ಲಿ ಮೂರು ಪದಗಳು ಒಂದೇ ಆರಂಭಿಕಧ್ವನಿಯಿಂದ ಪ್ರಾರಂಭವಾಗಬೇಕು ಒಂದು ಪದ ವಿಭಿನ್ನ ಧ್ವನಿಯಿಂದ ಪ್ರಾರಂಭವಾಗಬೇಕು ಉದಾಹರಣೆ ಪಟ,
ಪದಕ, ಚರಕ ಪುಸ್ತಕ ಇವುಗಳಲ್ಲಿ ವಿಭಿನ ಧ್ವನಿಯ ಪದ ಯಾವುದು? ಎಂದು ಕೇಳಿ ಗುರುತಿಸಲು ಹೇಳುವುದು..
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಚಟುವಟಿಕೆ : ಚಿತ್ರ ಸಂಪುಟ (ಗುರಿ-2) ವಿಷಯ: ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳು /ವಿಷಯಗಳು' ಉದ್ದೇಶಗಳು:
• ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥಮಾಡಿಕೊಳ್ಳುವುದು.
• ಸಂತೋಷ ಮನೋರಂಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಓದುವುದು.
ಅಗತ್ಯ ಸಾಮಗ್ರಿಗಳು : ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳಿಗೆ ಸಂಬಂಧಿಸಿದ ಚಿತ್ರಪಟ. ಇದಕ್ಕೆ
ಪೂರಕವಾದ ಕಥನ/ ಕವಿತೆ/ ಹಾಡುಗಳ ಪಟಿ, ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.
* ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು,
* ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು ಹೇಳುವುದು/ ಬರೆಯುವುದು.
* ಮಾದರಿ ಚಿತ್ರಗಳನ್ನು (ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳಿಗೆ ಸಂಬಂಧಿಸಿದ) ಓದುವುದು ಮತ್ತು ಅದರ ಕುರಿತಾಗಿ ಪ್ರತಿಕ್ರಿಯಿಸುತ್ತಾ ಶಿಕ್ಷಕರೊಂದಿಗೆ ಚರ್ಚಿಸುವರು.
ವೈಯಕ್ತಿಕ ಚಿತ್ರ ಸಂಪುಟ : ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿ ಮಗು ಸವ ಚಿತ್ರಗಳನ್ನು ಓದಿ ಗ್ರಹಿಸಿ ವೈಯಕ್ತಿಕವಾಗಿ ಚರ್ಚಿಸಲು ಅನುವು ಮಾಡಿಕೊಡುವುದು. ಆ ಚಿತ್ರದಓದಿನ ಗ್ರಹಿಕೆಗಳನ್ನು ಅಭಿವ್ಯಕ್ತಪಡಿಸು
ಉದಾ : ಚಂದ್ರ, ನಕ್ಷತ್ರಗಳು, ರಸ್ತೆ ದೀಪಗಳು ಇತ್ಯಾದಿ.. ಚಿತ್ರಗಳು/ ವಿಡಿಯೋಗಳು ಶಿಕ್ಷಕರು ಸುಗಮಕಾರಿಕೆಯಲ್ಲಿ
ಬಳಸಬಹುದಾದ ಬೆಳವಣಿಗೆಯ ಪ್ರಶ್ನೆಗಳು:
• ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳು ಯಾವುವು?
. ಅವುಗಳಲ್ಲಿ ನಿನಗೆ ಇಷ್ಟವಾದ ವಸ್ತುಗಳು ಯಾವುವು?
ಹೀಗೆ ಶಿಕ್ಷಕರು ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ತರಗತಿಯನ್ನು ಅನುಕೂಲಿಸುವುದು.
ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳ ಚಿತ್ರಗಳನ್ನು / ಚಿತ್ರಪಟಗಳನ್ನು/ ವಿಡಿಯೋ/ ಹಾಡು/ಕಥೆಗಳನ್ನೂ ಬಳಸಿ ಅಥವಾ ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸಬಹುದು.
ಸದರಿ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಮುಕ್ತವಾಗಿ ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಹಾಗೂ ತಮ್ಮ ಸಹಜ ಭಾಷೆಯಲ್ಲಿ ಚರ್ಚಿಸಲು ಅವಕಾಶ ಮಾಡಿಕೊಡುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ.
ಚಟುವಟಿಕೆ ಹೆಸರು : ಪುಸ್ತಕ ರಚನೆ
ಉದ್ದೇಶಗಳು:
• ಮಕ್ಕಳ ಹಸ್ತಪತ್ರಿಕೆಯನ್ನು ಸಿದ್ಧಪಡಿಸುವುದು.
ಮಕ್ಕಳ ಇಷ್ಟದ ಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ತಯಾರಿಸುವುದು.
• ಚಿತ್ರಗಳನ್ನು ಬಿಡಿಸುವ ಮತ್ತು ಸಂಗ್ರಹಿಸುವ ಹವ್ಯಾಸ ಬೆಳೆಸುವುದು.
ಅಗತ್ಯ ಸಾಮಗ್ರಿಗಳು: ಹಾಳೆಗಳು, ಬಣ್ಣಗಳು, ಚಾರ್ಟ್ ಪೇಪರ್
ವಿಧಾನ: ಶಿಕ್ಷಕರು ತರಗತಿ ನೋಟ್ ಪುಸ್ತಕಗಳನ್ನು ತಯಾರಿಸಲು ಮಕ್ಕಳಿಗೆ ಸಹಾಯ ಮಾಡುವುದು.. ಇದರಲ್ಲಿ ಪ್ರತಿ ಮಗುವು ಒಂದು ಹಾಳೆಯಲ್ಲಿ ಸೂಚಿತ ವಿಷಯದ ಬಗ್ಗೆ ಚಿತ್ರ ಬಿಡಿಸಲು ಅಥವಾ ಬರೆಯಲು ತಿಳಿಸುವುದು.
ನಂತರ ಆ ಹಾಳೆಯನ್ನು ತರಗತಿ ನೋಟ್ಪುಸ್ತಕಕ್ಕೆ ಸೇರಿಸಲು ನೀಡುವ ಮೂಲಕ ತನ್ನ ಕೊಡುಗೆಯನ್ನು ಸಲ್ಲಿಸಲು ಅವಕಾಶ ಕೊಡುವು
ಎಲ್ಲಾ ಮಕ್ಕಳ ಹಾಳೆಯನ್ನು ಸೇರಿಸಿ ತರಗತಿ ನೋಟ್ ಪುಸ್ತಕವನ್ನು ರಚಿಸುವುದು.ಸಲಹಾತ್ಮಕ ವಿಷಯ:
ಅವಧಿ - 6(40ನಿ)
*ಹೊರಾಂಗಣ ಆಟಗಳು*
ನನ್ನ ಇಷ್ಟದ ಆಟ
ಚಟುವಟಿಕೆ : ಎಷ್ಟಪ್ಪ? ಎಷ್ಟು? ನೀವು ಹೇಳಿದಷ್ಟು ಸಾಮರ್ಥ್ಯ : ಸಂಖ್ಯಾ ಜ್ಞಾನ ಬೆಳೆಸುವುದು
ಸಾಮಗ್ರಿ:ವಿಧಾನ : ಮಕ್ಕಳನ್ನು ವೃತಾಕಾರದಲ್ಲಿ ನಿಲ್ಲಿಸಿ ಶಿಕ್ಷಕರು ಎಷ್ಟಪ್ಪ ಎಷ್ಟು ಹೇಳಿದಾಗ ಮಕ್ಕಳು ನೀವು ಹೇಳಿದಷ್ಟು ಎಂದು ಉತ್ತರಿಸುವರು ಶಿಕ್ಷಕರು ಹೇಳಿದ ಸಂಖ್ಯೆಗೆ ಅನುಗುಣವಾಗಿ ಮಕ್ಕಳು ಗುಂಪುಗೂಡಬೇಕು ಎಂದು
ಸೂಚಿಸುವುದು, ಸಂಖ್ಯೆಗೆ ಅನುಗುಣವಾಗಿರದ ಗುಂಪು ಆಟದಿಂದ ಹೊರಗುಳಿಯುವುದು.
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಸೋನಿ & ಟೊಮೆಟೋಸ್
ಸಾಮಗ್ರಿಗಳು : ಸಾಹಿತ್ಯ. ಪಾತ್ರಗಳ ಚಿತ್ರಗಳು.
ಉದ್ದೇಶಗಳು :
> ಆಲಿಸುವ ಸಾಮರ್ಥ್ಯ ಬೆಳೆಸುವುದು.
> ಕುತೂಹಲ ಪ್ರವೃತ್ತಿಯನ್ನು ಹೆಚ್ಚಿಸುವುದು
> ಪದಸಂಪತ್ತನ್ನು ಹೆಚ್ಚಿಸುವುದು.
> ಅಭಿನಯ ಕೌಶಲವನ್ನು ಬೆಳೆಸುವುದು.
ವಿಧಾನ :
> ಕಥೆಯನ್ನು ಓದಿ ಪುನರಾವಲೋಕನ ಮಾಡಿಕೊಳ್ಳುವುದು.
> ಕಥೆಯ ಪಾತ್ರಗಳ ಹೆಸರುಗಳನ್ನು ಮಕ್ಕಳಿಂದ ಹೇಳಿಸುತ್ತಾ ನಿರೂಪಿಸುವುದು.
> ಇದೇ ರೀತಿಯ ಚಿಕ್ಕ ಕಥೆಗಳನ್ನು ಶಿಕ್ಷಕರು ಹೇಳುವುದು.
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment