Monday, 24 June 2024

ವಿದ್ಯಾ ಪ್ರವೇಶ ದಿನ 20

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1nZCQLHtL_yZzqQaHCyGswEMBuPUkC-Gg/view?usp=drivesdk

*ವಿದ್ಯಾಪ್ರವೇಶ ದಿನ-20* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ1: ಗಾಡಿ ಬಿಡು


ಚಟುವಟಿಕೆಯ ವಿವರ


ಸಾಮಗ್ರಿಗಳು: ವಿವಿಧ ವಾಹನಗಳ ಚಿತ್ರಗಳು.

ವಿಧಾನ:


ಮಕ್ಕಳು ತರಗತಿ ಪ್ರವೇಶಿಸುವಾಗ ವಿವಿಧ ವಾಹನಗಳ ಚಿತ್ರಗಳನ್ನು ತೋರಿಸಿ.


ಮಗು ತನಗೆ ಇಷ್ಟವಾದ ವಾಹನವನ್ನು ಚಲಾಯಿಸುವಂತೆ ನಟಿಸುತ್ತಾ ತರಗತಿಯನ್ನು ಪ್ರವೇಶಿಸಬೇಕು.


ತರಗತಿ ಪ್ರವೇಶಿಸಿದ ನಂತರ ವೃತ್ತಾಕಾರವಾಗಿ ನಿಲ್ಲುವಂತೆ ಸೂಚಿಸಿ. "What day is today? (ಇಂದುಯಾವ ದಿನ?)" ಎಂದು ಮಕ್ಕಳನ್ನು ಕೇಳಿ ಮತ್ತು Today is_ ಪಡೆಯಿರಿ. ಹವಾಮಾನ ನಕ್ಷೆ ಮಾಡಿಸಿ. ("ಇಂದು) ఎంబ ಉತ್ತರ


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ಇದು ಕೂರಿಸಿ. 1. ಚಿತ್ರ ಕಾರ್ಡ್ ಗಳನ್ನು ಚೀಲದಲ್ಲಿ ಇರಿಸಿ. ಚೀಲವನ್ನು ಪಾಸ್ ಮಾಡಿ ಮತ್ತು ಪಾಸಿಂಗ್ ದಿ ಪಾರ್ಸಲ್‌ಚಟುವಟಿಕೆ ಮಾಡಿಸಿ.


2. ಚೀಲವನ್ನು ಹೊಂದಿರುವ ಮಗುವು ಚೀಲದಿಂದ ಒಂದು ಕಾರ್ಡ್ ಆಯ್ಕೆ ಮಾಡಿ ಚಿತ್ರದ ಕುರಿತು ಮಾತನಾಡಲು ಪ್ರೋತ್ಸಾಹಿಸಿ.


ಪ್ರಶ್ನೆಗಳು: ಚಿತ್ರ ಯಾವುದು? ನೀವು ಆ ಪರಿಸ್ಥಿತಿಯಲ್ಲಿದ್ದರೆ ನೀವು ಏನು ಮಾಡುತ್ತೀರಿ? ನೀವು ಇದನ್ನು ಏಕೆ ಮಾಡುತ್ತೀರಿ? ನೀರನ್ನು ಉಳಿಸಲು/ ಮರಗಳನ್ನು ಉಳಿಸಲು ನಾವು ಏನು ಮಾಡಬೇಕು?

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು


ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.



ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಚಟುವಟಿಕೆ : "ಸೂಚಿತ ಸಂಖ್ಯೆ" (ಅನುಕ್ರಮಜೋಡಣೆ) (ಗುರಿ 3)ಉದ್ದೇಶ ಅನುಕ್ರಮವಾಗಿ ಜೋಡಿಸುವುದು.


ಸಾಮರ್ಥ್ಯ: ಸ್ಪರ್ಶ ಸಂವೇದನೆ, ಪರಿಸರದ ಅರಿವು


2 ಅಗತ್ಯ ಸಾಮಗ್ರಿಗಳು : 1 ರಿಂದ 10 ರವರೆಗಿನ ಕಾರ್ಡುಗಳು (ಕಿಟ್ ನಲ್ಲಿರುವ ಸಂಖ್ಯಾ ಕಾರ್ಡುಗಳನ್ನು ನೀಡುವುದು)


ಆ ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕುಳಿತುಕೊಳ್ಳಲು ತಿಳಿಸುವುದು. 1 ರಿಂದ 10 ರವರೆಗಿನ ಸಂಖ್ಯಾ ಕಾರ್ಡುಗಳನ್ನು ಒಂದು ಟ್ರೇನಲ್ಲಿ ಇರಿಸಿ ಅದರಲ್ಲಿಯ ಸೂಚಿತ ಸಂಖ್ಯೆಗಳ ಕಾರ್ಡುಗಳನ್ನು ಕ್ರಮವಾಗಿ ಜೋಡಿಸಲು ಮಕ್ಕಳಿಗೆ ಅವಕಾಶ ಮಾಡಿಕೊಡುವುದು.


ಅ.ಹಾ:-IL-13 ಇವುಗಳ ಉಳಿದ ಭಾಗಗಳನ್ನು ಹೊಂದಿಸೋಣ



ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಶಕ್ತಿಯ ವಿಕಾಸ ಮತ್ತು ಸೃಜನ ಶೀಲತೆಯ ಅಭಿವೃದ್ಧಿ.


ಚಟುವಟಿಕೆ: ಮಾಡಿ ನೋಡು


ಉದ್ದೇಶಗಳು:


• ಸಣ್ಣ ಸ್ನಾಯುಗಳ ಚಲನಾ ಕೌಶಲಗಳು ಅಭಿವೃದ್ಧಿಯಾಗುವುದು.


• ಬೆರಳುಗಳ ಕುಶಲತೆ ಹೆಚ್ಚುವುದು ಮತ್ತು ಏಕಾಗ್ರತೆ ಬೆಳೆಯುವುದು.


ಸಾಮಗ್ರಿಗಳು: ಕತ್ತರಿ, ವರ್ಣಮಯ ನಕಾಶೆಗಳು, ಅಂಟು.


ವಿಧಾನ: ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು. ಮಕ್ಕಳಿಗೆ ವಿವಿಧ ನಕ್ಷೆ (ತಾಲ್ಲೂಕು, ಜಿಲ್ಲೆಗಳ) ಚಿತ್ರವನ್ನು ಕತ್ತರಿಸಿ ಅದನ್ನು ರಟ್ಟಿನ ಮೇಲೆ ಅಂಟಿಸಲು ಹೇಳುವುದು. ನಂತರ ಅದನ್ನು ಬೇರೆ ಬೇರೆ ಆಕಾರದ 6-7 ತುಂಡುಗಳಾಗಿ ಕತ್ತರಿಸುವುದು (ಟ್ಯಾನ್ ಗ್ರಾಂ ಮಾದರಿಯಲ್ಲಿ). ಕತ್ತರಿಸಿದ ತುಂಡುಗಳನ್ನು ಮತ್ತೆ ಮೊದಲಿನ ನಕ್ಷಾಚಿತ್ರ ಬರುವಂತೆ ಜೋಡಿಸಲು ಹೇಳುವುದು


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಪದ ಗುರುತಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಮುದ್ರಣದ ಅರಿವು ಹಾಗೂ ಅರ್ಥೈಸುವಿಕೆ.


ಚಟುವಟಿಕೆ : ನಾಮ ಫಲಕ (ಗುರಿ-20)


ಉದ್ದೇಶಗಳು :


ಚಿತ್ರದ ಸಹಾಯದಿಂದ ಪದ ಗುರುತಿಸುವುದು.


ಮುದ್ರಿತ ಪದಗಳನ್ನು ಗಟ್ಟಿಯಾಗಿ ಉಚ್ಚರಿಸುವುದು.


ಅಗತ್ಯ ಸಾಮಗ್ರಿಗಳು : ಕಥಾ ಕಾರ್ಡಗಳು, ಸುಳಿವು ಚಿತ್ರಗಳು, (ಕಥೆಯಲ್ಲಿ ಬರುವ ಸನ್ನಿವೇಶ/ ಘಟನಾವಳಿಚಿತ್ರಗಳು.)


ವಿಧಾನ : ಪ್ರತಿ ಮಗುವಿನ ಹೆಸರಿನ ಮುಂದೆ ಒಂದು ಚಿತ್ರವನ್ನು ಅಂಟಿಸುವುದು. ತನ್ನ ಹೆಸರನ್ನು ಓದಲು ಸಾಧ್ಯವಾಗದ ಮಗು ಚಿತ್ರದ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು.


ಉದಾ: ರಮೇಶ ಎಂಬ ಮಗುವಿನ ಹೆಸರಿನ ಮುಂದೆ ಮರದೆ ಚಿತ್ರವನ್ನು ಅಂಟಿಸುವುದು. ರಮೇಶ ಎಂದುಓದಲು ಸಾಧ್ಯವಾಗದೇ ಇದ್ದಾಗ ಚಿತ್ರದ ಮೂಲಕ ತನ್ನನ್ನು ಗುರುತಿಸಿಕೊಳ್ಳುವುದು. ಆ ಹಾ: E.C-9 ಚಿತ್ರ ನೋಡು-ಕಥೆ ಊಹಿಸು


*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಅವಧಾನ ಮತ್ತು ಅಲಿಸುವಿಕೆ, ಪದ ಸಂಪತ್ತಿನ ಅಭಿವೃದ್ಧಿ, ಅನುಕ್ರಮ ಆಲೋಚನೆ. ಸ್ಮರಣ ಶಕ್ತಿ ಬೆಳವಣಿಗೆ ಚಟುವಟಿಕೆ : ಮುಂದೇನು..?


ಉದ್ದೇಶ : ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು ಮತ್ತು ಸಹಸಂಬಂಧೀಕರಿಸುವುದು.


ಅಗತ್ಯ ಸಾಮಗ್ರಿಗಳು : ಕಥಾ ಕಾರ್ಡ್‌ಗಳು, ಸುಳಿವು ಚಿತ್ರಗಳು, (ಕಥೆಯಲ್ಲಿ ಬರುವ ಸನ್ನಿವೇಶ/ ಘಟನಾವಳಿಚಿತ್ರಗಳು.)


ವಿಧಾನ : ಶಿಕ್ಷಕರು ತರಗತಿ ಪ್ರವೇಶ ಮಾಡಿದಾಗ ಮಕ್ಕಳ ಕುಶಲೋಪರಿ ವಿಚಾರಿಸುತ್ತಿರುವಾಗ, "ಮೊದಲು"ನಂತರ" "ಆಮೇಲೆ", "ಅದಕ್ಕಿಂತ ಮೊದಲು" ಇತ್ಯಾದಿ ಪದಗಳನ್ನು ಬಳಸಿ ಅರ್ಥೈಸಬೇಕು.


ಉದಾಹರಣೆ : ತಿಂಡಿ ತಿನ್ನುವ ಮೊದಲು ಏನು ಮಾಡಿದೆ? ತಿಂದ ನಂತರ ಏನು ಮಾಡಿದೆ?........ಹೀಗೆ ಸಂದರ್ಭೋಚಿತವಾಗಿ ಪದಗಳನ್ನು ಬಳಸಿ ಅರ್ಥೈಸಬೇಕು.


• ನಂತರ ಶಿಕ್ಷಕರು ಗಟ್ಟಿ ಧ್ವನಿಯಲ್ಲಿ ಧ್ವನಿಯ ಏರಿಳಿತದೊಂದಿಗೆ, ಮಕ್ಕಳಿಗೆ ಪರಿಚಿತವಿರುವ ಕಥೆಗಳನ್ನು ಹೇಳಬೇಕು. • ಮಕ್ಕಳು ಕಥೆಯನ್ನು ಆಲಿಸಿದ ನಂತರ ಕಥೆಗೆ ಸಂಬಂಧಿಸಿದಂತೆ. ಮೊದಲು ಏನಾಗಿತ್ತು? ಅದಕ್ಕಿಂತ ಮೊದಲುಏನಾಗಿತ್ತು? ಆದಾದ ನಂತರ ಏನಾಯಿತು? ಘಟನೆ ನಡೆಯದಿದ್ದರೆ ಏನಾಗಬಹುದಿತ್ತು? ಆಮೇಲೆ ಏನಾಯಿತು? ಹೀಗೆ.... ಸಂದರ್ಭೋಚಿತವಾಗಿ ಪದ/ವಾಕ್ಯಗಳನ್ನು ಬಳಸಿ ಅವಧಾನವನ್ನು ಕೇಂದ್ರೀಕರಿಸಿಕೊಂಡು ಆಲೋಚನೆಮಾಡುವ, ಸ್ಮರಣಶಕ್ತಿಯನ್ನು ವೃದ್ಧಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು.


ಉದಾಹರಣೆಗೆ : (ಕಥಾವಾಚನ) ಒಮ್ಮೆ ರಾಮಣ್ಣ ಎಂಬ ರೈತ ತನ್ನ ಗದ್ದೆಯಿಂದ ಭತ್ತದ ಮೂಟೆಗಳನ್ನು ತನ್ನ ಎತ್ತಿನ ಗಾಡಿಯಲ್ಲಿ ಮನೆಗೆ ತರುತ್ತಿದ್ದಾಗ ಜೋರಾಗಿ ಮಳೆ ಬಂದು ಗಾಡಿಯ ಚಕ್ರ ಕೆಸರಲ್ಲಿ ಸಿಕ್ಕಿ ಹಾಕಿಕೊಂಡಿತು.ಎಷ್ಟೆ ಶ್ರಮವಹಿಸಿದರೂ ಗಾಡಿ ಕೆಸರಿನಿಂದ ಆಚೆ ಬರಲಿಲ್ಲ. ನಂತರ ಅಕ್ಕಪಕ್ಕದಲ್ಲಿದ್ದ ಜನರ ಸಹಾಯದಿಂದ ಗಾಡಿಯಲ್ಲಿದ್ದ ಮೂಟೆಗಳನ್ನು ಇಳಿಸಿ. ಗಾಡಿಯನ್ನು ಎತ್ತುಗಳ ಹಾಗೂ ಜನರ ಸಹಾಯದಿಂದ ಕೆಸರಿನಿಂದ ಹೊರತಂದನು. ನಂತರ ಮೂಟೆಯನ್ನು ಗಾಡಿಯಲ್ಲಿ ತುಂಬಿಕೊಂಡು ಮನೆಯನ್ನು ತಲುಪಿದನು.


ಕೇಳಬಹುದಾದ ಪ್ರಶ್ನೆಗಳು


ರಾಮಣ್ಣ ಯಾರು? ಅವನು ಏನು ಬೆಳೆದಿದ್ದ? ಭತ್ತದ ಮೂಟೆಯನ್ನು ಮನೆಗೆ ತರುವಾಗ ಏನಾಯಿತು?


ಮಳೆ ಬಂದ ನಂತರ ಏನಾಯಿತು? ಮಳೆ ಬಾರದಿದ್ದಲ್ಲಿ ಏನಾಗುತ್ತಿತ್ತು?


ಗದ್ದೆಯ ಅಕ್ಕಪಕ್ಕದಲ್ಲಿ ಜನರು ಇಲ್ಲದಿದ್ದರೆ ಏನಾಗುತಿತ್ತು?


*ಉದ್ದೇಶಿತ ಬರಹ*  

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,


ಚಟುವಟಿಕೆ: ಹವಾಮಾನ ನಕ್ಷೆ (ಗುರಿ-2)


• ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.


ಉದ್ದೇಶಗಳು:


ವೀಕ್ಷಣಾ ಕೌಶಲವನ್ನು ಬೆಳೆಸುವುದು.


• ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.


ಪರಿಸರ ಪ್ರಜ್ಞೆ ಮೂಡಿಸುವುದು.


ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್



* ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.


ವಿಧಾನ :


ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶಿಸುವುದು.


ಹವಾಮಾನದ ಅಂಶಗಳಾದ ಮೋಡ, ಮಳೆ, ಬಿಸಿಲು, ಚಳಿ, ಬಿರುಗಾಳಿ ಇತ್ಯಾದಿ ಅಂಶಗಳನ್ನು ತರಗತಿಯಹವಾಮಾನ ನಕ್ಷೆಯ ಸಹಾಯದಿಂದ ಪರಿಚಯಿಸುವುದು.


ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಿ ಗುರುತಿಸಲು ತಿಳಿಸುವುದು. (40 ನೇ ದಿನಕ್ಕೆ ಮುಂದುವರೆದಿದೆ)


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ : ಸಣ್ಣ ಟೈರುಗಳು / ಬ್ಯಾರೆಲ್ಗಳನ್ನು ತಳ್ಳಿರಿ (ಗುರಿ-1)


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ

 

ಸಾಮಗ್ರಿ: ಟೈರುಗಳು / ಬ್ಯಾರೆಲ್ಗಳು


ವಿಧಾನ: . ಶಿಕ್ಷಕರು ಪ್ರತಿ ಮಗುವಿಗೆ ಸಣ್ಣ ಟೈರ್ ಅಥವಾ ಸಣ್ಣ ಬ್ಯಾರೆಲ್ ಅನ್ನು ತಳ್ಳಲು ಸೂಚಿಸುವುದು.


ಮಕ್ಕಳಿಗೆ ಟೈಯರ್ ಅಥ ಬ್ಯಾರೆಲ್ ಅನ್ನು ತಳ್ಳಬಹುದು ಅಥವಾ ಎಳೆಯಬಹುದು ಎಂದು ಸೂಚಿಸುವುದು.


ಅವಧಿ 7(40ನಿ)

 *ಕಥಾ ಸಮಯ* 

ಶೀರ್ಷಿಕೆ : ಮೈ ರೀಡಿಂಗ್ ಪಾರೈನರ್ ಸಾಮಗ್ರಿಗಳು : ಸಾಹಿತ್ಯ, ಚಿತ್ರಗಳು


ಉದ್ದೇಶಗಳು :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


ವಿಧಾನ :


* ಪದ ಸಂಪತ್ತನ್ನು ಹೆಚ್ಚಿಸುವುದು. ಏಕಾಗ್ರತೆಯನ್ನು ಹೆಚ್ಚಿಸುವುದು.


> ಸಾಹಿತ್ಯದಲ್ಲಿನ ಚಿತ್ರಗಳನ್ನು ಮಕ್ಕಳಿಗೆ ಪ್ರದರ್ಶಿಸಿ ಕಥೆಯ ಪಾತ್ರಗಳನ್ನು/ವಸ್ತುಗಳನ್ನು ಹೆಸರಿಸಲು ಸರಳ ಪ್ರಶ್ನೆಗಳನ್ನು ಕೇಳುತ್ತಾ ಕಥೆಯನ್ನು ಪುನಃ ಹೇಳುವುದು.




> ಕಥೆಯ ವಾಕ್ಯಗಳನ್ನು ಓದುವಾಗ ಕಥೆಯ ನಡುವೆ ಬರುವ ಮಂಗ, ಪುಸ್ತಕ ಇತ್ಯಾದಿ ಚಿತ್ರಗಳನ್ನು ಮಕ್ಕಳುಹೆಸರಿಸುವಂತೆ ಪ್ರಶ್ನೆಗಳನ್ನು ಕೇಳುತ್ತಾ ಕಥೆಯನ್ನು ನಿರೂಪಿಸುವುದು.


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)


ಅವಧಿ 8(20ನಿಮಿಷ)

 *ಮತ್ತೆ ಸಿಗೋಣ* 

• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ


• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


• ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ. ಬೀಳ್ಕೊಡಿ.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

3 comments: