Tuesday, 4 June 2024

ವಿದ್ಯಾಪ್ರವೇಶ ದಿನ -3

 https://nalikalirenukaradhyatlm.blogspot.com/


 *ವಿದ್ಯಾ ಪ್ರವೇಶ ದಿನ -3 ಆಡಿಯೋ* 

(ಕೃಪೆ ನಲಿ ಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ)


https://drive.google.com/file/d/1OrqitGJ0u5rgY2BtIhTaCKjuMb-lQ_S3/view?usp=drivesdk


*ವಿದ್ಯಾಪ್ರವೇಶ ದಿನ-3* 


✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  


ಚಟುವಟಿಕೆ :


• ಮಕ್ಕಳನ್ನು ಚಪ್ಪಾಳೆ ತಟ್ಟುವ ಮೂಲಕ ಮತ್ತು ಚಿಟಿಕೆ ಹೊಡೆಯುವ ಮೂಲಕ ತರಗತಿಗೆ ಪ್ರವೇಶಿಸುವಂತೆ ಮಾಡಿ.


• ಅವರನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸಿ.


• "ಚಪ್ಪಾಳೆ ತಟ್ಟು, ಚಿಟಿಕೆ ಹೊಡಿ" ಚಟುವಟಿಕೆಯನ್ನು ಮಾಡಲು ಮಕ್ಕಳಿಗೆ ತಿಳಿಸಿ. ಚಟುವಟಿಕೆಯನ್ನು 3 ರಿಂದ ನಾಲ್ಕು ಬಾರಿ ಪುನರಾವರ್ತಿಸಿ,


*ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ-1: ಸ್ವಾಚ್ಯ ಆಟ...: (ಗುರಿ-1)


ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.


ಉದ್ದೇಶ: ಮಗು ತನ್ನ ಹೆಸರನ್ನು ಹೇಳುವುದು.


ಸಾಮಗ್ರಿ: ಸಂಗೀತಪ್ಲೇಯರ್ (ಮೊಬೈಲ್ /ತಂಬೂರಿ)


ವಿಧಾನ:


'ಸಂಗೀತವನ್ನುನುಡಿಸಿಮತ್ತು ಸಂಗೀತವುನುಡಿಸುತ್ತಿದ್ದಂತೆನೃತ್ಯಮಾಡಲುಮಕ್ಕಳಿಗೆ ಸೂಚನೆನೀಡುತ್ತಾರೆ.


'ಸಂಗೀತವುನಿಂತಾಗ ಪ್ರತಿ ಮಗುವು ತಕ್ಷಣವೇ ವಿಗ್ರಹದಂತೆ ನಿಲ್ಲಬೇಕು ಮತ್ತು ಸಂಗೀತವು ಮತ್ತೆ ಪ್ರಾರಂಭವಾಗುವವರೆಗೆ


ಅದೇ ಸ್ಥಿತಿಯಲ್ಲಿರಬೇಕು.


•ಸ್ಥಿರವಾಗಿ ನಿಲ್ಲದೇ ಇರುವಮಗುವನ್ನು ಗುರುತಿಸಿಮತ್ತು "ಹಲೋ, ಗುಡ್‌ ಮಾನಿರ್ಂಗ್, ನನ್ನಹೆಸರು ಎಂದುಹೇಳಲು ತಿಳಿಸಿ. ಆ ಮಗು ಆಟದಿಂದ ಔಟ್ ಆಗುತ್ತದೆ.


ಸಂಗೀತವನ್ನು ನುಡಿಸಿ ಮತ್ತು ಚಟುವಟಿಕೆಯನ್ನು ಪುನರಾವರ್ತಿಸಿ. ಪ್ರತಿಯೊಬ್ಬರೂ ತಮ್ಮನ್ನು ತಾವು ಪರಿಚಯಿಸುವ ಅವಕಾಶವನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳಿ.


ಅವಧಿ-2 (40ನಿ)

*ನನ್ನ ಸಮಯ* 


ಕಲಿಕಾ ಸಿದ್ಧತಾ ಭಾಗವಾಗಿ 4 ಅಂಗಳಗಳಲ್ಲಿ ಮೊದಲ ಹಂತದಲ್ಲಿ ನಿಗದಿಪಡಿಸಿರುವ ಅಂಗಳವಾರು ಚಟುವಟಿಕೆಗಳ ಬಗ್ಗೆ ಹಾಗೂ ಆಯಾ ಅಂಗಳಗಳ ಸಾಮಗ್ರಿಗಳನ್ನು ಬಳಸುವ ಬಗ್ಗೆ ಶಿಕ್ಷಕರು ಮಕ್ಕಳಿಗೆ ಪರಿಚಯ ಒದಗಿಸುವರು. ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಾರೆ. (ಅಂಗಳವಾರು ಸಲಹಾತ್ಮಕ ಚಟುವಟಿಕೆಗಳನ್ನು ನೀಡಿದ್ದು, ಸಾಮರ್ಥ್ಯಗಳನ್ನು ಸಾಧಿಸಲು ಅನುಕೂಲವಾಗುವಂತೆ ಮಕ್ಕಳಿಗೆ ಹೆಚ್ಚುವರಿ ಚಟುವಟಿಕೆಗಳನ್ನು ಯೋಚಿಸಬಹುದಾಗಿದೆ.)


ಮೂಲೆ - ಬಿಲ್ಡಿಂಗ್ ಬ್ಲಾಕ್ಸ್ ಮೂಲೆ:-


ಸಾಮರ್ಥ್ಯ: ಕಣ್ಣು ಮತ್ತು ಕೈಗಳ ಸಂಯೋಜನೆಯನ್ನು ಸಾಧಿಸುವುದು.


ಚಟುವಟಿಕೆ: ವಸ್ತುಗಳ ವರ್ಗೀಕರಣ


ಉದ್ದೇಶ : ವಸ್ತುವಿನ ಗಾತ್ರದ ಆಧಾರದ ಮೇಲೆ ವರ್ಗೀಕರಣ ಮಾಡುವಳು/ನು...


ಸಾಮಗ್ರಿ :- ಕಲಿಕಾ ಕಿಟ್‌ ಬ್ಲಾಕ್ಸ್ ಗಳು


(ಲಭ್ಯವಿಲ್ಲದಿದ್ದಲ್ಲಿ ಸೋಪ್ ಬಾಕ್ಸ್, ಬೆಂಕಿ ಪೊಟ್ಟಣಗಳು.


| ಪೇಸ್ಟ್ ಬಾಕ್ಸ್, ರಟ್ಟಿನ ಬಾಕ್ಸ್ ಗಳು ಇತ್ಯಾದಿ)


ವಿಧಾನ:


ವಿದ್ಯಾ ಪ್ರವೇಶ (ವಿ.ಪ):


ವಿವಿಧ ಗಾತ್ರದ ಸಾಮಗ್ರಿಗಳನ್ನು ಗಾತ್ರದ ಆಧಾರದ ಮೇಲೆ (ದೊಡ್ಡ.ಚಿಕ್ಕ) ವರ್ಗೀಕರಿಸುವುದು.

ವಿವಿಧ ಗಾತ್ರದ ಸಾಮಗ್ರಿಗಳನ್ನು ಗಾತ್ರದ ಆಧಾರದ ಮೇಲೆ ಏರಿಕೆ ಕ್ರಮದಲ್ಲಿ ಜೋಡಿಸುವುದು.


ಮೂಲೆ - ಗಣಿತ ಮೂಲೆ:-


ಸಾಮರ್ಥ್ಯ: ವಸ್ತುಗಳ ಗಾತ್ರ, ಎತ್ತರ-ಗಿಡ್ಡ, ಭಾರ-ಹಗುರ ಆಧಾರದ ಮೇಲೆ ವರ್ಗೀಕರಿಸುವುದು ಹಾಗೂ ಚಿತ್ರ/ಸಂಖ್ಯೆಗಳ ಹೋಲಿಕೆ ಮಾಡುವುದು.


ಚಟುವಟಿಕೆ: ಆಕೃತಿಗಳ ಚಿತ್ರಪಟಕ್ಕೆ ಆಕೃತಿ ಕಾರ್ಡ್ ಗಳ ಜೋಡಣೆ


ಉದ್ದೇಶ : ಸಮತಲಾಕೃತಿಗಳನ್ನು ಹೋಲಿಸಿ ಜೋಡಿಸುವಳು/ನು.


ಸಾಮಗ್ರಿ :- ವಿವಿಧ ಸಮತಲಾಕೃತಿಗಳನ್ನೊಳಗೊಂಡ ಚಿತ್ರಪಟಗಳು


* ಬಣ್ಣದ ಹಾಳೆಯಿಂದ ಕತ್ತರಿಸಲಾದ ವಿವಿಧ ಸಮತಲಾಕೃತಿಗಳು


(ಬಣ್ಣದ ಹಾಳೆಯಿಂದ ಕತ್ತರಿಸಿದ ಆಕೃತಿಗಳು ಚಿತ್ರಪಟದಲ್ಲಿನ ಆಕೃತಿಗಳಿಗೆ ಸಮನಾಗಿರಬೇಕು ಅಥವಾ ಚಿಕ್ಕದಾಗಿರಬೇಕು)


ವಿಧಾನ:


ವಿದ್ಯಾ ಪ್ರವೇಶ (ವಿ.ಪ್ರ):


ವಿವಿಧ ಆಕೃತಿಗಳನ್ನೊಳಗೊಂಡ ಚಿತ್ರಪಟವನ್ನು ನೆಲದ ಮೇಲೆ ಇಡಬೇಕು.


ಚಿತ್ರಪಟದಲ್ಲಿನ ಆಕೃತಿಗಳಿಗೆ ಹೊಂದಿಕೆಯಾಗುವ ಬಣ್ಣದ ಹಾಳೆಯ ಸಮತಲಾಕೃತಿಗಳನ್ನು ಚಿತ್ರಪಟಕ್ಕೆ ಹೊಂದಿಸುವುದು.


ಅನ್ವೇಷಣೆ ಅಥವಾ ವಿಜ್ಞಾನ ಮೂಲೆ:


ಸಾಮರ್ಥ್ಯ: ವೈಜ್ಞಾನಿಕ, ಅನ್ವೇಷಣಾ ಮನೋಭಾವ ಹಾಗೂ ಚಿಂತನಾ ಮನೋಭಾವಗಳನ್ನು ಬೆಳೆಸುವುದು.


ಚಟುವಟಿಕೆ: ರಂಗಿನಾಟ


ಉದ್ದೇಶ : *ಸ್ವತಂತ್ರ ವಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಅನ್ವೇಷಣಾ


ಮನೋಭಾವ ಬೆಳೆಸಿ ಕೊಳ್ಳುತ್ತಾಳೆ/ನೆ.


ಸಾಮಗ್ರಿ :-


* ಪಾರದರ್ಶಕ ಪ್ಲಾಸ್ಟಿಕ್ ಲೋಟಗಳು


* ನೀರು


* ಬಣ್ಣಗಳು


ವಿಧಾನ:


ವಿದ್ಯಾ ಪ್ರವೇಶ (ವಿ.ಪ್ರ):


ನೀರಿನಲ್ಲಿ ಬಣ್ಣಗಳನ್ನು ಬೆರೆಸುವುದರಿಂದ ಆಗುವ ಬದಲಾವಣೆಗಳನ್ನುಮಕ್ಕಳು ಗಮನಿಸುವುದು.


ನೀರಿನಲ್ಲಿ ಬಣ್ಣಗಳನ್ನು ಬೆರೆಸುವುದರಿಂದ ಆಗುವ ಬದಲಾವಣೆಗಳನ್ನು ಗಮನಿಸುತ್ತಾರೆ ಹಾಗೂ ಬದಲಾದ ನೀರಿನ ಬಣ್ಣವನ್ನು ಕೋಣೆಯಲ್ಲಿರುವ ವಸ್ತುಗಳೊಂದಿಗೆ ಹೋಲಿಕೆ ಮಾಡುವುದು


ಗೊಂಬೆಗಳ ಮೂಲೆ :


PAINTING WITH DOLLS


ಸಾಮರ್ಥ್ಯ: ಸೌಂದರ್ಯೋಪಾಸನೆ, ವೈಯಕಿಕ ಸ್ವಚ್ಛತೆ, ಅಭಿವ್ಯಕ್ತಿ ಕೌಶಲ್ಯ


ಬೆಳೆಸುವುದು.


ಚಟುವಟಿಕೆ: ಗೊಂಬೆ ಹೆಜ್ಜೆ .. ನನ್ನ ಹೆಜ್ಜೆ.


ಉದ್ದೇಶ : *ಸ್ವತಂತ್ರ ವಾಗಿ ಕಾರ್ಯ ನಿರ್ವಹಿಸುವ ಮನೋಭಾವ ಬೆಳೆಸಿ ಕೊಳ್ಳುತ್ತಾಳೆ/ನೆ.


* ಕಣ್ಣು ಮತ್ತು ಕೈ ಸಹಸಂಬಂಧದ ಅಭಿವೃದ್ಧಿ, ಸಾಮಗ್ರಿ :- ಪ್ರಾಣಿ-ಪಕ್ಷಿ, ಮನುಷ್ಯನ ಬೊಂಬೆಗಳು, ಬಣ್ಣಗಳು.


ಡ್ರಾಯಿಂಗ್ ಶೀಟ್‌ಗಳು, ಪ್ಲೇಟ್ ಗಳು


ವಿಧಾನ:


ವಿದ್ಯಾ ಪ್ರವೇಶ (ವಿ.ಪ):


ಬೊಂಬೆಗಳ ಪಾದಗಳನ್ನು ಬಣ್ಣದಲ್ಲಿ ಅದ್ದಿ ಪಾದದ ಅಚ್ಚುಗಳನ್ನು ಡ್ರಾಯಿಂಗ್ ಹಾಳೆಯ ಮೇಲೆ ಮೂಡಿಸುವುದು.



ಓದುವ / ತರಗತಿ ಗ್ರಂಥಾಲಯ ಮೂಲೆ :


ಸಾಮರ್ಥ್ಯ: ಚಿತ್ರಗಳನ್ನು ಓದುವುದರೊಂದಿಗೆ ಅರ್ಥೈಸಿಕೊಳ್ಳುವುದು, ಕಲ್ಪನಾಶಕ್ತಿ, ಅಭಿವ್ಯಕ್ತಿ ಸಾಮರ್ಥ್ಯವನ್ನು ಬೆಳೆಸುವುದು.


ಚಟುವಟಿಕೆ: ಚಿತ್ರ ಓದು


ಉದ್ದೇಶ : ಚಿತ್ರ ಗುರುತಿಸುವುದರೊಂದಿಗೆ ಸ್ಪಷ್ಟವಾಗಿ ಓದುತ್ತಾನೆ / ಳೆ


ಸಾಮಗ್ರಿ :- ಪ್ರಾಣಿ-ಪಕ್ಷಿ, ವಸ್ತುಗಳ ಚಿತ್ರಗಳು ವಿದ್ಯಾ ಪ್ರವೇಶ (ವಿ.ಪ್ರ):


ಚಿತ್ರಗಳನ್ನು ಗುರುತಿಸಿ, ಸ್ಪಷ್ಟವಾಗಿ ಹೆಸರಿಸುವುದು.



ಕಲೆಗೊಂದು ನೆಲೆ/ಕರಕುಶಲ ಮೂಲೆ:


ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಬೆಳವಣಿಗೆಯೊಂದಿಗೆ ಸೌಂದರ್ಯೋಪಾಸನೆ, ಸೃಜನಶೀಲತೆಯನ್ನು ಬೆಳೆಸುವುದು.


ಚಟುವಟಿಕೆ: ಬಣ್ಣದ ಬೆರಳು


ಉದ್ದೇಶ : ಬೆರಳಚ್ಚಿನಿಂದ ವಿನ್ಯಾಸಗಳ ರಚನೆ.


ಸಾಮಗ್ರಿ :- ಬಣ್ಣ, ರೇಖಾ ಚಿತ್ರಗಳು,


ಹಳೆಯ ಪುಸ್ತಕದ ಗೊಂಬೆ ಚಿತ್ರಗಳು (ಆಕೃತಿ, ಪ್ರಾಣಿ, )


ವಿದ್ಯಾ ಪ್ರವೇಶ (ವಿ.ಪ್ರ):


ಬೆರಳಿಗೆ ಬಣ್ಣ ಹಚ್ಚಿ ಆಕೃತಿಗಳ ರೇಖಾ ಚಿತ್ರದ ಅಂಚುಗಳಿಗೆ ಬೆರಳಚ್ಚು ಒತ್ತುವುದು.

ಬರೆಯುವ ಮೂಲೆ :


ಸಾಮರ್ಥ್ಯ : ಬರವಣಿಗೆ ಸಿದ್ಧತಾ ಅಭ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಅಕ್ಷರಗಳ ವಿನ್ಯಾಸವನ್ನು ರಚಿಸುವುದು.


ಚಟುವಟಿಕೆ: "ಸೀತಾಫಲ ಚಿತ್ರಿಸು"


ಉದ್ದೇಶ: ಬೆರಳುಗಳ ಸರಳ ಚಲನೆ ರೂಢಿಸಿಕೊಳ್ಳುವಳು/ನು


ಸಾಮಗ್ರಿಗಳು: ಸೀತಾಫಲ/ ಕೊರೆಯಚ್ಚುಗಳು, ಬಿಳಿಹಾಳೆ, ಕ್ರೇಯಾನ್ಸ್


ವಿಧಾನ : ವಿದ್ಯಾಪ್ರವೇಶ (ವಿ.ಪ್ರ)


“ಸೀತಾಫಲ” ವನ್ನು ಬಿಳಿಹಾಳೆಯ ಮೇಲಿಟ್ಟು ಕೊರೆದ ಭಾಗಗಳಲ್ಲಿನ


ಸಹಾಯದಿಂದ ಗೆರೆಗಳನ್ನು ಎಳೆಯುವುದು.


ಕ್ರೇಯಾನ್ಸ್


ಆಟಿಕೆ / ಮಾಡಿ ನೋಡು ಮೂಲೆ :


ಸಾಮರ್ಥ್ಯ: ಆಲೋಚನಾಶಕ್ತಿ, ಸೃಜನಶೀಲತೆ, ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವುದು.


ಚಟುವಟಿಕೆ: ಗುರಿ ಮುಟ್ಟು


ಉದ್ದೇಶ : ಸ್ನಾಯುಗಳ ಸಮತೋಲನದೊಂದಿಗೆ ನಿರ್ದಿಷ್ಟ ಗುರಿ ಸಾಧಿಸುತ್ತಾನೆ/ಳೆ.


ಸಾಮಗ್ರಿ :- ದೊಡ್ಡ ಚಮಚ, ಬಾಲ್, ಬುಟ್ಟಿ, ರಟ್ಟು


ವಿಧಾನ: ವಿದ್ಯಾ ಪ್ರವೇಶ (ವಿ.ಪ್ರ):


ದೊಡ್ಡ ಚಮಚದಲ್ಲಿ ಬಾಲ್ ನ್ನು ಹಿಡಿದು ಬೀಳಿಸದಂತೆ ಸಮತೋಲನದೊಂದಿಗೆ ನಿರ್ದಿಷ್ಟ ಪಡಿಸಿದ ಸ್ಥಳದಲ್ಲಿ ಇಡಲಾದ ಬುಟ್ಟಿಯಲ್ಲಿ ಹಾಕುವುದು.ಕನಿಷ್ಠ 5-6 ಬಾರಿ ಪುನರಾವರ್ತಿಸುವುದು.



ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ : ಹೊಂದಿಸುವುದು, ಬಣ್ಣದ ಕಲ್ಪನೆ


ಚಟುವಟಿಕೆ...14 ಬಣ್ಣಗಳನ್ನು ಹೊಂದಿಸು (ಗುರಿ 3)


ಉದ್ದೇಶ:- ಬಣ್ಣಗಳನ್ನು ಗುರುತಿಸುವುದು.


ಅಗತ್ಯ ಸಾಮಗ್ರಿಗಳು : ಡೊಮಿನೋ ಕಾರ್ಡುಗಳು/ ವಿವಿಧ ಬಣ್ಣಗಳ ಮಿಂಚು ಪಟ್ಟಿಗಳು


ವಿಧಾನ : ಎಲ್ಲಾ ಮಕ್ಕಳು ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವಂತೆ ಹೇಳುವುದು. ಪ್ರತಿ ಮಗುವಿಗೆ ಒಂದೊಂದು ಬಣ್ಣದ ಡೊಮಿನೊ ಕಾರ್ಡ್‌ನ್ನು ವಿತರಿಸುವುದು. ವೃತ್ತದ ಮಧ್ಯದಲ್ಲಿ ಬೇರೆ ಬೇರೆ ಬಣ್ಣದ ಡೊಮಿನೊ ಕಾರ್ಡ್‌ ಗಳನ್ನು ಇರಿಸುವುದು. ನಂತರ ಒಂದೇ ಬಣ್ಣದ ಕಾರ್ಡ್ ಹೊಂದಿರುವ ಮಕ್ಕಳನ್ನು ಮುಂದೆ ಬರಲು ಹೇಳುವುದು. ಅವರಲ್ಲಿರುವ ಬಣ್ಣಕ್ಕನುಗುಣವಾಗಿ ಕಾರ್ಡ್‌ಗಳನ್ನು ವೃತ್ತದಲ್ಲಿರುವ ಬಣ್ಣದ ಕಾರ್ಡ್ ಮೇಲೆ ಇರಿಸಲು ಹೇಳುವುದು. ಇದೇ ರೀತಿ ಉಳಿದ ಮಕ್ಕಳು ಕೂಡ ಮುಂದೆ ಬಂದು ತಮ್ಮ ತಮ್ಮ ಡೊಮಿನೊ ಕಾರ್ಡ್‌ಗಳ ಬಣ್ಣ ಅರ್ಥಮಾಡಿಕೊಂಡು ಹೊಂದಿಸುತ್ತಾರೆ. ನಂತರ ಒಂದು ಗುಂಪಿನಲ್ಲಿ ಒಂದೇ ಬಣ್ಣದ ಕಾರ್ಡ್ ಮಾತ್ರ ಒಟ್ಟಿಗೆ ಇರುವಂತೆ ಜೋಡಿಸಲು ಮಕ್ಕಳಿಗೆ ಹೇಳುವುದು.


ಉದಾ: ಹಸಿರು, ಕೆಂಪು, ಹಳದಿ ಇತ್ಯಾದಿ.


ಹೀಗೆಯೇ ವಿವಿಧ ಬಣ್ಣದ ಮಿಂಚು ಪಟ್ಟಿಗಳು, ವಿವಿಧ ಬಣ್ಣದ ವಸ್ತುಗಳು, ಹೂವುಗಳು ಇತ್ಯಾದಿಗಳನ್ನು ಬಣ್ಣಕ್ಕನುಗುಣವಾಗಿ ಹೊಂದಿಸಲು ತಿಳಿಸುವುದು.


ತರಗತಿ-2


ಪ್ರತಿ ಬಣ್ಣಕ್ಕೆ ತಾನು ನೋಡಿದ ಕನಿಷ್ಠ 2 ವಸ್ತುಗಳನ್ನು ಹೇಳಲು ತಿಳಿಸುವುದು.


ತರಗತಿ-3


ಕೆಂಪು, ಹಸಿರು, ನೀಲಿ ಕಪ್ಪು ಮತ್ತು ಬಿಳಿ ಬಣ್ಣವಿರುವ ಸ್ಥಳೀಯವಾಗಿ ತಾನು ನೋಡಿದ ವಸ್ತು/ಪ್ರಾಣಿ/ಪಕ್ಷಿ/ಸಸ್ಯ ಪಟ್ಟಿ ಮಾಡಲು ಹೇಳುವುದು.




ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ.


ಚಟುವಟಿಕೆ 48 ಕೊಲ್ಯಾಜ್ ಮಾಡುವುದು. ಗುರಿ;1 ಉದ್ದೇಶ;


ಸೂಕ್ಷ್ಮ ಸ್ನಾಯುಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ.


ತಮ್ಮಲ್ಲಿರುವ ಕಲೆಯನ್ನು ಅಭಿವ್ಯಕ್ತಗೊಳಿಸಲು ಸಹಾಯವಾಗುತ್ತದೆ.


ಒಂದು ಚೌಕಟ್ಟಿನೊಳಗೆ[ ಸ್ಥಳದ ಪರಿಕಲ್ಪನೆ.]ಕೆಲಸ ಮಾಡುವ ವಿಧಾನ ತಿಳಿಯುತ್ತದೆ.


ವಸ್ತುಗಳನ್ನು ಕತ್ತರಿಸಲು, ಹಿಡಿಯಲು ಹಿಡಿತ ಸಾಧಿಸುತ್ತಾರೆ.


ಸಾಮಗ್ರಿಗಳು : ಬಣ್ಣದ ಹಾಳೆಗಳು ಮತ್ತು ಅಂಟು.


ವಿಧಾನ : ಕಾಗದವನ್ನು ಸಣ್ಣ ಸಣ್ಣ ತುಂಡುಗಳಾಗಿ ಹರಿದು ಹಾಕಲು ಮಕ್ಕಳಿಗೆ ಹೇಳುವುದು. ನಂತರ ಹರಿದ ಹಾಳೆಗಳನ್ನು ನೀಡಿರುವ ರೇಖಾ ಚಿತ್ರಗಳಿಗೆ ಅಂಟಿಸಲು ಹೇಳುವುದು.ಆ ರೇಖಾ ಚಿತ್ರಗಳು ಮರ, ಗುಡಿಸಲು ಪ್ರಾಣಿ ಅಥವಾ ಯಾವುದೇ ಇತರ ವಸ್ತುಗಳ ಚಿತ್ರಗಳು ಆಗಿರಬಹುದು. ಮಕ್ಕಳು ರಚಿಸಿದ ಯಾವುದೇ ವಿನ್ಯಾಸದಲ್ಲಿ ಕಾಗದದ ಚೂರುಗಳನ್ನು ಅಂಟಿಸಿ ತಮ್ಮದೇ ಆದ ಕೊಲ್ಯಾಜ್ ಮಾಡಲು ಅವಕಾಶ ಮಾಡಿಕೊಡುವುದು. ಹಳೆಯ ಬಟ್ಟೆಯ ತುಂಡುಗಳು ಅಥವಾ ಇತರ ತ್ಯಾಜ್ಯ ವಸ್ತುಗಳು ಅಥವಾ ಎಲೆಗಳು ಅಥವಾ ದಳಗಳು ಇತ್ಯಾದಿಗಳನ್ನು ಕೊಲ್ಯಾಜ್ ಚಟುವಟಿಕೆಯಲ್ಲಿ ಅಂಟಿಸಲು ಬಳಸಬಹುದಾಗಿದೆ.


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 



 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ಕ್ರಿಯಾತ್ಮಕ ಸ್ವ ಅಭಿವ್ಯಕ್ತಿ, ಧ್ವನಿ ಸಂಕೇತ ಹಾಗೂ ಪ್ರಾಸದ ಅರಿವು, ಪರಿಸರ ಪ್ರಜ್ಞೆ, ಪದಸಂಪತ್ತಿನ ಬೆಳವಣಿಗೆ


ಚಟುವಟಿಕೆ 3 ಹಾಡು, ಪ್ರಾಸಗೀತೆ, ಪದ್ಯ/ನಾಟಕ, (ಗುರಿ-2) ECL-3


ಉದ್ದೇಶ:


ಧ್ವನಿ ಸಂಕೇತಗಳ ಅರಿವನ್ನು ಮೂಡಿಸುವುದು.


ಪ್ರಾಸಗಳ ಅರಿವನ್ನು ಉಂಟು ಮಾಡುವುದು.


ಕ್ರಿಯಾತ್ಮಕ ಸ್ವ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವುದು.


ತನ್ನ ಸುತ್ತಲಿನ ಪರಿಸರದೊಂದಿಗೆ ಸಂಬಂಧೀಕರಿಸುವುದು.


ಅಗತ್ಯ ಸಾಮಗ್ರಿಗಳು- ಇಲ್ಲ


ವಿಧಾನ: ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ. ಶಿಕ್ಷಕರು ಮಕ್ಕಳಿಗೆ ಪರಿಚಿತ ಪ್ರಾಸಗೀತೆಯನ್ನು ಹಾಡಿ ತೋರಿಸಲಿ. ಶಿಕ್ಷಕರನ್ನು ಅನುಕರಿಸುತ್ತಾ ಮಕ್ಕಳು ಹಾಡನ್ನು ಪುನರುಚ್ಚರಿಸಲು ತಿಳಿಸಿ. ಉದಾ..ಬೇಕೇ ಬೇಕೇ ತರಕಾರಿ


ನೆನಪಿಡಬೇಕಾದ ಅಂಶಗಳು:


ಮಕ್ಕಳು ಹಾಡನ್ನು ಆನಂದಿಸಲು ಸೂಕ್ತ ಅಭಿನಯ ಹಾಗೂ ಉತ್ಸಾಹದಿಂದ ಹಾಡಿ.


ಮಗುವಿಗೆ ತಿಳಿದಿರುವ ಹಾಡನ್ನು ಹೇಳಲು ಉತ್ತೇಜಿಸಿ.

 (9 ನೇ ದಿನಕ್ಕೆ ಮುಂದುವರೆದಿದೆ)


*ಅರ್ಥಗ್ರಹಿಕೆಯೊಂದಿಗಿನ ಓದು*

 

ಸಾಮರ್ಥ್ಯ: ಓದಿನೆಡೆಗೆ ಮಕ್ಕಳ ಆಸಕ್ತಿ


ಚಟುವಟಿಕೆ: ಓದುವ ಮೂಲೆ


ಅಗತ್ಯ ಸಾಮಗ್ರಿಗಳು: ವಿವಿಧ ಪುಸ್ತಕಗಳು, ಕಥೆ ಪುಸ್ತಕಗಳು, ದಿನ ಪತ್ರಿಕೆಗಳು, ಓದುವೆ ನಾನು ಕಾರ್ಡು, ಕಾಗದ ಹಾಳೆ, ಸ್ಕೆಚ್ಚ ಪೆನ್ನುಗಳು, ಸಚಿತ್ರ ಕೋಶ, ಕಥಾ ಸರಣಿ ಚಿತ್ರಗಳು, ಇತ್ಯಾದಿ


ಉದ್ದೇಶ: ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು. ಓದುವಿಕೆಗೆ ತರಗತಿ ವಾತಾವರಣವನ್ನು ಸಿದ್ದಗೊಳಿಸುವುದು.


ವಿಧಾನ:


* ಮಕ್ಕಳನ್ನು ಓದುವ ಮೂಲೆಗೆ ಕಳುಹಿಸುವುದು.


* ಮಕ್ಕಳು ತಮಗಿಷ್ಟವಾದ ಪುಸ್ತಕ ಆಯ್ದು ಕೊಳ್ಳಲು ಅವಕಾಶ ಕಲ್ಪಿಸುವುದು.


ಪುಸ್ತಕ ಓದಲು / ಊಹಾತ್ಮಕವಾಗಿ ಓದಲು ಪ್ರೇರೇಪಿಸುವುದು.


*ಉದ್ದೇಶಿತ ಬರಹ*  

ಸಾಮರ್ಥ್ಯ: ಸೂಕ್ಷ್ಮ ಸ್ನಾಯು ಕೌಶಲಗಳ ಅಭಿವೃದ್ಧಿ, ಉದ್ದೇಶಿತ ಬರವಣಿಗೆ


ಚಟುವಟಿಕೆ. 37 ಚಿತ್ರಿಸುವುದು ಮತ್ತು ಹೆಸರಿಸುವುದು (ಗುರಿ-2) ECW-3


ಉದ್ದೇಶ:


ಚಿತ್ರ ಬಿಡಿಸುವ ಮೂಲಕ ಸೂಕ್ಷ್ಮ ಸ್ನಾಯುಗಳ ಬೆಳವಣಿಗೆ ಆಗುವಂತೆ ನೋಡಿಕೊಳ್ಳುವುದು.


ಹೆಸರಿಸುವ ಮೂಲಕ ಬರವಣಿಗೆ ಕೌಶಲ ರೂಢಿಸುವುದು.


ಅಗತ್ಯ ಸಾಮಗ್ರಿಗಳು : ಕಾಗದ, ಕ್ರೇಯಾನ್ಸ್ ಮತ್ತು ಬಣ್ಣದ ಪೆನ್ಸಿಲ್‌ಗಳು


ವಿಧಾನ : ಮಕ್ಕಳು ತಮ್ಮ ಆಯ್ಕೆಯ ಚಿತ್ರ ಬಿಡಿಸುವುದು


ಉದಾ. ಹಣ್ಣು, ಗೊಂಬೆ/ಆಟಿಕೆ. ಪುಸ್ತಕ, ಹೂ ಇತ್ಯಾದಿ


ಬರೆದ ಚಿತ್ರಕ್ಕೆ ಒಂದು ಹೆಸರು ಕೊಡಲು ತಿಳಿಸುವುದು



 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ: ಕೆರೆ ದಡ


ಸಾಮರ್ಥ್ಯ : ಏಕಾಗ್ರತೆ ಬೆಳೆಸಲು, ಆಲಿಸುವ ಕೌಶಲ್ಯ ಬೆಳೆಸಲು, ದೇಹದ ಸಮತೋಲನ ಅಭಿವೃದ್ಧಿಪಡಿಸಲು


ಸಾಮಗ್ರಿ : ಸುಣ್ಣದ ಪುಡಿ


ವಿಧಾನ:


• ಮಕ್ಕಳಸಂಖ್ಯೆಗೆ ಅನುಗುಣವಾಗಿ ದೊಡ್ಡವೃತ್ತವನ್ನುಸುಣ್ಣದಪುಡಿಯಸಹಾಯದಿಂದಬರೆಯುವುದು.


• ಮಕ್ಕಳನ್ನು ವೃತ್ತದ ಗೆರೆಯಹೊರಭಾಗದಲ್ಲಿನಿಲ್ಲಲುಸೂಚಿಸುವುದು.


• ಶಿಕ್ಷಕರು ಕೆರೆ ದಡ ಎಂಬಸೂಚನೆಯನ್ನು ಅನುಸರಿಸಿಮಕ್ಕಳಿಗೆ ಆಡಲು ತಿಳಿಸುವುದು.


ಸೂಚನೆಯನ್ನು ಪಾಲಿಸದವರು ಆಟದಿಂದ ಹೊರಗುಳಿಯುವರು.


ಅವಧಿ - 7(40ನಿ)

*ಕಥಾ ಸಮಯ*

ಶೀರ್ಷಿಕೆ : ಸಿಂಹ ಮತ್ತು ಇಲಿ


ಸಾಮಗ್ರಿಗಳು :ಮುಖವಾಡಗಳು


ಉದ್ದೇಶ :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


> ಊಹಿಸುವ ಕೌಶಲವನ್ನು ಹೆಚ್ಚಿಸುವುದು


> ಆಲೋಚನಾ ಶಕ್ತಿಯನ್ನು ವೃದ್ಧಿಸುವುದು


> ಪ್ರಶ್ನಿಸುವ ಮನೋಭಾವಉಂಟುಮಾಡುವುದು.


> ಊಹಿಸುವ ಕೌಶಲವನ್ನು ಹೆಚ್ಚಿಸುವುದು.


> ಕಥೆಗೆ ಸಂಬಂಧಿಸಿದ ಚಿತ್ರಗಳನ್ನು ಸಂಗ್ರಹಿಸುವ ಆಸಕ್ತಿಯನ್ನು ಬೆಳೆಸುವುದು.


> ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.


ವಿಧಾನ :


ಮುಖವಾಡಗಳು


ಮುಖವಾಡಗಳನ್ನು ಬಳಸಿ ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು. ಹಿರಿಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಪಾತ್ರಗಳನ್ನು ಹಂಚಿಅಭಿನಯಿಸಲು ಸಹಕರಿಸಿ, ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ,


(ಕಥೆಯನ್ನು ಆನಂದಿಸುವುದರಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)


ಅವಧಿ -8(20ನಿ)

*ಮತ್ತೆ ಸಿಗೋಣ*

ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ. ಬೀಳ್ಕೊಡ "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ,


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ




 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment