Sunday, 2 June 2024

ವಿದ್ಯಾಪ್ರವೇಶ ದಿನ 1

 https://nalikalirenukaradhyatlm.blogspot.com/



*ವಿದ್ಯಾಪ್ರವೇಶ ದಿನ 1ರ ಆಡಿಯೋ ಲಿಂಕ್* 

ಕೃಪೆ : ನಲಿಕಲಿ ಕ್ರಿಯಾಶೀಲ ತಾರೆಯರು ಶಿವಮೊಗ್ಗ


https://drive.google.com/file/d/1JnJVoysrzTASUmIPgvJjAkYiH-iRhTsc/view?usp=drivesdk


*ವಿದ್ಯಾಪ್ರವೇಶ ದಿನ-1* 




✒️🚁🎮🎨🎲🧮📏🔍




*ಅವಧಿ -1* (40ನಿ)

*ಶುಭಾಶಯ ವಿನಿಮಯ* 


(ಮಕ್ಕಳೊಂದಿಗೆ ಶಿಕ್ಷಕರ

 ಬೆಳಗಿನ ಕುಶಲೋಪರಿ)  

ಸಾಮರ್ಥ್ಯ: ಶುಭಾಶಯಗಳು ಮತ್ತು ಸ್ವಾಗತದಂತಹ ಸಾಮಾಜಿಕ ನಡವಳಿಕೆಯ ಅಭಿವೃದ್ಧಿ, ಚಟುವಟಿಕೆಯ ಉದ್ದೇಶ: ಆತ್ಮೀಯತೆ ಭಾವನೆಯನ್ನು ಮೂಡಿಸುವುದು.


ಸಾಮಗ್ರಿ: ಬಲೂನ್/ಹೂವು/ಚಾಕಲೇಟ್


ವಿಧಾನ:


1. ಮಕ್ಕಳು ಚಪ್ಪಾಳೆ ತಟ್ಟುತ್ತಾ ತರಗತಿಯನ್ನು ಪ್ರವೇಶಿಸಲಿ. 

2.ಮಗು ತರಗತಿಯನ್ನು ಪ್ರವೇಶಿಸುವಾಗ ಶಿಕ್ಷಕರು ಮಗುವಿಗೆ "ನಮಸ್ತೆ, ಗುಡ್ ಮಾರ್ನಿಂಗ್ಗ್" ಎಂದು ಗ್ರೀಟ್ ಮಾಡುವುದು.


3. ನಂತರ ಪ್ರತಿ ಮಗುವಿನ ಹೆಸರನ್ನು ಕೇಳಿ, ಅವನ/ಅವಳ ಹೆಸರನ್ನು ಹೇಳಿ ಹೂ/ಬಲೂನ್/ಚಾಕಲೇಟ್ ನೀಡಿ ಸ್ವಾಗತಿಸಿ


ಉದಾ : "ಗೀತಾ, ನಿನಗೆ ಸ್ವಾಗತ. welcome" ಎಂದು ಹೇಳಿ ಸ್ವಾಗತಿಸುವುದು.


*ಮಾತು ಕತೆ* 


( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)

ಚಟುವಟಿಕೆ-1: ನನ್ನ ಕುರಿತು (ಗುರಿ-1)


ಸಾಮರ್ಥ್ಯ: ಸ್ವಯಂ ಪ್ರಜ್ಞೆ, ಧನಾತ್ಮಕ ವೈಯುಕ್ತಿಕ ಪರಿಕಲ್ಪನೆಗಳ ಅಭಿವೃದ್ಧಿ, ಆಲಿಸುವುದು ಮತ್ತು ಮಾತನಾಡುವುದು.


ಉದ್ದೇಶ: ತನ್ನ ಕುರಿತು ಮಾತನಾಡಲು ಪ್ರೇರೇಪಿಸುವುದು.


ಸಾಮಗ್ರಿ:


ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ..


2. "ಹಲೋ, ಮಕ್ಕಳೇ ಗುಡ್ ಮಾನಿರ್ಂಗ್" (ನಿಮ್ಮ ಕೈಬೀಸಿ) ಎಂದು ಹೇಳುವ ಮೂಲಕ ಅವರನ್ನು ಸ್ವಾಗತಿಸಿ ಮತ್ತು ಮೂರು ಬಾರಿ ಚಪ್ಪಾಳೆ ತಟ್ಟಿ, 3. ಹಾಯ್ ಟೇಚರ್. ಗುಡ್ ಮಾನಿರ್ಂಗ್" (ಕೈ ಬೀಸುವ ಮೂಲಕ) ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು


ಮಕ್ಕಳಿಗೆ ತಿಳಿಸಿ ಮತ್ತು ಮೂರು ಬಾರಿ ಚಪ್ಪಾಳೆ ತಟ್ಟಲು ತಿಳಿಸಿ..


4. ಅವರ ಬಗ್ಗೆ ಮಾತನಾಡಲು ಪ್ರೋತ್ಸಾಹಿಸಿ.


(ಉದಾ : "ಮಹೇಶ, ಬೆಳಿಗ್ಗೆ ಏನು ತಿಂಡಿ ತಿಂದು ಬಂದೆ?", "ಸಲೀನಾ, ನಿನಗೆ ಯಾವ ತಿಂಡಿ ಇಷ್ಟ?)


ಅವಧಿ-2 (40ನಿ)

*ನನ್ನ ಸಮಯ* 

ತರಗತಿಯ ಎಲ್ಲಾ ಕಲಿಕಾಮೂಲೆಗಳಿಗೆ ಶಿಕ್ಷಕರು ಮಕ್ಕಳನ್ನು ಕರೆದೊಯ್ದು. ಪ್ರತಿ ಮೂಲೆಯಲ್ಲಿನ ಸಾಮಗ್ರಿಗಳು ಹಾಗೂ ಅವುಗಳ ಬಳಕೆಯ ಕುರಿತು ಮಾರ್ಗದರ್ಶನ ಮಾಡುತ್ತಾರೆ ಹಾಗೂ ಕೆಲವು ಮಾದರಿ ಚಟುವಟಿಕೆಗಳನ್ನು ಪರಿಚಯಿಸುತ್ತಾರೆ.ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುತ್ತ ಅವರ ಅರ್ಥೈಸಿಕೊಳ್ಳುವಿಕೆಯನ್ನು ಖಾತ್ರಿಪಡಿಸಿಕೊಳ್ಳುವುದು.


ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ : ದೃಷ್ಟಿ, ಜ್ಞಾನ, ಸ್ಮರಣೆ, ಪರಿಸರದ ಅರಿವು.


ಚಟುವಟಿಕೆ : ನೋಡು ಮತ್ತು ಹೇಳು (ಗುರಿ. 3)


ಉದ್ದೇಶ : ನೋಡಿದ ವಸ್ತುಗಳನ್ನು ನಿಗದಿತ ಸಮಯದಲ್ಲಿ ಸ್ಮರಿಸಿ ಹೇಳುವ ಕೌಶಲವನ್ನು ಬೆಳೆಸುವುದು.


ಅಗತ್ಯ ಸಾಮಗ್ರಿಗಳು : ತರಗತಿ ಅಥವಾ ಅಡುಗೆಕೋಣೆಯಲ್ಲಿ ಲಭ್ಯವಿರುವ ಹಣ್ಣುಗಳು, ತರಕಾರಿಗಳು, ಪಾತ್ರೆಗಳು ಹಾಗೂ ಇತರೆ


ಸಾಮಾನ್ಯ ವಸ್ತುಗಳು.


ವಿಧಾನ : ಮಕ್ಕಳನ್ನು ಅರ್ಧವೃತ್ತಾಕಾರದಲ್ಲಿ ಕೂರಿಸುವುದು. 8 ರಿಂದ 10 ವಸ್ತುಗಳನ್ನು ಕೆಲವು ನಿಮಿಷಗಳ ಕಾಲ ಮಕ್ಕಳಿಗೆ ತೋರಿಸುವುದು. ನಂತರ ವಸ್ತುಗಳನ್ನು ಮುಚ್ಚುವುದು. ಈಗ ಮಕ್ಕಳು ನೋಡಿದ್ದನ್ನು ಸ್ಮರಿಸಿ ಹೇಳಲು ಅವಕಾಶ ನೀಡುವುದು. ನಂತರ ಆ ವಸ್ತುಗಳ ಚಿತ್ರಗಳನ್ನು ಪ್ರದರ್ಶಿಸಿ ಅವುಗಳಲ್ಲಿ ಹೋಲಿಕೆ ಇರುವ ಮತ್ತು ಇಲ್ಲದಿರುವ ಹಾಗೂ ಪರಸ್ಪರ ಸಂಬಂಧ ಇರುವ ವಸ್ತುಗಳ ಚಿತ್ರಗಳನ್ನು ವಿಂಗಡಿಸಲು ತಿಳಿಸುವುದು. ಈ ಕ್ರಿಯೆಯು ಯೋಜಿತವಾಗಿ ಮತ್ತು ನಿಧಾನವಾಗಿ ಸಾಗಬೇಕು. 

ಆ.ಹಾ:- IL-1 ಹೊಂದಿಸೋಣ


ಅವಧಿ -4 (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)

ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಹಂಚಿಕೊಳ್ಳುವುದು.


ಚಟುವಟಿಕೆ : ಒತ್ತು ಚಿತ್ರ ರಚನೆ (ಗುರಿ – 1)ಉದ್ದೇಶಗಳು :


ಸೂಕ್ತ ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.


ಏಕಾಗ್ರತೆಯೊಂದಿಗೆ ಬಣ್ಣಗಳ ಪರಿಚಯವಾಗುತ್ತದೆ.


• ಹಂಚಿಕೊಳ್ಳುವ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ಮನೋಭಾವನೆ ಬೆಳೆಯುತ್ತದೆ.


ಸಾಮಗ್ರಿಗಳು : ಬಣ್ಣ ಮತ್ತು ಪೇಪರ್


ವಿಧಾನ : ಎರಡು ಮಕ್ಕಳಿಗೆ ಒಂದು ಬಟ್ಟಲಿನಂತೆ ಬಣ್ಣ ಹಾಗೂ ಹಾಳೆಗಳನ್ನು ಕೊಡುವುದು. ಪ್ರತಿ ಮಗುವಿಗೆ ತನ್ನ ಆಯ್ಕೆಯ ಚಿತ್ರವನ್ನು


ಬರೆಯಲು ಹೇಳುವುದು ನಂತರ ತನ್ನ ತೋರು ಬೆರಳುಗಳ ತುದಿ ಅಥವಾ ಹೆಬ್ಬೆರಳನ್ನು ಬಣ್ಣದಲ್ಲಿ ಅದ್ದಿ ಕಾಗದದ ಮೇಲೆ ಒತ್ತು ಚಿತ್ರ ರಚಿಸಲು ಹೇಳುವುದು. ಇದೇ ರೀತಿ ಅಕ್ಷರಗಳು ಮತ್ತು ಅಂಕಿಗಳಿಗೂ ಬೆರಳನ್ನು ಬಳಸಿ ಬಣ್ಣ ಹಚ್ಚುವುದು.


ಮಾರ್ಪಾಡುಗಳು : ಮಕ್ಕಳು ಎಲೆಗಳನ್ನು ಬಣ್ಣದಲ್ಲಿ ಅದ್ದಿ ಕಾಗದದ ಮೇಲೆ ಒತ್ತು ಚಿತ್ರಗಳನ್ನು ಮಾಡುವುದು. ಇದೇ ರೀತಿ


ಪಾದ ಮತ್ತು ಹಸ್ತಗಳ ಒತ್ತು ಚಿತ್ರಗಳನ್ನು ರಚಿಸಲು ಹೇಳಬಹುದು. ಅ.ಹಾ:-HW-1 ಮಾಡಿ ಕಲಿ


ಅವಧಿ -5(60ನಿ)


 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 


 *ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ: ನೆನಪಿಸಿಕೊಳ್ಳುವುದು. ಕ್ರಮಾನುಗತ ಆಲೋಚನೆ, ಪದ ಸಂಪತ್ತಿನ ಅಭಿವೃದ್ಧಿ, ಅನುಭವ ಹಂಚಿಕೆ


ಚಟುವಟಿಕೆ : ಅನುಭವ ಹಂಚಿಕೆ, ( ಗುರಿ 2) ECL-1


ಉದ್ದೇಶಗಳು:


• ಮಗು ತಾನು ತಿಳಿದುಕೊಂಡಿದ್ದನ್ನು ನೆನಪಿಸಿಕೊಳ್ಳುವುದು.


* ವಿಷಯಗಳನ್ನು ಕ್ರಮಾನುಗತವಾಗಿ ಆಲೋಚಿಸಿ ಜೋಡಿಸುವುದು. ತಮ್ಮ ಮಾತುಗಳಲ್ಲಿ ಹೊಸ ಪದಗಳು ಸೇರಿಕೊಳ್ಳುತ್ತಿರುವುದನ್ನು ಗಮನಿಸುವುದು.


ಅಗತ್ಯ ಸಾಮಗ್ರಿಗಳು - ಇಲ್ಲ


ವಿಧಾನ : ಮಕ್ಕಳನ್ನು ವೃತ್ತಾಕಾರದಲ್ಲಿ ಕಣ್ಣುಮುಚ್ಚಿ ಕೂರುವಂತೆ ಹೇಳುವುದು. ಹಿಂದಿನ ದಿನ ಅಥವಾ ವಾರದ ಕೊನೆಯ ದಿನವನ್ನು ಹೇಗೆ ಕಳೆದರು ಎಂದು ಯೋಚಿಸಲು ತಿಳಿಸಿ, ಅವಕಾಶ ನೀಡುವುದು. ನಂತರ ಸರಳ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವುದು.


ನೀನು ಈ ದಿನ ಎಷ್ಟು ಗಂಟೆಗೆ ಎದ್ದೆ?


* ಶಾಲೆಗೆ ಬರುವಾಗ ನಿನ್ನ ಬಳಿ ಏನಿತ್ತು?


• ದಾರಿಯಲ್ಲಿ ವಿನೇನು ನೋಡಿದೆ?


* ನಿನ್ನೆಯ ದಿನವನ್ನು ನೀನು ಹೇಗೆ ಕಳೆದೆ?


ನಿನ್ನೆ ಏನಾದರೂ ವಿಶೇಷ ಘಟನೆ ನಡೆದಿದ್ರೆ ನಮ್ಮ ಬಳಿ ಮ್ಮ ಬಳಿ ಹಂಚಿಕೊಳ್ಳುವೆಯಾ?


* ನಿನ್ನೆ ನೀನು ಗೆಳೆಯರ ಜೊತೆ ಯಾವ ಆಟ ಆಡಿದೆ?


*ಅರ್ಥಗ್ರಹಿಕೆಯೊಂದಿಗಿನ ಓದು*

 ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು ಪರಿಸರದಆರಿವು.


ಚಟುವಟಿಕೆ :


1. ಚಿತ್ರ ಸಂಪುಟ (ಗುರಿ-2) ವಿಷಯ:'ಉದ್ಯಾನದಲ್ಲಿ ನೀವು ನೋಡಿರುವ ವಸ್ತುಗಳು/ವಿಷಯಗಳು'ಉದ್ದೇಶಗಳು:


ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥಮಾಡಿಕೊಳ್ಳುವುದು.


ಸಂತೋಷ ಮನೋರಂಜನೆ ಹಾಗೂ ಇತರೆ ಉದ್ದೇಶಗಳಿಗಾಗಿ ಸ್ವತಂತ್ರವಾಗಿ ಓದುವುದು.


ಅಗತ್ಯ ಸಾಮಗ್ರಿಗಳು: ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಗಳು, ಉದ್ಯಾನವನದಲ್ಲಿ ನೋಡಬಹುದಾದ ವಿಷಯವಸ್ತುಗಳ ಕುರಿತ ಕಥನ/ ಕವಿತೆ/ ಹಾಡುಗಳ ಪಟ್ಟಿ


ವಿಧಾನ : ಮಕ್ಕಳಿಗೆ ಪರಿಚಿತವಿರುವ ಹಾಡು ಮತ್ತು ಶಿಶುಗೀತೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಗುರುತಿಸುವುದು.


ಹಾಡು/ ಕಥೆಯಲ್ಲಿರುವ ವಿಶೇಷ ಪದಗಳನ್ನು ಗುರುತಿಸಿ ಹೆಸರಿಸುವುದು.


ಹಾಡು/ ಕಥೆಯಲ್ಲಿ ಬರುವ ಮುಖ್ಯ ಪಾತ್ರಗಳನ್ನು ಗುರುತಿಸುವುದು ಮತ್ತು ಪುನರಾವರ್ತಿತ ಪದ/ ಸಾಲುಗಳನ್ನು ಹೇಳುವುದು/ಬರೆಯುವುದು.


ಮಾದರಿ ಚಿತ್ರಗಳನ್ನು (ಉದ್ಯಾನವನಕ್ಕೆ ಸಂಬಂಧಿಸಿದ) ಓದುವುದು ಮತ್ತು ಅದರ ಕುರಿತಾಗಿ ಪ್ರತಿಕ್ರಿಯಿಸುತ್ತಾ ಶಿಕ್ಷಕರೊಂದಿಗೆಚರ್ಚಿಸುವರು. ವೈಯಕ್ತಿಕ ಚಿತ್ರ ಸಂಪುಟ. - ಕಥೆ ಅಥವಾ ಹಾಡುಗಳಲ್ಲಿ ಬರುವ ವಸ್ತುಗಳು ಅಥವಾ ವಿಶೇಷ ಪದಗಳನ್ನು ಪ್ರತಿ ಮಗು ಸನ್ನಿವೇಶ ಚಿತ್ರಗಳನ್ನು ಓದಿ ಗ್ರಹಿಸಿ ವೈಯಕ್ತಿಕವಾಗಿ ಚರ್ಚಿಸಲು ಅನುವು ಮಾಡಿಕೊಡುವುದು, ಆ ಚಿತ್ರ ಓದಿನ ಗ್ರಹಿಕೆಗಳನ್ನು ಅಭಿವ್ಯಕ್ತಿಸುವುದನ್ನು ಖಾತ್ರಿಮಾಡಿಕೊಳ್ಳುವುದು.


ಉದಾ : ಹೂಗಳು, ಮರಗಳು, ಪಕ್ಷಿಗಳು ಮಕ್ಕಳ ಆಟಿಕೆಯ ಸಾಮಗ್ರಿಗಳು, ಕುಳಿತುಕೊಳ್ಳುವ ಆಸನಗಳು ಇತ್ಯಾದಿ. ಚಿತ್ರಗಳು/ ವಿಡಿಯೋಗಳು/ ಕ್ಷೇತ್ರಭೇಟಿ.


ಶಿಕ್ಷಕರು ಸುಗಮಕಾರಿಕೆಯಲ್ಲಿ ಬಳಸಬಹುದಾದ ಬೆಳವಣಿಗೆಯ ಪ್ರಶ್ನೆಗಳು:


° ಉದ್ಯಾನವನವನ್ನು ನೋಡಿರುವಿರಾ?


• ನೀವು ಉದ್ಯಾನವನಗಳಲ್ಲಿ ಏನೇನು ನೋಡಿರುವಿರಿ?

* ನಿಮ್ಮಊರಿನಲ್ಲಿ ಇರುವ ಉದ್ಯಾನವನಗಳಲ್ಲಿ ಯಾವ ಯಾವ ರೀತಿಯ ವಸ್ತು ಮತ್ತು ವಿಷಯಗಳನ್ನು ಗಮನಿಸಿದ್ದೀರಿ?


* ನಿಮ್ಮ ಇಷ್ಟದ ಉದ್ಯಾನವನದಲ್ಲಿ ಏನೇನು ಇದ್ದರೆ ನಿನಗೆ ಖುಷಿಯಾಗುತ್ತದೆ?


* ನಿಮ್ಮ ಶಾಲೆಯಲ್ಲಿ ಸುಂದರ ಉದ್ಯಾನವನ ನಿರ್ಮಾಣ ಮಾಡುವುದಾದರೆ ನೀನು ಏನೇನು ಜವಾಬ್ದಾರಿ ತೆಗೆದುಕೊಳ್ಳುವೆ?


* ಉದ್ಯಾನವನ ನಿರ್ಮಾಣ ಮಾಡುವುದದಕ್ಕೆ ಯಾವೆಲ್ಲ ಸಾಮಗ್ರಿಗಳ ಅವಶ್ಯಕತೆ ಇದೆ? ಇತ್ಯಾದಿ


ಹೀಗೆ ಶಿಕ್ಷಕರು ತಮ್ಮ ಸ್ಥಳೀಯ ಸಂದರ್ಭಕ್ಕನುಗುಣವಾದ ಪ್ರಶ್ನಾವಳಿಗಳನ್ನು ರೂಪಿಸಿಕೊಂಡು ತರಗತಿಯನ್ನು ಅನುಕೂಲಿಸುವುದು. ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಗಳನ್ನು/ ಚಿತ್ರಪಟಗಳನ್ನು/ ವಿಡಿಯೋ/ ಹಾಡು/ಕಥೆಗಳನ್ನೂ ಬಳಸಿ ಅಥವಾ ಪ್ರದರ್ಶಿಸಿಮಕ್ಕಳೊಂದಿಗೆ ಚರ್ಚಿಸಬಹುದು.


ಸದರಿ ಸಂದರ್ಭದಲ್ಲಿ ಶಿಕ್ಷಕರು ಮಕ್ಕಳನ್ನು ಮುಕ್ತವಾಗಿ ಮಾತನಾಡಲು, ಪ್ರಶ್ನೆಗಳನ್ನು ಕೇಳಲು ಹಾಗೂ ತಮ್ಮ ಸಹಜ ಭಾಷೆಯಲ್ಲಿ ಚರ್ಚಿಸಲು ಅವಕಾಶಗಳನ್ನು ಮಾಡಿಕೊಡುವುದು.


(ಸದರಿ ಚಟುವಟಿಕೆಯ ಮುಂದುವರೆದ ಭಾಗವು 5ನೇ ದಿನದಲ್ಲಿ ಮುಂದುವರೆಯುವುದು)



*ಉದ್ದೇಶಿತ ಬರಹ*  


ಸಾಮರ್ಥ್ಯ: ಬರವಣಿಗೆಯ ಆರಂಭಿಕ ಕೌಶಲಗಳನ್ನು ಅಭ್ಯಾಸ ಮಾಡಿಸುವುದು, ಬರವಣಿಗೆಯೆಡೆಗೆ ಮಕ್ಕಳನ್ನು ಸೆಳೆಯುವುದು.


ಚಟುವಟಿಕೆ: ತೋಚಿದಂತೆ ಗೀಚು (ಗುರಿ -2) ECWI


ಉದ್ದೇಶಗಳು:


ಬರವಣಿಗೆಯ ಕೌಶಲಗಳನ್ನು ರೂಢಿಸಿಕೊಳ್ಳುವುದು.


ಸೂಕ್ಷ್ಮ ಸ್ನಾಯು ಕೌಶಲಗಳನ್ನು ಅಭಿವೃದ್ಧಿಗೊಳಿಸುವುದು.


ಅಗತ್ಯ ಸಾಮಗ್ರಿ : ವಾಲ್‌ಸ್ಟೇಟ್, ಸೀಮೆ ಸುಣ್ಣ


ವಿಧಾನ :


ವಾಲ್‌ಸ್ಟೇಟ್ ಮೇಲೆ ಮಕ್ಕಳು ಇಷ್ಟ ಬಂದಂತೆ ಗೀಚಲು/ ಬರೆಯಲು ತಿಳಿಸುವುದು.


ಎಲ್ಲ ಮಕ್ಕಳ ಬರೆಹ/ಚಿತ್ರ ರಚನೆಯನ್ನು ವೀಕ್ಷಿಸಿ ಪ್ರೋತ್ಸಾಹಿಸುವುದು.


ಚಿತ್ರಗಳನ್ನು ಬರೆಯಲು ಪ್ರೇರೇಪಿಸುವುದು.



| ಶೀರ್ಷಿಕೆ : ಸಿಂಹ ಮತ್ತು ಇಲಿ

 ಅವಧಿ - 6(40ನಿ)

*ಹೊರಾಂಗಣ ಆಟಗಳು*

ಚಟುವಟಿಕೆ : ಹೊರಾಂಗಣ ಆಟದ ಸ್ಥಳ ಮತ್ತು ವಸ್ತುಗಳನ್ನು ತಿಳಿದುಕೊಳ್ಳುವುದು. (ಗುರಿ-1)


ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ನಿರ್ಧಾರ ತೆಗೆದುಕೊಳ್ಳುವಿಕೆ.


ಸಾಮಗ್ರಿಗಳು : ಸ್ಕಿಪ್ಪಿಂಗ್ ರೋಪ್ಸ್, ಚೆಂಡುಗಳು, ಬ್ಯಾಟ್ಸ್,


ವಿಧಾನ :


ಮಕ್ಕಳಿಗೆ ಹೊರಾಂಗಣ ಆಟದ ಸ್ಥಳ ಮತ್ತು ಸಂಬಂಧಿತ ವಸ್ತುಗಳನ್ನು ಪರಿಚಯಿಸುವುದು.


ಈ ಕೆಳಗಿನ ಸುರಕ್ಷತಾ ನಿಯಮಗಳನ್ನು ತಿಳಿಸುವುದು.


> ಆಟದ ಮೈದಾನದ ಸಲಕರಣೆಗಳ ಬಳಿ ಇರುವಾಗ ಎಂದಿಗೂ ಓಡಬೇಡಿ ಅಥವಾ ಇತರರನ್ನು ತಳ್ಳಬೇಡಿ ಮತ್ತು ಎಳೆಯಬೇಡಿ.


> ನೀವು ಇತರರೊಂದಿಗೆ ಚೆಂಡನ್ನು ಹಂಚಿಕೊಂಡಾಗ. ನಿಮ್ಮ ಸರದಿಗೆ ಕಾಯಬೇಕು ಮತ್ತು ಸುರಕ್ಷಿತವಾಗಿ ಆಡಲು ಮರೆಯದಿರಿ.





ಅವಧಿ - 7(40ನಿ)

*ಕಥಾ ಸಮಯ*


ಸಾಮಗ್ರಿಗಳು : ಕಥೆಯ ಸಾಹಿತ್ಯ


ಉದ್ದೇಶಗಳು :


> ಆಲಿಸುವ ಸಾಮರ್ಥ್ಯ ಬೆಳೆಸುವುದು.


> ಊಹಿಸುವ ಕೌಶಲವನ್ನು ಹೆಚ್ಚಿಸುವುದು.


ವಿಧಾನ : ಕಥಾ ಸಾಹಿತ್ಯ ನಿರೂಪಣೆ


> ಶಿಕ್ಷಕರು ಕಥೆ ಹೇಳುವ ಮುನ್ನ ಕಥೆಯನ್ನು ಓದಿ ಅರ್ಥೈಸಿಕೊಳ್ಳಬೇಕು.


> ಕಥೆ ಹೇಳುವಾಗ ಶಿಕ್ಷಕರು ಮಕ್ಕಳೊಂದಿಗೆ ವೃತ್ತದಲ್ಲಿ ಕುಳಿತುಕೊಳ್ಳಬೇಕು.


> ಸೂಕ್ತ ಆಂಗಿಕ ಚಲನೆಯೊಂದಿಗೆ ಸರಳ ಭಾಷೆಯಲ್ಲಿ_ಕಥೆಯನ್ನು ಹೇಳಬೇಕು.


> ಸರಳ ಪ್ರಶ್ನೆಗಳು ಕೇಳಿ ಕಥೆಯನ್ನು ಅರ್ಥೈಸಬೇಕು. ಕಥೆ : ಒಮ್ಮೆ ಕಾಡಿನ ರಾಜನಾದ ಸಿಂಹವು ಆಹಾರಕ್ಕಾಗಿ ಕಾಡೆಲ್ಲಾ ಅಲೆದಾಡಿತು. ಎಷ್ಟು ಹುಡುಕಾಡಿದರೂ ಆ ದಿನ ಒಂದೂ


ಪ್ರಾಣಿಯು ಅದರ ಕಣ್ಣಿಗೆ ಬೀಳಲಿಲ್ಲ. ಸಮಯ ಮೀರಿದ್ದರಿಂದ ಕಂಗಾಲಾದ ಸಿಂಹವು ಸುಸ್ತಾಗಿ ಒಂದು ಮರದಡಿಯಲ್ಲಿ ಮಲಗಿತು. ಇದರ ಪರಿವೆಯೇ ಇಲ್ಲದೇ ಇಲಿ ಮರಿಯೊಂದು ಮರದ ಬುಡದಲ್ಲಿದ್ದ ಬಿಲದಿಂದ ಹೊರಗೆ ಬಂದು ಆಟವಾಡತೊಡಗಿತ್ತು. ಆಟವಾಡುತ್ತಾ ಸಿಂಹದ ಮೈಮೇಲೆಲ್ಲಾ ಓಡಾಡುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಸಿಂಹವು ತನ್ನ ಕೈಯಲ್ಲಿ ಇಲಿಮರಿಯನ್ನು ಹಿಡಿದು, ಎಲೈ, ಪಿಳ್ಳೆಯೇ ನೀನು ನನ್ನ ಬೆರಳಿನಷ್ಟಿರುವ ನನ್ನ ಮೈಮೇಲೆ ಓಡಾಡಲು ನಿನಗೆಷ್ಟು ಧೈರ್ಯ? ಹಸಿವೆಯಿಂದ ಬಳಲುತ್ತಿರುವ ನನ್ನ ನಿದ್ರಾ ಭಂಗಮಾಡಿದೆ. ನಿನ್ನನ್ನು ಈಗಲೇ ಒಂದೇ ಬಾರಿಗೆ ತಿಂದು ಮುಗಿಸುವೆ ಎಂದು ಘರ್ಜಿಸಿತು. ಅದಕ್ಕೆ ಹೆದರಿದ ಇಲಿಮರಿಯು ಆಯ್ಯಾ! ಮೃಗರಾಜ ತಿಳಿಯದೇ ತಪ್ಪು ಮಾಡಿದೆ. ನನ್ನನ್ನು ಬಿಟ್ಟು ಬಿಡು. ಮೇಲಾಗಿ ನನ್ನನ್ನು ತಿಂದರೂ ಹೊಟ್ಟೆ ತುಂಬಲಾರದು. ದಯವಿಟ್ಟು ಕನಿಕರಿಸು ಎಂದು ಅಂಗಲಾಚಿತು. ಇಂದು ನನ್ನನ್ನು ಬಿಟ್ಟು ಉಪಕಾರ ಮಾಡಿದರೆ, ನಾನು ನಿನಗೆ ಎಂದಾದರೂ ಸಹಾಯ ಮಾಡುವೆ ಎಂದಿತು. ಒಂದುಕ್ಷಣ ಆಲೋಚಿಸಿದ ಸಿಂಹವು ಕಾಡಿನ ರಾಜನಾದ ನನಗೆ ನಿನ್ನ ಸಹಾಯವೇ!? ಎಂದು ಅಪಹಾಸ್ಯದಿಂದ ನಗುತ್ತಾ, ಎಲ್ಲಾದರೂ ಹೋಗಿ ಬದುಕಿಕೊ ಎಂದು ಹೇಳಿ ಇಲಿ ಮರಿಯನ್ನು ಬಿಸಾಡಿತು. ಬದುಕಿದೆಯಾ ಬಡಜೀವವೇ ಎಂದು ಇಲಿಯು ಓಡಿ ಬಿಲವನ್ನು ಸೇರಿಕೊಂಡಿತು. ಕೆಲವು ದಿನಗಳ ನಂತರ ದೂರದಲೆಲ್ಲೋ ಸಿಂಹವು ಕಾಪಾಡಿ, ಕಾಪಾಡಿ ಎಂದು ಚೀರುತ್ತಿದ್ದ ಧ್ವನಿ ಇಲಿಮರಿಗೆ ಕೇಳಿಸಿತು. ಆ ಧ್ವನಿ ಬಂದ ದಿಕ್ಕಿಗೆ ಇಲಿಮರಿಯು ಓಡಿಹೋಗಿ ನೋಡಿತು. ಸಿಂಹವು ಬಲೆಯೊಳಗೆ ಬಿದ್ದು ಹೊರಬರಲಾರದೇ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ಇಲಿಯು ಎಲೈ ರಾಜನೇ ಸ್ವಲ್ಪ ನಿಲ್ಲು, ನಾನು ನನ್ನ ಚೂಪಾದ ಹಲ್ಲುಗಳಿಂದ ಈ ಬಲೆಯನ್ನು ಕತ್ತರಿಸಿ ನಿನ್ನನ್ನು ಪಾರು ಮಾಡವೆ ಎಂದಿತು. ಅದೇ ರೀತಿ ಬಲೆಯನ್ನು ಕಟ್..ಕಟ್.. ಎಂದು ಕಡಿದು ಸಿಂಹವನ್ನು ಬಿಡಿಸಿತು. ಬಲೆಯಿಂದ ಹೊರಬಂದ ಸಿಂಹವು ಇಲಿಮರಿಗೆ ಕೃತಜ್ಞತೆಯನ್ನು ತಿಳಿಸಿತು. ಇಲಿಯು ಸಿಂಹವು ತನಗೆ ಮಾಡಿದ ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡಿದೆನೆಂಬ ಸಂತೋಷದಿಂದ ತನ್ನ ಬಿಲವನ್ನು ಸೇರಿಕೊಂಡಿತು. ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.


1) ಈ ಕಥೆಯಲ್ಲಿ ಬರುವ ಪಾತ್ರಗಳನ್ನು ಹೆಸರಿಸಿ.


2) ಇಲಿಯನ್ನು ತಿಂದು ಹಾಕುವೆನೆಂದು ಸಿಂಹವು ಏಕೆ ಹೇಳಿತು?


(ಕಥೆಯನು, ಆನಂದಿಸುವುದರ ಜೊತೆಗೆ, ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)



ಅವಧಿ -8(20ನಿ)

*ಮತ್ತೆ ಸಿಗೋಣ*


ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ


ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.


ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ. "ನೀನೇ ಮಾಡಿ ನೋಡು" ಚಟುವಟಿಕೆಯನ್ನು ಮಾಡಲು ಅನುಕೂಲವಾಗುವಂತೆ ಯೋಜನೆ ರೂಪಿಸಿ.


[ಸಾಹಿತ್ಯ ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

------------------------------





 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ

No comments:

Post a Comment