*ವಿದ್ಯಾಪ್ರವೇಶ ದಿನ-68*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
ಸಂಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಆನಂದಿಸಿದ ಚಟುವಟಿಕೆ ಯಾವುದು ಎಂದು
ಮಕ್ಕಳಿಂದ ಕೇಳಿ ತಿಳಿದು ಆ ಚಟುವಟಿಕೆಯ ಮೂಲಕ ಮಕ್ಕಳನ್ನು ತರಗತಿಗೆ ಸ್ವಾಗತಿಸುವುದು.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ದಿನ ೬೭ ರ ಚಟುವಟಿಕೆ: ಇಂಗ್ಲೀಷ್ ಪ್ರಾಸ ಪದ್ಯವನ್ನು ಹಾಡಿಸಿ.
---–------------------------------
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.
ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
----------------------------–----–-
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಪರಿಸರದ ಅರಿವು-ಪ್ರಕೃತಿ
ಚಟುವಟಿಕೆ : ಪ್ರಾಣಿಗಳ ಬಗ್ಗೆ ಫಜಲ್ (ಗುರಿ ೩)
ಉದ್ದೇಶ:- ಪ್ರಾಣಿಗಳ ದೇಹದ ಭಾಗಗಳನ್ನು ಅನುಕ್ರಮವಾಗಿ ಜೋಡಿಸುವುದು.
ಅಗತ್ಯ ಸಾಮಗ್ರಿಗಳು : ಪ್ರಾಣಿಗಳ ದೇಹದ ಭಾಗಗಳ ಚಿತ್ರಗಳು (ಉದಾ: ಆನೆ, ಒಂಟೆ, ಸಿಂಹ, ಮೊಸಳೆ ಇತ್ಯಾದಿ)
ವಿಧಾನ : ಮಕ್ಕಳಿಗೆ ಪ್ರಾಣಿಗಳ ದೇಹದ ಭಾಗಗಳ ಚಿತ್ರಗಳನ್ನು ನೀಡಿ ಅನುಕ್ರಮವಾಗಿ ಜೋಡಿಸಲು ಹೇಳುವುದು.
೨ನೇ ತರಗತಿ
ಮಕ್ಕಳು ನೋಡಿರುವ ಯಾವುದಾದರೂ ಒಂದು ಸಾಕು ಪ್ರಾಣಿಯ ದೇಹದ ಭಾಗಗಳನ್ನು ಹೆಸರಿಸಲು ಸೂಚಿಸುವುದು.
೩ನೇ ತರಗತಿ
ತಮಗಿಷ್ಟವಾದ ಸಾಕು ಪ್ರಾಣಿ ಅಥವಾ ಕಾಡುಪ್ರಾಣಿಯ ಚಿತ್ರ ಬಿಡಿಸಿ ಬಣ್ಣ ಹಚ್ಚಲು ಹೇಳುವುದು. )
----------------------–---------
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)
ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.
ಆಕಾರಗಳ ಪರಿಕಲ್ಪನೆ.
ಚಟುವಟಿಕೆ: ಸೀತಾಫಲ, ತಾರಾನಾಥದ ಮೇಲೆ ತಿದ್ದುವುದು. (ಗುರಿ - ೧)
ಉದ್ದೇಶ:
• ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.
• ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
ಸಾಮಗ್ರಿಗಳು : ಸೀತಾಫಲ, ತಾರಾನಾಥ
ವಿಧಾನ : ಮಕ್ಕಳನ್ನು ವೃತ್ತಾಕಾರವಾಗಿ ಕೂರಿಸುವುದು. ಒಂದು ಮಗುವಿನ ಕೈಯಲ್ಲಿ ತಾರಾನಾಥವನ್ನು
ಕೊಡುವುದು.ಆ ಮಗು ಅದರ ಮೇಲೆ ಬೆರಳಾಡಿಸಿದ ನಂತರ ಪಕ್ಕದಲ್ಲಿ ಕುಳಿತ ಮಗುವಿಗೆ ನೀಡುವುದು. ಇದೇ
ರೀತಿ ಒಬ್ಬರಿಂದ ಒಬ್ಬರಿಗೆ ಕೊಡುತ್ತಾ ಎಲ್ಲಾ ಮಕ್ಕಳೂ ತಾರಾನಾಥ ಮತ್ತು ಸೀತಾಫಲದ ಮೇಲೆ ಬೆರಳಾಡಿಸಲು
ಅವಕಾಶ ನೀಡುವುದು.
ವಿವರ: ೨ ಮತ್ತು ೩ ನೇ ತರಗತಿಗೆ ಇದೇ ಚಟುವಟಿಕೆಯನ್ನು ಮಾಡಲು ಹೇಳುವುದು.
-------------------------------
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಧ್ವನಿ ವಿಜ್ಞಾನದ ಅರಿವು, ಪದ ಸಂಪತ್ತಿನ ಅಭಿವೃದ್ಧಿ, ಚಲನಾ ಕೌಶಲಗಳ ಅಭಿವೃದ್ಧಿ.
ಚಟುವಟಿಕೆ: ಪ್ರಾಸ ಪದಗಳನ್ನು ಆಲಿಸುವುದು (ಗುರಿ-೦೨) ಇಅಐ-೪ (೪೪ನೇ ದಿನದಿಂದ ಮುಂದುವರೆದಿದೆ)
ಉದ್ದೇಶಗಳು:
* ಧ್ವನಿ ವಿಜ್ಞಾನದ ಅರಿವನ್ನು ಹೊಂದುವ0ತೆ ಮಾಡುವುದು.
* ಪ್ರಾಸಪದಗಳ ಮೂಲಕ ಪದಸಂಪತ್ತನ್ನು ಹೆಚ್ಚಿಸುವುದು.
* ಸ್ಥೂಲ ಹಾಗೂ ಸೂಕ್ಷö್ಮ ಚಾಲನಾ ಕೌಶಲಗಳನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು:- ಕರಿ ಹಲಗೆ, ಸೀಮೆ ಸುಣ್ಣ
ವಿಧಾನ:
* ಪ್ರಾಸ ಪ್ರಾಸಪದಗಳ ವಿವಿಧ ಗುಂಪುಗಳನ್ನು ಸಿದ್ಧಪಡಿಸಿಕೊಳ್ಳುವುದು.
* ಮಕ್ಕಳನ್ನು ವಿವಿಧ ಗುಂಪುಗಳನ್ನಾಗಿ ಮಾಡಿ ಪ್ರತಿ ಗುಂಪಿಗೆ ಒಂದೊ0ದು ಪ್ರಾಸ ಪದಗಳ ಗುಂಪನ್ನು
ನೀಡುವುದು.
* ಪ್ರಾಸ ಪದಗಳನ್ನು ಒಳಗೊಂಡ0ತೆ ಶಿಕ್ಷಕರ ಸಹಾಯದಿಂದ ವಿವಿಧ ವಾಕ್ಯಗಳನ್ನು ರಚಿಸುವುದು.
* ಪ್ರಾಸ ಪದಗಳ ಗುಂಪಿನ ಪದಗಳನ್ನು ಬಳಸಿ ಸರಳ ಪ್ರಾಸ ಗೀತೆಯನ್ನು ಶಿಕ್ಷಕರ ಸಹಾಯದಿಂದ ರಚಿಸುವುದು.
* ಸ್ವತಂತ್ರವಾಗಿ ಸರಳ ಪ್ರಾಸಗೀತೆಯನ್ನು ರಚಿಸುವುದು.
ತರಗತಿವಾರು ವಿವರ: ೨ನೇ ತರಗತಿ ಮಕ್ಕಳು ಸ್ವತಂತ್ರವಾಗಿ ಸರಳ ಪ್ರಾಸಗೀತೆ ರಚಿಸುವುದು.. ೩ನೇ ತರಗತಿ ಮಕ್ಕಳು
ಸ್ವತಂತ್ರವಾಗಿ ಸರಳ ಪ್ರಾಸಗೀತೆ ರಚಿಸುವುದು. (೬೮ನೇ ದಿನಕ್ಕೆ ಮುಂದುವರೆದಿದೆ
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಧ್ವನಿ ಸಂಕೇತಗಳನ್ನು ಹೊಂದಿಸುವುದು, ಪದ ಗುರ್ತಿಸುವುದು, ಅಕ್ಷರಗಳನ್ನು ಗುರ್ತಿಸುವುದು, ಪದ
ಸಂಪತ್ತಿನ ಅಭಿವೃದ್ಧಿ
ಚಟುವಟಿಕೆ : ಅರ್ಥಪೂರ್ಣ ಪದ ರಚಿಸುವುದು (ಗುರಿ-೨)
ಉದ್ದೇಶ : ಅಕ್ಷರಗಳನ್ನು/ ಧ್ವನಿಗಳನ್ನು ಜೋಡಿಸುವ ಮೂಲಕ ಪದಗಳನ್ನು ರಚಿಸುವರು.
ಅಗತ್ಯ ಸಾಮಗ್ರಿಗಳು : ಮಕ್ಕಳ ಹೆಸರಿನಲ್ಲಿರುವ ಅಕ್ಷರಗಳ ಮಿಂಚುಪಟ್ಟಿಗಳು.
ವಿಧಾನ :
* ಮಕ್ಕಳನ್ನು ಇಬ್ಬರಂತೆ ಗುಂಪು ಮಾಡುವುದು.
* ಅವರವರ ಹೆಸರಿನ ಅಕ್ಷರಗಳ ಮಿಂಚು ಪಟಿಗಳನ್ನು ಮಕ್ಕಳಿಗೆ ನೀಡುವುದು.
* ಅಕ್ಷರಗಳ ಮಿಂಚುಪಟ್ಟಿ ಬಳಸಿ ಅವರ ಹೆಸರನ್ನು ಜೋಡಿಸಲು ಮಾರ್ಗದರ್ಶಿಸುವುದು.
* ಇದೇ ಚಟುವಟಿಕೆಯನ್ನು ಪರಿಚಿತ ಹಾಡು/ ಕಥೆ/ ಪ್ರಾಸಗೀತೆಗಳಲ್ಲಿನ ಪದಗಳೊಂದಿಗೆ ಚಟುವಟಿಕೆಯನ್ನು
ಕೈಗೊಳ್ಳುವುದು.
೨ ಮತ್ತು ೩ನೇ ತರಗತಿ : ಪದಗಳ ಮಿಂಚುಪಟ್ಟಿಗಳನ್ನು ತಯಾರಿಸಿಕೊಂಡು ಸರಳ ವಾಕ್ಯಗಳನ್ನು ರಚಿಸುವ ಮೂಲಕ
ಚಟುವಟಿಕೆಯನ್ನು ನಿರ್ವಹಿಸುವುದು.
*ಉದ್ದೇಶಿತ ಬರಹ*
ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲ
ಚಿಂತನೆ, ಪದಸಂಪತ್ತಿನ ಅಭಿವೃದ್ಧಿ.
ಚಟುವಟಿಕೆ ಸಂಖ್ಯೆ : ಹಂಚಿತ ಬರೆಹ (ಗುರಿ : ೨) ಇಅW-೮
ಉದ್ದೇಶಗಳು:
• ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.
• ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.
• ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.
• ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು.
• ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.
ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್
ವಿಧಾನ: ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು.
ಒಂದು ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬ0ಧಿಸಿದ0ತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ
ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.
ಸಲಹಾತ್ಮಕ ಸೂಚಿತ ವಿಷಯ:- ನಮ್ಮ ಆಟಿಕೆಗಳು
ಗಮನಿಸಬೇಕಾದ ಅಂಶಗಳು:
• ಪ್ರತಿ ವಿಷಯಕ್ಕೆ ಸಂಬ0ಧಿಸಿದ0ತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. ಮಕ್ಕಳೊಂದಿಗೆ
ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು.
• ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ
ಬರೆಯಲು ತಿಳಿಸುವುದು.
• ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು. ಅಂತಹ ಸನ್ನಿವೇಶದಲ್ಲಿ ಶಿಕ್ಷಕರು
ಅದನ್ನು ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.
ತರಗತಿವಾರು ವಿವರ: ೧ನೇ ತರಗತಿಯವರು ವಿವರಿಸಿದ ಅಂಶಗಳನ್ನು ೨ನೇ ಹಾಗೂ ೩ನೇ ತರಗತಿಯ ಮಕ್ಕಳು
ಬರವಣಿಗೆ ಮೂಲಕ ಅಭಿವ್ಯಕ್ತಿಪಡಿಸಲು ತಿಳಿಸುವುದು.
ಬರವಣಿಗೆಯ
ಮಾದರಿ:
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು
ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು
ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
--------------------------------
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ಟ್ರಾಫಿಕ್ ಲೈಟ್ಸ್ (ಸಂಚಾರಿ ದೀಪ)
ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ, ಸೂಚನೆ ಮತ್ತೆ ಆದೇಶಗಳ ಪಾಲನೆ.
ಬೇಕಾಗುವ ಸಾಮಗ್ರಿ: ಸಂಚಾರಿ ದೀಪದ ಸಂಕೇತಕ್ಕೆ ಬಣ್ಣಗಳು, ಮಾರ್ಕರ್
ವಿಧಾನ:
• ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಲು ಸೂಚಿಸುವುದು.
• ಸಂಚಾರಿ ದೀಪದ ಆಟದ ನಿಯಮಗಳನ್ನು ಪರಿಚಯಿಸುವುದು.
• ಮಕ್ಕಳು ವೃತ್ತಾಕಾರದಲ್ಲಿ ಚಲಿಸುವಂತೆ ಸೂಚಿಸುವುದು.
• ಶಿಕ್ಷಕರು ವೃತ್ತದ ಮಧ್ಯಭಾಗದಲ್ಲಿ ನಿಂತು ಕೆಂಪು ಬಣ್ಣ ಎಂದು ಹೇಳಿದಾಗ ನಿಲ್ಲಲು ಸೂಚಿಸುವುದು.
• ಹಳದಿ ಬಣ್ಣ ಎಂದು ಹೇಳಿದಾಗ ಚಲಿಸಲು ಸಿದ್ಧರಾದಂತೆ ನಿಲ್ಲಲು ಸೂಚಿಸುವುದು.
• ಹಸಿರು ಬಣ್ಣ ಎಂದು ಹೇಳಿದಾಗ ಚಲಿಸಲು ಸೂಚಿಸುವುದು.
ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಇದೇ ಚಟುವಟಿಕೆಯನ್ನು ಮುಂದುವರಿಸುವುದು.
--------------------------------
ಅವಧಿ - 7(40ನಿ)
*ಕಥಾ ಸಮಯ*
ವಿಧಾನ :
ಮೊದಲ ದಿನದ ಉದ್ದೇಶದಂತೆ ಕಥಾ ಸಮಯವು ಮುಂದುವರೆಯುತ್ತದೆ.
ಮಕ್ಕಳ ನೆರವು ಪಡೆದುಕೊಳ್ಳುವುದರ ಮೂಲಕ ಕಥೆಯನ್ನು ಪೂರ್ಣ ಗೊಳಿಸುವುದು.
ಉದಾ : ಕ್ಯಾಪ್ ಯಾರ ಬಳಿ ಇತ್ತು? ಬೆಕ್ಕು ಎಲ್ಲಿಗೆ ಹೋಯಿತು? ಇತ್ಯಾದಿ
ಕಥೆಯನ್ನು ಹೇಳಿದ ನಂತರ ಕನ್ನಡದಲ್ಲಿ ಸರಳ ಪ್ರಶ್ನೆಗಳನ್ನು ಕೇಳಿ.
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿ ಕೊಳ್ಳುವುದು)
-----------------------------------
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ
ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ,
ಬೀಳ್ಕೊಡಿ.
ಗಮನಿಸಿ :
ಕಲಿಕಾ ಫಲಗಳನ್ನು ಪರಶೀಲಿಸಿ, ಪೋಷಕರಿಗೆ ವರದಿ ಮಾಡಲು ದಾಖಲೆಗಳನ್ನು ಸಿದ್ಧಪಡಿಸಿ.
ನಿಮ್ಮ ಮಕ್ಕಳು ಒಂದನೇ ತರಗತಿಯ ಚಟುವಟಿಕೆಗಳನ್ನು ಕಲಿಯಲು ಸಿದ್ಧರಿದ್ದಾರೆ ಎನ್ನುವುದನ್ನು
ಮನದಟ್ಟುಮಾಡಿ.
ಒಂದನೇ ತರಗತಿಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲು
ಸಿದ್ಧರಾಗಿ ಮತ್ತು ಪೋಷಕರೊಂದಿಗೆ ಮಾತನಾಡಿ, ಅವರನ್ನೂ ಇವುಗಳಲ್ಲಿ ತೊಡಗಿಸಿ ಕೊಳ್ಳಲು ಪೂರ್ವ
ಸಿದ್ಧತೆ ಮಾಡಿಕೊಳ್ಳಿ.
http://diethassan.karnataka.gov.in
【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment