Wednesday, 19 June 2024

ವಿದ್ಯಾಪ್ರವೇಶ ದಿನ 16

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1k8QnQM8-G_Z9d63DfdD1Y3kLRwgTHZHX/view?usp=drivesdk

*ವಿದ್ಯಾಪ್ರವೇಶ ದಿನ-16* 



✒️🚁🎮🎨🎲🧮📏🔍




*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1: ನಾನು ತರಕಾರಿ


ಅಗತ್ಯವಿರುವ ಸಾಮಗ್ರಿಗಳು: ವಿವಿಧ ರೀತಿಯ ತರಕಾರಿಗಳ ಚಿತ್ರ ಕಾರ್ಡ್‌ಗಳು.

ಸಮಯ : 5 ನಿಮಿಷಗಳ


ವಿಧಾನ:


ವಿವಿಧ ರೀತಿಯ ತರಕಾರಿಗಳ ಚಿತ್ರಗಳನ್ನು ಒಂದೊಂದಾಗಿ ತೋರಿಸಿ.


ತೋರಿಸಿದ ಚಿತ್ರಗಳನ್ನು ನೋಡಲು ಮಕ್ಕಳಿಗೆ ತಿಳಿಸಿ ಮತ್ತು ತರಕಾರಿಯ ಹೆಸರು ಮತ್ತು ಅದರ ಬಣ್ಣವನ್ನು ಹೇಳುವ


ಮೂಲಕ ತರಗತಿಗೆ ಪ್ರವೇಶಿಸಲು ಅವರಿಗೆ ತಿಳಿಸಿ.


ಉದಾಹರಣೆಗೆ : ನಾನು ಕ್ಯಾರೆಟ್. ಕಿತ್ತಳೆ ಬಣ್ಣದ ಕ್ಯಾರೆಟ್.


ಚಟುವಟಿಕೆ 2


ತರಗತಿ ಪ್ರವೇಶಿಸಿದ ನಂತರ ವೃತ್ತಾಕಾರವಾಗಿ ನಿಲ್ಲುವಂತೆ ಸೂಚಿಸಿ.


ಮಕ್ಕಳನ್ನು ಸ್ವಾಗತಿಸಿ "ಇವತ್ತು ಯಾವ ವಾರ? ಎಂದು ಮಕ್ಕಳನ್ನು ಕೇಳಿ ಮತ್ತು "ಇವತ್ತು _ವಾರ ಎಂಬಉತ್ತರ ನೀಡಲು


ಪ್ರೋತ್ಸಾಹಿಸಿ.


ಹವಾಮಾನದ ಬಗ್ಗೆ ಮಕ್ಕಳನ್ನು ಕೇಳಿ.


ಹವಾಮಾನ ನಕ್ಷೆಯಲ್ಲಿ ಮಾರ್ಕ್ ಮಾಡಲು ಅವರಿಗೆ ತಿಳಿಸಿ.


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ : ಋತುಮಾನದ ಮಾತು


ಅಗತ್ಯವಿರುವ ಸಾಮಗ್ರಿಗಳು: ಋತುಮಾನದ ಉಡುಪುಗಳಿಗೆ ಸಂಬಂಧಿಸಿದ ಫ್ಲ್ಯಾಶ್ ಕಾರ್ಡ್‌ಗಳು, (ಹತ್ತಿಉಡುಪುಗಳು, ಸೈಟರ್ ಗಳು, ಟೋಪಿ, ಸಾಕ್ಸ್, ಮಳೆ ಕೋಟುಗಳು, ಕ್ರಾಫ್ ಗಳು, ಮಂಕಿ ಕ್ಯಾಪ್ ಗಳು)


ವಿಧಾನ:


ರಿಮೋಟ್ ಆಟವನ್ನು ನಡೆಸಿ ಅಂದರೆ, ವೃತ್ತದ ಮಧ್ಯದಲ್ಲಿ ಒದಗಿಸಲಾದ ಫ್ಲಾಶ್ ಕಾರ್ಡ್ ಗಳನ್ನು ಆರಿಸಲು ಮಗುವಿಗೆ ತನ್ನ


ಸರದಿಯನ್ನು ನೀಡಲು ಟಿವಿ ರಿಮೋಟ್ ಬಳಸಿ. ಅವನು / ಅವಳು ಕೆಳಗಿನ ರಚನೆಯ ಮೂಲಕ ಮಾತನಾಡಬೇಕಾದ


ಅವಕಾಶವನ್ನು ಯಾರು ಪಡೆಯುತ್ತಾರೆ.


1. ನಾನು ಈ ಉಡುಪನ್ನು ಕಾಲದಲ್ಲಿ ಧರಿಸುತ್ತೇನೆ.


2. ನಾನು ಈ ಸೀಸನ್ ನಲ್ಲಿ ಉಡುಪನ್ನು ಧರಿಸುತ್ತೇನೆ.


3. ಈ ಋತುವಿನಲ್ಲಿ ಇದು ತುಂಬಾ ಬಿಸಿ/ಶೀತ/ಚಳಿ/ಮಳೆಗಾಲವಾಗಿರುತ್ತದೆ.


4. ನಾನು ಈ ಉಡುಪನ್ನು ಏಕೆ ಧರಿಸುತ್ತೇನೆ?


ಎಲ್ಲಾ ಮಕ್ಕಳು ಅವರ ಸರದಿಯನ್ನು ಪಡೆಯುವವರೆಗೂ ಚಟುವಟಿಕೆ ಮುಂದುವರಿಯುತ್ತದೆ.

ಅವಧಿ-2 (40ನಿ)

*ನನ್ನ ಸಮಯ* 

ಕಲಿಕಾ ಸಿದ್ಧತಾ ಭಾಗವಾಗಿ 4 ಮೂಲೆಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಮೂಲೆವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಮೂಲೆಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು.ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುವುದು.


( ಮೂಲೆವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಜಿಸಬಹುದಾಗಿದೆ.)


ಬಿಲ್ಡಿಂಗ್ ಬ್ಲಾಕ್ಸ್ ಮೂಲೆ:


ಸಾಮರ್ಥ್ಯ : ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವರು.


ಚಟುವಟಿಕೆ : ರೈಲಿನ ಮಾದರಿ ರಚನೆ


ಉದ್ದೇಶ : ಬ್ಲಾಕ್‌ಗಳನ್ನು ನಿರ್ದೇಶನದಂತೆ ವ್ಯವಸ್ಥಿತವಾಗಿ ಜೋಡಿಸುವ ಕೌಶಲ್ಯ ಗಳಿಸುವುದು.


ಸಾಮಗ್ರಿ :- ಕಲಿಕಾ ಕಿಟ್ ನ ಬಿಲ್ಡಿಂಗ್ ಬ್ಲಾಕ್ಸ್


(ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್ ಗಳು, ಬೆಂಕಿ ಪೊಟ್ಟಣಗಳು, ಪೇಸ್ಟ್ ಬಾಕ್ಸ್ ಗಳು, ವಿವಿಧ ಅಳತೆಯ ಪುಸ್ತಕಗಳು)


ವಿಧಾನ:


ಲಭ್ಯಬ್ಲಾಕ್ಸ್‌ಗಳನ್ನು ರೈಲಿನ ಮಾದರಿಯಲ್ಲಿ ಜೋಡಿಸುವರು.


ಗಣಿತ ಮೂಲೆ:-


ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ, ಆಧಾರದ ಮೇಲೆ ವರ್ಗೀಕರಿಸುವರು ಹಾಗೂ


ಸಾಂಕೇತಿಕವಾಗಿ ಸಂಖ್ಯೆಗಳ ಹೋಲಿಕೆ ಮಾಡುವರು. ಉದ್ದೇಶ: ಭಾರ ಹಾಗೂ ಹಗುರ ವಸ್ತುಗಳನ್ನು ವರ್ಗೀಕರಿಸುವುದು.


ಸಾಮಗ್ರಿ :- ಪ್ಲಾಸ್ಟಿಕ್ ಚೆಂಡು, ರಬ್ಬರ್ ಚೆಂಡು, ರಟ್ಟುಗಳು, ನಾಣ್ಯ, ಹತ್ತಿ ಈ ರೀತಿಯ ವಿವಿಧ ತೂಕದ ವಸ್ತುಗಳು


ವಿಧಾನ:


• ನೀಡಲಾಗಿರುವ ಸಾಮಗ್ರಿಗಳನ್ನು ನೋಡಿ ಅನುಭವ ಹೊಂದಿದ ನಂತರ ಭಾರ ಹಗುರ ವಸ್ತುಗಳಾಗಿ ವಿಂಗಡಿಸುವರು.


ಅನ್ವೇಷಣೆ ಅಥವಾ ವಿಜ್ಞಾನ ಮೂಲೆ:


ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸಿಕೊಳ್ಳುವರು.


ಚಟುವಟಿಕೆ: ನೀರಿನಲ್ಲಿ ಕರಗು


ಉದ್ದೇಶ : ನೀರಿನಲ್ಲಿ ಕರಗುವ/ಕರಗದ ವಸ್ತುಗಳನ್ನು ಗುರುತಿಸುವುದು.


ಸಾಮಗ್ರಿ :- ಪಾರದರ್ಶಕ ಪ್ಲಾಸ್ಟಿಕ್ ಲೋಟಗಳು, ನೀರು, ಮರಳು, ಉಪ್ಪು, ಹರಳು, ಬಣ್ಣ ಇತ್ಯಾದಿ.


ವಿಧಾನ :


ಎರಡು ಪಾರದರ್ಶಕ ಲೋಟಗಳಲ್ಲಿ ಅರ್ಧದಷ್ಟು ನೀರನ್ನು ತುಂಬುವರು. ಒಂದು ಲೋಟಕ್ಕೆ ಉಪ್ಪು ಹಾಗೂ ಇನ್ನೊಂದಕ್ಕೆ ಮರಳನ್ನು ಸೇರಿಸಿ ಕಲಕುವರು. ಕೆಲವು ಕ್ಷಣಗಳ ನಂತರ ನೀರಿನಲ್ಲಿ ಕಾಣುವ ಬದಲಾವಣೆಗಳನ್ನು ಗಮನಿಸುವರು.


ಗೊಂಬೆಗಳ ಮೂಲೆ :


ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ ಬೆಳೆಸಿಕೊಳ್ಳುವರು.


ಚಟುವಟಿಕೆ: ನಾನು ನನ್ನ ಗೊಂಬೆಯ ಸ್ವಚ್ಛತೆ,


ಉದ್ದೇಶ : ಸ್ವಚ್ಛತೆಯ ಅರಿವು ಹೊಂದುವುದರೊಂದಿಗೆ ಒಳ್ಳೆಯ ಅಭ್ಯಾಸಗಳನ್ನು ಪ್ರದರ್ಶಿಸುವುದು.


ಸಾಮಗ್ರಿ :- ಗೊಂಬೆ. ಕರವಸ್ತ್ರ, ಟವೆಲ್, ನೈಲ್ ಕಟ್ಟರ್, ಆಟಿಕೆ ಪ್ಲೇಟ್, ಬಾಚಣಿಗೆ, ನ್ಯಾಪ್ಟಿನ್ (ಹೊದಿಕೆಯಂತೆ ಬಳಸಲು)


ವಿಧಾನ:


ಮಗು ತನ್ನ ದೈನಂದಿನ ಚಟುವಟಿಕೆಗಳಲ್ಲಿ ಅನುಸರಿಸುವ ಸ್ವಚ್ಛತಾ ಅಭ್ಯಾಸಗಳನ್ನು ಗೊಂಬೆಯೊಂದಿಗೆ ನಿರ್ವಹಿಸುವರು.( ಹಲ್ಲುಜ್ಜುವಿಕೆ. ಮುಖ ತೊಳೆಯುವಿಕೆ, ಉಗುರು ಕತ್ತರಿಸುವಿಕೆ, ತಿಂಡಿ ತಿನ್ನುವುದು, ಮಲಗುವುದು) ಈ ರೀತಿಯ


ದೈನಂದಿನ ಒಳ್ಳೆಯ ಅಭ್ಯಾಸಗಳನ್ನು ಗೊಂಬೆಯೊಂದಿಗೆ ಪ್ರದರ್ಶಿಸುವರು.


ಓದುವ/ ತರಗತಿ ಗ್ರಂಥಾಲಯ  ಮೂಲೆ :


ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ,ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವರು.


ಚಟುವಟಿಕೆ: "ಚಿತ್ರ ಓದು"


ಉದ್ದೇಶ : ಭಿನ್ನತೆಯನ್ನು ಅರಿಯುವುದು ಮತ್ತು ಅಭಿವ್ಯಕ್ತಿಸುವುದು.


ಸಾಮಗ್ರಿಗಳು: ವ್ಯತ್ಯಾಸಗಳನ್ನು ಹೊಂದಿರುವ ಎರಡು ಚಿತ್ರಗಳು



ಮೂರರಿಂದ ನಾಲ್ಕು ವ್ಯತ್ಯಾಸಗಳಿರುವ ಎರಡು ಚಿತ್ರಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅವುಗಳಲ್ಲಿನ ವ್ಯತ್ಯಾಸಗಳನ್ನು ಮಾತಿನ ಮೂಲಕ ಅಭಿವ್ಯಕ್ತಿಸಲು ತಿಳಿಸುವರು.


ಕರಕುಶಲ / ಕಲೆಗೊಂದು ನೆಲೆ:


ಸಾಮರ್ಥ್ಯ : ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬಳಸಿಕೊಳ್ಳುವರು.


ಚಟುವಟಿಕೆ: "ಹಸ್ತ ಚಿತ್ರ"


ಉದ್ದೇಶ : ಕಣ್ಣು-ಕೈಗಳ ಸಹಸಂಬಂಧ ಅರಿಯುವುದು


ಸಾಮಗ್ರಿಗಳು: ಬಿಳಿಹಾಳೆ, ಪೆನ್ಸಿಲ್, ಕ್ರೇಯಾನ್ಸ್


ವಿಧಾನ :


ಬಿಳಿಹಾಳೆಯ ಮೇಲೆ ಹಸ್ತವನ್ನು ತೆರೆದಿಟ್ಟು ಪೆನ್ಸಿಲ್ ನ ಸಹಾಯದಿಂದ


ಬೆರಳುಗಳ ಅಂಚುಗಳ ಮೇಲೆ ಹಸ್ತದ ಆಕೃತಿಯನ್ನು ಮೂಡಿಸಿ. ಬಣ್ಣ ತುಂಬುವರು.


ಬರೆಯುವ ಮೂಲೆ:


ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನುರಚಿಸುವರು.


ಚಟುವಟಿಕೆ: ರೇಖಾ ಚಿತ್ರ


ಉದ್ದೇಶ : ಬರವಣಿಗೆ ಅಗತ್ಯವಾದ ಪುರ್ವ ಸಿದ್ಧತಾ ಕೌಶಲಗಳ ಬೆಳವಣಿಗೆ.


ಸಾಮಗ್ರಿ :- ಡ್ರಾಯಿಂಗ್ ಶೀಟ್, ವೈಟ್ ಶೀಟ್ಸ್, ಪೆನ್ಸಿಲ್, ಬಳೆ, ನಾಣ್ಯ, ಮುಚ್ಚಳಗಳು, ಬೆಂಕಿ ಪೊಟ್ಟಣ


ಹಾಳೆಯ ಮೇಲೆ ಸಾಮಗ್ರಿಗಳನ್ನು ಬಳಸಿ ಅವುಗಳ ಆಕೃತಿಗಳನ್ನು ರಚಿಸುವರು.


ಮಾಡಿ ಕಲಿ ಮೂಲೆ:


ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆಯೊಂದಿಗೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವರು.


ಚಟುವಟಿಕೆ: ಓರೆಗಾಮಿ ಚಟುವಟಿಕೆ


ಉದ್ದೇಶ : * ನೀಡಿದ ನಿರ್ದೇಶನಗಳನ್ನು ಕ್ರಮಬದ್ಧವಾಗಿ ಪಾಲಿಸುವುದು.


ಸಾಮಗ್ರಿ :- ಬಣ್ಣ ಬಣ್ಣದ ಕಾಗದಗಳು.


ವಿಧಾನ : ಚಿತ್ರದಲ್ಲಿ ಒದಗಿಸಿರುವ ಸೂಚನೆಗಳಂತೆ ಮಕ್ಕಳು ಓರೆಗಾಮಿ ಚಟುವಟಿಕೆಯನ್ನು ನಿರ್ವಹಿಸುವರು. (ಶಿಕ್ಷಕರು ಈ ಚಟುವಟಿಕೆ ನಿರ್ವಹಿಸುವ ಮೊದಲು ಒಂದೆರಡು ಬಾರಿ ಮಾದರಿಯಾಗಿ ಮಾಡಿ ತೋರಿಸುವುದು. ಅಗತ್ಯವಿರುವಲ್ಲಿ ಮಕ್ಕಳಿಗೆ ಸಹಕರಿಸುವುದು.)


ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ : ಹೋಲಿಸುವುದು, ಪರಿಸರ ಅರಿವು, ಬಣ್ಣ, ಆಕಾರ ಮತ್ತು ಗಾತ್ರಗಳ ಕಲ್ಪನೆ.


ಚಟುವಟಿಕೆ : "ಸ್ಪರ್ಶ ಮಾಡು ಎಣಿಸಿ ನೋಡು" (ಗುರಿ -3)


ಉದ್ದೇಶ : ಸ್ಪರ್ಶಿಸಿ ಎಣಿಸಿ ಹೇಳುವುದು.


ಸಾಮಗ್ರಿಗಳು: ಬ್ಲಾಕ್ಸ್, ಬಳಪ, ಹರಳುಗಳು, ಬಾಟಲ್ ಮುಚ್ಚಳ, ಚೆಂಡುಗಳು, ಕಾಳುಗಳು.


ವಿಧಾನ:


ಐದು ಅಥವಾ ಐದಕ್ಕಿಂತ ಹೆಚ್ಚು ವಸ್ತುಗಳನ್ನು ಸಾಲಿನಲ್ಲಿ ಇಡುವುದು (ಬ್ಲಾಕ್‌ಗಳು, ಸೀಮೆಸುಣ್ಣ, ಬಾಟಲ್ ಮುಚ್ಚಳ ಚೆಂಡುಗಳು) ಪ್ರತಿಯೊಂದು ವಸ್ತುವನ್ನು ಸ್ಪರ್ಶಿಸಲು ಮತ್ತು ಎಣಿಸಲು ಹೇಳುವುದು.


5.:-IL-11 


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಮಾಜಮುಖಿ ವರ್ತನೆಗಳನ್ನು ರೂಢಿಸಿಕೊಳ್ಳುವುದು, ಬೇರೆಯವರ ಭಾವನೆಗಳನ್ನು ಮತ್ತುಹಕ್ಕುಗಳನ್ನು ಗೌರವಿಸಿ


ಈ ಸಮುದಾಯದಲ್ಲಿ ಸಹಾಯ ಮಾಡುವ, ಬೇರೆ ಬೇರೆ ವೃತ್ತಿಗಳನ್ನು ಗೌರವಿಸುವುದು.


- ಚಟುವಟಿಕೆ : 7 ಎ. ನನ್ನ ಸಮುದಾಯದ ಸಹಾಯಕರು


5 ಉದ್ದೇಶಗಳು :


ಗ್ರಹಣ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು.


ಸಮುದಾಯದ ಸಹಾಯಕರ ಪಾತ್ರೆಗಳನ್ನು ಗುರ್ತಿಸುವುದು.


ಅ.ಹಾ:-HW-6 ಚಿತ್ರ ಬಂಧ


- ಸಾಮಗ್ರಿ : ವಿವಿಧ ವೃತ್ತಿಯ ಮಿಂಚುಪಟ್ಟಿಗಳು,

ವಿಧಾನ : ಮಕ್ಕಳು ಸಮುದಾಯದ ಸಹಾಯಕರಂತೆ ಮೂಕಾಭಿನಯ ಮಾಡುವುದು ಉಳಿದ ಮಕ್ಕಳು ಅವರು ಯಾರೆಂದು ಊಹಿಸಿ ಹೇಳುವುದು.


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ ಬೆಳವಣಿಗೆ


ಚಟುವಟಿಕೆ : ಹಾಡು, ಪ್ರಾಸಗೀತೆ, ಪದ್ಯ/ ನಾಟಕ. (ಗುರಿ-2)


ಉದ್ದೇಶಗಳು:


ಧ್ವನಿ ಸಂಕೇತಗಳ ಅರಿವನ್ನು ಮೂಡಿಸುವುದು.


ಪ್ರಾಸಗಳ ಅರಿವನ್ನು ಉಂಟು ಮಾಡುವುದು. ಕ್ರಿಯಾತ್ಮಕ ಸ್ವ-ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.


ತನ್ನ ಸುತ್ತಲಿನ ಪರಿಸರದೊಂದಿಗೆ ಸಂಬಂಧೀಕರಿಸುವುದು.


ಅಗತ್ಯ ಸಾಮಗ್ರಿಗಳು ಇಲ್ಲ


ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ. ಶಿಕ್ಷಕರು ಮಕ್ಕಳಿಗೆ 3ನೇ ದಿನದದಂದು ಪರಿಚಯಿಸಿದ ಪ್ರಾಸಗೀತೆಯನ್ನೇ ಅಭಿನಯದೊಂದಿಗೆ ಹಾಡಿ ತೋರಿಸಲಿ, ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಛರಿಸಲು ತಿಳಿಸಿ.


ನೆನಪಿಡಬೇಕಾದ ಅಂಶಗಳು:


ಮಕ್ಕಳು ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.


ಮಗುವಿಗೆ ತಿಳಿದಿರುವ ಹಾಡನ್ನು ಹೇಳಲು ಉತ್ತೇಜಿಸಿ.



*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ.


ಚಟುವಟಿಕೆ : ಪುಸ್ತಕ ಮೇಳ (ಗುರಿ -2)


ಉದ್ದೇಶ : ಪುಸ್ತಕಗಳ ಮೇಲಿನ ಬಾಂಧವ್ಯವನ್ನು ವೃದ್ಧಿಸುವುದು.


ಅಗತ್ಯ ಸಾಮಗ್ರಿಗಳು: ವಿವಿಧ ರೀತಿಯ ಪುಸ್ತಕಗಳು


ವಿಧಾನ: ಶಾಲಾ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿ, ಮಕ್ಕಳು ಪುಸ್ತಕಗಳೆಡೆಗೆ ಒಲವು ಹೆಚ್ಚಿಸಿಕೊಳ್ಳುವಂತೆ ಮಾಡುವುದು.


ಪುಸ್ತಕ ಮೇಳದಲ್ಲಿ ಪಾಲಕರು ಭಾಗವಹಿಸುವಂತೆ ಪ್ರೋತ್ಸಾಹಿಸುವುದು.



*ಉದ್ದೇಶಿತ ಬರಹ*  

ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತು ಅಭಿವೃದ್ಧಿ,


ಚಟುವಟಿಕೆ : "ಪುಸ್ತಕ ಮೇಳ "(ಗುರಿ -2 )


ಉದ್ದೇಶಗಳು:


ಪುಸ್ತಕಗಳ ಹೆಸರನ್ನು ಗುರುತಿಸುವುದು.


ಮುದ್ರಣದ ಪರಿಕಲ್ಪನೆಯನ್ನು ಮೂಡಿಸುವುದು.


ಓದಿನೆಡೆಗೆ ಒಲವು ಬೆಳೆಸುವುದು.


ಪುಸ್ತಕಗಳನ್ನು ಅರ್ಥಗ್ರಹಿಕೆಯೊಂದಿಗೆ ಓದುವುದು.


ಪದಸಂಪತ್ತನ್ನು ಹೆಚ್ಚಿಸಿಕೊಳ್ಳುವುದು.


ಸಾಮಗ್ರಿಗಳು: ಗ್ರಂಥಾಲಯದ ಪುಸ್ತಕಗಳು, ನೋಟ್ ಬುಕ್


ವಿಧಾನ:


ಶಾಲಾ ಆವರಣದಲ್ಲಿ ಪುಸ್ತಕ ಮೇಳವನ್ನು ಆಯೋಜಿಸಿ ಮಕ್ಕಳು ವೈವಿಧ್ಯಮಯವಾದ ಪುಸ್ತಕಗಳನ್ನು ಪರಿಚಯಿಸಿಕೊಳ್ಳಲು ಅವಕಾಶ ಕಲ್ಪಿಸುವುದು. ಆ ಮೂಲಕ ಪುಸ್ತಕಗಳೆಡೆಗೆ ಒಲವು ಬೆಳೆಸಿಕೊಳ್ಳುವಂತೆ ಮಾಡುವುದು.ತಾನು ನೋಡಿದ ಪುಸ್ತಕಗಳನ್ನು ಹೆಸರಿಸಲು ತಿಳಿಸುವುದು. ಪುಸ್ತಕ ಮೇಳದಲ್ಲಿ ಪಾಲಕರು ಭಾಗವಹಿಸಲು ಪ್ರೋತ್ಸಾಹಿಸುವುದು.


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇಕೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ : ಸರಳ ಉಸಿರಾಟದ ಚಟುವಟಿಕೆಗಳು (Breathing Exercise)


ಸಾಮರ್ಥ್ಯ : ಏಕಾಗ್ರತೆ ಬೆಳೆಸುವುದು


ವಿಧಾನ : ಮಕ್ಕಳಿಗೆ ಸರಳ ಸೂಚನೆಗಳನ್ನು ನೀಡುವುದು


ಕಣ್ಣನ್ನು ಮುಚ್ಚಿ ಬೆನ್ನನ್ನು ನೇರ ಮಾಡಿ ಕುಳಿತುಕೊಳ್ಳಲು ತಿಳಿಸುವುದು.. ಎರಡು ಕೈಗಳನ್ನು ಸರಳ ಮುದ್ರೆಯನ್ನು ಬಳಸಿ ತೊಡೆಯ ಮೇಲೆ ಇರಿಸಿ ಉಸಿರನ್ನು ನಿಧಾನವಾಗಿ ತೆಗೆದುಕೊಳ್ಳಲು ಹಾಗೂ ಹೊರಬಿಡಲು ಸೂಚಿಸುವುದು.



ಅವಧಿ - 7(40ನಿ)

*ಕಥಾ ಸಮಯ*

ಕಥೆಯ ಶೀರ್ಷಿಕೆ : ಸಹಜ ಸೌಂದರ್ಯ


ಸಾಮಗ್ರಿಗಳು : ಸರಣಿ ಚಿತ್ರಗಳು


ಉದ್ದೇಶಗಳು :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


> ಊಹಿಸುವ ಕೌಶಲವನ್ನು ಹೆಚ್ಚಿಸುವುದು


> ಆಲೋಚನಾ ಶಕ್ತಿಯನ್ನು ವೃದ್ಧಿಸುವುದು


> ಪ್ರಶ್ನಿಸುವ ಮನೋಭಾವಉಂಟುಮಾಡುವುದು.


ವಿಧಾನ : ಸರಣಿ ಚಿತ್ರಗಳು


> ಸರಣಿ ಚಿತ್ರಗಳನ್ನು ವಿವಿಧ ಕಾರ್ಯತಂತ್ರಗಳ ಅಡಿಯಲ್ಲಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ


ಸೃಜಿಸುವುದು. (ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)


ಅವಧಿ -8(20ನಿ)

*ಮತ್ತೆ ಸಿಗೋಣ*

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ,


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕ ರೊಂದಿಗೆ ಮತ್ತು ಕುಟುಂಬದ


ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ



[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment