Monday, 17 June 2024

ವಿದ್ಯಾ ಪ್ರವೇಶ ದಿನ 14

 https://nalikalirenukaradhyatlm.blogspot.com/

 *ಆಡಿಯೋ ಲಿಂಕ್* 

https://drive.google.com/file/d/1iOkbVGdDJE7WFYiogZuC82OyUapJn9Ho/view?usp=drivesdk

*ವಿದ್ಯಾಪ್ರವೇಶ ದಿನ-14* 

✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಚಟುವಟಿಕೆ 1


ಚಟುವಟಿಕೆ I: ಐಸ್ ಬ್ರೇಕರ್


1.ಮಕ್ಕಳು ಹಲ್ಲುಜ್ಜುವ ಸನ್ನೆಯನ್ನು ಮಾಡುತ್ತಾ ತರಗತಿಯನ್ನು ಪ್ರವೇಶಿಸಲಿ. "ಹಾಯ್ ಟೇಚರ್" ಎಂದು ಹೇಳಲು ಮಕ್ಕಳಿಗೆ ಸೂಚಿಸಿ.


2.ಮಗು ತರಗತಿಯನ್ನು ಪ್ರವೇಶಿಸುವಾಗ ಶಿಕ್ಷಕರು ಮಗುವಿಗೆ " ನಮಸ್ತೆ, ಗುಡ್ ಮಾನಿರ್ಂಗ್" ಎಂದು ಗ್ರೀಟ್ ಮಾಡುವುದು.


3.ನಂತರ ಪ್ರತಿ ಮಗುವಿನ ಹೆಸರನ್ನು ಕರೆಯುತ್ತಾ "ನೀವು ಇಂದು ಹೇಗಿದ್ದೀರಿ?" ಎಂದು ಕೇಳಿ ಮತ್ತು ನಾನು ಚೆನ್ನಾಗಿದ್ದೇನೆ. ಧನ್ಯವಾದಗಳು" ಎಂದು ಉತ್ತರಿಸಲು ಅವರನ್ನು ಪ್ರೋತ್ಸಾಹಿಸಿ.


4. ಮಕ್ಕಳನ್ನು ಕೇಳಿ, "ಇಂದು ಯಾವ ದಿನ?" ಮತ್ತು "ಇಂದು ಬುಧವಾರ" ಎಂದು ಹೇಳುವ ಮೂಲಕ ಮಕ್ಕಳನ್ನು ಪ್ರತಿಕ್ರಿಯಿಸುವಂತೆ ಮಾಡಿ.


5." ಪುಟ್ಟ ಮಗು ಪುಟ್ಟ ಮಗು" ಎಂದು ಹೇಳುತ್ತಾ ಮಾರ್ಚ್ ಪಾಸ್ಟ್ ಮಾಡುತ್ತಾ ತರಗತಿಯಲ್ಲಿ ವೃತ್ತವನ್ನು ರಚಿಸಲು ಮಕ್ಕಳಿಗೆ ತಿಳಿಸಿ, ಶಿಕ್ಷಕರು ಆದನ್ನು ಆಸಕ್ತಿದಾಯಕವಾಗಿಸಲು ಡ್ರಮ್ ಅನ್ನು ಬಳಸಬಹುದು. (ಮಕ್ಕಳ ಮೊಣಕಾಲುಗಳು ಸರಿಯಾಗಿ ಬಾಗುವುದನ್ನು ಖಚಿತಪಡಿಸಿಕೊಳ್ಳಿ. ಮತ್ತು ಅವರ ಪಾದಗಳು ನೆಲವನ್ನು ಸ್ಪರ್ಶಿಸುವುದನ್ನು ಖಚಿತ ಪಡಿಸಿಕೊಳ್ಳಿ.)


ಚಟುವಟಿಕೆ 2: ಬಲೂನ್ ಟೈಮ್


ವಿಧಾನ:


1. ಮಕ್ಕಳನ್ನು 4 ಅಥವಾ 5 ಗುಂಪುಗಳಾಗಿ ವಿಂಗಡಿಸಿ.


2. ಪ್ರತಿ ಗುಂಪಿಗೆ ಒಂದು ಬಲೂನ್ ಅನ್ನು ಒದಗಿಸಿ.


3. ಬಲೂನನ್ನು ಊದಿ ಗಾಳಿಯಲ್ಲಿ ಎಸೆಯಲು ಹೇಳಿ.


4. ಬಲೂನ್ ನೆಲವನ್ನು ಮುಟ್ಟಬಾರದು ಎಂದು ಮಕ್ಕಳಿಗೆ ಸೂಚಿಸಿ.


5. ಬಲೂನ್ ಅನ್ನು ತೇಲುವಂತೆ ಇರಿಸಿಕೊಳ್ಳಲು ಮಕ್ಕಳನ್ನು ಸೂಚಿಸಿ. 6. ಬಲೂನ್ ನೆಲವನ್ನು ಮುಟ್ಟಿದರೆ ಆ ಗುಂಪು ಆಟದಿಂದ ಔಟ್ ಆಗ್ತಾರೆ.


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ-1: ಊಹಿಸುವ ಆಟ (ಗುರಿ-1)

ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.


ಉದ್ದೇಶ : ಇಷ್ಟದ ವಿಷಯದ ಕುರಿತು ಮಾತನಾಡುವುದು


ಸಾಮಗ್ರಿ : ಸ್ಥಳೀಯ ಆಹಾರ ಪದಾರ್ಥಗಳ ಫ್ಲ್ಯಾಶ್ ಕಾರ್ಡ್ಗಳು/ಚಿತ್ರಕಾರ್ಡ್‌ಗಳು, ಲಕೋಟೆಗಳು,


ವಿಧಾನ:


1.ಆಹಾರ ಪದಾರ್ಥಗಳ ಫ್ಲ್ಯಾಶ್ ಕಾರ್ಡ್ ಅನ್ನು ಎತ್ತಿ ಹಿಡಿದುಕೊಳ್ಳಿ ಮತ್ತು ಇಂದು ನಾವು ನಮ್ಮ ನೆಚ್ಚಿನಆಹಾರ ಪದಾರ್ಥಗಳ ಬಗ್ಗೆ ಮಾತನಾಡುತ್ತೇವೆ ಎಂದು ಹೇಳಿ,


2.ಆಹಾರ ಪದಾರ್ಥಗಳ ಚಿತ್ರಕಾರ್ಡ್ ಗಳನ್ನು ಲಕೋಟೆಯಲ್ಲಿ ಹಾಕಿ. ನಿಧಾನವಾಗಿ ಚಿತ್ರಕಾರ್ಡ್ ಅನ್ನು ಸ್ವಲ್ಪ ಭಾಗವೇ ಕಾಣುವಂತೆ ಎಳೆಯಿರಿ ಮತ್ತು ಅದರ ಹೆಸರನ್ನು ಊಹಿಸಲು ಮಕ್ಕಳಿಗೆ ಹೇಳಿ.


3.ಮಕ್ಕಳ ಊಹೆಗಳನ್ನು ಸ್ವೀಕರಿಸಿ ಮತ್ತು "ಒಳ್ಳೆಯ ಊಹೆ. /ಹೌದು, ಇರಬಹುದು!" ಎಂದು ಹೇಳುವ ಮೂಲಕ ಪ್ರೋತ್ಸಾಹಿಸಿ.


4.ಕ್ರಮೇಣ ಚಿತ್ರವನ್ನು ಸಂಪೂರ್ಣವಾಗಿ ತೋರಿಸಿ. ಮಕ್ಕಳು ಅದನ್ನು ಗುರುತಿಸುತ್ತಿ ದ್ದಂತೆ, ಅದರ ಹೆಸರನ್ನು ಹೇಳಿ ಮತ್ತು ಮಕ್ಕಳನ್ನು ಕೇಳಿ, "ನಿಮಗೆ ಈ ಆಹಾರ ಇಷ್ಟವೇ? (ಐಸ್ಕ್ರೀಮ್/ದೋಸಾ-ಚಟ್ನ/ ವಡಾ/ಅಕ್ಕಿ ಇತ್ಯಾದಿ)


5. "ಹೌದು, ನಾನು ಇಷ್ಟಪಡುತ್ತೇನೆ.... /ಇಲ್ಲ ನನಗೆ ಇಷ್ಟವಿಲ್ಲ" ಎಂದು ಹೇಳುವ ಮೂಲಕ ಮಕ್ಕಳು


ತಮ್ಮ ಇಷ್ಟ/ಇಷ್ಟ ಇಲ್ಲದವುಗಳನ್ನು ವ್ಯಕ್ತಪಡಿಸಲು ಪ್ರೋತ್ಸಾಹಿಸಿ. 6.ಕೆಲವು ಸಮಯ ಚಟುವಟಿಕೆಯನ್ನು ಪುನರಾವರ್ತಿಸಿ


7.ನಂತರ ಮಕ್ಕಳನ್ನು ಕೇಳಿ, "ನಿಮಗೆ ಯಾವಆಹಾರ ಪದಾರ್ಥ ಇಷ್ಟ?"


8. "ನನಗೆ ರೊಟ್ಟಿ /ಹಾಲು/ ಇತ್ಯಾದಿ ಇಷ್ಟ" ಎಂದು ಹೇಳುವ ಮೂಲಕ ಮಕ್ಕಳಿಂದ ಉತ್ತರಗಳನ್ನು ಪಡೆಯಿರಿ ಪ್ರತಿಯೊಂದು ಮಗುವು ತನ್ನ ಇಷ್ಟಗಳನ್ನು ಹೇಳಲು ಸಮರ್ಥವಾಗಿದೆಎಂದು ಖಚಿತಪಡಿಸಿಕೊಳ್ಳಿ.


ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.


ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ಹೋಲಿಕೆ. ಹೊಂದಾಣಿಕೆ, ವಿಂಗಡಣೆ, ಗಾತ್ರ/ಪ್ರಮಾಣದ ಪರಿಕಲ್ಪನೆ ಮತ್ತು ಪರಿಸರದ ಅರಿವು.


ಚಟುವಟಿಕೆ : ಹೋಲಿಕೆ ಮಾಡೋಣ (ಗುರಿ 3)


ಉದ್ದೇಶ:- ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಕೆ ಮಾಡುವುದು.


ಅಗತ್ಯ ಸಾಮಗ್ರಿಗಳು: ಪೆನ್ಸಿಲ್‌ಗಳು, ಮಾಪಕಗಳು, ಹಣ್ಣುಗಳು (ಸೇಬು, ಕಿತ್ತಳೆ), ತರಕಾರಿಗಳು (ಆಲೂಗಡ್ಡೆ /ಈರುಳ್ಳಿ). ಪಾತ್ರೆಗಳು (ಚಮಚ, ಬಟ್ಟಲುಗಳು, ತಟ್ಟೆಗಳು), ವಿಭಿನ್ನ ಗಾತ್ರದ ಇತರೆ ವಸ್ತುಗಳು.


ವಿಧಾನ : ಸರಳವಾದ ಹೋಲಿಕೆ ಕಾರ್ಯವನ್ನು ಮೊದಲು ಸ್ಟ್ರಾಗಳು, ಪೆನ್ಸಿಲ್‌ಗಳು, ಹಣ್ಣುಗಳು, ತರಕಾರಿಗಳುಮತ್ತು ಲಭ್ಯವಿರುವ ಇತರೆ ವಸ್ತುಗಳನ್ನು ಬಳಸಿ ಮಾಡಿಸುವುದು.


• ಗಾತ್ರ ಮತ್ತು ಪ್ರಮಾಣವನ್ನು ಆಧರಿಸಿ ಹೋಲಿಕೆ ಮಾಡುವುದು.


ಗಾತ್ರದ ಆಧರಿಸಿ ವಸ್ತುಗಳ ಗುಂಪಿನಿಂದ ಅತಿ ದೊಡ್ಡ ವಸ್ತು. ಮಕ್ಕಳ ಗುಂಪಿನಿಂದ ಅತಿ ಎತ್ತರವಾದಹುಡುಗ, ಅತಿ ಉದ್ದವಾದ ಕೋಲು/ಚಾಕಪೀಸ್ ಆರಿಸಲು ಹೇಳುವುದು.


ಹೋಲಿಕೆಯು ಒಂದೇ ವಿಧದ ವಸ್ತುಗಳೊಂದಿಗೆ ಆಗಬೇಕು. ಹೋಲಿಸುವ ಚಟುವಟಿಕೆಯನ್ನು ಮಿಶ್ರ ಗುಂಪಿನಲ್ಲಿ ನಡೆಸಬಾರದು. ಉದಾ: ಆಯತಾಕಾರದ ವಸ್ತುವನ್ನು ವೃತ್ತಾಕಾರದ ವಸ್ತುವಿನೊಂದಿಗೆ ಅಥವಾ ಚೆಂಡನ್ನು ಸೇಬು ಹಣ್ಣಿನೊಂದಿಗೆ ಹೋಲಿಸಬಾರದು.


ಅದೇ ರೀತಿ ಪ್ರಮಾಣವನ್ನು ಹೋಲಿಸುವಾಗ ಒಂದೇ ರೀತಿಯ ವಸ್ತುಗಳಿರುವ ಯಾವ ಗುಂಪಿನಲ್ಲಿ ವಸ್ತುಗಳು ಹೆಚ್ಚು ಇವೆ. ಎಂದು ಹೋಲಿಸಿ ಹೇಳುವುದು.


ಆಹಾ:-IL-8 ಎಣಿಸೋಣ ಸಂಖ್ಯೆ ಗುರುತಿಸೋಣ – ಬಣ್ಣ ತುಂಬೋಣ


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ: ಸ್ವಯಂ ಮತ್ತು ಇತರರ ಬಗ್ಗೆ ಅರಿವು, ಮೌಖಿಕ ಭಾಷಾ ವಿಕಾಸ, ಪದ ಸಂಪತ್ತಿನ ಅಭಿವೃದ್ಧಿ,


ಚಟುವಟಿಕೆ : ಅಭಿನಯ ಗೀತೆ, ನನ್ನ ಕುಟುಂಬ


ಅಪ್ಪನ ಅಪ್ಪ ಅಜ್ಜ ಅಜ್ಜನ ಹೆಂಡತಿ ಅಜ್ಜಿ ಆಜ್ಜಿಯ ಮೊಮ್ಮಗ ನಾನುಎಲ್ಲರ ಕಣ್ಮಣಿ ನಾನು


ಅಪ್ಪನ ತಮ್ಮ ಚಿಕ್ಕಪ್ಪ ಅಪ್ಪನ ತಂಗಿ ಅತ್ತೆ ಅಮ್ಮನ ತಂಗಿ ಚಿಕ್ಕಮ್ಮ ಎಲ್ಲರ

ಕಣ್ಮಣಿ ನಾನು

ಉದ್ದೇಶಗಳು


ಶಾರೀರಿಕ ಬೆಳವಣಿಗೆಯ ವಿಕಾಸ ಹೊಂದುವುದು.


ಪದಸಂಪತ್ತು ಹೆಚ್ಚುವುದರೊಂದಿಗೆ ಪ್ರಾಸ, ಲಯ, ಸಂದರ್ಭ ಹಾಗೂ ಸ್ಪಷ್ಟವಾಗಿ ಉಚ್ಚರಿಸುವುದು.


• ಆಂಗಿಕ ಭಾವನೆಗಳನ್ನು ಗುರ್ತಿಸುವುದು.


ಸಾಮಗ್ರಿಗಳು : ಪ್ರಾಸಗೀತೆಗಳ ಪ್ರತಿ.


ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ನಿಲ್ಲಿಸುವುದು. ಸುಗಮಕಾರರು ಮಕ್ಕಳಿಗೆ ಗೊತ್ತಿರುವ ಪ್ರಾಸಗೀತೆಗಳನ್ನು ಹಾಡಲುಅವಕಾಶ ಕಲ್ಪಿಸುವುದು. ಪ್ರಾಸಗೀತೆಗಳನ್ನು ಆಂಗಿಕ ಚಲನವಲನಗಳಿಂದ ಹಾಡಿಸುವುದು.


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 


ಸಾಮರ್ಥ್ಯ: ಪದಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸಮಾಡುವುದು.


ಚಟುವಟಿಕೆ : ನನ್ನನ್ನು ಹುಡುಕು. (ಗುರಿ-2)


ಉದ್ದೇಶಗಳು :


ಸೂಕ್ತ ಪದ ರಚಿಸುವುದು.


• ಸಾಂಘಿಕ ಮನೋಭಾವನೆ ಬೆಳೆಸುವುದು.


ಸೂಚನೆಗಳನ್ನು ಎಚ್ಚರಿಕೆಯಿಂದ ಆಲಿಸಿ ಅನುಸರಿಸುವುದು.


ಪದ ಸಂಪತ್ತನ್ನು ಅಭಿವೃದ್ಧಿ ಪಡಿಸುವುದು.


ಅಗತ್ಯ ಸಾಮಗ್ರಿಗಳು : ಪರಿಚಿತ ವಸ್ತು, ಪ್ರಾಣಿ, ಪಕ್ಷಿಗಳ ಚಿತ್ರಗಳು


ವಿಧಾನ: ಚಿತ್ರಗಳ ಮಿಂಚುಪಟ್ಟಿಗಳನ್ನು ಒಂದು ಬಾಕ್ಸ್‌ನಲ್ಲಿ ಹಾಕಿ ಇಡುವುದು. ತರಗತಿಯಲ್ಲಿರುವ ಮಕ್ಕಳನ್ನು ಒಬ್ಬೊಬ್ಬರಾಗಿ ಕರೆದು ಬಾಕ್ಸ್‌ನಲ್ಲಿರುವ ಚಿತ್ರಗಳಲ್ಲಿ ಒಂದನ್ನು ಎತ್ತಿಕೊಂಡು ಅದರ ಹೆಸರು ಹೇಳಲು ತಿಳಿಸುವುದು.ಮಕ್ಕಳು ಗುರುತಿಸಿದ ಚಿತ್ರಗಳ ಕುರಿತು ಅವರೊಂದಿಗೆ ಚರ್ಚಿಸುವುದು. ಇದೇ ರೀತಿ ಚಟುವಟಿಕೆಯನ್ನು ಮುಂದುವರೆಸುವುದು


*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದu ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದ ಅರಿವು.


ಚಟುವಟಿಕೆ : * ಚಿತ್ರ ಸಂಪುಟ (ಗುರಿ-2) ವಿಷಯ: 'ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳು', ಉದ್ದೇಶಗಳು : • ಮಕ್ಕಳು ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು ಮತ್ತು ವೈಯಕ್ತಿಕ ಚಿತ್ರ ಸಂಪುಟಗಳನ್ನು ರಚಿಸುವರು.


• ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು.


ಅಗತ್ಯ ಸಾಮಗ್ರಿಗಳು : ಕಾಗದ, ಶ್ರೇಯಾನ್ಸ್, ಅಂಟು, ರಾತ್ರಿಯಲ್ಲಿ ಮಾತ್ರ ನೋಡಬಹು ದಾದ ವಸ್ತುಗಳ ಚಿತ್ರಗಳು,ಅವುಗಳ ಕುರಿತ ಕಥನ/ ಕವಿತೆ/ ಹಾಡುಗಳ ಪಟ್ಟಿ,


ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.


ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು ಶಿಕ್ಷಕರು ಮಕ್ಕಳು ಗ್ರಹಿಸಿ ಹೇಳಿದ ಪದಗಳನ್ನು ಕಪ್ಪುಹಲಗೆಯ ಮೇಲೆ ಬರೆಯುವುದು ಆ ಪದಗಳ ಕುರಿತು ಚರ್ಚಿಸುವರು ಹಾಗೂ ಆಯಾ ಪರಿಚಿತ ಪದಗಳ ಆಧಾರದಲ್ಲಿ ಪದಜಾಲಗಳನ್ನು ಕಪ್ಪುಹಲಗೆ ಅಥವಾ ಚಾರ್ಟ್‌ಗಳಲ್ಲಿ ಬರೆದು ಚರ್ಚಿಸುವರು.


ಮಕ್ಕಳಿಗೆ ಹಾಳೆ ಕ್ರೇಯಾನ್ಸ್ ಇನಿತರ ಸಾಮಗ್ರಿಗಳನ್ನು ನೀಡಿ ರಾತ್ರಿಯಲ್ಲಿ ಮಾತ್ರ ನೋಡಬಹುದಾದ ವಸ್ತುಗಳಚಿತ್ರ ನೋಡಿ ಸ್ವತಃ ಆ ಚಿತ್ರಗಳನ್ನು ಬರೆಯಲು ಮತ್ತು ಬಣ್ಣ ಹಚ್ಚಲು ಆವಕಾಶ ನೀಡುವುದು.


ವೈಯಕ್ತಿಕ ಚಿತ್ರ ಸಂಪುಟ: ಮಕ್ಕಳು ರಚಿಸಿದ ಚಿತ್ರಗಳನ್ನು ತಮ್ಮ ಕೃತಿ ಸಂಪುಟದಲ್ಲಿ ಸಂಗ್ರಹಿಸಲು ತಿಳಿಸುವುದುಮತ್ತು ಅವುಗಳನ್ನು ಮುಂದಿನ 25ನೇ ದಿನದಲ್ಲಿ ಚರ್ಚಿಸುವುದಾಗಿ ತಿಳಿಸುವುದು.


ಉದಾ: ಆಕಾಶ, ಚಂದ್ರ, ನಕ್ತತ್ರಗಳು, ರಾತ್ರಿಯಲ್ಲಿ ಚಲಿಸುವ ವಾಹನಗಳು, ದೀಪಸ್ಥಂಭಗಳು ಇತ್ಯಾದಿ.. ಚಿತ್ರಗಳು/ ವಿಡಿಯೋಗಳು/ ಅನುಭವದ ಆಧಾರದ ಮೇಲೆ ಮಕ್ಕಳು ವೈಯಕ್ತಿಕವಾಗಿ ಚಿತ್ರ ಬರೆಯಲು ಅವಕಾಶವಿರುವಂತೆ ನೋಡಿಕೊಳ್ಳುವುದು.



*ಉದ್ದೇಶಿತ ಬರಹ*  

ಸಾಮರ್ಥ್ಯ: ದೃಶೀಕರಿಸುವುದು, ಸೃಜನಶೀಲ ಚಿಂತನೆ, ಬಣ್ಣಗಳ ಪರಿಕಲ್ಪನೆ, ಗಾತ್ರ ಮತ್ತು ಆಕಾರಗಳ ಕಲ್ಪನೆ.


ಚಟುವಟಿಕೆ : ಆಲಿಸು-ಚಿತ್ರಿಸು (ಗುರಿ-2)


ಉದ್ದೇಶಗಳು:


ಆಲಿಸಿದ ವಿಷಯಗಳನ್ನು ಕಲ್ಪನೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು.


ಸೃಜನಶೀಲ ಚಿಂತನಾ ಕೌಶಲವನ್ನು ಉತ್ತೇಜಿಸುವುದು.


ಬಣ್ಣಗಳು, ಗಾತ್ರ ಮತ್ತು ಆಕಾರಗಳ ಪರಿಕಲ್ಪನೆ ಮೂಡಿಸುವುದು. ಅಗತ್ಯ ಸಾಮಗ್ರಿ, ಖಾಲಿ ಹಾಳೆಗಳು, ಪೆನ್ನುಗಳು, ಶ್ರೇಯಾನ್ಸ್.


ಅ.ಹಾ: E.C-6 ಚುಕ್ಕಿ-ಬಣ್ಣಗಳ ಚಿತ್ತಾರ


ವಿಧಾನ: ಸಾಕಷ್ಟು ವಿವರಣಾತ್ಮಕ ಪದಗಳನ್ನು ಹೊಂದಿರುವ ಕಥಾ ಪುಸ್ತಕವನ್ನು ಜೋರಾಗಿ ಓದಿ. ಉದಾ: ಸತ್ಯಳಿಗೆ ದೊಡ್ಡದಾದ ಕಣ್ಣುಗಳು ಹಾಗೂ ಗುಂಗುರು ಕೂದಲುಗಳಿವೆ. ಸುಮಳ ಶಾಲೆಯಲ್ಲಿ ಬಹಳಷ್ಟು ಮರಗಳಿವೆ. ಕಥೆಯನ್ನು ಓದಿದ ನಂತರ ಮಕ್ಕಳಿಗೆ ಕ್ರೇಯಾನ್ಸ್‌ಗಳನ್ನು ಹಾಗೂ ಖಾಲಿ ಹಾಳೆಗಳನ್ನು ನೀಡುವುದು, ಕಥೆಯಲ್ಲಿನ ನಿರ್ದಿಷ್ಟ ವಾಕ್ಯವನ್ನು ಪುನಃ ಓದಿ. ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು.


ಸತ್ಯಳ ಮುಖವನ್ನು ನೀನು ಬಿಡಿಸಬಲ್ಲೆಯಾ?


ಸುಮಳ ಶಾಲೆಯ ಚಿತ್ರವನ್ನು ನೀನು ಬಿಡಿಸಬಲ್ಲೆಯಾ?


ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು, ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು ಅವಕಾಶ ಕಲ್ಪಿಸುವುದು. ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು ತರಗತಿಯಲ್ಲಿ ಏನನ್ನೇಕೆ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.


 ಅವಧಿ - 6(40ನಿ)

*ಹೊರಾಂಗಣ ಆಟಗಳು*


ಚಟುವಟಿಕೆ : ಚೆಂಡನ್ನು ಹಿಡಿ. (ಗುರಿ-1)


ಸಾಮರ್ಥ್ಯ: ಸ್ಕೂಲ ಸ್ನಾಯು ಚಲನ ಕೌಶಲ ಬೆಳವಣಿಗೆ. ತೋಳು ಮತ್ತು ಕಾಲಿನ ಶಕ್ತಿ ಅಭಿವೃದ್ಧಿ


ಬೇಕಾಗುವ ಸಾಮಗ್ರಿ : ಫುಟ್ಬಾಲ್/ ವಾಲಿಬಾಲ್


ವಿಧಾನ :


* ಇಬ್ಬರು ಮಕ್ಕಳನ್ನು ಬೆನ್ನಿಗೆ ಬೆನ್ನು ತಾಗುವಹಾಗೆ ನಿಲ್ಲಿಸುವುದು.

* ಒಂದು ಪುಟ್ಟಾಲ್ಲನ್ನು ಒಬ್ಬರಿಗೊಬ್ಬರು ಪಾಸ್ ಮಾಡುವಹಾಗೆ ಸೂಚಿಸುವುದು.


ಅವಧಿ - 7(40ನಿ)

*ಕಥಾ ಸಮಯ*

ಶೀರ್ಷಿಕೆ : ತೆನಾಲಿರಾಮಕೃಷ್ಣ ಮತ್ತು ಮಡಕೆ


• ಒಂದು ಪುಟಾಲನ್ನು ಒಬ್ಬರಿಗೊಬ್ಬರು ಪಾಸ್ ಮಾಡುವಹಾಗೆ ಸೂಚಿಸುವುದು.


ಸಾಮಗ್ರಿಗಳು : ಪಪೆಟ್ ಸಾಮಗ್ರಿಗಳು


ಉದ್ದೇಶಗಳು :


> ಊಹಿಸುವ ಕೌಶಲವನ್ನು ಹೆಚ್ಚಿಸುವುದು.


ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.


> ಪ್ರಶ್ನಿಸುವ ಮನೋಭಾವಉಂಟುಮಾಡುವುದು.


> ಅಭಿವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವುದು.


> ನಿರರ್ಗಳವಾಗಿ ಮಾತನಾಡುವ ಕೌಶಲವನ್ನು ರೂಢಿಸುವುದು.


ವಿಧಾನ : ಪಪೆಟ್ ಪ್ರದರ್ಶನ


ಕಥೆಯನ್ನು ಪುನರಾವಲೋಕನ ಮಾಡಿಕೊಳ್ಳುವುದು.


> ಮಕ್ಕಳಿಗೆ ಸಂಭಾಷಣೆಯ ತುಣುಕುಗಳನ್ನು ನೀಡುವುದು.


> ಪಪೆಟ್ ಪ್ರದರ್ಶನಕ್ಕೆ ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸಹಕರಿಸುವುದು. (ಕಥೆಯನ್ನು ಆನಂದಿಸುವುದರ ಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)



ಅವಧಿ -8(20ನಿ)

*ಮತ್ತೆ ಸಿಗೋಣ*

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ ಬೀಳ್ಕೊಡಿ.


ಮುಂದಿನವಾರ "ಉದ್ಯಾನವನದ ಭೇಟಿಗಾಗಿ" ಯೋಜನೆ ರೂಪಿಸಿ ಮತ್ತು ಅದಕ್ಕೆ ತಕ್ಕಂತೆ ಚಟುವಟಿಕೆಗಳನ್ನು ಸಿದ್ಧಪಡಿಸಿಕೊಳ್ಳಿ.


• ಶಾಲೆಯಲ್ಲಿ "ಚಿಕ್ಕ ಪುಸ್ತಕ ಪ್ರದರ್ಶನ" ಆಯೋಜಿಸಿ, ಪೋಷಕರನ್ನು ಆಹ್ವಾನಿಸಲು ಯೋಜನೆ ಸಿದ್ಧಪಡಿಸಿ.



[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment