Sunday, 9 June 2024

ವಿದ್ಯಾಪ್ರವೇಶ ದಿನ -7

 https://nalikalirenukaradhyatlm.blogspot.com/

 *ಆಡಿಯೋ ಲಿಂಕ್ ದಿನ 7* 

(ಕ್ರಿಯಾಶೀಲ ತಾರೆಯರು ಶಿವಮೊಗ್ಗ)

https://drive.google.com/file/d/1XrO4QwP1MhN25jMSYJf4vShQVPK7OaoH/view?usp=drivesdk

*ವಿದ್ಯಾಪ್ರವೇಶ ದಿನ-7* 


✒️🚁🎮🎨🎲🧮📏🔍




*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

*ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ.


• ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ.


• “ಗುಡ್ ಮಾರ್ನಿಂಗ್ ಮಕ್ಕಳೇ, ಹೇಗಿದ್ದೀರಿ?" ಎಂದು ಹೇಳುವ ಮೂಲಕ ಮಕ್ಕಳನ್ನು ಸ್ವಾಗತಿಸಿ. ಮತ್ತು " ಮಾನಿರ್ಂಗ್ ಟೀಚರ್" ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ. ನಾವು ಚೆನ್ನಾಗಿದ


ಧನ್ಯವಾದಗಳು".


ಶುಭಾಶಯಗಳಿಗೆ ಮಕ್ಕಳು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸುವವರೆಗೆ ಚಟುವಟಿಕೆಯನ್ನು ಪುನರಾವರ್ತಿಸಿ.


ತರಕಾರಿ ತರಕಾರಿ/ ಬೇಕೆ ಬೇಕೆ ಹಾಡನ್ನು ಹಾಡಿಸಿ ಈ ಕೆಳಕಂಡ ರೀತಿಯ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಉತ್ತರವನ್ನು


ಪಡೆಯುವುದು.


ಮಕ್ಕಳಿಗೆ ಕೇಳಬಹುದಾದ ಪ್ರಶ್ನೆಗಳು:


• ನಿಮ್ಮ ಮನೆಯಲ್ಲಿ ಯಾರು ತರಕಾರಿ ತರುತ್ತಾರೆ?


• ನಿನಗೆ ಯಾವ ತರಕಾರಿ ಇಷ್ಟ? ಕುಂಬಳಕಾಯಿ ನೋಡಿದ್ದೀರಾ? •


ಯಾವ ಯಾವ ತರಕಾರಿ ತಿಂದಿದ್ದೀಯಾ? ಇತ್ಯಾದಿ....




ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು


ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ : ಹೊಂದಿಸುವುದು, ಪರಿಸರದ ಅರಿವು, ಬಣ್ಣದ ಕಲ್ಪನೆ, ಆಕಾರ-ಗಾತ್ರ


ಚಟುವಟಿಕೆ : ನನ್ನನ್ನು ಗುರುತಿಸು. (ಗುರಿ - 3)


ಉದ್ದೇಶ : ವಸ್ತುವಿನ ಆಕಾರ, ಗಾತ್ರ ಮತ್ತು ಬಣ್ಣಗಳ ಆಧರಿಸಿ ಜೋಡಿಸುವುದು.


ಅಗತ್ಯ ಸಾಮಗ್ರಿಗಳು : ಪರಿಸರದಲ್ಲಿಯ ವಿವಿಧ ರೀತಿಯ ವಸ್ತುಗಳು, ಬ್ಲಾಕ್‌ಗಳು, ಚೌಕಗಳು, ಚಿಕ್ಕ ಕಲ್ಲುಗಳು,


ಬಾಟಲ್ ಮುಚ್ಚಳಗಳು, ನಿಂಬೆಹಣ್ಣುಗಳು, ಚೆಂಡುಗಳು ಇತ್ಯಾದಿ.


ವಿಧಾನ : ಒಂದೇ ರೀತಿಯ ವಸ್ತುಗಳನ್ನು ಗುರುತಿಸಲು ಮಕ್ಕಳಿಗೆ ಎಂಟರಿಂದ ಹತ್ತು ವಸ್ತುಗಳನ್ನು ನೀಡುವುದು. ಮಕ್ಕಳು ಸಣ್ಣ ಗುಂಪುಗಳಲ್ಲಿ ಕೆಲಸ ಮಾಡುವಾಗ ಪ್ರತಿ ಗುಂಪಿಗೆ ಬ್ಲಾಕ್‌ಗಳು, ಸೀಮೆಸುಣ್ಣ, ಬಾಟಲ್ ಮುಚ್ಚಳ, ಚೆಂಡುಗಳನ್ನು ನೀಡಿ, ಬಾಟಲ್ ಮುಚ್ಚಳಗಳನ್ನು ಮಕ್ಕಳಿಗೆ ಹುಡುಕಲು ಹೇಳುವುದು. ನೀಡಲಾದ ವಸ್ತುಗಳನ್ನು ಆಕಾರ, ಗಾತ್ರ, ಬಣ್ಣ, ಗುಣಲಕ್ಷಣಗಳ ಆಧಾರದಲ್ಲಿ ಹೊಂದಿಸುವುದು. ವಿಭಿನ್ನ ರೀತಿಯ ವಸ್ತುಗಳನ್ನು ನೀಡಿ ಒಂದಕ್ಕಿಂತ ಒಂದು ಹೇಗೆ ಭಿನ್ನವಾಗಿವೆ ಎಂದು ತಿಳಿಸಲು ಹೇಳುವುದು.


ಅ.ಹಾ:-IL-4 ವಿನ್ಯಾಸದಲ್ಲಿ ಕಾಣೆಯಾದ ಭಾಗವನ್ನು ಹೊಂದಿಸೋಣ


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.


ಚಟುವಟಿಕೆ : ಆಕೃತಿಗಳನ್ನು ಅಂಟಿಸು./ ನನ್ನನ್ನು ಹುಡುಕು. (ಗುರಿ - 1 ಮತ್ತು 3)


ಉದ್ದೇಶಗಳು :


• ಕತ್ತರಿಯನ್ನು ಹಿಡಿದು ಹಾಳೆಯನ್ನು ಕತ್ತರಿಸುವ ವಿಧಾನವನ್ನು ತಿಳಿಯುವುದು.


• ಕೈ ಮತ್ತು ಬೆರಳುಗಳ ಕುಶಲತೆ ಹೆಚ್ಚುವುದರ ಜೊತೆಗೆ ಏಕಾಗ್ರತೆ ಹೆಚ್ಚಿಸಿಕೊಳ್ಳುವುದು.


ಸಾಮಗ್ರಿಗಳು :


ವಸ್ತುಗಳನ್ನು ಹೋಲಿಸುವುದನ್ನು ಕಲಿಯುವುದು.


1. ಕತ್ತರಿ, ಬಣ್ಣದ ಪೇಪರ್, ಆಂಟು.


2. ಸೀಮೆಸುಣ್ಣ, ಪೆನ್ಸಿಲ್, ಪುಸ್ತಕಗಳು, ಕಲ್ಲು/ ಬೀಜ/ ಚೀಲ (ಮೂರಕ್ಕಿಂತ ಹೆಚ್ಚು ವಸ್ತುಗಳಿರಬೇಕು.)


ವಿಧಾನ :


1. ಬಿಳಿ ಪೇಪರಿನಲ್ಲಿ ವಿವಿಧ ಆಕೃತಿಗಳ (ವೃತ್ತ, ತ್ರಿಭುಜ,ಚೌಕ ಮತ್ತು ಆಯತ) ಚಿತ್ರ ಗಳನ್ನು ಕತ್ತರಿಸಿ ಇನ್ನೊಂದು ಬಣ್ಣದ ಹಾಳೆಯ ಮೇಲೆ ಆಂಟಿಸಲು ಹೇಳುವುದು.


2. ಶಿಕ್ಷಕರು ಮಗುವಿಗೆ ಒಂದು ವಸ್ತುವನ್ನು ನೀಡಬೇಕು. ಅದೇ ರೀತಿಯ ವಸ್ತು ಮತ್ತು ಅದಕ್ಕೆ ಸಂಬಂದಿಸಿದ ಇತರೆವಸ್ತುಗಳ ತರಗತಿ ಕೊಠಡಿಯಲ್ಲಿ ಹುಡುಕಲು ಹೇಳಬೇಕು. ಈ ಆಟವನ್ನು ಇತರ ಅನೇಕ ವಸ್ತುಗಳೊಂದಿಗೆ ಪುನರಾರ್ವತಿಸಬೇಕ ಹೆಚ್ಚುವರಿಯಾಗಿ ಸುಗಮಕಾರರು ನೆಲದ ಮೇಲೆ ಎರಡು ವೃತ್ತಗಳನ್ನು ಬರೆದು ಅದಕ್ಕೆ ಎ ಮತ್ತು ಬಿ ಎಂದು ಹೆಸರಿಸಬೇಕ ಪಡೆದ ವಸ್ತುಗಳನ್ನು ಎ ಗುಂಪಿಗೂ ಅದಕ್ಕೆ ಸಂಭಂದಿಸಿದ ವಸ್ತುವನ್ನು ಬಿ ಗುಂಪಿಗೂ ಹಾಕಲು ತಿಳಿಸುವುದು.


ಅ.ಹಾ:-HW-3 ಹೇಳಿದ ಸಂಖ್ಯೆಗಳಿಗೆ ನೀಡಿದ ಬಣ್ಣ ಹಾಕು


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ-ಶಬ್ದ ಸಹಸಂಬಂಧ.


ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) ECL-2 (2 ನೇ ದಿನದಿಂದ ಮುಂದುವರೆದಿದೆ.)


ಉದ್ದೇಶಗಳು:- ಧ್ವನಿ ಸಂಕೇತಗಳ ಅರಿವು ಮೂಡಿಸುವುದು.


* ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು.


* ಪದಗಳನ್ನು ಗ್ರಹಿಸಿ ಗುರುತಿಸುವುದು, ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.


ಅಗತ್ಯ ಸಾಮಗ್ರಿಗಳು - ಇಲ್ಲ


ಸಲಹಾತ್ಮಕ ವಿಷಯ : ಹಣ್ಣುಗಳು


ವಿಧಾನ:- ಸುಳಿವುಗಳ ಮೂಲಕ ತರಗತಿ ಹಣ್ಣುಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ.


ಉದಾಹರಣೆಗಾಗಿ ಶಿಕ್ಷಕರು 'ನನ್ನ ಮನಸ್ಸಿನಲ್ಲಿರುವ ಹಣ್ಣು ಹಸಿರು ಬಣ್ಣವನ್ನು ಹೊಂದಿದ್ದು ಅದರ ಹೆಸರು ದ್ರಾ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ದ್ರಾಕ್ಷಿ ಎಂದು ಗುರುತಿಸುವುದು. ಹೀಗೆಯೇ ವಿವಿಧಉದಾಹರಣೆಗಳನ್ನು


ನೀಡುವುದು. ಆಹಾ: E.C-2 ಧ್ವನಿ ಆಲಿಸಿ ಚಿತ್ರಕ್ಕೆ ಬಣ್ಣ ತುಂಬು


*ಅರ್ಥಗ್ರಹಿಕೆಯೊಂದಿಗಿನ ಓದು*

 

ಸಾಮರ್ಥ್ಯ: ಪದ ಸಂಪತ್ತು, ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು


ಚಟುವಟಿಕೆ : ಊಹಾತ್ಮಕ ಓದು (ಗುರಿ-2)


ಉದ್ದೇಶ : ಮಕ್ಕಳು ಪುಸ್ತಕದಲ್ಲಿನ ಚಿತ್ರ ಸನ್ನಿವೇಶವನ್ನು ನೋಡುವುದರ ಮೂಲಕ ಚಿತ್ರ ಸಂಕೇತಗಳನ್ನು ಅರ್ಥೈಸಿಕೊಂಡು ಸಂಬಂಧೀಕರಿಸಿಕೊಂಡು ಅಭಿವ್ಯಕ್ತಿಸುವುದು.


ಅಗತ್ಯ ಸಾಮಗ್ರಿಗಳು: ಸಚಿತ್ರ ಕೋಶ, ಸರಣಿ ಚಿತ್ರ ಕಥೆ ಪುಸ್ತಕ


ವಿಧಾನ: ಮಕ್ಕಳು ಚಿತ್ರಗಳನ್ನೊಳಗೊಂಡ ಪುಸ್ತಕಗಳ ಸಚಿತ್ರ ಕೋಶ, ಸರಣಿ ಚಿತ್ರ ಕಥೆ ಪುಸ್ತಕ ನೋಡಿ ಅಲ್ಲಿರುವ


ಸನ್ನಿವೇಶ ವನು, ಊಹೆ ಮಾಡಿ ಓದುವರು.


*ಉದ್ದೇಶಿತ ಬರಹ*  

ಸಾಮರ್ಥ್ಯ: ಕೈಕಣ್ಣು ಸಂಯೋಜನೆ, ಬರವಣಿಗೆ ಕೌಶಲಗಳ ಅಭ್ಯಾಸ, ಸೃಜನಶೀಲ ಅಭಿವ್ಯಕ್ತಿ. ಚಟುವಟಿಕೆ : ಮುಕ್ತ ಚಿತ್ರ ರಚನೆ (ಗುರಿ-2) ECW-6


ಉದ್ದೇಶಗಳು: • ಬರವಣಿಗೆಯ ಆರಂಭಿಕ ಕೌಶಲಗಳನ್ನು ರೂಢಿಸುವುದು.


• ಕಣ್ಣು-ಕೈಗಳ ಸಮನ್ವಯ ಕೌಶಲವನ್ನು ಅಭಿವೃದ್ಧಿಪಡಿಸುವುದು.


• ಕ್ರಿಯಾತ್ಮಕ ಅಭಿವ್ಯಕ್ತಿಗೆ ಅವಕಾಶ ನೀಡುವುದು.


ಅಗತ್ಯ ಸಾಮಗ್ರಿಗಳು: ಕ್ರೇಯಾನ್ಸ್, ಬಣ್ಣದ ಪೆನ್ಸಿಲ್‌ಗಳು, ಮಾರ್ಕರ್, ಸ್ಟೇಟ್ ಬಿಳಿಯ ಹಾಳೆಗಳು


ವಿಧಾನ: ವಾಲ್‌ಸ್ಟೇಟ್‌ನಲ್ಲಿ ಮುಕ್ತವಾಗಿ ಬರೆಯಲು. ಆನಿಸಿದ್ದನ್ನು ಬಿಡಿಸಲು ಅವಕಾಶ ಕಲ್ಪಿಸುವುದು. ಅವರ ಬರವಣಿಗೆ ಬಗ್ಗೆ ಮಾತನಾಡಲು ತಿಳಿಸುವುದು. ಅವರಿಗೆ ಪ್ರಶ್ನೆ ಕೇಳುತ್ತಾ ಬರವಣಿಗೆ ಬಗ್ಗೆ ಮಾಹಿತಿ ಪಡೆಯುವುದು.



 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ : ಬೌನ್ಸ್ ಮಾಡಿ ಚೆಂಡನ್ನು ಹಿಡಿಯುವುದು. (ಗುರಿ-1)


ಸಾಮರ್ಥ್ಯ : ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ.


ವಿಧಾನ : • ಮಕ್ಕಳನ್ನು ಪರಸ್ಪರ ಎದುರು ನಿಲ್ಲಿಸಿ ಒಬ್ಬರಿಗೊಬ್ಬರು ಚೆಂಡನ್ನು ಬೌನ್ಸ್ ಮಾಡಿ ಎಸೆಯಲು ಹಾಗೂ ಹಿಡಿಯಲು


ಬೇಕಾಗುವ ಸಾಮಗ್ರಿ : ಚೆಂಡು


ಸೂಚಿಸುವುದು.




ಅವಧಿ - 7(40ನಿ)

*ಕಥಾ ಸಮಯ*

ಶೀರ್ಷಿಕೆ : ಗೆಳೆಯರ ಬೇಸಾಯ


ಸಾಮಗ್ರಿಗಳು : ಮುಖವಾಡಗಳು


ಉದ್ದೇಶಗಳು :


> ಆಲೋಚನಾ ಶಕ್ತಿಯನ್ನು ವೃದ್ಧಿಸುವುದು ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.


> ಊಹಿಸುವ ಕೌಶಲವನ್ನು ಹೆಚ್ಚಿಸುವುದು.


> ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.


ವಿಧಾನ : ಗೊಂಬೆಗಳು


> ಗೊಂಬೆಗಳನ್ನು ಬಳಸಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಸಹಕರಿಸಿ,


ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.


(ಕಥೆಯನ್ನು ಆನಂದಿಸುವುದರಜೊತೆಗೆ ಆಲಿಸುತ್ತಿದ್ದಾರೆಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)



ಅವಧಿ -8(20ನಿ)

*ಮತ್ತೆ ಸಿಗೋಣ*


• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


• ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.



[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------




 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

    ಶಿಕ್ಷಕರು 


ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ



 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment