Tuesday, 18 June 2024

ವಿದ್ಯಾ ಪ್ರವೇಶ ದಿನ 15

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1iyfsjnr0pHX9dGiy2uKhT2H1ilIDLZtJ/view?usp=drivesdk

*ವಿದ್ಯಾಪ್ರವೇಶ ದಿನ-15* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1: ನನ್ನ ಒಳ್ಳೆಯ ಅಭ್ಯಾಸಗಳು (ಮುಂದುವರಿದ ಚಟುವಟಿಕೆ)


ಸಾಮಗ್ರಿಗಳು: ಕೂದಲನ್ನು ಬಾಚಿಕೊಳ್ಳುವುದು, ಹಲ್ಲುಜ್ಜುವುದು, ಕೈಗಳನ್ನು ತೊಳೆಯುವುದು, ಉಗುರುಗಳನ್ನು ಕತ್ತರಿಸುವುದು


ಇತ್ಯಾದಿಗಳ ಚಿತ್ರಗಳು.


ಸಮಯ : 5 ನಿಮಿಷಗಳ


ವಿಧಾನ:


ದಿನ-22 ರ ಸೂಚನೆಗಳನ್ನು ಅನುಸರಿಸಿ. ಮತ್ತು ಹವಾಮಾನ ನಕ್ಷೆ ಬಗ್ಗೆ ಮಕ್ಕಳನ್ನು ಕೇಳಿ ಮತ್ತು ಅದನ್ನುಹವಾಮಾನ ಕಾರ್ಡ್ ನಲ್ಲಿ ಗುರುತಿಸಲು ಅವರಿಗೆ ಸೂಚನೆ ಮಾಡಿ.


ಚಟುವಟಿಕೆ 2: ನನ್ನ ಪ್ಲೇಟ್‌ನಲ್ಲಿ ಏನಿದೆ? (ಕೆರೆ-ದಂಡೆ ಆಟದ ಮಾದರಿ)


ಸಾಮಗ್ರಿಗಳು: ಯಾವುದೂ ಇಲ್ಲ


ಸಮಯ: 5 ನಿಮಿಷಗಳು


ವಿಧಾನ:


ತರಗತಿಯಲ್ಲಿ ನೆಲದ ಮೇಲೆ ದೊಡ್ಡ ವೃತ್ತವನ್ನು ಎಳೆಯಿರಿ (ಮಕ್ಕಳ ಸಂಖ್ಯೆಗೆ ಅನುಗುಣವಾಗಿ)


ಮಕ್ಕಳನ್ನು ವೃತ್ತದ ಸಾಲಿನ ಹೊರಗೆ ನಿಲ್ಲಿಸಿ.


ಶಿಕ್ಷಕರು ತರಕಾರಿಗಳ ಹೆಸರುಗಳನ್ನು ಹೇಳಿದರೆ, ಮಕ್ಕಳು ವೃತ್ತದ ಒಳಗೆ ಜಿಗಿಯಬೇಕು ಮತ್ತು ಹಣ್ಣುಗಳ ಹೆಸರುಗಳನ್ನು ಹೇಳಿದರೆ ಅವರು ವೃತ್ತದ ಹೊರಗೆ ಜಿಗಿಯಬೇಕು ಮತ್ತು ಯಾರಾದರೂ ತಪ್ಪು ಮಾಡಿದರೆ. ಅವನು /ಅವಳು ಆಟದಿಂದ ಔಟ್ ಆಗುತ್ತಾರೆ.


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ದಿನ 23 ರ ಚಟುವಟಿಕೆಯನ್ನು ಮುಂದುವರೆಸಿ.


ಅವಧಿ-2 (40ನಿ)

*ನನ್ನ ಸಮಯ* 

ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿ


ಪೂರ್ಣಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು.


ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣ ಗೊಳಿಸಲು ಸಹಕರಿಸುವುದು.


ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚುಗಮನಹರಿಸಬೇಕೆಂಬ


ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ದರಾಗುವುದು. ದಿನದ ಅಂತ್ಯಕ್ಕೆ ಕಲಿಕಾ ಮೂಲೆಗಳಲ್ಲಿ ಮುಂದಿನ ಹಂತಕ್ಕೆ ಹೊಂದಿಸಬೇಕಾದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಳ್ಳುವುದು.



ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ವಿನ್ಯಾಸಗಳನ್ನು ಗುರ್ತಿಸಿ ಪೂರ್ಣಗೊಳಿಸುವುದು. ಪರಿಸರದ ಅರಿವು.


ಚಟುವಟಿಕೆ : * ವಿನ್ಯಾಸಗಳನ್ನು ಪೂರ್ಣಗೊಳಿಸುವುದು" (ಗುರಿ -3)ಉದ್ದೇಶ:- ವಿನ್ಯಾಸವನ್ನು ಪೂರ್ಣಗೊಳಿಸುವುದು.


ಸಾಮಗ್ರಿಗಳು: ಪೆನಿಲ್, ಆಳಿಸುವ ರಬ್ಬರ್, ಮೆಂಡರ್, ಅಥವಾ ಸೇಬು, ಬಾಳೆಹಣ್ಣು, ಕಿತ್ತಳೆ ಹಣ್ಣು, ಪೇರಳೆ ಮತ್ತು

ವಿವಿಧ ಹಣ್ಣುಗಳ ಮಿಂಚು ಪಟ್ಟಿಗಳು, ಚೌಕ, ಆಯತ, ವೃತ್ತವಾಗಿ ಕತ್ತರಿಸಿದ ಆಕೃತಿಗಳು.


ವಿಧಾನ : ಹಣ್ಣುಗಳನ್ನು ತೆಗೆದುಕೊಳ್ಳುವುದು. ಒಂದು ಸಾಲಿನಲ್ಲಿ ಪರ್ಯಾಯವಾಗಿರುವಂತೆ ಜೋಡಿಸುವುದು.ಜೋಡಿಸುವ ಕ್ರಮ ಹೀಗಿರಲಿ. ಬಾಳೆಹಣ್ಣು, ಸೇಬು, ಬಾಳೆಹಣ್ಣು, ಸೇಬು, ಬಾಳೆಹಣ್ಣು, ಸೇಬು ಅಥವಾ ಸೇಬು, ಸೇಬು, ಬಾಳೆಹಣ್ಣು, ಸೇಬು, ಸೇಬು, ಬಾಳೆಹಣ್ಣು, ಮಕ್ಕಳಿಗೆ ಹಣ್ಣುಗಳನ್ನು ಜೋಡಿಸಿರುವ ವಿನ್ಯಾಸವನ್ನು ಗುರುತಿಸಲು ಪ್ರೋತ್ಸಾಹಿಸುವುದು. ಮಕ್ಕಳು ಇದೇ ವಿನ್ಯಾಸವನ್ನು ಅನುಸರಿಸಿ ಹಣ್ಣುಗಳನ್ನು ಜೋಡಿಸಲು ತಿಳಿಸುವುದು. ಹೀಗೆಯೇ ತ್ರಿಕೋನ, ವೃತ್ತೆ, ಚೌಕದಂತಹ ಅಕ್ಕ ಕೃತಿಗಳನ್ನು ಬಳಸಿ ಸರಳ ಮಾದರಿಯನ್ನು ಅನುಸರಿಸಿ ವಿನ್ಯಾಸರಚಿಸಲು ಹೇಳುವುದು. ಹೀಗೆಯೇ ಹೂವುಗಳು, ಎಲೆಗಳು, ಕೊಂಬೆಗಳು, ಬೆಣಚು ಕಲ್ಲುಗಳು, ಬೀಜಗಳನ್ನು ಬಳಸಿ ವಿನ್ಯಾಸ ರೂಪಿಸುವುದು.


ಆಹಾ:-IL-9 ವಿನ್ಯಾಸ ಸರಣಿ ಪೂರ್ಣಗೊಳಿಸೋಣ. ಆಹಾ:-IL-10 ವಿಶಿಷ್ಟತೆಯನ್ನು ಅರಿತು ವಿನ್ಯಾಸಗಳನ್ನು ಪೂರ್ಣಗೊಳಿಸೋಣ


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸಮಾಜಮುಖಿ ನಡವಳಿಕೆಯ ವಿಕಾಸ, ಇತರರ ಭಾವನೆಗಳನ್ನು ಹಕ್ಕುಗಳನ್ನು ಗೌರವಿಸುವುದು. ಸೃಜನಶೀಲತೆಯ ಹಾಗೂ ಸೌಂದರ್ಯ ಪ್ರಜ್ಞೆಯ ವಿಕಾಸ ಗಮನಿಸುವುದು. ಕಲ್ಪನಾ ಶಕ್ತಿಯ ವಿಕಾಸ, ಪದ


ಸಂಪತ್ತಿನ ಅಭಿವೃದ್ಧಿ, ಚಟುವಟಿಕೆ; 10 


ಹಬ್ಬಗಳ ಹಾಡುಗಳನ್ನು ಹೇಳುವುದು. ಬಂದ ಬಂದ ಗಣಪ ಬಂದ ಮೋದಕವನ್ನು


ಗಬಗಬ ತಿಂದ ಸೊಂಡಿಲನೆತ್ತಿ ಆಡಿಸೆ ಚೆಂದ ಎಲ್ಲರ ಕಣ್ಮಣಿಯಾಗಿ ನಿಂದ ಭಕ್ತರ ಹರಸುತ ಹರುಷವ ತಂದ ಬಲು ಚತುರ ಈ ಪಾರ್ವತಿ ಕಂದ


ಉದ್ದೇಶಗಳು:


ನಮ್ಮ ಸಂಸ್ಕೃತಿಯಲ್ಲಿರುವ ವಿವಿಧ ವಿಷಯಗಳ ಅರಿವು ಉಂಟಾಗುವುದು.


ಸೌಂದರ್ಯ ಪ್ರಜ್ಞೆಯ ವಿಕಾಸವಾಗುವುದು.


ಹಬ್ಬಗಳಿಗೆ ಸಂಭಂದಿಸಿದ ಹಾಡುಗಳನ್ನು ಕಲಿಯುವುದರೊಂದಿಗೆ ಹಬ್ಬಗಳ ವಿಶೇಷತೆಯನ್ನು ತಿಳಿಯುವುದು.


ಸಾಮಗ್ರಿಗಳು: ಹಬ್ಬಗಳ ಮಿಂಚುಪಟ್ಟಿಗಳು, ಚಿತ್ರಗಳು.


ವಿಧಾನ: ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಹಬ್ಬಗಳ ಪರಿಚಯ ಮಾಡಿ ಕೊಡುವುದು. ಹಬ್ಬಗಳನ್ನು ಆಚರಿಸುವ ವಿಧಾನ ತಿಳಿಸುವುದು. ತಿಳಿಸುವುದು. ಸ್ವತಂತ್ರ ದಿನಾಚರಣೆ, ಗಣರಾಜ್ಯೋತ್ಸವ, ಸಂಕ್ರಾಂತಿ, ದೀಪಾವಳಿ, ಹೋಲಿ, ಕ್ರಿಸ್‌ಮಸ್, ಈದ್ ಮಿಲಾದ್, ಗುರುಪೂರ್ಣಿಮಾ ಮುಂತಾದ ಹಬ್ಬಗಳ ಬಗ್ಗೆ ವಿವರಿಸುವುದು. ನಮ್ಮ ದೇಶದಲ್ಲಿ ಈ ಹಬ್ಬಗಳ ಆಚರಣೆ ಹೇಗೆ ಎಂಬುದನ್ನು ತಿಳಿಸುವುದು, ನಿರ್ದಿಷ್ಟ ಹಬ್ಬಗಳ ಕುರಿತು ಹಾಡು, ನೃತ್ಯ, ಕಲೆ, ಸೃಜನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವುದು.


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಲನಾ ಕೌಶಲಗಳ ಅಭಿವೃದ್ಧಿ, ಚಟುವಟಿಕೆ: ಪ್ರಾಸ


ಪದಗಳನ್ನು ಆಲಿಸುವುದು (ಗುರಿ-02) ECL-4ಉದ್ದೇಶಗಳು:


ಧ್ವನಿ ವಿಜ್ಞಾನದ ಅರಿವನ್ನು ಹೊಂದುವಂತೆ ಮಾಡುವುದು.


ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.


ಸ್ಕೂಲ ಹಾಗೂ ಸೂಕ್ಷ್ಮ ಚಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.


ಅಗತ್ಯ ಸಾಮಗ್ರಿಗಳು:- ಇಲ್ಲ


ವಿಧಾನ:


ಮಕ್ಕಳಿಗೆ ಹೊಸ ಪ್ರಾಸ ಗೀತೆಯನ್ನು ಹೇಳುವುದು.


ಹಾಡು ಹೇಳುವಾಗ ಪ್ರಾಸ ಪದಗಳನ್ನು ಸ್ವಲ್ಪ ಒತ್ತಿ ಹೇಳುವುದು.


ಪ್ರಾಸ ಗೀತೆಗೆ ತಕ್ಕಂತೆ ಅಭಿನಯಿಸಲು ತಿಳಿಸುವುದು.


ಒತ್ತಿ ಹೇಳಿದ ಪದಗಳನ್ನು ಪ್ರತ್ಯೇಕವಾಗಿ ಹೇಳಿಸುವುದು.


ಪ್ರಾಸಗೀತೆಯಲ್ಲಿಯ ಪ್ರಾಸ ಪದಗಳನ್ನು ಪರಿಚಯಿಸಿ ಅದಕ್ಕೆ ಮತ್ತೆ ಇನ್ನೊಂದು ಪ್ರಾಸ ಪದ ಸೇರಿಸುವುದು.



*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಪದ ಗುರ್ತಿಸುವಿಕೆ, ಮುದ್ರಣದ ಅರಿವು, ಅರ್ಥ ಗ್ರಹಿಕೆ, ಪದ ಸಂಪತ್ತಿನ ಅಭಿವೃದ್ಧಿ,


ಚಟುವಟಿಕೆ : ನಾಮಫಲಕ (ಗುರಿ-2)



ಉದ್ದೇಶ : ನಾಮಫಲಕಗಳಲ್ಲಿಯ ಹೆಸರುಗಳನ್ನು ಚಿತ್ರಗಳ ಸಹಾಯದಿಂದ ಗುರುತಿಸುವರು, ಓದುವರು ಮತ್ತುಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವರು.


ಅಗತ್ಯ ಸಾಮಗ್ರಿಗಳು: ಮಿಂಚು ಪಟ್ಟಿ, ನೋಟ್ ಪುಸ್ತಕ, ಚಿತ್ರ ಪಟ. ಕಥಾ ಪುಸ್ತಕ.


ವಿಧಾನ: ಮಗುವಿನ ಸ್ನೇಹಿತರ ಹೆಸರಿನ ಪಕ್ಕದಲ್ಲಿ ಯಾವುದಾದರೂ ವಸ್ತು, ಪ್ರಾಣಿಗಳ ಚಿತ್ರ ಅಂಟಿಸಿ ನಾಮ ಫಲಕಗಳನ್ನು ರಚಿಸುವುದು. ನಂತರ ತನ್ನ ಸ್ನೇಹಿತರ ಹೆಸರನ್ನು ಗುರುತಿಸಲು ತಿಳಿಸುವುದು ಒಂದು ವೇಳೆ ಮಕ್ಕಳುಹೆಸರುಗಳನ್ನು ಗುರ್ತಿಸಲು ವಿಫಲವಾದರೆ ಹೆಸರಿನ ಮುಂದೆ ಅಂಟಿಸಿರುವ ಚಿತ್ರಗಳ ಸಹಾಯದಿಂದ ತನ್ನ ಹೆಸರನ್ನು ತೋರಿಸಲು ನೆರವಾಗುವುದು


*ಉದ್ದೇಶಿತ ಬರಹ*  

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಚಲನ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಾತ್ಮಕ ಚಿಂತನೆ.


ಚಟುವಟಿಕೆ : "ಶುಭಾಶಯ ಪತ್ರಗಳ ತಯಾರಿಕೆ (ಗುರಿ -2) ECW-12 ( 25 ನೇ ದಿನದಿಂದ ಮುಂದುವರೆದಿದೆ)


ಉದ್ದೇಶಗಳು:


ಉದ್ದೇಶಕ್ಕನುಗುಣವಾಗಿ ಬರೆಯುವ ಕೌಶಲವನ್ನು ಬೆಳೆಸುವುದು.


ಚಲನ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.


ಸೃಜನಾತ್ಮಕ ಚಿಂತನೆಯನ್ನು ಉತ್ತೇಜಿಸುವುದು.


ಶುಭಾಶಯ ಪತ್ರಗಳನ್ನು ರಚಿಸಲು ಅವಕಾಶ ನೀಡುವುದು.


ಸಾಮಗ್ರಿಗಳು: ಹಾಳೆ. ಕ್ರೇಯಾನ್ಸ್


ವಿಧಾನ:


ಮಕ್ಕಳು ತಮ್ಮ ಆಯ್ಕೆಯ ಚಿತ್ರಗಳನ್ನು ಬರೆದು ಬಣ್ಣ ಹಚ್ಚಿ, ತಮ್ಮ ಹೆಸರು ಮತ್ತು ಯಾರಿಗೆ ಶುಭಾಶಯಗಳನ್ನು ಹೇಳಲು ಬಯಸುತ್ತಾರೋ ಅವರ ಹೆಸರು ಬರೆಯಲಿ. (ಶಿಕ್ಷಕರು ಮಕ್ಕಳು ಸೂಚಿಸಿದ ವ್ಯಕ್ತಿಗಳ ಹೆಸರನ್ನು ಬರೆಯಲು ಸಹಾಯ ಮಾಡುವುದು) ಈ ಚಟುವಟಿಕೆಯನ್ನು ರಾಷ್ಟ್ರೀಯ ಮತ್ತು ಸ್ಥಳೀಯ ಹಬ್ಬಗಳು/ಹುಟ್ಟುಹಬ್ಬದ ಆಚರಣೆಗಳು ಇತ್ಯಾದಿ ಸಂದರ್ಭಗಳಲ್ಲಿಯೂ ಮಾಡಬಹುದು.


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು.


ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು.ಶಿಕ್ಷಕರು


ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.



 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ : ಸರಳ ವ್ಯಾಯಾಮ


ಸಾಮರ್ಥ್ಯ : ಕೈ ಕಾಲುಗಳ ಸ್ನಾಯುಗಳ ಚಲನೆ.


ವಿಧಾನ:


> ತರಗತಿ ಕೊಠಡಿ ಒಳಗೆ ಸರಳ ಸೂಚನೆಗಳನ್ನು ನೀಡಿ ವ್ಯಾಯಾಮ ಮಾಡಿಸುವುದು.


> ಎರಡು ಕೈಗಳನ್ನು ಮೇಲಕ್ಕೆ ಎತ್ತಿ. ಎರಡು ಕೈಗಳನ್ನು ಭುಜದ ಪಕ್ಕಕ್ಕೆ ತನ್ನಿ

ಅವಧಿ - 7(40ನಿ)

*ಕಥಾ ಸಮಯ*

ಅವಧಿ -8(20ನಿ)

- ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.


ಕಥಾ ಸಾಹಿತ್ಯ ನಿರೂಪಣೆ


- ಶಿಕ್ಷಕರು ಕಥೆಯನ್ನು ನಿರೂಪಿಸುವುದರಜೊತೆಗೆ ಮಕ್ಕಳ ನೆರವನ್ನು ಪಡೆದುಕೊಳ್ಳು ವುದರ ಮೂಲಕಕಥೆಯನ್ನು ಪೂರ್ಣ ಗೊಳಿಸುವುದು


- ಉದಾ : ಇದಾದ ಮೇಲೆ ಏನಾಗಿತ್ತು? ನಂತರಯಾರು ಬಂದರು? ಇತ್ಯಾದಿ


ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.


) ಬಿಳಿಯ ಕೋಟನ್ನು ಹಾಕಿಕೊಂಡು ನಡೆದ ಪಕ್ಷಿ ಯಾವುದು?


2) ವೈಯಾರ ತೋರಿದ ಪಕ್ಷಿ ಯಾವುದು?


ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)

*ಮತ್ತೆ ಸಿಗೋಣ*

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ


ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment