Thursday, 20 June 2024

 ವಿದ್ಯಾಪ್ರವೇಶ ದಿನ - 17

 *ವಿದ್ಯಾಪ್ರವೇಶ ದಿನ-17* 


ಆಡಿಯೋ ಲಿಂಕ್

ನಲಿ ಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ 

https://drive.google.com/file/d/1k_hv5r_HM3rNZ7zHgeBLOT8ZN2aor-w3/view?usp=drivesdk

✒️🚁🎮🎨🎲🧮📏🔍


*ಅವಧಿ -1* (40ನಿ)


*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)  


ಚಟುವಟಿಕೆ ೧


ದಿನ-೨೭ ರ ಸೂಚನೆಗಳನ್ನು ಅನುಸರಿಸಿ. ಮತ್ತು ಹವಾಮಾನ ಚಟುವಟಿಕೆಯ ಬಗ್ಗೆ ಮಕ್ಕಳನ್ನು ಕೇಳಿ ಮತ್ತು ಅದನ್ನು ಹವಾಮಾನ ಕಾರ್ಡ್ ನಲ್ಲಿ ಗುರುತಿಸಲು ಅವರಿಗೆ ಸೂಚನೆ ಮಾಡಿ.


ಚಟುವಟಿಕೆ ೨: ಕೋತಿಯನ್ನು ಎಚ್ಚರಿಸಬೇಡಿ.


ಸಾಮಗ್ರಿಗಳು:ಗಂಟೆ


ವಿಧಾನ:


೧. ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ.


೨. ಒಬ್ಬ ವಿದ್ಯಾರ್ಥಿಯನ್ನು ಕೋತಿಯಂತೆ ನಟಿಸಲು ಸೂಚಿಸಿ. (ಕೋತಿಯು ವೃತ್ತದ ಮಲಗಿರುವಂತೆ ನಟಿಸಬೇಕು.)


೩. ಉಳಿದ ಮಕ್ಕಳು ಗಂಟೆಯನ್ನು ಒಬ್ಬರಿಂದೊಬ್ಬರಿಗೆ ಪಾಸ್ ಮಾಡಬೇಕು. ಹಾಗೆ ಪಾಸ್ ಮಾಡುವಾಗ ಗಂಟೆಯ ಶಬ್ದ ಆಗಬಾರದು.


೪. ಗಂಟೆ ಶಬ್ದ ಮಾಡಿದರೆ ಯಾವ ಮಗುವಿನ ಕೈಯಲ್ಲಿ ಗಂಟೆ ಇರುವುದೋ ಕೋತಿ ಆ ಮಗುವಿನ ಜಾಗದಲ್ಲಿ ಕೂರುತ್ತದೆ.


೫. ಆ ಮಗು ಮುಂದಿನ ಕೋತಿಯಾಗಬೇಕು. ಇದು ಮುಂದುವರಿಯುತ್ತದೆ


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)


ಚಟುವಟಿಕೆ : ನನ್ನ ನೆಚ್ಚಿನ ಗೊಂಬೆ


ಸಾಮಗ್ರಿಗಳು: ವಿವಿಧ ರೀತಿಯ ಗೊಂಬೆಗಳು. (ಕಾಗದದ ಗೊಂಬೆ, ಬೊಂಬೆಗಳು, ಮರದ ಗೊಂಬೆಗಳು, ಉಣ್ಣೆಯ ಗೊಂಬೆಗಳು, ಬಟ್ಟೆಯ ಗೊಂಬೆಗಳು, ಕೋಲುಗಳಿಂದ ಮಾಡಿದ ಗೊಂಬೆಗಳು, ಸ್ಥಳೀಯ ಲಭ್ಯವಿರುವ ಗೊಂಬೆಗಳು, ಇತ್ಯಾದಿ)


ವಿಧಾನ:


೧. ಮಕ್ಕಳನ್ನು ಅರ್ಧವೃತ್ತದಲ್ಲಿ ಕೂರಿಸಿ.


೨. ವಿವಿಧ ರೀತಿಯ ಗೊಂಬೆಗಳನ್ನು ಟ್ರೇನಲ್ಲಿ ಇರಿಸಿ.


೩. ಮಕ್ಕಳನ್ನು ಒಂದೊ0ದಾಗಿ ಕರೆ ಮಾಡಿ ಮತ್ತು ಟ್ರೇನಿಂದ ಗೊಂಬೆಯನ್ನು ಆಯ್ಕೆ ಮಾಡಲು ಹೇಳಿ. (ಅವರ ಆಯ್ಕೆ)


೪. ಮಗುವಿಗೆ ಅವನು/ಅವಳು ಆಯ್ಕೆ ಮಾಡಿದ ಗೊಂಬೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿ


ಉದಾಹರಣೆಗೆ:ನೀವು ಈ ಗೊಂಬೆಯನ್ನು ಏಕೆ ಆರಿಸಿದ್ದೀರಿ?


ನೀವು ಎಂದಾದರೂ ಈ ಗೊಂಬೆಯೊ0ದಿಗೆ ಆಡಿದ್ದೀರಾ? ನೀವು ಗೊಂಬೆಯನ್ನು ಇಷ್ಟಪಡುತ್ತೀರಾ?


ನೀವು ಗೊಂಬೆಯನ್ನು ಏಕೆ ಇಷ್ಟಪಡುತ್ತೀರಿ?


ನೀವು ಗೊಂಬೆಯನ್ನು ಏಕೆ ಇಷ್ಟಪಡುವುದಿಲ್ಲ?


ಒಂದು ಮಗು ಉತ್ತರಿಸುವಾಗ, ಇತರ ಮಕ್ಕಳು ಅವನ/ಅವಳ ಮಾತನ್ನು ಆಲಿಸಬೇಕಾಗಿ ತಿಳಿಸುವುದು.


---–------------------------------ 


ಅವಧಿ-2 (40ನಿ)


*ನನ್ನ ಸಮಯ* 


ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.


ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


----------------------------–----–-


ಅವಧಿ-3(40ನಿ)


*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)


ಸಾಮರ್ಥ್ಯ : ವಾಸನೆಯ ಪ್ರಜ್ಞೆ, ಪರಿಸರದ ಅರಿವು


ಚಟುವಟಿಕೆ : ವಾಸನೆಊಹಿಸಿ (ಗುರಿ ೩)


ಉದ್ದೇಶ:- ವಾಸನೆಗಳನ್ನು ಗುರುತಿಸುವುದು.


ಅಗತ್ಯ ಸಾಮಗ್ರಿಗಳು : ಈರುಳ್ಳಿ, ಬೆಳ್ಳುಳ್ಳಿ, ಅಗರಬತ್ತಿ, ಪುದೀನಾ, ತಾಜಾ ಮತ್ತು ಕೊಳೆತ ಹಣ್ಣುಗಳು, ಬಲವಾದ ವಾಸನೆಯುಳ್ಳ ವಸ್ತುಗಳು.


ವಿಧಾನ: ಮಕ್ಕಳು ವೃತ್ತಾಕಾರದಲ್ಲಿ ಅಥವಾ ಸಾಲಿನಲ್ಲಿ ಕುಳಿತುಕೊಳ್ಳಲು ಹೇಳುವುದು. ಈರುಳ್ಳಿ, ಬೆಳ್ಳುಳ್ಳಿ,ಅಗರಬತ್ತಿ, ಪುದೀನಾ, ತಾಜಾ ಮತ್ತು ಕೊಳೆತ ಹಣ್ಣುಗಳು, ಬಲವಾದ ವಾಸನೆಯುಳ್ಳ ವಸ್ತುಗಳನ್ನು ನೀಡಿ ವಾಸನೆ ಗ್ರಹಿಸಿ ಹೇಳುವುದು. ನಂತರ ಒಂದೊ0ದೆ ಮಗುವಿನ ಕಣ್ಣಿಗೆ ಪಟ್ಟಿ ಕಟ್ಟಿ ನೀಡಿದ ವಸ್ತು/ಹಣ್ಣಿನ ವಾಸನೆ ಗ್ರಹಿಸಿ ಅದರ ಹೆಸರು ಹೇಳಿಸುವುದು. ಪ್ರತಿ ಮಗುವಿಗೆ ಅವಕಾಶ ಕಲ್ಪಿಸುವುದು.




----------------------–---------


ಅವಧಿ -4 (40ನಿ)


*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)


 ಸಾಮರ್ಥ್ಯ; ಸಮಾಜಮುಖಿ ವರ್ತನೆಗಳನ್ನು ರೂಢಿಸಿಕೊಳ್ಳುವುದು. ಬೇರೆಯವರ ಭಾವನೆಗಳನ್ನು ಮತ್ತು ಹಕ್ಕುಗಳನ್ನು ಗೌರವಿಸಿ ಸಮುದಾಯದಲ್ಲಿ ಸಹಾಯಮಾಡುವ ಬೇರೆ ಬೇರೆ ವೃತ್ತಿಗಳನ್ನು ಗೌರವಿಸುವುದು.


ಚಟುವಟಿಕೆ: ನನ್ನ ಸಮುದಾಯದ ಸಹಾಯಕರು


ಉದ್ದೇಶಗಳು:


ಗ್ರಹಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು.


ಸಮುದಾಯದಲ್ಲಿನ ವಿವಿಧ ಸಹಾಯಕರನ್ನುಗುರ್ತಿಸುವುದು


ಸಾಮಗ್ರಿಗಳು: ಸಮುದಾಯದಸಹಾಯಕರ ಮಿಂಚುಪಟ್ಟಿಗಳು.


ವಿಧಾನ: ಸಮುದಾಯದಲ್ಲಿ ನಮಗೆ ಸಹಾಯ ಮಾಡುವ ಬೇರೆ ಬೇರೆ ವೃತ್ತಿಯಲ್ಲಿರುವ ವ್ಯಕ್ತಿಗಳ ಪಾತ್ರಗಳನ್ನು ಮಕ್ಕಳಿಗೆ ಪರಿಚಯಿಸುವುದು. ಉದಾ: ವೈದ್ಯ, ಪೋಲಿಸ್, ಶಿಕ್ಷಕಿ ಇಂತಹ ವ್ಯಕ್ತಿಗಳನ್ನು ಮಕ್ಕಳು ಸಮುದಾಯದಲ್ಲಿ ಕಂಡಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವುದು. ಇವರೆಲ್ಲಾ ಹೇಗೆ ನಮ್ಮ ಬದುಕಿನಲ್ಲಿ ಸಹಾಯ ಮಾಡುತ್ತಾರೆ ಎಂಬುದನ್ನು ಚರ್ಚಿಸುವಂತೆ ಪ್ರೇರೆಪಿಸುವುದು. ಅವರ ಪಾತ್ರಗಳನ್ನು ಮೂಕಾಭಿನಯ ಮಾಡುವಂತೆ ಮಕ್ಕಳಿಗೆ ಹೇಳುವುದು. ಒಂದು ಮಗು ಪಾತ್ರ ಮಾಡಿದರೆ ಉಳಿದವರು ಅದು ಯಾರ ಪಾತ್ರವೆಂದು ಊಹಿಸಿ ಗುರ್ತಿಸಲು ಹೇಳುವುದು.



* ಬಳಸಬೇಕಾದ ಅಭ್ಯಾಸ ಹಾಳೆಗಳು: HW-7 


-------------------------------


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


*ಆಲಿಸುವುದು ಮತ್ತುಮಾತನಾಡುವುದು* 


ಸಾಮರ್ಥ್ಯ: ಸೃಜನಾತ್ಮಕ ಸ್ವ-ಅಭಿವ್ಯಕ್ತಿ, ಪದ ಸಂಪತ್ತು ಬೆಳವಣಿಗೆ, ಊಹಿಸಿ ಓದುವುದು


ಚಟುವಟಿಕೆ : “ನನ್ನ ನೋಡು ಮಾತನಾಡು” (ಗುರಿ -೨) 


ಉದ್ದೇಶಗಳು :


* ಸೂಚಿಸಿದ ವಿಷಯಕ್ಕೆ ಸಂಬ0ಧಿಸಿದ0ತೆ ತನ್ನದೇ ಮಾತುಗಳಲ್ಲಿ ಹೇಳುವುದು.


* ಹೊಸ ಪದಗಳನ್ನು ಸೇರಿಸುತ್ತಾ ಪದ ಸಂಪತ್ತನ್ನು ವೃದ್ಧಿಸಿಕೊಳ್ಳುವುದು.


ಸಾಮಗ್ರಿಗಳು: ಮಿಂಚು ಪಟ್ಟಿಗಳು


ವಿಧಾನ: ಫ್ಲಾನಲ್ ಬೋರ್ಡ್ ಮೇಲೆ ವಾರಕ್ಕೊಮ್ಮೆ ಸಸ್ಯ, ಪ್ರಾಣಿ, ಮೃಗಾಲಯದ ಚಿತ್ರ ಮತ್ತು ಹಬ್ಬ ಆಚರಿಸುವ ವಿವಿಧ ಚಿತ್ರಗಳನ್ನು ಅಂಟಿಸಿ ಮಕ್ಕಳು ಅದನ್ನು ನೋಡಿ ಅದರ ಬಗ್ಗೆ ಮಾತನಾಡಲು ಪ್ರೋತ್ಸಾಹಿಸುವುದು.



*ಅರ್ಥಗ್ರಹಿಕೆಯೊಂದಿಗಿನ ಓದು*


ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.


ಚಟುವಟಿಕೆ : ನನ್ನ ಮೊದಲ ಪದ ಪೆಟ್ಟಿಗೆ (ಗುರಿ-೨)


ಉದ್ದೇಶ : ಪರಿಚಿತ ವಸ್ತು ವಿಷಗಳನ್ನು ಆಧರಿಸಿ ಪದಗಳಿಗೆ ಸಂಬ0ಧಿಸಿದ ಚಿತ್ರಗಳನ್ನು ರಚಿಸುವರು ಮತ್ತು ಚಿತ್ರಗ್ರಹಿಸಿ ಪದಗಳನ್ನು ಓದುವರು.


ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ನೋಟ್ ಪುಸ್ತಕ, ಚಿತ್ರ ಪಟ


ವಿಧಾನ: ಮಕ್ಕಳು ಹಳೆಯ ನಿಯತಕಾಲಿಕಗಳಿಂದ ಹಾಗೂ ಕಥೆ ಪುಸ್ತಕಗಳಿಂದ ೩-೪ ಅಕ್ಷರಗಳ ಪದಗಳನ್ನು ಕತ್ತರಿಸಿ ಒಂದು ಪೆಟ್ಟಿಗೆಯಲ್ಲಿ ಸಂಗ್ರಹಿಸುವುದು. ನಂತರ ಅವುಗಳನ್ನು ಕಾಗದದ ಮೇಲೆ ಅಂಟಿಸಿ, ಪ್ರತಿ ಪದಕ್ಕೂ ಚಿತ್ರ ಬಿಡಿಸಲು ಪ್ರಯತ್ನಿಸುವುದು.



ಗಮನಿಸಿ : ಈ ಮೊದಲು ಈ ಚಟುವಟಿಕೆಯನ್ನು ನಿರ್ವಹಿಸಿದಾಗ ಬಳಸಿದ ಪದ ಮತ್ತು ವಾಕ್ಯಗಳನ್ನು ಹೊರತುಪಡಿಸಿ ಹೊಸ ಪದ, ವಾಕ್ಯಗಳನ್ನು ಬಳಸುವುದು.


*ಉದ್ದೇಶಿತ ಬರಹ*  


ಸಾಮರ್ಥ್ಯ: ಸ್ವಯಂ ನಿಯಂತ್ರಣ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಮತ್ತು ಇತರರ ಭಾವನೆ ಹಾಗೂ ಹಕ್ಕುಗಳ ಕುರಿತು ಗೌರವ.


ಚಟುವಟಿಕೆ : “ಉದ್ಯಾನವನದ ಚಿತ್ರ ಬಿಡಿಸೋಣ” (ಗುರಿ -೨)


ಉದ್ದೇಶಗಳು:


ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸುವುದು.


ಇತರರ ಭಾವನೆ ಹಾಗೂ ಹಕ್ಕುಗಳ ಬಗ್ಗೆ ಗೌರವ ಬೆಳೆಸುವುದು.


ತನ್ನ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯ ಬೆಳೆಸುವುದು.


ಸಾಮಗ್ರಿಗಳು: ಹಾಳೆ, ಬಣ್ಣ, ಪೆನ್ಸಿಲ್, ಕ್ರೆಯಾನ್ಸ್


ವಿಧಾನ: 1ನೇ ತರಗತಿ ಮಕ್ಕಳಿಗೆ ಕಲಿಕಾ ಹಾಳೆಯಲ್ಲಿ ಉದ್ಯಾನವನದ ಚಿತ್ರ ಬಿಡಿಸಲು ತಿಳಿಸುವುದು ಮತ್ತು ಅವರು ನೋಡಿರುವ ಉದ್ಯಾನವನದ ಬಗ್ಗೆ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡುವುದು.




ಅಭ್ಯಾಸದ ಹಾಳೆಗಳು: E.C-7


ಬರವಣಿಗೆಯ ಮಾದರಿ:


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು


--------------------------------


 ಅವಧಿ - 6(40ನಿ)


*ಹೊರಾಂಗಣ ಆಟಗಳು* 


ಚಟುವಟಿಕೆ : ವಜ್ರಾಸನ 


ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು, ಸ್ನಾಯುಗಳ 


ಬಲವರ್ಧನೆ ಮಾಡುವುದು.


ಸಾಮಗ್ರಿ:


ವಿಧಾನ : ಮಕ್ಕಳಿಗೆ ಸರಳ ಸೂಚನೆಗಳನು ನೀಡುವುದು


ಕಣ್ಣನ್ನು ಮುಚ್ಚಿ ಬೆನ್ನನ್ನು ನೇರ ಮಾಡಿ ವಜ್ರಾಸನದಲ್ಲಿ ಕುಳಿತುಕೊಳ್ಳಲು ತಿಳಿಸುವುದು. ಎರಡು ಕೈಗಳನ್ನು ಸರಳ ಮುದ್ರೆಯನ್ನು ಬಳಸಿ ತೊಡೆಯ ಮೇಲೆ ಇರಿಸಿಕೊಳ್ಳಲು ಸೂಚಿಸುವುದು.




-------------------------------- 


ಅವಧಿ - 7(40ನಿ)


*ಕಥಾ ಸಮಯ* 


ಶೀರ್ಷಿಕೆ : ಸಹಜ ಸೌಂದರ್ಯ


ಸಾಮಗ್ರಿಗಳು : ಮುಖವಾಡಗಳು


ಉದ್ದೇಶಗಳು :


ಊಹಿಸುವ ಕೌಶಲವನ್ನು ಹೆಚ್ಚಿಸುವುದು.


ಕಥೆಗೆ ಸಂಬ0ಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.


ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.


ವಿಧಾನ :


ಮುಖವಾಡಗಳನ್ನು ಬಳಸಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿ ಅಭಿನಯಿಸಲು ಸಹಕರಿಸಿ.


ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.


(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)


-----------------------------------


ಅವಧಿ -8(20ನಿ)


*ಮತ್ತೆ ಸಿಗೋಣ*


ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.



【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್


------------------------------


*ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 


    ಶಿಕ್ಷಕ 


ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


*ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment