https://nalikalirenukaradhyatlm.blogspot.com/
*ವಿದ್ಯಾಪ್ರವೇಶ ದಿನ 2 ಆಡಿಯೋ ಲಿಂಕ್*
(ಕೃಪೆ - ಕ್ರಿಯಾಶೀಲ ತಾರೆಯರು ಶಿವಮೊಗ್ಗ)
https://drive.google.com/file/d/1M5MpODgqbJ_W0IqR6VlKTKQjkRnhcgKv/view?usp=drivesdk
*ವಿದ್ಯಾಪ್ರವೇಶ ದಿನ-2*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ
ಬೆಳಗಿನ ಕುಶಲೋಪರಿ)
ಚಟುವಟಿಕೆ :
• ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆಮಾಡಿ.
• ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ.
• “ಚಪ್ಪಾಳೆ ತಟ್ಟು, ಚಿಟಿಕೆ ಹೊಡಿ" ಚಟುವಟಿಕೆಯನ್ನು ಮಾಡಲು ಮಕ್ಕಳಿಗೆ ತಿಳಿಸಿ. ಚಟುವಟಿಕೆಯನ್ನು 3 ರಿಂದ ನಾಲ್ಕು ಬಾರಿ ಪುನರಾವರ್ತಿಸಿ.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ : "ನನ್ನ ಹೆಸರು...: (ಗುರಿ-1)
ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.
ಉದ್ದೇಶ: ತನ್ನ ಹೆಸರನ್ನು ಹೇಳುವುದು.
ಸಾಮಗ್ರಿ: ಹಿಡಿಯಲು ಮತ್ತು ಎಸೆಯಲು ಸುಲಭವಾದ ಮಧ್ಯಮ ಗಾತ್ರದ ಚೆಂಡು (ಅಥವಾ ಪೇಪರ್-ಬಾಲ್).
ವಿಧಾನ:
• ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ. ಆಟವನ್ನು ಪ್ರಾರಂಭಿಸುವ ಮೊದಲು ಸ್ಪಷ್ಟ ಸೂಚನೆಗಳನ್ನು ನೀಡಿ. ಈಆಟವನ್ನು ಆಡುವ ಮೊದಲು, ನಿಮ್ಮ ಹೆಸರನ್ನು ಹೇಳಿ. ಉದಾಹರಣೆಗೆ, ನನ್ನ ಹೆಸರು
• ಚೆಂಡನ್ನು ಒಂದು ಮಗುವಿನ ಕಡೆಗೆ ಎಸೆಯಿರಿ. ಅದನ್ನು ಹಿಡಿಯಲು ಮಗುವಿಗೆ ಹೇಳಿ ಮತ್ತು "ನನ್ನ ಹೆಸರು ನಿನ್ನ ಹೆಸರೇನು?”
• ಮಗುವು ತನ್ನ ತನ್ನ ಸರದಿಯನ್ನು ಪೂರ್ಣಗೊಳಿಸಿದಾಗ, ಅವನ/ ಅವಳ ಆಯ್ಕೆಯ ಮತ್ತೊಂದು ಮಗುವಿಗೆ ಚೆಂಡನ್ನು
ಎಸೆಯುವಂತೆ ಮಗುವಿಗೆ ಹೇಳಿ. ಯಾರು ಚೆಂಡನ್ನು ಹಿಡಿಯುತ್ತಾರೋ ಅವರು "ನನ್ನ ಹೆಸರು • ಎಂದು ಹೇಳುವ ಮೂಲಕ ಅವರ
ಹೆಸರನ್ನು ಪರಿಚಯಿಸಬೇಕು.
• ಪ್ರತಿ ಮಗುವು ಅವನ/ಅವಳ ಹೆಸರುಗಳನ್ನು ಪರಿಚಯಿಸುವವರೆಗೆ ಆಟವನ್ನು ಮುಂದುವರಿಸಿ. (ಒಂದು ಮಗುವು ಅವನ/ಅವಳ ಹೆಸರನ್ನು ಪರಿಚಯಿಸುತ್ತಿರುವಾಗ ಉಳಿದ ಮಕ್ಕಳು ಕೇಳಬೇಕು ಮತ್ತು ಅವರ ಸರದಿಗಾಗಿ ಕಾಯಬೇಕು ಎಂದು ಖಚಿತಪಡಿಸಿಕೊಳ್ಳಿ)
ಅವಧಿ-2 (40ನಿ)
*ನನ್ನ ಸಮಯ*
ತರಗತಿಯ ಎಲ್ಲಾ ಕಲಿಕಾಮೂಲೆಗಳಿಗೆ ಶಿಕ್ಷಕರು ಮಕ್ಕಳನ್ನು ಕರೆದೊಯ್ದು, ಪ್ರತಿ ಮೂಲೆಯಲ್ಲಿನ ಸಾಮಗಿಗಳು ಹಾಗೂ ಅವುಗಳ ಬಳಕೆಯ శురీతు ಹಾಗೂ ಕೆಲವು ಮಾದರಿ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ. ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ : ಧ್ವನಿಯ ಅರಿವು, ಇತರರೊಂದಿಗೆ ಸಂವೇದನಾ ಶೀಲತೆ, ಅನುಭೂತಿ
ಚಟುವಟಿಕೆ : ಧ್ವನಿಯನ್ನು ಊಹಿಸು. (ಗುರಿ-3)
ಉದ್ದೇಶ: ಆಲಿಸಿದ ಶಬ್ದವನ್ನು ಗುರುತಿಸಿ, ಹೇಳುವ ಕೌಶಲ ಬೆಳೆಸುವುದು.
ಅಗತ್ಯ ಸಾಮಗ್ರಿಗಳು : ಸ್ಥಳೀಯವಾಗಿ ಲಭ್ಯವಿರುವ ಸಂಗೀತ ಸಾಧನಗಳು/ ಮೊಬೈಲ್
ವಿಧಾನ : ಮಕ್ಕಳನ್ನು ಹೊರಾಂಗಣಕ್ಕೆ ಕರೆದುಕೊಂಡು ಹೋಗುವುದು. ಮಕ್ಕಳಿಗೆ ಅವರ ಕಣ್ಣುಗಳನ್ನು ಮುಚ್ಚಿಕೊಳ್ಳಲು
ಹೇಳುವುದು. *ವಿವಿಧ ರೀತಿಯ ಸಾಧನ/ವಾದ್ಯಗಳನ್ನು ನುಡಿಸುವ ಮೂಲಕ ವಿಭಿನ್ನ ಶಬ್ದಗಳನ್ನು ಮಾಡುವುದು. ಅವರು ಕಣ್ಣುಗಳನ್ನು ಮುಚ್ಚಿಕೊಂಡೆ ಕೇಳಿಸಿಕೊಂಡ ಶಬ್ದಗಳನ್ನು ಗುರುತಿಸಿ ಹೇಳಲು ಪ್ರೋತ್ಸಾಹಿಸುವುದು. ನಂತರ ಮಕ್ಕಳ ಅನುಭವಗಳನ್ನು ಚರ್ಚಿಸುವುದು. ಇದರ ಆಧಾರದಲ್ಲಿ ಕೆಲವು ಜನರು ಕಡಿಮೆ ಅಥವಾ ಯಾವುದೇ ಶಬ್ದಜ್ಞಾನ ಹೊಂದಿರುವುದಿಲ್ಲ. ಇನ್ನೂ ಕೆಲವರು ತೀಕ್ಷ್ಯ ವಾದ ಶಬ್ದಜ್ಞಾನವನ್ನು ಹೊಂದಿರುತ್ತಾರೆ ಎಂಬ ಅಂಶವನ್ನು ಅವರಿಗೆ ತಿಳಿಸುತ್ತಾ ತಮ್ಮ ಕಿವಿಗಳ ಆರೈಕೆಯನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಮಕ್ಕಳೊಂದಿಗೆ ಚರ್ಚಿಸುವುದು. ಅವರು ಸ್ನಾನದ ನಂತರ ತಕ್ಷಣವೇ ತಮ್ಮ ಕಿವಿಗಳನ್ನು ಸ್ವಚ್ಛಗೊಳಿಸಲು ತಮ್ಮ ಪೋಷಕರ ಸಹಾಯವನ್ನು ಪಡೆಯಬಹುದು ಮತ್ತು ಕಿವಿಗಳನ್ನು ಸ್ವಚ್ಛಗೊಳಿಸಲು ಕಿವಿಗಳಲ್ಲಿ ಯಾವುದೇ ಚೂಪಾದ/ ಅಪಾಯಕಾರಿ ವಸ್ತುಗಳನ್ನು ಬಳಸಬಾರದು ಎಂಬ ಅರಿವನ್ನು ಜೊತೆ ಜೊತೆಗೆ ಮೂಡಿಸುವುದು.
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)
ಸಾಮರ್ಥ್ಯ : ಸೂಕ್ತ ಚಲನಾ ಕೌಶಲಗಳ ಅಭಿವೃದ್ಧಿ, ಚಟುವಟಿಕೆ :
ಕಡ್ಡಿ ಚಿತ್ರ ರಚನೆ. (ಗುರಿ – 1.2.3.)ಉದ್ದೇಶಗಳು :
• ಅನುಪಯುಕ್ತ ವಸ್ತುಗಳ ಮರುಬಳಕೆಯ ಬಗ್ಗೆ ಅರಿಯುವುದು.
• ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಕ್ರಿಯಾಶೀಲರಾಗಲು ಅನುವು ಮಾಡಿಕೊಡುವುದು.
• ಕಲಿಕೆಯ ಪ್ರಾರಂಭಕ್ಕೆ ಅನುಕೂಲವಾಗುವುದು.
ಸಾಮಗ್ರಿಗಳು : ಕಡ್ಡಿ, ಹಾಳೆ ಮತ್ತು ಆಂಟು.
ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು, ಮಕ್ಕಳಿಗೆ ಹಾಳೆ. ಕಡ್ಡಿ ಮತ್ತು ಅಂಟನ್ನು ನೀಡುವುದು. ಸುಗಮಕಾರರು ಕಡ್ಡಿ ಚಿತ್ರಗಳನ್ನು ಮಾದರಿಯಾಗಿ ಮಕ್ಕಳಿಗೆ ಮಾಡಿ ತೋರಿಸಿ ಮಕ್ಕಳೂ ಸಹ ತಮ್ಮ ಆಯ್ಕೆಯಕಡ್ಡಿ ಚಿತ್ರಗಳನ್ನು ಮಾಡಿ ಹಾಳೆಯ ಮೇಲೆ ಅಂಟಿಸಲು ಪ್ರೋತ್ಸಾಹಿಸುವುದು.
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬಂಧ.
ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-2) ECL-2
ಉದ್ದೇಶಗಳು:-
* ಧ್ವನಿ ಸಂಕೇತಗಳ ಅರಿವು ಮೂಡಿಸುವುದು.
* ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬಂಧವನ್ನು ಗ್ರಹಿಸುವುದು.
* ಪದಗಳನ್ನು ಗ್ರಹಿಸಿ ಗುರುತಿಸುವುದು.
* ಅಂತ್ಯಾಕ್ಟರಿ ಪದಗಳನ್ನು ಬರೆಯುವುದು.
* *ಅ.ಹಾ: E.C-1 ಧ್ವನಿ ಊಹಿಸಿ ಹೇಳು*
ಅಗತ್ಯ ಸಾಮಗ್ರಿಗಳು – ಇಲ್ಲ
ಸಲಹಾತ್ಮಕ ವಿಷಯ : ವರ್ಗಕೋಣೆಯ ವಸ್ತುಗಳು
ವಿಧಾನ:- ಸುಳಿವುಗಳ ಮೂಲಕ ತರಗತಿ ಕೋಣೆಯಲ್ಲಿರುವ ವಸ್ತುವಿನ ಹೆಸರನ್ನು ಊಹಿಸಿ. ಹೇಳುವ ಚಟುವಟಿಕೆಯನ್ನು ಆಯೋಜಿಸಿ. ಉದಾಹರಣೆಗಾಗಿ ಶಿಕ್ಷಕರು ನನ್ನ ಮನಸ್ಸಿನಲ್ಲಿರುವ ವಸ್ತು ಕಪ್ಪು ಬಣ್ಣವನ್ನು ಹೊಂದಿದ್ದು ಅದರ ಹೆಸರು ಕ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ಕರಿಹಲಗೆ ಎಂದು ಗುರುತಿಸುವುದು. ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಪದ ಸಂಪತ್ತಿನ ಅಭಿವೃದ್ಧಿ, ಸ್ವಯಂ ಅಭಿವ್ಯಕ್ತಿ, ನಟನಾ ಓದು.
ಚಟುವಟಿಕೆ : ಚಿತ್ರ ಓದು (ಗುರಿ-2)
ಉದ್ದೇಶ: ವಿವಿಧ ಘಟನೆ/ ಸನ್ನಿವೇಶಗಳ ಚಿತ್ರಗಳನ್ನು ನೋಡುವುದರ ಮೂಲಕ ಘಟನೆಗಳನ್ನು ಅರ್ಥಮಾಡಿಕೊಳ್ಳುವುದು.
ಅಗತ್ಯ ಸಾಮಾಗ್ರಿಗಳು: ವಿವಿಧ ಘಟನೆ/ ಸ್ಥಳ/ ಜಾತ್ರೆ/ ಮೇಳಗಳ ಚಿತ್ರಗಳು/ ಉದ್ಯಾನವನ/ ಪೇಟೆ/ ಶಾಲೆ/ ಪಾಣಿ
ಸಂಗ್ರಹಾಲಯ/ ಹಬ್ಬ / ಜಾತ್ರೆಯ ಇತ್ಯಾದಿಗಳ ಚಿತ್ರಗಳು
ವಿಧಾನ: ಮಕ್ಕಳನ್ನು ಗುಂಪುಗಳಾಗಿ ವಿಂಗಡಿಸುವುದು ಶಿಕ್ಷಕರು ವಿವಿಧ ದಿನ ಪತ್ರಿಕೆ, ಪುಸ್ತಕ, ನಿಯತ ಕಾಲಿಕೆ ಮುಂತಾದವುಗಳಲ್ಲಿಯ ಚಿತ್ರಗಳನ್ನು ವೀಕ್ಷಿಸಲು ತಿಳಿಸುವುದು ಅವುಗಳಲ್ಲಿ ಒಂದು ಸನ್ನಿವೇಶ/ ಘಟನೆಯ ಚಿತ್ರವನ್ನು ಆಯ್ಕೆ ಮಾಡಿಕೊಂಡು ಶಿಕ್ಷಕರು ಆ ಸನ್ನಿವೇಶದ ವಿವರಣೆಯನ್ನು ನೀಡುವುದು.
ವಿಶೇಷ ಸೂಚನೆ: ಇದೆ ಚಟುವಟಿಕೆಯನ್ನು ಒಂದನೇ ವಾರದ ನಾಲ್ಕನೇ ದಿನದಂದು ಮುಂದುವರೆದಿದೆ
*ಉದ್ದೇಶಿತ ಬರಹ*
ಸಾಮರ್ಥ್ಯ: ಉತ್ತಮ ಚಲನಾ ಕೌಶಲಗಳ ಮತ್ತು ಸೃಜನಶೀಲ ಅಭಿವ್ಯಕ್ತಿಯ ಅಭಿವೃದ್ಧಿ.
ಚಟುವಟಿಕೆ : ಒತ್ತು ಚಿತ್ರ (ಗುರಿ: 1)
ಉದ್ದೇಶಗಳು:
ಬರವಣಿಗೆಗೆ ಪೂರಕವಾದ ಸ್ನಾಯುಗಳನ್ನು ಬಲಗೊಳಿಸುವುದು.
• ದೃಶ್ಯ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
ಆಕಾರಗಳನ್ನು ಟ್ರೇಸ್ ಮಾಡುವುದು.
• ಮಕ್ಕಳಲ್ಲಿರುವ ಸೃಜನಶೀಲ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
ಸಂಪನ್ಮೂಲ ಸಾಮಗ್ರಿ : ತರಗತಿಯಲ್ಲಿ ಲಭ್ಯವಿರುವ ಸಾಮಗ್ರಿಗಳು, ಪೇಪರ್ ಮತ್ತು ಪೆನ್ಸಿಲ್
ವಿಧಾನ: ಕೊಟ್ಟಿರುವ ಆಕಾರಗಳನ್ನು ಗುರುತಿಸಲು ನಿಯಂತ್ರಿತ ದೃಶ್ಯ ಚಾಲನಾ ಕೌಶಲಗಳನ್ನು ಅಭಿವೃದ್ಧಿ ಪಡಿಸಲು ಮಕ್ಕಳಿಗೆ ಅವಕಾಶಗಳನ್ನು ಒದಗಿಸುವುದು. ಮಕ್ಕಳಿಗೆ ವಸ್ತು, ಕಾಗದ ಮತ್ತು ಪೆನ್ಸಿಲ್ ನೀಡಿ ವಸ್ತುವನ್ನು ಕಾಗದದ ಮೇಲೆ ಇರಿಸಿಕೊಳ್ಳಲು ಅದರ ಅಂಚುಗಳನ್ನು ಗುರುತಿಸಲು ಹೇಳುವುದು. ಇದೇ ಮಾದರಿಯಲ್ಲಿ ವಿವಿಧ ಆಕಾರದ ವಸ್ತುಗಳ ಅಂಚುಗಳನ್ನು ಟ್ರೇಸ್ ಮಾಡಿದ ನಂತರ ಆಕಾರವನ್ನು ಗುರುತಿಸಲು ತಿಳಿಸುವುದು.
.
ಉದಾಹರಣೆಗೆ: ಮೊದಲು ವೃತ್ತವನ್ನು ಗುರುತಿಸುತ್ತಾರೆ. ನಂತರ ಚೌಕ, ಆಯತವನ್ನು ಗುರುತಿಸುತ್ತಾರೆ. ಮಕ್ಕಳು ಗುರುತಿಸಿದ ಭಾಗಗಳಿಗೆ ಕ್ರಿಯಾನ್ಸ್ ಅಥವಾ ಬಣ್ಣವನ್ನು ನೀಡಿ ತುಂಬಲು ಹೇಳುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ಕುಂಟೆಬಿಲ್ಲೆ
ಸಾಮರ್ಥ್ಯ : ದೇಹದ ಸಮತೋಲನ ಬೆಳೆಸಲು,
ಸಾಮಗ್ರಿ : ಬಿಲ್ಲೆ, ಬಳಪ
ವಿಧಾನ :
• ನೆಲೆದ ಮೇಲೆ ಬಳಪದ ಸಹಾಯದಿಂದ ಆಟಕ್ಕೆ ಬೇಕಾದ ಚೌಕಗಳನ್ನು ಎಳೆಯುವುದು.
ಮಕ್ಕಳು ಚೌಕದ ಗೆರೆಯ ತುಳಿಯದಂತೆ ಬಿಲ್ಲೆಯನ್ನು ಕಾಲಿನಿಂದ ಚೌಕದಿಂದ ಚೌಕಕ್ಕೆ ದೂಡುತ್ತಾ ಆಟ ಆಡಲು
ಸೂಚಿಸುವುದು.
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಸಿಂಹ ಮತ್ತು ಇಲಿ
ಸಾಮಗ್ರಿಗಳು : ಸರಣಿ ಚಿತ್ರಗಳು
ಉದ್ದೇಶಗಳು :
> ಆಲಿಸುವ ಸಾಮರ್ಥ್ಯ ಬೆಳೆಸುವುದು.
> ಊಹಿಸುವ ಕೌಶಲವನ್ನು ಹೆಚ್ಚಿಸುವುದು
> ಆಲೋಚನಾ ಶಕ್ತಿಯನ್ನು ವೃದ್ಧಿಸುವುದು
> ಪ್ರಶ್ನಿಸುವ ಮನೋಭಾವ ಉಂಟು ಮಾಡುವುದು.
> ಊಹಿಸುವ ಕೌಶಲವನ್ನು ಹೆಚ್ಚಿಸುವುದು.
ವಿಧಾನ : ಸರಣಿ ಚಿತ್ರಗಳು
ಸರಣಿ ಚಿತ್ರಗಳನ್ನು ವಿವಿಧ ಕಾರ್ಯತಂತ್ರಗಳ ಅಡಿಯಲ್ಲಿ ಕಥಾ ಸಮಯವನ್ನು ಮನೋರಂಜನಾತ್ಮಕವಾಗಿ
ಸೃಜಿಸುವುದು.
(ಕೆಥೆಯನ್ನು ಆನಂದಿಸುವುದರ ಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ. ಬೀಳ್ಕೊಡಿ. "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಎಂ. ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment