https://nalikalirenukaradhyatlm.blogspot.com/
*ಆಡಿಯೋ ಲಿಂಕ್*
https://drive.google.com/file/d/1oTdSW3sD3ivPx9Q7GCQYSIKoN703aAnl/view?usp=drivesdk
*ವಿದ್ಯಾಪ್ರವೇಶ ದಿನ-21*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ 1: My choice
ಅಗತ್ಯವಿರುವ ಸಾಮಗ್ರಿಗಳು: ಚಾರ್ಟ್
ವಿಧಾನ: ಮಕ್ಕಳು ತರಗತಿಯನ್ನು ಪ್ರವೇಶಿಸುವಾಗ ಚಾರ್ಟ್‌ನಲ್ಲಿ ನೀಡಿರುವ ಯಾವುದಾದರೊಂದು ಸಂಕೇತವನ್ನು ಆಯ್ಕೆ ಮಾಡುವಂತೆ ಹೇಳಿ.
ಮಗುವಿನ ಆಯ್ಕೆಯ ಅನುಸಾರ ಶಿಕ್ಷಕರು ಮಗುವನ್ನು ಸ್ವಾಗತಿಸ ಬೇಕು. ಉದಾ: ಮಗುವು ಹೈ ಫೈ ಆಯ್ಕೆ ಮಾಡಿದರೆ ಶಿಕ್ಷಕರು ಮಗುವಿಗೆ ಹೈ ಫೈ ನೀಡುವುದು.
“ಇಂದು ಯಾವ ವಾರ?” ಎಂದು ಮಕ್ಕಳನ್ನು ಕೇಳಿ ಮತ್ತು “ಇಂದು ಎಂಬ ಉತ್ತರ ಪಡೆಯಿರಿ.
ಹವಾಮಾನ ನಕ್ಷೆ ಮಾಡಿಸಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ ಅಭಿನಯದೊಂದಿಗೆ ರೈಮ್ ಹೇಳಿಕೊಡಿ.
Teacher: This is the way I clap my hands, Students :clap my hands,
Teacher: clap my hands,
Students: Clap, clap, clap.
Teacher: This is the way I tap my feet,
Students: Tap my feet,
Teacher: Tap my feet
Students: Tap, tap, tap.
Teacher: This is the way I shake my head, Students :Shake my head,
Teacher :Shake my head.
Students :Shake, shake, shake.
ಶಿಕ್ಷಕರು ಮೊದಲ ಸಾಲನ್ನು ಹೇಳಿದರೆ ಮಕ್ಕಳು ಎರಡನೇ ಸಾಲನ್ನು ಹಾಡುವುದು. ಹೀಗೆಯೇ ಮುಂದುವರೆಸುವುದು.
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು. ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಹೋಲಿಕೆ, ಹೊಂದಾಣಿಕೆ, ವಿಂಗಡಣೆ, ಗಾತ್ರ/ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು,
ಚಟುವಟಿಕೆ : ಹೋಲಿಕೆ ಮಾಡೋಣ (ಗುರಿ 3)
ಉದ್ದೇಶ:- ವಸ್ತುಗಳ ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಸಿ ವಿಂಗಡಿಸುವುದು.
ಅಗತ್ಯ ಸಾಮಗ್ರಿಗಳು : ಪೆನ್ಸಿಲ್‌ಗಳು, ಮಾಪಕಗಳು, ಹಣ್ಣುಗಳು (ಸೇಬು, ಕಿತ್ತಳೆ), ತರಕಾರಿಗಳು (ಆಲೂಗಡ್ಡೆ/ಈರುಳ್ಳಿ),ಪಾತ್ರೆಗಳು (ಚಮಚ, ಬಟ್ಟಲುಗಳು, ತಟ್ಟೆಗಳು), ವಿಭಿನ್ನ ಗಾತ್ರದ ಇತರೆ ವಸ್ತುಗಳು.
ವಿಧಾನ : ಸರಳವಾದ ಹೋಲಿಕೆ ಕಾರ್ಯವನ್ನು ಮೊದಲು ಸ್ಟ್ರಾಗಳು, ಪೆನ್ಸಿಲ್‌ಗಳು, ಹಣ್ಣುಗಳು, ತರಕಾರಿಗಳುಮತ್ತು ಲಭ್ಯವಿರುವ ಇತರೆ ವಸ್ತುಗಳನ್ನು ಬಳಸಿ ಮಾಡುವುದು.
ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಕೆ ಮಾಡುವುದು. ಗಾತ್ರದ ಆಧರಿಸಿ ವಸ್ತುಗಳ ಗುಂಪಿನಿಂದ ಅತಿ ದೊಡ್ಡ ವಸ್ತು, ಮಕ್ಕಳ ಗುಂಪಿನಿಂದ ಅತಿ ಎತ್ತರವಾದ ಹುಡುಗ, ಅತಿ ಉದ್ದವಾದ ಕೋಲು/ಜಾಕಪೀಸ್ ಆರಿಸಲು ಹೇಳುವುದು.
👉ಹೋಲಿಕೆಯು ಒಂದೇ ವಿಧದ ವಸ್ತುಗಳೊಂದಿಗೆ ಆಗಬೇಕು. ಹೋಲಿಸುವ ಚಟುವಟಿಕೆಯನ್ನು ಮಿಶ್ರ ಗುಂಪಿನಲ್ಲಿ ನಡೆಸಬಾರದು.
ಉದಾ: ಆಯತಾಕಾರದ ವಸ್ತುವನ್ನು ವೃತ್ತಾಕಾರದ ವಸ್ತುವಿನೊಂದಿಗೆ ಅಥವಾ ಚೆಂಡನ್ನು ಸೇಬು ಹಣ್ಣಿನೊಂದಿಗೆ
ಹೋಲಿಸಬಾರದು.
👉ಅದೇ ರೀತಿ ಪ್ರಮಾಣವನ್ನು ಹೋಲಿಸುವಾಗ ಒಂದೇ ರೀತಿಯ ವಸ್ತುಗಳಿರುವ ಯಾವ ಗುಂಪಿನಲ್ಲಿ ವಸ್ತುಗಳು ಹೆಚ್ಚು ಇವೆ ಎಂದು ಹೋಲಿಸಿ ಹೇಳುವುದು.
ಆಹಾ:-IL-14 ಹೋಲಿಕೆ ಮಾಡೋಣ
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ: ಸೂಕ್ಷ್ಮ ಸ್ನಾಯುಗಳ ಕೌಶಲ ವಿಕಾಸ, ಕಣ್ಣು ಕೈಗಳ ನಡುವೆ ಸಮನ್ವಯ, ಸೃಜನ ಶೀಲತೆಯ ವಿಕಾಸ
ಚಟುವಟಿಕೆ : ರಂಗೋಲಿ ಬಿಡಿಸುವುದು.
ಉದ್ದೇಶಗಳು
•ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಯಾಗುವುದು.
•ಕಣ್ಣು ಕೈಗಳ ನಡುವೆ ಸಮನ್ವಯತೆ ಬರುವುದು.
•ಸೌಂದರ್ಯೋಪಾಸನೆಯ ವಿಕಾಸವಾಗುವುದು.
•ಮೇಲ್ಮೈ (ಒರಟು, ಮೆದು) ರಚನೆಯೊಂದಿಗೆ ಕಾರ್ಯನಿರ್ವಹಿಸುವುದು.
•ವಿವಿಧ ವಸ್ತುಗಳ ಉಪಯೋಗದ ಜೊತೆಗೆ ಬಳಕೆಯ ವಿಧಾನವನ್ನು ಅರಿಯುವುದು.
ಸಾಮಗ್ರಿಗಳು: ರಂಗೋಲಿ, ಅಂಟು, ಪೇಪರ್, ಪೆನ್ಸಿಲ್ ಮತ್ತು ಬ್ರಶ್.
ವಿಧಾನ: ಸರಳ ರೇಖಾ ಚಿತ್ರಗಳನ್ನು ಅಥವಾ ಮಕ್ಕಳೇ ಚಿತ್ರಗಳನ್ನು ಬರೆಯಬಹುದು. ಅದನ್ನು ಮಕ್ಕಳಿಗೆ ಒದಗಿಸುವುದು. ಒಂದು ಚಿಕ್ಕ ಲೋಟದಲ್ಲಿ ಅಂಟನ್ನು ಇನ್ನೊಂದರಲ್ಲಿ ಬಣ್ಣದ ರಂಗೋಲಿ ಪುಡಿಯನ್ನು ಕೊಡುವುದು.ಮಕ್ಕಳು ಬ್ರಶ್‌ನಿಂದ ಚಿತ್ರದ ಮೇಲೆ ಅಂಟನ್ನು ಸವರಬೇಕು.ನಂತರ ಬೆರಳುಗಳಲ್ಲಿ ರಂಗೋಲಿ ಪುಡಿ ತೆಗೆದುಕೊಂಡು ಅದರ ಮೇಲೆ ಉದುರಿಸುವುದು. ನಂತರ ರಂಗೋಲಿ ಪುಡಿಯನ್ನು ಉದುರಿಸಲು ಪೇಪರನ್ನಾಗಲಿ ಅಥವಾ ತಟ್ಟೆಯನ್ನಾಗಲಿ ಕೊಡಬೇಕು. ಹಾಗೆ ಉದುರಿಸಿದ ಮೇಲೆ ಮಕ್ಕಳಿಗೆ ಪೇಪರಿನಲ್ಲಿ ಮೂಡಿದ ಚಿತ್ರವನ್ನು ನೋಡಿ ಸಂತೋಷವುಂಟಾಗುತ್ತದೆ.
ಮಕ್ಕಳಿಗೆ ಇಷ್ಟವಾಗುವಂತಹ ಪರಿಚಿತ ಚಿತ್ರಗಳನ್ನು ಕೊಡಬೇಕು. ಅಥವಾ ಮಕ್ಕಳೇ ಹೂವು, ಮನೆ ಮುಂತಾದ ಚಿತ್ರಗಳನ್ನು ಬರೆಯಲಿ.
ಅ.ಹಾ:-HW-9 ನನ್ನ ಚಿತ್ರ ನನ್ನ ಬಣ್ಣ
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಪದ ಸಂಯೋಜನೆ
ಚಟುವಟಿಕೆ : ಪದರಚನೆ (ಗುಂಪು-2)
ಉದ್ದೇಶಗಳು:
* ಪದ ರಚನಾ ಸಾಮರ್ಥ್ಯವನ್ನು ಹೆಚ್ಚಿಸುವುದು.
* ಪದ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದು.
ಸಾಮಗ್ರಿ: ಇಲ್ಲ
ವಿಧಾನ: ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸಿ ಸ್ಪಷ್ಟವಾದ ಸೂಚನೆಗಳನ್ನು ನೀಡಿ ಚಟುವಟಿಕೆಯನ್ನು ಆರಂಭಿಸಿ.
* ನಾನು ಹೇಳುವ ಅಕ್ಷರಗಳನ್ನು ಆಲಿಸಿ.
ಅಕ್ಷರಗಳನ್ನು ಸೇರಿಸಿ ಪದ ರಚಿಸಿ ಹೇಳಿ,
ಉದಾಹರಣೆ : ಶಿಕ್ಷಕರು ಜೋರಾಗಿ ಸ(ವಿರಾಮ) ರ ಎಂದು ಉಚ್ಚರಿಸಿದಾಗ ಮಕ್ಕಳು ಅಕ್ಷರಗಳನ್ನು ಆಲಿಸಿ ಸರ ಎಂದು ಪದ ರಚಿಸಿ ಹೇಳಲಿ, ಈ ಚಟುವಟಿಕೆಯಲ್ಲಿ ಶಿಕ್ಷಕರು ಹಂತ ಹಂತವಾಗಿ ಮೂರಕ್ಷರ ಹಾಗೂ ನಾಲ್ಕಕ್ಷರದ ಪದಗಳನ್ನು ಬಳಸಬಹುದಾಗಿದೆ.
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.
ಚಟುವಟಿಕೆ :
ಚಿತ್ರ ಸಂಪುಟ (ಗುರಿ-2)
ವಿಷಯ: 'ಪ್ರಾಣಿ ಸಂಗ್ರಹಾಲಯದಲ್ಲಿ ನೋಡಬಹುದಾದ ಪ್ರಾಣಿಗಳು/ ಪಕ್ಷಿಗಳು/ವಸ್ತುಗಳು'
ಉದ್ದೇಶಗಳು:
*ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು.
*ಸಂತೋಷ ಮನೋರಂಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಓದುವುದು.
ಅಗತ್ಯ ಸಾಮಗ್ರಿಗಳು : ಪ್ರಾಣಿ ಸಂಗ್ರಹಾಲಯಕ್ಕೆ ಸಂಬಂಧಿಸಿದ ಚಿತ್ರಗಳು, ಪ್ರಾಣಿ ಸಂಗ್ರಹಾಲಯ -ದಲ್ಲಿ ನೋಡಬಹುದಾದ ಪ್ರಾಣಿಗಳು/ ಪಕ್ಷಿಗಳು/ ವಸ್ತುಗಳ ಕುರಿತ ಕಥನ/ಕವಿತೆ/ ಹಾಡುಗಳ ಪಟ್ಟಿ.
ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.
* ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು.
* ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು ಹೇಳುವುದು/ಬರೆಯುವುದು.
* ಮಾದರಿ ಚಿತ್ರಗಳನ್ನು (ಪ್ರಾಣಿಸಂಗ್ರಹಾಲಯಕ್ಕೆ ಸಂಬಂಧಿಸಿದ) ಓದುವುದು ಮತ್ತು ಅದರ ಕುರಿತಾಗಿ
ಪ್ರತಿಕ್ರಿಯಿಸುತ್ತಾ ಶಿಕ್ಷಕರೊಂದಿಗೆ ಚರ್ಚಿಸುವರು.
ವೈಯಕ್ತಿಕ ಚಿತ್ರ ಸಂಪುಟ: ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿ ಮಗು ಸನ್ನಿವೇಶ ಚಿತ್ರಗಳನ್ನು ಓದಿ ಗ್ರಹಿಸಿ ವೈಯಕ್ತಿಕವಾಗಿ ಚರ್ಚಿಸಲು ಅನುವು ಮಾಡಿಕೊಡುವುದು. ಆ ಚಿತ್ರ ಓದಿನ ಗ್ರಹಿಕೆಗಳನ್ನು ಅಭಿವ್ಯಕ್ತಿಸುವುದನ್ನು ಖಾತ್ರಿ ಮಾಡಿಕೊಳ್ಳುವುದು.
ಉದಾ: ಪ್ರಾಣಿಗಳ, ಮರಗಳು, ಪಕ್ಷಿಗಳು, ಪಂಜರಗಳು, ಕುಳಿತುಕೊಳ್ಳುವ ಆಸನಗಳು ಇತ್ಯಾದಿ. ಚಿತ್ರಗಳು/ವಿಡಿಯೋಗಳು/ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ.ಶಿಕ್ಷಕರು ಸುಗಮಕಾರಿಕೆಯಲ್ಲಿ ಬಳಸಬಹುದಾದ ಬೆಳವಣಿಗೆಯ ಪ್ರಶ್ನೆಗಳು:.
*ಪ್ರಾಣಿಸಂಗ್ರಹಾಲಯವನ್ನು ನೋಡಿರುವಿರಾ?
*ನೀವು ಪ್ರಾಣಿಸಂಗ್ರಹಾಲಯದಲ್ಲಿ ಏನೇನು ನೋಡಿರುವಿರಿ?
*ನಿಮಗೆ ಇಷ್ಟವಾದ ಪ್ರಾಣಿ, ಪಕ್ಷಿ ಯಾವುದು?
*ನೀವು ನೋಡಿರುವ ಪ್ರಾಣಿ ಮತ್ತು ಪಕ್ಷಿಗಳನ್ನು ಹೇಳಿರಿ
*ನಿಮ್ಮ ಶಾಲೆಯಲ್ಲಿ ಸುಂದರ ಪಕ್ಷಿಧಾಮ ಮಾಡಿದರೆ ನಿರ್ಮಾಣ ಮಾಡುವುದಾದರೆ ನೀನು ಏನೇನು ಜವಾಬ್ದಾರಿತೆಗೆದುಕೊಳ್ಳುವೆ?
*ಪಕ್ಷಿಧಾಮ ನಿರ್ಮಾಣ ಮಾಡುವುದಕ್ಕೆ ಯಾವೆಲ್ಲ ಸಾಮಗ್ರಿಗಳ ಅವಶ್ಯಕತೆ ಇದೆ? ಇತ್ಯಾದಿ
ಹೀಗೆ ಶಿಕ್ಷಕರು ತಮ್ಮ ಸ್ಥಳೀಯ ಸಂದರ್ಭಕ್ಕನುಗುಣವಾದ ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ತರಗತಿಯನ್ನು ಅನುಕೂಲಿಸುವುದು.
ಪ್ರಾಣಿಸಂಗ್ರಹಾಲಯಕ್ಕೆ ಸಂಬಂಧಿಸಿದ ಚಿತ್ರಗಳನ್ನು / ಚಿತ್ರಪಟಗಳನ್ನು/ ವಿಡಿಯೋ/ ಹಾಡು/ಕಥೆಗಳನ್ನೂ ಬಳಸಿ ಅಥವಾ ಪ್ರದರ್ಶಿಸಿ ಮಕ್ಕಳೊಂದಿಗೆ ಚರ್ಚಿಸಬಹುದು.
ಸದರಿ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಮುಕ್ತವಾಗಿ ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಹಾಗೂ ತಮ್ಮ ಸಹಜ ಭಾಷೆಯಲ್ಲಿ ಚರ್ಚಿಸಲು ಅವಕಾಶಗಳನ್ನು ಮಾಡಿಕೊಡುವುದು.ಎಲ್ಲಾ ಮಕ್ಕಳೂ ಅಭಿವ್ಯಕ್ತಿಸುವುದನ್ನು ಖಾತ್ರಿಪಡಿಕೊಳ್ಳುವುದು.
(ಸದರಿ ಚಟುವಟಿಕೆಯ ಮುಂದುವರೆದ ಭಾಗವು 37ನೇ ದಿನದಲ್ಲಿ ಮುಂದುವರೆಯುವುದು
*ಉದ್ದೇಶಿತ ಬರಹ*
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ ಮಾಡಿಕೊಳ್ಳುವುದು, ಪರಿಸರದ ಅರಿವು.
ಚಟುವಟಿಕೆ : ಪಟ್ಟಿ ಮಾಡೋಣ (ಗುರಿ-2)
ಉದ್ದೇಶಗಳು:
*ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು.
*ಸೃಜನಶೀಲ ಚಿಂತನೆಯನ್ನು ಬೆಳೆಸುವುದು.
*ಪರಿಸರದ ಅರಿವು ಮೂಡಿಸುವುದು.
*ಪದಸಂಪತ್ತನ್ನು ಹೆಚ್ಚಿಸುವುದು,
*ಸೂಚನೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು.
ಅಗತ್ಯ ಸಾಮಗ್ರಿಗಳು : ನೋಟ್ ಪುಸ್ತಕ, ಕಾಗದ, ಶ್ರೇಯಾನ್ಸ್
ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು ಮಕ್ಕಳಿಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ.
ಸೂಚಿತ ವಿಷಯ: ನಮ್ಮ ಉಡುಪುಗಳು
ಇಡೀ ತರಗತಿಯನ್ನು ಒಳಗೊಂಡಂತೆ ಒಂದು ಚಾರ್ಟ್‌ಪೇಪರ್‌ನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು ಆಯೋಜಿಸಬಹುದು. ಈ ಚಾರ್ಟ್‌ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸಿ, ಮಕ್ಕಳು ಇವುಗಳನ್ನು ನೋಡಲು ಹಾಗೂ ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.
*ಬರವಣಿಗೆಯ ಮಾದರಿ*
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು, ಶಿಕ್ಷಕರು ತರಗತಿಯಲ್ಲಿ ಏನನ್ನೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ನೃತ್ಯ (ಗುರಿ-1)
ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ
ಸಾಮಗ್ರಿ: ಡ್ರಮ್ / ಸಂಗೀತ
ವಿಧಾನ: ಡ್ರಮ್ ಅಥವಾ ಸಂಗೀತ ನುಡಿಸುವ ಮೂಲಕ ಮಕ್ಕಳು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಸೂಚಿಸುವುದು
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಮೈ ರೀಡಿಂಗ್ ಪಾರ್ಟ್ನರ್
ಸಾಮಗ್ರಿಗಳು : ಸಾಹಿತ್ಯ, ಪಾತ್ರಗಳ ಚಿತ್ರಗಳು.
ಉದ್ದೇಶಗಳು :
> ಆಲಿಸುವ ಸಾಮರ್ಥ್ಯ ಬೆಳೆಸುವುದು.
> ಕುತೂಹಲ ಪ್ರವೃತ್ತಿಯನ್ನು ಹೆಚ್ಚಿಸುವುದು
> ಪದಸಂಪತ್ತನ್ನು ಹೆಚ್ಚಿಸುವುದು.
ವಿಧಾನ :
*ಕಥೆಯನ್ನು ಓದಿ ಪುನರಾವಲೋಕನ ಮಾಡಿಕೊಳ್ಳುವುದು.
*ಕಥೆಯ ಪಾತ್ರಗಳ ಹೆಸರುಗಳನ್ನು ಮಕ್ಕಳಿಂದ ಹೇಳಿಸುತ್ತಾ ನಿರೂಪಿಸುವುದು.
*ಶಿಕ್ಷಕರು ಕಥೆಯ ಸಂಭಾಷಣೆಯನ್ನು ಹಾವ ಭಾವದೊಂದಿಗೆ ಹೇಳುವುದನ್ನು ಗಮನಿಸಲು ಮಕ್ಕಳಿಗೆ ತಿಳಿಸುವುದು. ನಂತರ ಮಕ್ಕಳು ಅನುಕರಿಸಲು ಪ್ರೇರೇಪಿಸುವುದು.
*ಇದೇ ರೀತಿಯ ಚಿಕ್ಕ ಕಥೆಗಳನ್ನು ಶಿಕ್ಷಕರು ಹೇಳುವುದು.
ಅವಧಿ -8(20ನಿ)
*ಮತ್ತೆ ಸಿಗೋಣ*
* ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ.
* ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆ ಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
* ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,ಬೀಳ್ಕೊಡಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕರು
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment