Friday, 2 September 2022

ವಿದ್ಯಾಪ್ರವೇಶ ದಿನ 71

 *ವಿದ್ಯಾಪ್ರವೇಶ ದಿನ-71* 

✒️🚁🎮🎨🎲🧮📏🔍

*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)

ಸಂಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಆನಂದಿಸಿದ ಚಟುವಟಿಕೆ ಯಾವುದು ಎಂದು ಮಕ್ಕಳಿಂದ ಕೇಳಿ ತಿಳಿದು ಆ ಚಟುವಟಿಕೆಯ ಮೂಲಕ ಮಕ್ಕಳನ್ನು ತರಗತಿಗೆ ಸ್ವಾಗತಿಸುವುದು.

     *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)    

ದಿನ ೭೦ ರ ಚಟುವಟಿಕೆಯನ್ನು ಪುನರಾವರ್ತಿಸಿ.

 ---–------------------------------ 

ಅವಧಿ-2 (40ನಿ)

*ನನ್ನ ಸಮಯ* 

* ಮಗು ಎಲ್ಲಾ ಮೂಲೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಹಾಗೂ ಸೂಕ್ತವಾಗಿ 

ಪೂರ್ಣಗೊಳಿಸಿರುವುದನ್ನು ಖಚಿತ ಪಡಿಸಿಕೊಳ್ಳುವುದು.

* ಅಪೂರ್ಣಗೊಳಿಸಿರುವ ಚಟುವಟಿಕೆಗಳನ್ನು ಮಗು ಪೂರ್ಣಗೊಳಿಸಲು ಸಹಕರಿಸುವುದು.

* ಮುಂದಿನ ದಿನಗಳಲ್ಲಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಯಾವ ಮಕ್ಕಳ ಕಡೆಗೆ ಹೆಚ್ಚು 

ಗಮನಹರಿಸಬೇಕೆಂಬ ಬಗ್ಗೆ ಶಿಕ್ಷಕರು ಮಾನಸಿಕವಾಗಿ ಸಿದ್ಧರಾಗುವುದು.

* ಕಲಿಕಾ ಸಿದ್ಧತಾ ಚಟುವಟಿಕೆಗಳನ್ನು ಈ ಹಂತದ ಅಂತ್ಯಕ್ಕೆ ನಿಲ್ಲಿಸದೆ ಮುಂದಿನ ಕಲಿಕಾ ಪಯಣದಲ್ಲಿ 

ಸಾಧ್ಯವಿರುವ ಕಡೆಗಳಲ್ಲಿ ವಿದ್ಯಾಪ್ರವೇಶ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವುದು. ವಿದ್ಯಾಪ್ರವೇಶ 

ಚಟುವಟಿಕೆಗಳನ್ನು ನಿಪುಣ್ ಭಾರತ ಗುರಿ ಸಾಧನೆಗಳ ಆಶಯದೊಂದಿಗೆ ಮಿಳಿತಗೊಳಿಸಲಾಗಿದ್ದು, ಮಗುವಿನ 

ಮುಂದಿನ ಕಲಿಕಾ ಹಂತಗಳಲ್ಲಿ ಬಳಸಿಕೊಳ್ಳುವುದು ಆದ್ಯತೆಯಾಗಿರುತ್ತದೆ.

----------------------------–----–-

     ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)    

 ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು

ಮತ್ತು ವೈಜ್ಞಾನಿಕ ಚಿಂತನೆ (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)

ಸಾಮರ್ಥ್ಯ: ಪರಿಸರದ ಅರಿವು ಮತ್ತು ಆರೋಗ್ಯಕರ ಆಹಾರ ಪದ್ಧತಿ

ಚಟುವಟಿಕೆ : ನೆಲದಡಿ ಇರುವ ಮತ್ತು ನೆಲದ ಮೇಲೆ ಇರುವ ತರಕಾರಿಗಳು (ಗುರಿ ೩)

ಉದ್ದೇಶ:- ಮಣ್ಣಿನ ಒಳಗೆ ಮತ್ತು ಮಣ್ಣಿನ ಹೊರಗೆ ಬೆಳೆಯುವ ತರಕಾರಿಗಳ ಬಗ್ಗೆ ತಿಳಿಯುವುದು.

ಅಗತ್ಯ ಸಾಮಗ್ರಿಗಳು : ವಿವಿಧ ತರಕಾರಿಗಳ ಮಾದರಿಗಳು

ವಿಧಾನ : ತರಕಾರಿಗಳ ಬಗ್ಗೆ ಇರುವ ಪದ್ಯವನ್ನು ಮಕ್ಕಳೆದುರು ಹಾಡುವುದು.

ಬೇಕೆ ಬೇಕೆ ತರಕಾರಿ. . . . . . .

...........................

ವಿವಿಧ ತರಕಾರಿಗಳನ್ನು ಮಕ್ಕಳಿಗೆ ತೋರಿಸಿ ಮಣ್ಣಿನೊಳಗೆ( ನೆಲದ ಒಳಗೆ ) ಮತ್ತು ಮಣ್ಣಿನ ಹೊರಗೆ( ನೆಲದ 

ಮೇಲೆ ) ಬೆಳೆಯುವ ತರಕಾರಿಗಳನ್ನು ಗುರುತಿಸಿ ವಿವರಿಸಿ ಹೇಳುವುದು. ನಿಯಮಿತವಾಗಿ ತರಕಾರಿಗಳನ್ನು 

ಸೇವಿಸಲು ಮಕ್ಕಳನ್ನು ಪ್ರೋತ್ಸಾಹಿಸುವುದು.    

ವಿವಿಧ ರೀತಿಯ ತರಕಾರಿಗಳ ಮಾದರಿಗಳನ್ನು ತೋರಿಸಿ ಇದಕ್ಕೆ ಸಂಬ0ಧಿಸಿದ ಸರಳ ಪ್ರಶ್ನೆಗಳನ್ನು ಕೇಳಿ ಉತ್ತರ 

ಪಡೆಯುವುದು.

ಉದಾ:- ೧. ನೀನು ನೋಡಿದ ನೆಲದ ಮೇಲೆ ಬೆಳೆಯುವ ತರಕಾರಿಯ ಹೆಸರನ್ನು ಹೇಳು

೨ನೇ ತರಗತಿ : ಭೂಮಿಯ ಮೇಲೆ ಮತ್ತು ಭೂಮಿಯ ಒಳಗಡೆ ಬೆಳೆಯುವ ತರಕಾರಿಗಳ ಹೆಸರು ಹೇಳಿಸುವುದು.

೩ನೇ ತರಗತಿ : ಭೂಮಿಯ ಮೇಲೆ ಮತ್ತು ಭೂಮಿಯ ಒಳಗಡೆ ಬೆಳೆಯುವ ತರಕಾರಿ/ಆಹಾರ ಧಾನ್ಯಗಳ ಪಟ್ಟಿ ಮಾಡಿಸುವುದು.

----------------------–---------

ಅವಧಿ -4     (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)    

ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ,

ಚಟುವಟಿಕೆ: ವಿವಿಧ ರೀತಿಯ ಅಚ್ಚುಗಳ ರಚನೆ. (ಗುರಿ - ೧)

ಉದ್ದೇಶಗಳು :

•     ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.

•     ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.

•     ಕಲ್ಪನಾ ಶಕ್ತಿಯ ಅಭಿವೃದ್ದಿಯಾಗುವುದು.

ಸಾಮಗ್ರಿಗಳು : ಕಾಗದ/ ದಿನ ಪತ್ರಿಕೆ, ವಿವಿಧ ವಸ್ತುಗಳು, ಅಚ್ಚು ಮಾಡಲು ಬಳಸುವ ವಿವಿಧ ವಸ್ತುಗಳು, ಒರಟು 

ಬಟ್ಟೆ. ಇತ್ಯಾದಿ

ವಿಧಾನ : ಬಣ್ಣದಲ್ಲಿ ಅದ್ದಿ ಅಚ್ಚು ತೆಗೆಯಲು ಬೇರೆ ಬೇರೆ ವಸ್ತುಗಳನ್ನು ಸಂಗ್ರಹಿಸುವುದು. ಉದಾ. ಹಳೆಯ 

ಬಾಚಣಿಗೆ, ಟ್ವಯಿನ್ ದಾರ ಅಥವಾ ರಬ್ಬರ್ ಬ್ಯಾಂಡಿನಿ0ದ ಸುತ್ತಿದ ಬ್ಲಾಕ್ಸ್, ಪ್ಲಾಸ್ಟಿಕ್ ಅಲ್ಲದ ಹಳೆಯ ಆಟಿಕೆಗಳು 

ಇತ್ಯಾದಿ. ಹಾಳೆ ವೃತ್ತ ಪತ್ರಿಕೆಯನ್ನು ಪ್ರತಿ ಮಗುವಿಗೂ ನೀಡಿ ವಸ್ತುವನ್ನು ಬಣ್ಣದಲ್ಲಿ ಅದ್ದಿ ಪೇಪರ್ ಮೇಲೆ 

ಅಚ್ಚುತೆಗೆಯಲು ಹೇಳುವುದು.

ವಿವರ: ೨ ಮತ್ತು ೩ ನೇ ತರಗತಿ ಮಕ್ಕಳಿಗೆ ಮೇಲಿನ ಚಟುವಟಿಕೆಯನ್ನೇ ಮಾಡಿಸುವುದು.

    -------------------------------

ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು* 

 ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ

ಆಲಿಸುವುದು ಮತ್ತು ಮಾತನಾಡುವುದು

ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ, 

ಸೂಚನೆಗಳ ಪಾಲನೆ.

ಚಟುವಟಿಕೆ…: ವಸ್ತುವನ್ನು ಊಹಿಸು (ಗುರಿ-೨) 

ಉದ್ದೇಶಗಳು: * ಸೂಕ್ತ ಪದ ರಚಿಸುವುದು.

* ಸಾಂಘಿಕ ಮನೋಭಾವನೆ ಬೆಳೆಸುವುದು.

* ಸೂಚನೆಗಳನ್ನು ಎಚ್ಚರಿಕೆಯಿಂದ ಆಲಿಸಿ ಅನುಸರಿಸುವುದು.

* ಪದ ಸಂಪತ್ತನ್ನು ಅಭಿವೃದ್ಧಿ ಪಡಿಸುವುದು.

ಅಗತ್ಯ ಸಾಮಗ್ರಿಗಳು : ಬ್ಯಾಗ್, ಲಭ್ಯ ವಸ್ತುಗಳು

ವಿಧಾನ : ತರಗತಿಯಲ್ಲಿರುವ ಸೀಮೆ ಸುಣ್ಣ, ರಬ್ಬರ್, ಡಸ್ಟರ್, ಡೈಸ್ ಮೊದಲಾದ ವಸ್ತುಗಳನ್ನು ಒಂದು ಚೀಲದಲ್ಲಿ ಹಾಕಿ.

- ಮಕ್ಕಳನ್ನು ಒಬ್ಬೊಬ್ಬರಾಗಿ ಕರೆದು ಬ್ಯಾಗ್‌ನಲ್ಲಿರುವ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು 

ಸ್ಪರ್ಶಿಸಿ, ಆ ವಸ್ತುಗಳನ್ನು ಊಹಿಸಲು ಹೇಳುವುದು. ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳು ವಸ್ತುವನ್ನು 

ಸರಿಯಾಗಿ ಗುರುತಿಸಲು ಸಹಾಯ ಮಾಡುವುದು.

ಉದಾಹರಣೆಗಾಗಿ:

•     ನೀನು ಸ್ಪರ್ಶಿಸುತ್ತಿರುವ ವಸ್ತು ದೊಡ್ಡದೋ ಚಿಕ್ಕದೋ ?

•     ನೀನು ಸ್ಪರ್ಶಿಸುತ್ತಿರುವ ವಸ್ತುವಿನ ಆಕಾರ ಹೇಗಿದೇ?

•     ಯಾವುದರಿಂದ ಆ ವಸ್ತು ಮಾಡಲ್ಪಟ್ಟಿದೆ?

•     ನೀನು ಸ್ಪರ್ಶಿಸುತ್ತಿರುವ ವಸ್ತು ಗಟ್ಟಿಯಾಗಿದೆಯೇ? ಮೃದುವಾಗಿದೆಯೇ?

•     ನೀನು ಸ್ಪರ್ಶಿಸುತ್ತಿರುವ ವಸ್ತು ಏನಿರಬಹುದು?

- ಮಕ್ಕಳು ಗುರುತಿಸಿದ ವಸ್ತುಗಳ ಕುರಿತು ಅವರೊಂದಿಗೆ ಚರ್ಚಿಸುವುದು.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ತಾವು ಗುರುತಿಸಿದ ವಸ್ತುವಿನ ಬಗ್ಗೆ ೩-೪ ವಾಕ್ಯಗಳಲ್ಲಿ 

ಮಾತನಾಡುವುದು. ೩ನೇ ತರಗತಿಯ ಮಕ್ಕಳು ೨ ರಿಂದ ೩ ನಿಮಿಷ ಆ ವಸ್ತುವಿನ ಬಗ್ಗೆ ಮಾತನಾಡುವುದು.


*ಅರ್ಥಗ್ರಹಿಕೆಯೊಂದಿಗಿನ ಓದು*     

ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು 

ಪರಿಸರದ ಅರಿವು.

ಚಟುವಟಿಕೆ : ಚಿತ್ರ ಸಂಪುಟ (ಗುರಿ-೨) ವಿಷಯ: `ನೆಲದ ಮೇಲೆ ನೋಡಿರುವ ಪ್ರಾಣಿಗಳು/ ಪಕ್ಷಿಗಳು/ ವಸ್ತುಗಳು’

ಉದ್ದೇಶ: ಮಕ್ಕಳು ಗುಂಪಿನಲ್ಲಿ ಕುಳಿತು ತಯಾರಿಸಿದ ಗೋಡೆ ಪತ್ರಿಕೆಗಳನ್ನು ರಚಿಸಿ ಮಂಡಿಸುವುದು

ಅಗತ್ಯ ಸಾಮಗ್ರಿಗಳು : ಚಾರ್ಟ್ಗಳು, ಸ್ವರಚಿತ ಚಿತ್ರಗಳು, ಕ್ರೇಯಾನ್ಸ್, ಅಂಟು, ಸ್ಕೇಲ್, ಟ್ಯಾಗ್

ವಿಧಾನ : ಮಕ್ಕಳು ಗುಂಪುಗಳಲ್ಲಿ ಅಗತ್ಯ ಸಾಮಗ್ರಿ ಬಳಸಿ ನೆಲದ ಮೇಲೆ ನೋಡಿರುವ ಪ್ರಾಣಿಗಳು/ ಪಕ್ಷಿಗಳು/ 

ವಸ್ತುಗಳ ಬಗ್ಗೆ ಗೋಡೆ ಪತ್ರಿಕೆ ತಯಾರಿಸಲು ಅಗತ್ಯ ಸಹಾಯ ನೀಡುವುದು. ರಚಿಸಿದ ಗೋಡೆ ಪತ್ರಿಕೆಯನ್ನು 

ತರಗತಿಯಲ್ಲಿ ಮಂಡಿಸಲು ಅವಕಾಶ ನೀಡುವುದು.

ಸಿದ್ಧವಾದ ಗೋಡೆಪತ್ರಿಕೆಗಳನ್ನು ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.

ಶಿಕ್ಷಕರು ೨ ಮತ್ತು ೩ನೇ ತರಗತಿಯ ಮಕ್ಕಳಿಗೆ ಸಹಾಯ ಒದಗಿಸಿ ಗುಂಪುಗಳಲ್ಲಿ ಯೋಜನಾಕಾರ್ಯಗಳನ್ನು 

ಮಾಡಲು ತಿಳಿಸುವುದು.

         *ಉದ್ದೇಶಿತ ಬರಹ*      

ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲ 

ಚಿಂತನೆ, ಪದಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ : ಹಂಚಿತ ಬರೆಹ (ಗುರಿ : ೨) 

ಉದ್ದೇಶಗಳು:

•     ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.

•     ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.

•     ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.

•     ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು.

•     ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.

ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್

ವಿಧಾನ: ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು. 

ಒಂದು ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬ0ಧಿಸಿದ0ತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ 

ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.

ಸಲಹಾತ್ಮಕ ಸೂಚಿತ ವಿಷಯ:- ಶಾಲಾ ದಿನಚರಿ

ಗಮನಿಸಬೇಕಾದ ಅಂಶಗಳು:

•     ಪ್ರತಿ ವಿಷಯಕ್ಕೆ ಸಂಬ0ಧಿಸಿದ0ತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. ಮಕ್ಕಳೊಂದಿಗೆ 

ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು.

•     ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ 

ಬರೆಯಲು ತಿಳಿಸುವುದು.

•     ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು. ಅಂತಹ ಸನ್ನಿವೇಶದಲ್ಲಿ ಶಿಕ್ಷಕರು 

ಅದನ್ನು ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.

ತರಗತಿವಾರು ವಿವರ: ೧ನೇ ತರಗತಿಯವರು ವಿವರಿಸಿದ ಅಂಶಗಳನ್ನು ೨ನೇ ಹಾಗೂ ೩ನೇ ತರಗತಿಯ ಮಕ್ಕಳು 

ಬರವಣಿಗೆ ಮೂಲಕ ಅಭಿವ್ಯಕ್ತಿಪಡಿಸಲು ತಿಳಿಸುವುದು.

ಬರವಣಿಗೆಯ ಮಾದರಿ:

ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು 

ನೋಡಲು ಅವಕಾಶ ಕಲ್ಪಿಸುವುದು.

ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. 

ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

--------------------------------

 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ - ನಿಧಿಯ ಭೇಟೆ 

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ಸಹಕಾರ ಮನೋಭಾವ ಬೆಳವಣಿಗೆ.

ಸಾಮಗ್ರಿ: ಬಣ್ಣದ ಕಡ್ಡಿಗಳು / ಬಣ್ಣದ ಬಳಪ

ವಿಧಾನ:

• ಮಕ್ಕಳನ್ನು ನಾಲ್ಕು ಸಮನಾದ ಗುಂಪು ಮಾಡಲು ಸೂಚಿಸುವುದು.

• ಪ್ರತಿ ಗುಂಪಿಗೆ ಒಂದೊ0ದು ಬಣ್ಣವನ್ನು ನಿಗದಿಪಡಿಸುವುದು.

• ೧ - ಕೆಂಪು ೨ - ಹಸಿರು ೩ - ನೀಲಿ ೪ - ಹಳದಿ

• ನೆಲದ ಮೇಲೆ ನಾಲ್ಕು ಮನೆಗಳನ್ನು ಬರೆಯುವುದು. ಈ ನಾಲ್ಕು ಮನೆಗಳು ನಾಲ್ಕು ಬಣ್ಣಗಳನ್ನು 

ಪ್ರತಿನಿಧಿಸುವಂತಿರಬೇಕು.

• ಆಟ ಪ್ರಾರಂಭಕ್ಕೂ ಮೊದಲು ಬಣ್ಣದ ಕಡ್ಡಿಗಳು / ವಸ್ತುಗಳನ್ನು ಬೇರೆ ಬೇರೆ ಜಾಗದಲ್ಲಿ ಹರಡಲು 

ಸೂಚಿಸುವುದು.

• ಆಟ ಪ್ರಾರಂಭವಾದಾಗ ಮಕ್ಕಳು ತಮಗೆ ಬಂದ ಬಣ್ಣದ ವಸ್ತುಗಳನ್ನು ಹುಡುಕಿ ತಂದು ತಮ್ಮ ಬಣ್ಣದ 

ಮನೆಯಲ್ಲಿ ಜೋಡಿಸಲು ಸೂಚಿಸುವುದು.

• ಯಾವ ತಂಡ ತಮಗೆ ಕೊಟ್ಟ ಬಣ್ಣದ ಎಲ್ಲ ವಸ್ತುಗಳನ್ನು ಅತಿ ವೇಗದಲ್ಲಿ ಹುಡುಕಿ ತರುತ್ತಾರೋ ಅವರು ವಿಜೇತರು.

ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಇದೇ ಚಟುವಟಿಕೆಯನ್ನು ಮುಂದುವರಿಸುವುದು.

    -------------------------------- 

ಅವಧಿ - 7(40ನಿ)

*ಕಥಾ ಸಮಯ* 

ಶೀರ್ಷಿಕೆ : ಟೋ ಟೋ & ದ ಕ್ಯಾಪ್

ಸಾಮಗ್ರಿಗಳು : ಸಾಹಿತ್ಯ, ಪಪೆಟ್ ಮತ್ತು ಸ್ಕಿನ್

ಉದ್ದೇಶಗಳು :

    ಆಲಿಸುವ ಸಾಮರ್ಥ್ಯ ಬೆಳೆಸುವುದು.

    ಪದಸಂಪತ್ತನ್ನು ಹೆಚ್ಚಿಸುವುದು.

    ಸಂಭಾಷಣೆಯ ಕೌಶಲ ರೂಢಿಸುವುದು.

ವಿಧಾನ :

    ಕಥೆಯನ್ನು ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ಹೇಳುವುದು.

    ಸಿದ್ಧಪಡಿಸಿದ ಪಪೆಟ್ ಮತ್ತು ಸ್ಕಿನ್ನನ್ನು ಬಳಸಿ, ಹಿರಿಯ ವಿದ್ಯಾರ್ಥಿಗಳಿಗೆ ಪಾತ್ರಗಳನ್ನು ಹಂಚಿ 

ಸಂಭಾಷಣೆಯನ್ನು ಶಿಕ್ಷಕರು ಹೇಳಿಕೊಟ್ಟಂತೆ ಕನ್ನಡ ಮತ್ತು ಇಂಗ್ಲೀಷ ಭಾಷೆಯಲ್ಲಿ ಪುನರುಚ್ಚರಿಸಲು ಸಹಕರಿಸಿ.

    ಕಥಾಸಮಯವನ್ನು ಮನೋರಂಜನಾತ್ಮಕವಾಗಿ ಸೃಜಿಸುವುದು.

ಕಥೆಯನ್ನು ಹೇಳಿದ ನಂತರ ಪ್ರಶ್ನೆಗಳನ್ನು ಕೇಳಿ.

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

-----------------------------------

     ಅವಧಿ -8(20ನಿ)

*ಮತ್ತೆ ಸಿಗೋಣ*     

•     ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

•     ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ 

ಹಂಚಿಕೊಳ್ಳಲು ಪ್ರೋತ್ಸಾಹಿಸಿ.

•     ಮರುದಿನ ಮಕ್ಕಳು ಸಂತೋಷದಿAದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, 

ಬೀಳ್ಕೊಡಿ.

ಗಮನಿಸಿ :

    ಕಲಿಕಾ ಫಲಗಳನ್ನು ಪರಶೀಲಿಸಿ, ಪೋಷಕರಿಗೆ ವರದಿ ಮಾಡಲು ದಾಖಲೆಗಳನ್ನು ಸಿದ್ಧಪಡಿಸಿ.

    ನಿಮ್ಮ ಮಕ್ಕಳು ಒಂದನೇ ತರಗತಿಯ ಚಟುವಟಿಕೆಗಳನ್ನು ಕಲಿಯಲು ಸಿದ್ಧರಿದ್ದಾರೆ ಎನ್ನುವುದನ್ನು ಮನದಟ್ಟುಮಾಡಿ.

    ಒಂದನೇ ತರಗತಿಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲು ಸಿದ್ಧರಾಗಿ 

ಮತ್ತು ಪೋಷಕರೊಂದಿಗೆ ಮಾತನಾಡಿ, ಅವರನ್ನೂ ಇವುಗಳಲ್ಲಿ ತೊಡಗಿಸಿ ಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಿ.

http://diethassan.karnataka.gov.in

【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ

 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment