Sunday, 23 June 2024

ವಿದ್ಯಾ ಪ್ರವೇಶ ದಿನ 19

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1ltE_HKDHjapGH3jixC_vDk0wJFR3dPbC/view?usp=drivesdk

*ವಿದ್ಯಾಪ್ರವೇಶ ದಿನ-19* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1


Sun Moon Stars (ಮುಂದುವರಿದ ಚಟುವಟಿಕೆ)


ಸಾಮಗ್ರಿಗಳು: ನಕ್ಷತ್ರಗಳು, ಚಂದ್ರ ಮತ್ತು ಸೂರ್ಯನ ಚಿತ್ರಗಳು


ವಿಧಾನ: ದಿನ-32ರ ಸೂಚನೆಗಳನ್ನು ಅನುಸರಿಸಿ.


ಚಟುವಟಿಕೆ 2 ಹವಾಮಾನ ನಕ್ಷೆ ಮಾಡಿಸಿ.

*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)


ಚಟುವಟಿಕೆ : ನನ್ನ ಜವಾಬ್ದಾರಿಗಳು (ಶಾಲಾ ಸಂಸತ್ತು) ಗುರಿ -1


ಸಾಮರ್ಥ್ಯ: ಸ್ಮರಣೆ, ಚಿಂತನೆ, ಸ್ವಯಂ ಶಿಸ್ತು, ಸಮಾಜ ಪರ ವರ್ತನೆ.


ಸಾಮಗ್ರಿ: ವಿದ್ಯಾರ್ಥಿಗಳ ಹೆಸರು ಮತ್ತು ಅವರ ಜವಾಬ್ದಾರಿಗಳ ಬರೆಯಲು ಚಾರ್ಟ್ , ಸ್ಕೆಚ್ ಪೆನ್.


ವಿಧಾನ: ವಿದ್ಯಾರ್ಥಿಗಳು ಪ್ರತಿದಿನ ಮಾಡುವಂತಹ ಸರಳ ಕಾರ್ಯ ಹಾಗು ಜವಾಬ್ದಾರಿಗಳ ಕುರಿತಾಗಿ ಒಂದು ಪಟ್ಟಿ ಮಾಡುವುದು.


ಉದಾ: ಗ್ರಂಥಾಲಯ ಮಂತ್ರಿ, ಆಹಾರ ಮಂತ್ರಿ, ಸ್ವಚ್ಛತಾ ಮಂತ್ರಿ, ಆಟಗಳ ಮಂತ್ರಿ, ಶೌಚಾಲಯ ಮಂತ್ರಿ, ಇತ್ಯಾದಿ. ಇಂತಹ ಜವಾಬ್ದಾರಿಗಳು ಹಾಗೂ ಅವುಗಳನ್ನು ನಿರ್ವಹಿಸುವ ಮಕ್ಕಳ ಹೆಸರುಗಳನ್ನು ಬರೆದ ಚಾರ್ಟ್ ಸಿದ್ಧಪಡಿಸುವುದು. ಪ್ರತಿ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಚಿತ್ರಗಳಿರುವ ಬ್ಯಾಡ್ಜ್ಗಳನ್ನು ತಯಾರಿಸಿ. ಅವುಗಳನ್ನು ಆಯಾ ಮಂತ್ರಿಗಳು ಧರಿಸಲು ತಿಳಿಸುವುದು. ತರಗತಿಯ ಪ್ರತಿ ಮಕ್ಕಳಿಗೂ ಅವಕಾಶ ಸಿಗುವಂತೆ ನೋಡಿಕೊಳ್ಳಿ. ಮಕ್ಕಳ ಸ್ವತಂತ್ರವಾಗಿ ತಮಗೆ ವಹಿಸಿದ ಕಾರ್ಯವನ್ನು ಮಾಡುತ್ತಿದ್ದಾರೆಯೇ ಎಂದು ಗಮನಿಸಿ. ಹೆಚ್ಚು ಹೆಚ್ಚು ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಿ.


ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು


ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.



ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ಹೊಂದಿಸುವುದು, ಪರಿಸರಜಾಗೃತಿ ಬಣ್ಣ, ಆಕಾರ, ಗಾತ್ರಗಳ ಪರಿಕಲ್ಪನೆ, ಪರಿಸರದ ಅರಿವು,


ಚಟುವಟಿಕೆ : ಮುಟ್ಟಿ ಎಣಿಸು (ಗುರಿ 3)


ಉದ್ದೇಶ:- ಮೂರ್ತ ವಸ್ತುಗಳನ್ನು ಸ್ಪರ್ಶಿಸಿ ಎಣಿಸುವುದು.ಅಗತ್ಯ


ಸಾಮಗ್ರಿಗಳು : ಸುತ್ತಲಿನ ವಿವಿಧ ವಸ್ತುಗಳು


ವಿಧಾನ : ಒಂದು ಸಾಲಿನಲ್ಲಿ 10 ವಸ್ತುಗಳನ್ನು ಇಡುವುದು. ಮಕ್ಕಳು ಪ್ರತಿ ವಸ್ತುವನ್ನು ಸ್ಪರ್ಶಿಸಿ ಎಣಿಸುವುದು. ನಂತರ ತಮ್ಮ ತರಗತಿಯ ಮಕ್ಕಳನ್ನು ಎಣಿಸುವುದು. ವಸ್ತು/ಮಕ್ಕಳನ್ನು ಎಣಿಸುವಾಗ ಪ್ರತಿ ಬಾರಿಯೂ ಚಪ್ಪಾಳೆತಟ್ಟಿ ಗಟ್ಟಿಯಾಗಿ


ಸಂಖ್ಯೆಯನ್ನು ಹೇಳುವುದು.


ಅ.ಹಾ:-IL-12 ಎಣಿಸಿ ಬರೆಯೋಣ


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಣ್ಣ ಸ್ನಾಯುಗಳ ಚಲನಾ ಕೌಶಲಗಳ ವಿಕಾಸ ಮತ್ತು ಸೃಜನಶೀಲತೆಯ ಅಭಿವೃದ್ಧಿ, ಚಟುವಟಿಕೆ: ಮಾಡಿನೋಡು.


ಉದ್ದೇಶಗಳು:


ಸಣ್ಣ ಸ್ನಾಯುಗಳ ಚಲನಾ ಕೌಶಲಗಳು ಅಭಿವೃದ್ಧಿಯಾಗುವುದು.


ಬೆರಳುಗಳ ಕುಶಲತೆ ಹೆಚ್ಚುವುದು ಮತ್ತು ಏಕಾಗ್ರತೆ ಬೆಳೆಯುವುದು.


ಸಾಮಗ್ರಿಗಳು: ಕತ್ತರಿ, ವರ್ಣಮಯ ಚಿತ್ರಗಳು, ಅಂಟು,


ವಿಧಾನ: ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು.ಹಳೆಯ ದಿನಪತ್ರಿಕೆಯಲ್ಲಿನ ಹೂ/ ಪ್ರಾಣಿ/ ಪಕ್ಷಿ/ಮನೆ ಇತ್ಯಾದಿಗಳ ಚಿತ್ರವನ್ನು ಕತ್ತರಿಸಿ ಅದನ್ನು ರಟ್ಟಿನ ಮೇಲೆ ಅಂಟಿಸಲು ಹೇಳುವುದು.ನಂತರ ಅದನ್ನು ಬೇರೆ ಬೇರೆ ಆಕಾರದ 6-7 ತುಂಡುಗಳಾಗಿ ಕತ್ತರಿಸುವುದು. [ಟ್ಯಾನ್ ಗ್ರಾಂ ಮಾದರಿಯಲ್ಲಿ ಕತ್ತರಿಸಿದ ತುಂಡುಗಳನ್ನು ಮತ್ತೆ ಮೊದಲಿನ ಚಿತ್ರ ಬರುವಂತೆ ಜೋಡಿಸಲು ಹೇಳುವುದು. ಇದರಿಂದ ಅಲ್ಪವೆಚ್ಚದ ಸಾಮಗ್ರಿಗಳನ್ನು ಬಳಸಿ ಮಗುವಿನ ಸೃಜನ ಶೀಲತೆಗೆ ಪ್ರೋತ್ಸಾಹ ನೀಡಿದಂತೆ ಆಗುವುದು.


ಅ.ಹಾ:-HW-8 ನನ್ನ ಕುಟುಂಬ


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಾಲನಾ ಕೌಶಲಗಳ ಅಭಿವೃದ್ಧಿ, ಚಟುವಟಿಕೆ: 15 ಪ್ರಾಸ ಪದಗಳನ್ನು ಆಲಿಸುವುದು (ಗುರಿ-02) (26ನೇ ದಿನದಿಂದ ಮುಂದುವರೆದಿದೆ)


ಉದ್ದೇಶಗಳು:


ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು.


ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.


ಸ್ಕೂಲ ಹಾಗೂ ಸೂಕ್ಷ್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.


ಅಗತ್ಯ ಸಾಮಗ್ರಿಗಳು:- ಇಲ್ಲ


ವಿಧಾನ:


ಮಕ್ಕಳಿಗೆ 26ನೇ ದಿನದಲ್ಲಿ ಹೇಳಿದ ಪ್ರಾಸ ಗೀತೆಯನ್ನೇ ಹೇಳುವುದು.


ಹಾಡು ಹೇಳುವಾಗ ಪ್ರಾಸ ಪದಗಳನ್ನು ಸ್ವಲ್ಪ ಒತ್ತಿ ಹೇಳುವುದು.


ಪ್ರಾಸ ಗೀತೆಗೆ ತಕ್ಕಂತೆ ಅಭಿನಯಿಸಲು ತಿಳಿಸುವುದು.


ಪ್ರಾಸಗೀತೆಯಲ್ಲಿಯ ಪ್ರಾಸ ಪದಗಳನ್ನು ಪರಿಚಯಿಸಿ ಅದಕ್ಕೆ ಮತ್ತೆ ಇನ್ನೊಂದು ಪ್ರಾಸ ಪದ ಸೇರಿಸುವುದು.


ಒತ್ತಿ ಹೇಳಿದ ಪದಗಳನ್ನು ಪ್ರತ್ಯೇಕವಾಗಿ ಹೇಳಿಸುವುದು.



*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಸ್ವಯಂ ಅರಿವು, ಧನಾತ್ಮಕ ಸ್ವ-ಅರಿವಿನ ಅಭಿವೃದ್ಧಿ, ಆಲಿಸುವುದು ಹಾಗೂ ಮಾತನಾಡುವ ಕೌಶಲಅಭಿವೃದ್ಧಿ


ಚಟುವಟಿಕೆ : ನನ್ನ ವಿವರ (ಗುರಿ-1)


ಉದ್ದೇಶ: ತನಗೆ ಇಷ್ಟವಾದ ಮತ್ತು ಇಷ್ಟವಲ್ಲದ ಅಂಶಗಳನ್ನು ಅಭಿವ್ಯಕ್ತಿಗೊಳಿಸುವುದು.


ಅಗತ್ಯ ಸಾಮಗ್ರಿಗಳು: ಪೆನ್, ಪೆನ್ಸಿಲ್, ಕ್ರೇಯಾನ್ಸ್


ವಿಧಾನ: ಶಿಕ್ಷಕರು ಮೊದಲು ತನಗೆ ಇಷ್ಟವಾದ ಅಂಶಗಳು, ಇಷ್ಟವಾಗದ ಅಂಶಗಳನ್ನು ಮಕ್ಕಳ ಜೊತೆ ಹಂಚಿಕೊಳ್ಳಬೇಕು. ನಂತರ ಪ್ರತಿ ಮಗುವಿಗೆ ತನಗೆ ಇಷ್ಟವಾದ. ಇಷ್ಟವಾಗದ ಅಂಶಗಳ ಬಗ್ಗೆ ಯೋಚಿಸಿಮುಕ್ತವಾಗಿ ಮಾತನಾಡಲು ಅವಕಾಶ ನೀಡುವುದು.


ಯಾವುದೇ ಚಟುವಟಿಕೆಯಲ್ಲಿ ಬಾಗವಹಿಸುವುದರ ಜೊತೆ ಕೆಲವೊಂದು ಜವಾಬ್ದಾರಿ ತೆಗೆದುಕೊಳ್ಳುವಂತೆ ಪ್ರೇರೇಪಿಸುವುದು. ಬಿಳಿ ಹಾಳೆಯನ್ನು ನೀಡಿ ತನಗೆ ಇಷ್ಟವಾದ ತಿಂಡಿ. ಗೊಂಬೆ, ಪ್ರಾಣಿ, ಪಕ್ಷಿ, ವ್ಯಕ್ತಿ, ಹೂ ಇತ್ಯಾದಿಚಿತ್ರಗಳನ್ನು


ಬರೆದು ಬಣ್ಣ ತುಂಬಿ ಹೆಸರಿಸಲು ಹೇಳುವುದು


*ಉದ್ದೇಶಿತ ಬರಹ*  

ಸಾಮರ್ಥ್ಯ : ಬರವಣಿಗೆ ಕೌಶಲಗಳ ಅಭ್ಯಾಸ, ಪದಸಂಪತ್ತಿನ ಅಭಿವೃದ್ಧಿ, ಕೈ ಕಣ್ಣು ಸಂಯೋಜನೆ, ಸೃಜನಶೀಲತೆ.


ಚಟುವಟಿಕೆ ಹೆಸರು : ಪುಸ್ತಕ ರಚನೆ (ಗುರಿ : 2)


ಉದ್ದೇಶಗಳು:


ಮಕ್ಕಳ ಹಸ್ತಪತ್ರಿಕೆಯನ್ನು ಸಿದ್ಧಪಡಿಸುವುದು. ಮಕ್ಕಳ ಇಷ್ಟದ ಚಿತ್ರಗಳನ್ನು ಸಂಗ್ರಹಿಸಿ ಪುಸ್ತಕ ತಯಾರಿಸುವುದು.


ಚಿತ್ರಗಳನ್ನು ಬಿಡಿಸುವ ಮತ್ತು ಸಂಗ್ರಹಿಸುವ ಹವ್ಯಾಸ ಬೆಳೆಸುವುದು.


ಅಗತ್ಯ ಸಾಮಗ್ರಿಗಳು: ಹಾಳೆಗಳು, ಬಣ್ಣಗಳು, ಚಾರ್ಟ್ ಪೇಪರ್


ವಿಧಾನ: ಶಿಕ್ಷಕರು. 2 ಎ4 ಅಳತೆಯ ಹಾಳೆಗಳನ್ನು ಮಡಚಿ ಪಿನ್ ಮಾಡುವ ಮೂಲಕ ಪ್ರತಿ ಮಗುವಿಗೂ ತನ್ನದೇ ಆದ ಪುಟ್ಟ ನೋಟ್‌ಪುಸ್ತಕವನ್ನು ಒದಗಿಸುವುದು. ಇದರಲ್ಲಿ ಮಕ್ಕಳು ಸೂಚಿತ ವಿಷಯದ ಬಗ್ಗೆ ಚಿತ್ರ ಬಿಡಿಸಲು ಅಥವಾ ಬರೆಯಲು ತಿಳಿಸುವುದು.


ಸಲಹಾತ್ಮಕ ವಿಷಯ: ನನ್ನ ಆಟಿಕೆಗಳು


ಆ.ಹಾ: E.C-8 ನನ್ನ ಚಿತ್ರ ನನ್ನ ಬಣ್ಣ


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ವಿನನ್ನೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.



 ಅವಧಿ - 6(40ನಿ)

*ಹೊರಾಂಗಣ ಆಟಗಳು*


ಚಟುವಟಿಕೆ : ಕೈಂಬಿಂಗ್ (ಹತ್ತುವುದು) (ಗುರಿ-1)


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ


ಬೇಕಾಗುವ ಸಾಮಗ್ರಿ: ಹಗ್ಗ ಏಣಿ ಅಥವಾ ಮೆಟ್ಟಿಲುಗಳು


ವಿಧಾನ: ಮೆಟ್ಟಿಲುಗಳಿರುವ ಯಾವುದಾದರು ಪ್ರದೇಶದಲ್ಲಿ ಮಕ್ಕಳು ಮೆಟ್ಟಿಲುಗಳನ್ನು ಹತ್ತಲು ಹಾಗು 

ಹಾಗು ಇಳಿಯಲು ಸೂಚಿಸುವುದು.


ಅವಧಿ - 7(40ನಿ)

*ಕಥಾ ಸಮಯ*

ವಿಧಾನ :


> ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.


> ಶಿಕ್ಷಕರು ಕಥೆಯನ್ನು ನಿರೂಪಿಸುವುದರ ಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕಕಥೆಯನ್ನು ಪೂರ್ಣ ಗೊಳಿಸುವುದು.


ಉದಾ : ಮುಂದೆನಾಯಿತು? ಎಲ್ಲಿಂದ ಪುಸ್ತಕ ಬಂತು? ಇತ್ಯಾದಿ


ಕಥೆಯನ್ನು ಹೇಳಿದ ನಂತರ ಕನ್ನಡದಲ್ಲಿ ಸರಳ ಪ್ರಶ್ನೆಗಳನ್ನು ಕೇಳಿ.


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)


ಅವಧಿ -8(20ನಿ)

*ಮತ್ತೆ ಸಿಗೋಣ*


ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಒಮ್ಮೆ ಶೀಘ್ರವಾಗಿ ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ


ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ, ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ




[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment