Wednesday, 31 August 2022

ವಿದ್ಯಾಪ್ರವೇಶ ದಿನ 70

 *ವಿದ್ಯಾಪ್ರವೇಶ ದಿನ-70* 

✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)     

ಸಂಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಆನಂದಿಸಿದ ಚಟುವಟಿಕೆ ಯಾವುದು ಎಂದು 

ಮಕ್ಕಳಿಂದ ಕೇಳಿ ತಿಳಿದು ಆ ಚಟುವಟಿಕೆಯ ಮೂಲಕ ಮಕ್ಕಳನ್ನು ತರಗತಿಗೆ ಸ್ವಾಗತಿಸುವುದು.

    *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)   

ದಿನ ೬೭ ರ ಚಟುವಟಿಕೆ: ಇಂಗ್ಲೀಷ್ ಪ್ರಾಸ ಪದ್ಯವನ್ನು ಹಾಡಿಸಿ.

ಒಂದು ಸಾಲನ್ನು ಶಿಕ್ಷಕರು ಇನ್ನೊಂದು ಸಾಲನ್ನು ಮಕ್ಕಳು ಹಾಡಲಿ.

ಚರ್ಚೆಗೆ ಬಳಸಬಹುದಾದ ಪ್ರಶ್ನೆಗಳು :

೧. ರಸ್ತೆಯಲ್ಲಿ ಓಡುವುದು ಒಳ್ಳೆಯದೆ?

೨. ರಸ್ತೆಯಲ್ಲಿ ಓಡಿದರೆ ಏನಾಗಬಹುದು?

೩. ನೀವು ಶಾಲೆಗೆ ಹೇಗೆ ಬರುತ್ತೀರಿ?

೪. ಹಿರಿಯರ ಕೈ ಹಿಡಿದು ರಸ್ತೆ ದಾಟುವ ಬಗ್ಗೆ ಏನು ಯೋಚಿಸುತ್ತೀರಿ?

೫. ನೀವು ಒಬ್ಬಂಟಿಯಾಗಿ ನಡೆಯುವಾಗ ನೀವು ರಸ್ತೆಯನ್ನು ಹೇಗೆ ದಾಟುತ್ತೀರಿ? ಇತ್ಯಾದಿ.

---–------------------------------

 ಅವಧಿ-2 (40ನಿ)

*ನನ್ನ ಸಮಯ*

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.

ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

----------------------------–----–-

    ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ 

ನಿರ್ದೇಶಿತ ಚಟುವಟಿಕೆ)   

ಸಾಮರ್ಥ್ಯ : ಪರಿಸರದ ಅರಿವು-ಪ್ರಕೃತಿ

ಚಟುವಟಿಕೆ : ಪ್ರಾಣಿಗಳ ಹೆಸರಿನ ಮೊದಲ ಅಕ್ಷರ ಹೇಳುವುದು (ಗುರಿ ೩)

ಉದ್ದೇಶ:- ಪ್ರಾಣಿಗಳ ಮೊದಲನೆಯ ಅಕ್ಷರ ಗುರುತಿಸಿ ಹೆಸರನ್ನು ಹೇಳುವುದು.

ಅಗತ್ಯ ಸಾಮಗ್ರಿಗಳು : ವಿವಿಧ ಪ್ರಾಣಿಗಳ ಕನ್ನಡ ಮತ್ತು ಇಂಗ್ಲೀಷ್ ಹೆಸರುಗಳ ಪಟ್ಟಿ

ವಿಧಾನ : ವಿವಿಧ ಪ್ರಾಣಿಗಳ ಹೆಸರು ಇರುವ ಪಟ್ಟಿಯನ್ನು ಕನ್ನಡ ಮತ್ತು ಇಂಗ್ಲೀಷಿನಲ್ಲಿ ನೀಡಿ ಅವುಗಳ ಹೆಸರಿನ 

ಮೊದಲ ಅಕ್ಷರ ಉಚ್ಛರಿಸಲು ಹೇಳುವುದು. ಉದಾ: ಆಡು-ಆ, ಎತ್ತು-ಎ ಅದೇ ರೀತಿ ಸಿ ಫಾರ್ ಕವ್, ಡಿ 

ಫಾರ್ ಡಾಗ್.

೨ನೇ ತರಗತಿ : ಪ್ರಾಣಿಗಳ ಹೆಸರಿನ ಮೊದಲ ಅಕ್ಷರ ನೀಡಿ ಪ್ರಾಣಿಗಳ ಹೆಸರನ್ನು ಕೊಟ್ಟು ಹೊಂದಿಸಲು 

ಹೇಳುವುದು. (ಆ – ಆಕಳು)

೩ನೇ ತರಗತಿ : ಪ್ರಾಣಿಗಳ ಹೆಸರಿನ ಅಕ್ಷರಗಳ ಚಿಕ್ಕ ಚಿಕ್ಕ ಮಿಂಚುಪಟ್ಟಿಗಳು/ಅಕ್ಷರಗಳ ಗುಂಪುಗಳನ್ನು ನೀಡಿ 

ಪ್ರಾಣಿಗಳ ಹೆಸರು ರಚಿಸಲು ತಿಳಿಸುವುದು. 

----------------------–---------


ಅವಧಿ -4    (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳ ಚಟುವಟಿಕೆ)   

ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.

ಆಕಾರಗಳ ಪರಿಕಲ್ಪನೆ.

ಚಟುವಟಿಕೆ: ಅಕ್ಷರಗಳ ಆಕಾರದ ಒಳಗೆ ಬಣ್ಣ ತುಂಬುವುದು (ಗುರಿ - ೧)

ಉದ್ದೇಶಗಳು: •    ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.

    ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.

    ಸ್ಥಳದ ಪರಿಕಲ್ಪನೆಯನ್ನು ತಿಳಿಯುವುದು.

ಸಾಮಗ್ರಿಗಳು : ಬಣ್ಣ, ಹಲ್ಲುಜ್ಜುವ ಬ್ರಶ್, ಬಿಳಿಹಾಳೆ, ವಿವಿಧ ಚಿತ್ರಗಳು[ ಅಕ್ಷರ,ಅಂಕಿ, ಪ್ರಾಣಿ ಮತ್ತು ಪಕ್ಷಿಗಳು]

ವಿಧಾನ : ಮಕ್ಕಳನ್ನು ೩-೪ ರಂತೆ ಗುಂಪು ಮಾಡಿ ಕೂರಿಸುವುದು. ಪ್ರತಿ ಗುಂಪಿಗೂ ಬಣ್ಣ ,ಹಾಳೆ,ಬ್ರಶ್ ಹಾಗೂ 

ವಿವಿಧ ಚಿತ್ರಗಳನ್ನು ನೀಡುವುದು.ಅದರಲ್ಲಿ ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡು ಬಿಳಿಹಾಳೆಯ ಮೇಲೆ 

ಇಡುವುದು.ತನಗೆ ಇಷ್ಟವಾದ ಬಣ್ಣವನ್ನು ಬ್ರಶ್ ನಿಂದ ಅದ್ದಿ ಚಿತ್ರದ ಸುತ್ತಲೂ ಸ್ಪೆçà ಮಾಡುವುದು.ನಂತರ 

ಚಿತ್ರವನ್ನು ತೆಗೆದಾಗ ಅಲ್ಲಿ ಮೂಡಿರುವ ಚಿತ್ರ ನೋಡಿ ಸಂತಸಪಡುತ್ತಾರೆ.

ವಿವರ : ೨ ಮತ್ತು ೩ ನೇ ತರಗತಿಗೆ ಇದೇ ಚಟುವಟಿಕೆಯನ್ನು ಮಾಡಲು ಹೇಳುವುದು.

* ಬಳಸಬೇಕಾದ ಅಭ್ಯಾಸ ಹಾಳೆಗಳು: H.W.-೧೫ ( ೦೧, ೦೨,೦೩ನೇ ತರಗತಿ)

    -------------------------------


ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 *ಆಲಿಸುವುದು ಮತ್ತುಮಾತನಾಡುವುದು*  

ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹಸಂಬAಧ.

ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-೨) ಇಅಐ-೨ (೬೪ನೇ 

ದಿನದಿಂದ ಮುಂದುವರೆದಿದೆ.)

ಉದ್ದೇಶಗಳು:

* ಧ್ವನಿ ಸಂಕೇತಗಳ ಅರಿವು ಮೂಡಿಸುವುದು.

* ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬAಧವನ್ನು ಗ್ರಹಿಸುವುದು.

* ಪದಗಳನ್ನು ಗ್ರಹಿಸಿ ಗುರುತಿಸುವುದು.

* ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.

ಅಗತ್ಯ ಸಾಮಗ್ರಿಗಳು: ಇಲ್ಲ

ಸಲಹಾತ್ಮಕ ವಿಷಯ : ಉಡುಪುಗಳು

ವಿಧಾನ: ಸುಳಿವುಗಳ ಮೂಲಕ ಉಡುಪುಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು ಆಯೋಜಿಸಿ. 

ಉದಾಹರಣೆಗಾಗಿ ಶಿಕ್ಷಕರು ‘ನನ್ನ ಮನಸ್ಸಿನಲ್ಲಿರುವ ಉಡುಪನ್ನು ನಾವು ಚಳಿಗಾಲದಲ್ಲಿ ಹೆಚ್ಚಾಗಿ ಬಳಸುತ್ತೇವೆ. 

ಅದರ ಹೆಸರು ಸ್ವೆ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು ಸ್ವೆಟರ್ ಎಂದು ಗುರುತಿಸುವುದು. 

ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.

ತರಗತಿವಾರು ವಿವರ: ೨ನೇ ಮತ್ತು ೩ನೇ ತರಗತಿ ಮಕ್ಕಳಿಗೆ ಪದಗಳ ಮುಂದುವರೆದ ಭಾಗವಾಗಿ ವಾಕ್ಯಗಳನ್ನು 

ರಚಿಸುವಂತೆ ಹಾಗೂ ಸರಳ ವಾಕ್ಯಗುಚ್ಚಗಳನ್ನು ರಚಿಸುವಂತೆ ಚಟುವಟಿಕೆಗಳನ್ನು ಮುಂದುವರೆಸುವುದು.

ಬಳಸಬೇಕಾದ ಅಭ್ಯಾಸದ ಹಾಳೆಗಳು: ಇಅ-೨೦ (ತರಗತಿ ೧, ೨, ೩)

*ಅರ್ಥಗ್ರಹಿಕೆಯೊಂದಿಗಿನ ಓದು*    

ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅಕ್ಷರಗಳನ್ನು ಗುರುತಿಸುವುದು, ಸೂಕ್ಷö್ಮ ಸ್ನಾಯು ಕೌಶಲಗಳ 

ಅಭಿವೃದ್ಧಿ

ಚಟುವಟಿಕೆ : (ಗುರಿ-೨) ಅಕ್ಷರಗಳನ್ನು ಧ್ವನಿಗಳೊಂದಿಗೆ ಸಂಯೋಜಿಸುವುದು.

ಉದ್ದೇಶ: ಆಕಾರಗಳ ಆಧಾರದ ಮೇಲೆ ಅಕ್ಷರಗಳನ್ನು ಗುರುತಿಸುವುದು ಮತ್ತು ಅಕ್ಷರಗಳನ್ನು ಧ್ವನಿಗಳೊಂದಿಗೆ 

ಸಂಯೋಜಿಸಿ ಓದುವುದು.

ಅಗತ್ಯ ಸಾಮಗ್ರಿಗಳು : ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ, ಅಕ್ಷರಗಳ ಆಕಾರ ಇತ್ಯಾದಿ

ವಿಧಾನ : ಮಕ್ಕಳಿಗೆ ಕಲಿಕೆಯು ಆಸಕ್ತಿದಾಯಕವಾಗಲು ಹಿಂದಿನ ತರಗತಿಯಲ್ಲಿ ಬಳಸಿರುವ ಸಾಮಾಗ್ರಿಗಳನ್ನು 

ಹೊರತು ಪಡಿಸಿ ಸಾಮಾಗ್ರಿಗಳನ್ನು ಬಳಸುವುದು ಮತ್ತು ಹಿಂದಿನ ಅವಧಿಯಲ್ಲಿ ಬಳಸಿರುವ ತರಗತಿಯಲ್ಲಿರುವ 

ವಸ್ತುಗಳ ಹಾಗೂ ಮಕ್ಕಳ ಹೆಸರುಗಳಲ್ಲಿರುವ ಅಕ್ಷರಗಳನ್ನು ಹೊರತು ಪಡಿಸಿ ಗುರುತಿಸಲು ತಿಳಿಸುವುದು.

* ಗುರುತಿಸಿದ ಅಕ್ಷರಗಳನ್ನು ಅದರ ಧ್ವನಿಯೊಂದಿಗೆ ಸಂಯೋಜಿಸುವುದು.

* ವಿವಿಧ ವಸ್ತುಗಳನ್ನು ಬಳಸಿ (ಮಣಿಗಳು, ಗುಂಡಿಗಳು, ಮಣ್ಣು, ಮರಳು, ಕಡ್ಡಿ) ಅಕ್ಷರಗಳ ಆಕಾರಗಳ 

ಕಲ್ಪನೆಯನ್ನು ಮೂಡಿಸುವುದು.

* ಮರಳು ಮತ್ತು ಮಣ್ಣಿನ ಮೇಲೆ ಅಕ್ಷರಗಳನ್ನು ಅಭ್ಯಾಸ ಮಾಡಿಸುವುದು.

* ಅಕ್ಷರಗಳನ್ನು ಬರೆದು, ಅಕ್ಷರಗಳ ಒಳಗೆ ಬಣ್ಣತುಂಬಲು ಹೇಳುವುದು.

* ನೆಲದ ಮೇಲೆ ನೀರಿನಿಂದ ಅಕ್ಷರದ ಆಕಾರಗಳನ್ನು ರಚಿಸುವುದು.

* ಕಾಗದ ಮತ್ತು ಪೆನ್ಸಿಲ್‌ಗಳನ್ನು ಹೊರತುಪಡಿಸಿ ಅಕ್ಷರಗಳನ್ನು ಓದಲು ಅವಕಾಶ ಕಲ್ಪಿಸುವುದು.

* ಸ್ಪಷ್ಟವಾದ ಉಚ್ಛಾರದೊಂದಿಗೆ ಪದಗಳ ವೇಗವನ್ನು ಹೆಚ್ಚಿಸುವುದು.

* ಅಕ್ಷರಗಳ ಧ್ವನಿಗಳಿಗೆ ಒತ್ತು ನೀಡುವುದು. ಪರಿಚಿತ ಪದಗಳೊಂದಿಗೆ ಅವುಗಳನ್ನು ಸಂಬAಧೀಕರಿಸಿ ಹೇಳಿಸುವುದು.

೨ ಮತ್ತು ೩ನೇ ತರಗತಿಗೆ: ಈ ತರಗತಿಯ ಮಕ್ಕಳಿಗೆ ಗುಂಪಿನಲ್ಲಿರುವ ಹಿಂದಿನ ಅವಧಿಯಲ್ಲಿ (೬೨ನೇ ದಿನ) 

ಬಳಸಿದ ಅಕ್ಷರ,ಪದ,ವಾಕ್ಯಗಳನ್ನು ಬಿಟ್ಟು ಇತರೆ ಅಕ್ಷರ,ಪದ,ವಾಕ್ಯಗಳನ್ನು ಗುರುತಿಸುವುದು, ವಿಂಗಡಿಸುವುದು, 

ಮತ್ತು ಓದುವ ಚಟುವಟಿಕೆ ಮಾಡಿಸುವುದು

        *ಉದ್ದೇಶಿತ ಬರಹ*      

ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,

ಚಟುವಟಿಕೆ: ಹವಾಮಾನ ನಕ್ಷೆ (ಗುರಿ-೨) ಇಅW-೧೬ (೬೪ನೇ ದಿನದಿಂದ ಮುಂದುವರೆದಿದೆ)

ಉದ್ದೇಶಗಳು:

    ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.

    ವೀಕ್ಷಣಾ ಕೌಶಲವನ್ನು ಬೆಳೆಸುವುದು.

    ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.

    ಪರಿಸರ ಪ್ರಜ್ಞೆ ಮೂಡಿಸುವುದು.

ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್

ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು.

- ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರದರ್ಶೀಸುವುದು.

- ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಲು ತಿಳಿಸುವುದು.

- ಇದರ ಬಗ್ಗೆ ಮಕ್ಕಳೊಂದಿಗೆ ಚರ್ಚಿಸಿ ಖಾಲಿ ಹಾಳೆಗಳನ್ನ ನೀಡಿ ನಿನ್ನೆ-ಇಂದಿನ ಹವಾಮಾನದ ಚಿತ್ರವನ್ನು 

ಬರೆಯಲು ತಿಳಿಸುವುದು.

- ಮಕ್ಕಳ ಕಾರ್ಯಗಳನ್ನು ತರಗತಿಯಲ್ಲಿ ಪ್ರದರ್ಶಿಸುವುದು.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ದಿನದ ಹವಾಮಾನವನ್ನು ತಮ್ಮ ಪುಸ್ತಕದಲ್ಲಿ ದಾಖಲಿಸುವಂತೆಯೂ 

೩ನೇ ತರಗತಿಯ ಮಕ್ಕಳು ತರಗತಿ ಹವಾಮಾನ ನಕ್ಷೆಯಲ್ಲಿ ದಿನದ ಹವಾಮಾನವನ್ನು ದಾಖಲಿಸಲು ತಿಳಿಸುವುದು.

ಬರವಣಿಗೆಯ ಮಾದರಿ:

ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು 

ನೋಡಲು ಅವಕಾಶ ಕಲ್ಪಿಸುವುದು.

ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ವೆÆದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು 

ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

--------------------------------


    ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ - ರಿಂಗ್ ಮಾಸ್ಟರ್

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ಅನುಕರಣ ಮತ್ತು ಕಲ್ಪನಾ ಶಕ್ತಿ ಬೆಳೆಸುವುದು.

ಸಾಮಗ್ರಿ: ಪ್ರಾಣಿಗಳ ಚಿತ್ರಗಳು

ವಿಧಾನ:

• ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸುವುದು.

• ಶಿಕ್ಷಕರು ಯಾವ ಪ್ರಾಣಿಯ ಹೆಸರು ಹೇಳುವರೋ ಆ ಪ್ರಾಣಿಯಂತೆ ಕೂಗಲು ಸೂಚಿಸುವುದು.

ಉದಾ : ನಾಯಿ ಬೌ ಬೌ

ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಪ್ರಾಣಿಗಳ ಚಿತ್ರವನ್ನು ತೋರಿಸಿ ಆ ಪ್ರಾಣಿಗಳಂತೆ ಕೂಗಲು

ಸೂಚಿಸುವುದು.

    -------------------------------- 

ಅವಧಿ - 7(40ನಿ)

*ಕಥಾ ಸಮಯ*    

ಶೀರ್ಷಿಕೆ : ಟೋ ಟೋ & ದ ಕ್ಯಾಪ್

ಸಾಮಗ್ರಿಗಳು : ಬೆರಳು ಗೊಂಬೆಗಳು

ಉದ್ದೇಶಗಳು :

    ಸೃಜನಶೀ¯ತೆಯನ್ನು ಬೆಳೆಸುವುದು.

    ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.

    ಪದ ಸಂಪತ್ತನ್ನು ಹೆಚ್ಚಿಸುವುದು.

ವಿಧಾನ :

    ಶಿಕ್ಷಕರು ಮಾತೃಭಾಷೆ ಮತ್ತು ಇಂಗ್ಲೀಷ ಭಾಷೆಯಲ್ಲಿ ಕಥೆಯನ್ನು ಅರ್ಥೈಸುವುದು.

    ಕಥೆಯ ಪಾತ್ರಗಳನ್ನು ಶಿಕ್ಷಕರು/ಹಿರಿಯ ವಿದ್ಯಾರ್ಥಿಗಳು ಹೆಸರಿಸುವಾಗ ಕಿರಿಯ ವಿದ್ಯಾರ್ಥಿಗಳು ಪಾತ್ರಗಳ 

ಚಿತ್ರಗಳನ್ನು ತೋರಿಸಲು ಕೇಳುವುದು.

    ಬೆರಳು ಗೊಂಬೆಗಳನ್ನು ಪ್ರದರ್ಶಿಸಿ ಅವುಗಳ ಹೆಸರುಗಳನ್ನು ಒಮ್ಮೆ ಮಾತೃಭಾಷೆಯಲ್ಲಿ ನಂತರ ಇಂಗ್ಲೀಷ ಭಾಷೆಯಲ್ಲಿ 

ಹೇಳಿ ಪರಿಚಯಿಸುವುದು.

    ಶಿಕ್ಷಕರು ಬೆರಳುಗೊಂಬೆಗಳನ್ನು ಪ್ರದರ್ಶಿಸಿ ಸಂಭಾಷಣೆ ರೂಪದಲ್ಲಿ ಹೇಳುವುದು.

ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.

(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)

-----------------------------------

    ಅವಧಿ -8(20ನಿ)

*ಮತ್ತೆ ಸಿಗೋಣ*    

    ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

    ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ 

ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

    ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು 

ಏರ್ಪಡಿಸಿ, ಬೀಳ್ಕೊಡಿ.

ಗಮನಿಸಿ :

    ಕಲಿಕಾ ಫಲಗಳನ್ನು ಪರಶೀಲಿಸಿ, ಪೋಷಕರಿಗೆ ವರದಿ ಮಾಡಲು ದಾಖಲೆಗಳನ್ನು ಸಿದ್ಧಪಡಿಸಿ.

    ನಿಮ್ಮ ಮಕ್ಕಳು ಒಂದನೇ ತರಗತಿಯ ಚಟುವಟಿಕೆಗಳನ್ನು ಕಲಿಯಲು ಸಿದ್ಧರಿದ್ದಾರೆ ಎನ್ನುವುದನ್ನು 

ಮನದಟ್ಟುಮಾಡಿ.

    ಒಂದನೇ ತರಗತಿಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲು 

ಸಿದ್ಧರಾಗಿ ಮತ್ತು ಪೋಷಕರೊಂದಿಗೆ ಮಾತನಾಡಿ, ಅವರನ್ನೂ ಇವುಗಳಲ್ಲಿ ತೊಡಗಿಸಿ ಕೊಳ್ಳಲು ಪೂರ್ವ 

ಸಿದ್ಧತೆ ಮಾಡಿಕೊಳ್ಳಿ.

http://diethassan.karnataka.gov.in


【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ


ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment