*ವಿದ್ಯಾಪ್ರವೇಶ ದಿನ-8*
https://nalikalirenukaradhyatlm.blogspot.com/
*ಅಡಿಯೋ ಲಿಂಕ್*
ಕ್ರಿಯಾಶೀಲ ತಾರೆಯರು ಶಿವಮೊಗ್ಗ
https://drive.google.com/file/d/1Zy3Mu7ulgUAAhELB0BIhMAgaOk-LXwD1/view?usp=drivesdk
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ : ಕದಮ್ ತಾಲ್
ಸಾಮಗ್ರಿಗಳು: ಡ್ರಮ್/ತಂಬೂರಿ
1. ಮೂರು ಬಾರಿ ಚಪ್ಪಾಳೆ ತಟ್ಟುವ ಮೂಲಕ ತರಗತಿ
ಪ್ರವೇಶಿಸಲು ಮಕ್ಕಳಿಗೆ ಹೇಳಿ- ಮತ್ತು 'ಹಾಯ್ ಟೀಚರ್" ಎಂದು ಹೇಳಿಸಿ. "ಹಲೋ," ಎಂದು ಮಕ್ಕಳ ಹೆಸರು ಹೇಳಿ ಅವರನ್ನು ಸ್ವಾಗತಿಸಿ.
ಹಿಂದಿನ ದಿನದಂತೆ ಕದಮ್ ತಾಲ್ ಚಟುವಟಿಕೆ ಮಾಡುವುದು.
2. ಪ್ರತಿ ಮಗುವನ್ನು ಅವನ/ ಅವಳ ಹೆಸರಿನಿಂದ ಕರೆದು "Good morning, welcome ""Have a magical Monday" ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಅವರು "Thank you. Same to you" ಎಂದು ಉತ್ತರಿಸಲಿ. ಅವರಿಗೆ Fist Bump ನೀಡಲು ಹೇಳಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ : ನನ್ನನ್ನು ತಿಳಿಯಿರಿ
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.
ಉದ್ದೇಶ: ನಿರ್ದಿಷ್ಟ ವಿಷಯದ ಕುರಿತು ಮಾತನಾಡುವುದು.
ಸಾಮಗ್ರಿಗಳು: ಬ್ಯಾಗ್, ಪೇಪರ್ ಬಾಲ್, ಬಾಕ್ಸ್, ವಾಲ್, ಬಾಚಣಿಗೆ, ಪೆನ್ಸಿಲ್, ಕಲ್ಲು, ಗೋಲಿ, ಹತ್ತಿ, ಆಟಿಕೆ.ಕೋಲು, ಒಣ ಎಲೆ, ಸಾಬೂನು ಇತ್ಯಾದಿ
ವಿಧಾನ:
1. ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ.
3. ಎರಡು ಬಾರಿ ಚಪ್ಪಾಳೆ ತಟ್ಟಿ, ಒಮ್ಮೆ ಜಿಗಿಯಿರಿ. (Clap twice, jump once)
ಎರಡು ಬಾರಿ ಕುಪ್ಪಳಿಸಿ, ಕೈಗಳನ್ನು ಬೀಸಿ. (Hop twice, Wave your hands) ಚಟುವಟಿಕೆಯನ್ನು ಮುಂದುವರಿಸಿ.
4. ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ, ಶಿಕ್ಷಕರು ವಸ್ತುಗಳು ಇರುವ ಚೀಲದೊಂದಿಗೆ ಮಧ್ಯದಲ್ಲಿ ಕುಳಿತುಕೊಳ್ಳಲಿ.
5. ಶಿಕ್ಷಕರು ಕಾಗದದ ಚೆಂಡನ್ನು ಪಾಸ್ ಮಾಡಲಿ ಮತ್ತು ಶಿಕ್ಷಕರು stop ಎಂದು ಹೇಳಿದಾಗ ಯಾರ ಕೈಯಲ್ಲಿ ಚೆಂಡು ಇರುವುದೋ ಅವರು ಬಂದು ಚೀಲದಿಂದ ಒಂದು ವಸ್ತುವನ್ನು ಆರಿಸಿ, ಅದು ಏನು ಎಂದು ಮುಟ್ಟಿಹೇಳಬೇಕು.
6. ನಂತರ ಮಗುವನ್ನು ಅವನು/ ಅವಳು ವಸ್ತುವನ್ನು ಹೇಗೆ ಗುರುತಿಸಿತು ಎಂದು ಕೇಳಿ. ಮಗುವು ಅದರ ಆಕಾರ, ಬಣ್ಣ ಇತ್ಯಾದಿಗಳ ಕುರಿತು ಮಾತನಾಡಲಿ.
7. ಚಟುವಟಿಕೆಯನ್ನು ಪುನರಾವರ್ತಿಸಿ ಮತ್ತು ಪ್ರತಿ ಮಗುವಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಿ.
(ಸೂಚನೆ: ಶಿಕ್ಷಕರು ತಮ್ಮದೇ ಆದ ಪ್ರಶ್ನೆಗಳನ್ನು ಸೇರಿಸಬಹುದು ಮತ್ತು ಮಕ್ಕಳು ತಮ್ಮ ಸ್ಥಳೀಯ ಭಾಷೆಯಲ್ಲಿಯೂ ಮಾತನಾಡಲು ಪೋತಾಹಿಸಬಹುದು)
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು
ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಹೆಚ್ಚು-ಕಡಿಮೆ ಪರಿಕಲ್ಪನೆ, ವೀಕ್ಷಣೆ, ಗುರುತಿಸುವುದು, ಪರಿಸರದ ಅರಿವು.
ಚಟುವಟಿಕೆ : ಹೆಚ್ಚು-ಕಡಿಮೆ-ಸಮ (ಗುರಿ 3)
ಉದ್ದೇಶ:- ಹೆಚ್ಚು-ಕಡಿಮೆ-ಸಮದ ಪರಿಕಲ್ಪನೆ ಹೊಂದುವುದು.
ಅಗತ್ಯ ಸಾಮಗ್ರಿಗಳು : ವಿಭಿನ್ನ ಪ್ರಮಾಣದ ಧಾನ್ಯಗಳು, ಆಟಿಕೆ ನೋಟುಗಳು ಮತ್ತು ನಾಣ್ಯಗಳು, ಚಿತ್ರಪಟಗಳು
ಅ.ಹಾ:-IL-5 ಹೆಚ್ಚು ಕಡಿಮೆ ಸಮಗುರ್ತಿಸೋಣ
ವಿಧಾನ : ಅಕ್ಕಿ/ಬೇಳೆ/ರಾಗಿ/ಕಡಲೆ ಮುಂತಾದ ಧಾನ್ಯಗಳ ವಿಭಿನ್ನ ಪ್ರಮಾಣದ ರಾಶಿಗಳನ್ನು ಮಾಡುವುದು.ಮಕ್ಕಳು ವೀಕ್ಷಿಸಿ ಯಾವುರ ಹೆಚ್ಚು/ಕಡಿಮೆ ಎಂಬುದನ್ನು ಗುರುತಿಸುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸಮಾಜಮುಖಿ ನಡವಳಿಕೆಯ ವಿಕಾಸ, ಇತರರ ಭಾವನೆ ಮತ್ತು ಹಕ್ಕುಗಳನ್ನು ಗೌರವಿಸುವುದು.
ಸೃಜನಶೀಲತೆ ಮತ್ತು ಸೌಂದರ್ಯಪ್ರಜ್ಞೆಯ ವಿಕಾಸ, ಗಮನಿಸುವಿಕೆ.ಕಲ್ಪನಾ ಶಕ್ತಿಯೆ ವಿಕಾಸ ಮತ್ತು ಪದಸಂಪತ್ತಿನ ಅಭಿವೃದ್ಧಿ,
ಚಟುವಟಿಕೆ : ಹಬ್ಬಗಳ ಆಚರಣೆ. (ಗುರಿ - 1)
• ಮಕ್ಕಳಿಗೆ ನಮ್ಮ ಸಂಸ್ಕೃತಿಯಲ್ಲಿರುವ ಅನೇಕ ವಿಷಯಗಳ ಅರಿವಾಗುವುದು.
ಉದ್ದೇಶಗಳು:
ಸೌಂದರ್ಯ ಪ್ರಜ್ಞೆಯ ವಿಕಾಸವಾಗುವುದು.
• ವಿವಿಧ ರಾಷ್ಟ್ರೀಯ ಹಬ್ಬಗಳ ಆಚರಣೆಯಿಂದ ದೇಶ ಪ್ರೇಮ ಮೂಡುವುದು.
ಸಾಮಗ್ರಿಗಳು : ಹಬ್ಬಗಳ ಚಿತ್ರಗಳು / ಮಿಂಚುಪಟ್ಟಿಗಳು.
ವಿಧಾನ : ಮಕ್ಕಳಿಗೆ ಪರಿಚಿತ ಹಾಗೂ ಪ್ರಮುಖ ಹಬ್ಬಗಳ (ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳು) ಪರಿಚಯ ಮತ್ತು ಆಚರಣೆಯ ವಿಧಾನಗಳನ್ನು ಪರಿಚಯಿಸುವುದು.
ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಮಕರಸಂಕ್ರಾಂತಿ, ದೀಪಾವಳಿ, ಹೋಳಿ, ಈದ್, ಕ್ರಿಸ್‌ಮಸ್. ಗುರುಪೂರ್ಣಿಮಾ ಮುಂತಾದ ವಿವಿಧ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸೂಕ್ತ ಸುರಕ್ಷತಾ ಕ್ರಮಗಳ ಬಗ್ಗೆ ವಿವರಿಸಬೇಕು.ಇದರಿಂದ ಭಾರತದಲ್ಲಿನ ವಿವಿಧ ಹಬ್ಬಗಳ ಆಚರಣೆ ಹೇಗೆ ಎಂಬುದನ್ನು ತಿಳಿಯುವರು.
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಆಲಿಸುವ ಕೌಶಲ, ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿ, ಔಪಚಾರಿಕ ಮಾತುಕತೆ, ಬಣ್ಣಗಳ ಕಲ್ಪನೆ
ಚಟುವಟಿಕೆ : ನೋಡಿ ಹೇಳು ( ಗುರಿ-2) ECL-8
ಉದ್ದೇಶಗಳು: * ಆಯ್ದುಕೊಂಡ ವಿಷಯದ ಬಗ್ಗೆ ನಿರರ್ಗಳವಾಗಿ ಮಾತನಾಡುವುದು.
ಔಪಚಾರಿಕ ಮಾತುಗಾರಿಕೆಯ ಕೌಶಲವನ್ನು ಬೆಳೆಸುವುದು.
ಆಲಿಸಿದ ಅಂಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳುವುದು.
ಸೃಜನಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.
ಸಾಮಗ್ರಿ : ಪ್ರಾಣಿ, ಪಕ್ಷಿ, ವಾಹನಗಳು ಇತ್ಯಾದಿಗಳು ಚಿತ್ರ/ ಆಟಿಕೆ
ವಿಧಾನ: ಪ್ರಾಣಿ/ ಪಕ್ಷಿ/ ವಾಹನಗಳು ಇತ್ಯಾದಿಗಳ ಆಟಿಕೆ/ ಚಿತ್ರಗಳನ್ನು ಚೀಲದಲ್ಲಿರಿಸಿ ಮಕ್ಕಳನ್ನು ಒಬ್ಬೊಬ್ಬರನ್ನಾಗಿ ಕರೆದು ಚೀಲದಿಂದ ಯಾವುದಾದರೂ ಒಂದು ಚಿತ್ರ/ಆಟಿಕೆಯನ್ನು ತೆಗೆದುಕೊಂಡು ಅದರ ಆಕಾರ, ಬಣ್ಣ, ಉಪಯೋಗ, ಲಕ್ಷಣಗಳ ಬಗ್ಗೆ ಮಾತನಾಡಲು ತಿಳಿಸಿ
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ ನಟನಾ ಓದು.
ಚಟುವಟಿಕೆ : ನೋಡಿ ಓದು (ಗುರಿ-2)
ಉದ್ದೇಶ : ಮುದ್ರಿತ ವಸ್ತುಗಳ ಮೇಲಿರುವ ಚಿತ್ರ ಮತ್ತು ಬರೆಹಗಳನ್ನು ಗಮನಿಸಿ ಊಹಿಸಿ ಓದುವರು.
ಅಗತ್ಯ ಸಾಮಗ್ರಿಗಳು: ವಸ್ತುಗಳ ಮೇಲಿರುವ ಮುದ್ರಿತ ಬರೆಹಗಳು ಬಸ್ ಚಿಕೆಟ್, ರಸೀದಿಗಳು(ಯಾಪರ್ಸ್/ ಕವರ್ಸ್)
ವಿಧಾನ: ಒಂದು ಖಾಲಿ ಪೆಟ್ಟಿಗೆಯಲ್ಲಿ ಮುದ್ರಿತ ಬರಹವನ್ನೊಳಗೊಂಡ ವಿವಿಧ ವಸ್ತುಗಳನ್ನು ಅಥವಾ ಆ ವಸ್ತುಗಳಕವರ್‌ಗಳನ್ನು ಇಡುವುದು. ಮಕ್ಕಳು ಅವುಗಳನ್ನು ಹೊರತೆಗೆದು ಅವುಗಳನ್ನು ಗುರುತಿಸುವುದು ಮತ್ತು ಓದುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ. ಅವಧಾನ ಮತ್ತು ಆಲಿಸುವುದು. ಸೃಜನಶೀಲಚಿಂತನೆ, ಪದಸಂಪತ್ತಿನ ಅಭಿವೃದ್ಧಿ.
ಚಟುವಟಿಕೆ : ಹಂಚಿತ ಬರೆಹ (ಗುರಿ : 2) ECW-8
ಉದ್ದೇಶಗಳು:
ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.
ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.
ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.
ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು.
ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್
ವಿಧಾನ: ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು.ಒಂದು ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.
ಸಲಹಾತ್ಮಕ ಸೂಚಿತ ವಿಷಯ:- ಮನೆ
• ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. ಮಕ್ಕಳೊಂದಿಗೆ ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು
ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ
ಗಮನಿಸಬೇಕಾದ ಅಂಶಗಳು:
ಬರೆಯಲು ತಿಳಿಸುವುದು. • ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು. ಅಂತಹ ಸನ್ನಿವೇಶದಲ್ಲಿ ಶಿಕ್ಷಕರು ಅದನ್ನು
ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು. ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರುತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ: ಕಣ್ಣಾಮುಚ್ಚಾಲೆ.
ಸಾಮರ್ಥ್ಯ: ಊಹಿಸುವ ಮತ್ತು ಅನ್ವೇಷಿಸುವ ಮನೋಭಾವ ಬೆಳೆಸುವುದು.
ಸಾಮಗ್ರಿ : ಇಲ್ಲ
• ಒಂದು ಮಗುವಿನ ಕಣ್ಣನ್ನು ಮುಚ್ಚಿ ಉಳಿದ ಮಕ್ಕಳಿಗೆ ಬಚ್ಚಿಟ್ಟುಕೊಳ್ಳಲು ಸೂಚಿಸುವುದು.
ವಿಧಾನ:
• ನಿಗದಿತ ಸಮಯದಲ್ಲಿ ಬಚ್ಚಿಟ್ಟುಕೊಂಡ ಮಕ್ಕಳನ್ನು ಹುಡುಕಲು ತಿಳಿಸುವುದು.
ಆ ಮಗು ಅಡಗಿಕೊಂಡ ಮಕ್ಕಳಲ್ಲಿ ಯಾರನ್ನು ಮೊದಲು ಹುಡುಕುವನೋ ಅವರು ಈ ಆಟವನ್ನು ಮುಂದುವರೆಸುತ್ತಾರೆ.
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಸೋನಿ & ಟೊಮೆಟೋಸ್
ಸಾಮಗ್ರಿಗಳು : ಸಾಹಿತ್ಯ, ಚಿತ್ರಗಳು/ವಸ್ತುಗಳು
ಉದ್ದೇಶಗಳು :
> ಆಲಿಸುವ ಸಾಮರ್ಥ್ಯ ಬೆಳೆಸುವುದು.
ವಿಧಾನ :
> ಮಾತನಾಡುವ ಸಾಮರ್ಥ್ಯವನ್ನು ಬೆಳೆಸುವುದು.
> ಶಿಕ್ಷಕರು ಕಥೆಯ ರಚನಾ ಶೈಲಿಯನ್ನು ಅರ್ಥಮಾಡಿಕೊಂಡು ಓದಿಕೊಳ್ಳುವುದು.
> ಕಥೆಯ ಪಾತ್ರಗಳನ್ನು/ವಸ್ತುಗಳನ್ನು ಮಕ್ಕಳಿಗೆ ಅರ್ಥ ಮಾಡಿಸುವುದು. > ಮೊದಲು ಕಥೆಯನ್ನು ಕನ್ನಡದಲ್ಲಿಯೇ ಹೇಳುವುದು.
> ನಂತರವೂ ಕಥೆಯನ್ನು ಕನ್ನಡದಲ್ಲಿ ಹೇಳುತ್ತ ನಡು ನಡುವೆ ಕಥೆಯ ಪಾತ್ರಗಳನ್ನು/ವಸ್ತುಗಳನ್ನು ಇಂಗ್ಲೀಷನಲಿ ಪರಿಚಯಿಸುವುದು.
> ಆಯ್ದ ಪದಗಳನ್ನು ಪುನರುಚ್ಚರಿಸಲು ಮಕ್ಕಳಿಗೆ ಹೇಳುವುದು.
ಕಥೆ : (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆಹಂಚಿಕೊಳ್ಳಲು ಪ್ರೋತ್ಸಾಹಿಸಿ,
• ಬೀಳ್ಕೊಡಿ.
ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,
• "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ,
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment