*ವಿದ್ಯಾಪ್ರವೇಶ ದಿನ-67*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
ಸಂಪೂರ್ಣ ವಿದ್ಯಾಪ್ರವೇಶ ಕಾರ್ಯಕ್ರಮದಲ್ಲಿ ಮಕ್ಕಳು ಹೆಚ್ಚು ಆನಂದಿಸಿದ ಚಟುವಟಿಕೆ ಯಾವುದು ಎಂದು
ಮಕ್ಕಳಿಂದ ಕೇಳಿ ತಿಳಿದು ಆ ಚಟುವಟಿಕೆಯ ಮೂಲಕ ಮಕ್ಕಳನ್ನು ತರಗತಿಗೆ ಸ್ವಾಗತಿಸುವುದು.
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕಚಟುವಟಿಕೆ)
ಚಟುವಟಿಕೆ: ಸಂಕೇತಗಳನ್ನು ತಿಳಿಯೋಣ
ಸಾಮಗ್ರಿಗಳು: ಟ್ರಾಫಿಕ್ ಸಿಗ್ನಲ್ ಚಿತ್ರಗಳು
Red say stop
Green say go
Yellow say wait
Even if your are late
ವಿಧಾನ:
ಮಕ್ಕಳನ್ನು ವೃತ್ತಾಕಾರದಲ್ಲಿ ನಿಲ್ಲಿಸಿ.
ಈ ಮೇಲಿನ ಪ್ರಾಸವನ್ನು ಹಾಡಿಸಿ.
ನಂತರ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ ಮತ್ತು ಅವರನ್ನು ಚರ್ಚೆಯಲ್ಲಿ ತೊಡಗಿಸಿ ಮತ್ತು ಟ್ರಾಫಿಕ್ ಸಿಗ್ನಲ್
ಗಳ ಕುರಿತು ಪ್ರಶ್ನೆಗಳನ್ನು ಕೇಳಿ ಉತ್ತರಿಸಲು ಅವರನ್ನು ಪ್ರೋತ್ಸಾಹಿಸಿ.
---–------------------------------
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.
ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
----------------------------–----–-
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಪರಿಸರದ ಅರಿವು-ಪ್ರಕೃತಿ
ಚಟುವಟಿಕೆ : ಪ್ರಾಣಿಗಳ ಬಗ್ಗೆ ಮಾತಾಡೋಣ (ಗುರಿ ೩)
ಉದ್ದೇಶ:- ಪ್ರಾಣಿಗಳ ಮಹತ್ವ ತಿಳಿಯುವುದು.
ಅಗತ್ಯ ಸಾಮಗ್ರಿಗಳು : ವಿವಿಧ ಪ್ರಾಣಿಗಳ ಪೇಪರ್ ಮುಖವಾಡಗಳು
ವಿಧಾನ : ಮಕ್ಕಳು ತಮ್ಮ ಸುತ್ತಮುತ್ತ ಕಾಣುವ ಪ್ರಾಣಿಗಳ ಬಗ್ಗೆ ಮಾತಾಡಲು ಹೇಳುವುದು. ಹಾಲನ್ನು ಎಲ್ಲಿಂದ
ಪಡೆಯುತ್ತೇವೆ ಎಂಬ ಪ್ರಶ್ನೆ ಕೇಳುವುದು, ಬೆಚ್ಚಗಿನ ಬಟ್ಟೆಗಳನ್ನು ತಯಾರಿಸಲು ನಾವು ಉಣ್ಣೆಯನ್ನು ಎಲ್ಲಿಂದ
ಪಡೆಯುತ್ತೇವೆ? ಉಳುಮೆಗೆ ಬಳಸುವ ಪ್ರಾಣಿಗಳಾವುವು? ಈ ರೀತಿ ಪ್ರಶ್ನೆ ಕೇಳುವುದರ ಮೂಲಕ ನಮಗೆ
ಉಪಯುಕ್ತ ಸಾಕುಪ್ರಾಣಿಗಳ ಬಗ್ಗೆ ಮಾತಾಡಲು ಪ್ರೋತ್ಸಾಹಿಸುವುದು. ಪ್ರಾಣಿಗಳು ನಮ್ಮೊಂದಿಗೆ ಪರಿಸರವನ್ನು
ಹಂಚಿಕೊ0ಡಿವೆ ಮತ್ತು ಅವುಗಳ ಬಗ್ಗೆ ಕಾಳಜಿ ವಹಿಸಬೇಕೆಂದು ಚರ್ಚಿಸುವುದು. ನಾವು ಪ್ರಾಣಿಗಳಿಗೆ ದಯೆ
ತೋರಬೇಕು ಮತ್ತು ಸಾಧ್ಯವಾದಾಗಲೆಲ್ಲ ಅವುಗಳಿಗೆ ಆಹಾರ ನೀಡಲು ಸೂಚಿಸುವುದು.
೨ನೇ ತರಗತಿ : ನಿಮ್ಮ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಹೆಸರನ್ನು ಹೇಳಿರಿ ಎಂದು ಕೇಳುವುದು.
೩ನೇ ತರಗತಿ : ಮಕ್ಕಳು ನೋಡಿರುವ ಯಾವುದಾದರೂ ಒಂದು ಪ್ರಾಣಿಯ ಕುರಿತು ಮಾತನಾಡಲು ತಿಳಿಸುವುದು.
----------------------–---------
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)
ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ.
ವಿನ್ಯಾಸಗಳ ರಚನೆ.
ಚಟುವಟಿಕೆ : ಬಟ್ಟಲು ಮತ್ತು ಕಾಗದದ ಲೋಟಗಳಿಂದ ಕಟ್ಟಡ. (ಗುರಿ - ೧)
ಉದ್ದೇಶಗಳು:
• ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.
• ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುವುದು.
• ಆಕಾರ ಮತ್ತು ಗಾತ್ರವನ್ನು ಗುರುತಿಸುವುದರ ಜೊತೆಗೆ ವಿವಿಧ ವಿನ್ಯಾಸಗಳನ್ನು ರಚಿಸುವುದು.
• ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗುವುದು.
ಸಾಮಗ್ರಿಗಳು : ಬಟ್ಟಲುಗಳು, ಕಟ್ಟಿಗೆಯ ಬ್ಲಾಕ್ಸಗಳು ಅಥವಾ ಪೇಪರ್ ಕಪ್‌ಗಳು.
ವಿಧಾನ : ೩-೪ ಮಕ್ಕಳನ್ನು ಒಂದು ಗುಂಪಿನಲ್ಲಿ ಕೊರಿಸುವುದು. ಅವರಿಗೆ ಬಟ್ಟಲುಗಳು ಅಥವಾ ಪೇಪರ್
ಕಪ್‌ಗಳನ್ನು ನೀಡುವುದು. ಸುಗಮಕಾರರು ಮಾದರಿಯಾಗಿ ಸೇತುವೆ, ಕಟ್ಟಡವನ್ನು ಮಾಡಿ ತೋರಿಸುವುದು,
ಅದರಂತೆ ಮಕ್ಕಳಿಗೆ ಮಾಡಲು ಹೇಳುವುದು.
ವಿವರ: ೨ ಮತ್ತು ೩ ನೇ ತರಗತಿಗೆ ಮೇಲ್ಕಂಡ ಚಟುವಟಿಕೆಯನ್ನು ಮಾಡಿಸುವುದು.
-------------------------------
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ: ಧ್ವನಿ ಸಂಕೇತಗಳ ಸಂಯೋಜನೆ, ಅವಧಾನ ಮತ್ತು ಆಲಿಸುವುದು.
ಚಟುವಟಿಕೆ : ಮಧ್ಯದ ಅಕ್ಷರ ಗುರ್ತಿಸು (ಅ ರ ಸ) (ಗುರಿ-೨) ಇಅಐ-೨೧
ಉದ್ದೇಶಗಳು :
* ಪದಗಳಲ್ಲಿಯ ಅಕ್ಷರಗಳ ಅಕ್ಷರ–ಧ್ವನಿ ಸಹಸಂಬAಧ ಗುರುತಿಸುವುದು.
* ಗಮನವಿಟ್ಟು ಆಲಿಸಿ ಅಕ್ಷರ-ಧ್ವನಿ ಸಹಸಂಬAಧ ಅರ್ಥೈಸಿಕೊಳ್ಳುವುದು.
ಅಗತ್ಯ ಸಾಮಗ್ರಿಗಳು : ಕಪ್ಪು ಹಲಗೆ, ಮಿಂಚುಪಟ್ಟಿ
ವಿಧಾನ: ಮಿಂಚುಪಟ್ಟಿಯಲ್ಲಿ ಬರೆದ ಪದಗಳನ್ನು ಪ್ರದರ್ಶಿಸುವುದು. ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸಿ,
ಸ್ವರಾಕ್ಷರಗಳನ್ನು ಪರಿಚಯಿಸುವುದು. ಪದದ ಮಧ್ಯದಲ್ಲಿರುವ ಅಕ್ಷರವನ್ನು ಗುರುತಿಸಲು ತಿಳಿಸುವುದು.
ಕಪ್ಪುಹಲಗೆಯಲ್ಲಿ ಬರೆಯುವುದು. ಮಕ್ಕಳಿಂದ ಹೇಳಿಸುವುದು. ಅಕ್ಷರ ಮತ್ತು ಶಬ್ದಗಳನ್ನು ಸಂಯೋಜಿಸುವುದು
ಮತ್ತು ಗುರ್ತಿಸುವುದು.
ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ಗುರುತಿಸಿದ ಅಕ್ಷರ ಮಧ್ಯದಲ್ಲಿ ಬರುವಂತೆ ವಿವಿಧ ಪದಗಳನ್ನು
ಗುರುತಿಸುವುದು. ೩ನೇ ತರಗತಿಯ ಮಕ್ಕಳು ತಾವೇ ವಿವಿಧ ಪದಗಳಲ್ಲಿ ಮಧ್ಯದ ಅಕ್ಷರ ಗುರುತಿಸುವ ಚಟುವಟಿಕೆ
ರೂಪಿಸುವುದು.
ಬಳಸಬೇಕಾದ ಅಭ್ಯಾಸದ ಹಾಳೆಗಳು: EC-೧೮ (ತರಗತಿ ೧, ೨, ೩)
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಮುದ್ರಿತ ಪಠ್ಯದ ಅರಿವು, ಪದ ಗುರುತಿಸುವಿಕೆ, ಅರ್ಥಗ್ರಹಿಕೆ, ಪದ ಸಂಪತ್ತಿನ ಬೆಳವಣಿಗೆ ಮತ್ತು
ಪರಿಸರದ ಅರಿವು.
ಚಟುವಟಿಕೆ : • ಚಿತ್ರಸಂಪುಟ (ಗುರಿ-೨) ವಿಷಯ: `ನೆಲದ ಮೇಲೆ ನೋಡಿರುವ ಪ್ರಾಣಿಗಳು/ ಪಕ್ಷಿಗಳು/
ವಸ್ತುಗಳು’
ಉದ್ದೇಶಗಳು: • ಮಕ್ಕಳು ಚಿತ್ರ ಓದುವುದು ಮತ್ತು ಚರ್ಚಿಸಿ ಅರ್ಥ ಮಾಡಿಕೊಳ್ಳುವುದು ಮತ್ತು ವೈಯಕ್ತಿಕ ಚಿತ್ರ
ಸಂಪುಟಗಳನ್ನು ರಚಿಸುವರು.
• ಅನುಭವ ಮತ್ತು ಪೂರ್ವಜ್ಞಾನದ ಆಧಾರದ ಮೇಲೆ ಊಹಿಸುವುದು.
ಅಗತ್ಯ ಸಾಮಗ್ರಿಗಳು : ನೆಲದ ಮೇಲೆ ನೋಡಿರುವ ಪ್ರಾಣಿಗಳು/ ಪಕ್ಷಿಗಳು/ ವಸ್ತುಗಳಿಗೆ ಸಂಬ0ಧಿಸಿದ ರಚಿಸಿದ
ಚಿತ್ರಗಳು
ವಿಧಾನ : ಹಿಂದೆ ರಚಿಸಿದ ಚಿತ್ರಗಳನ್ನು ಬಳಸಿ ಮಾತನಾಡಲು ಅವಕಾಶ ಕಲ್ಪಿಸುವುದು.
ವೈಯಕ್ತಿಕಚಿತ್ರಸಂಪುಟ: ಮಕ್ಕಳು ರಚಿಸಿದ ಚಿತ್ರಗಳನ್ನು ತಮ್ಮ ಕೃತಿ ಸಂಪುಟದಲ್ಲಿ ಸಂಗ್ರಹಿಸಲು ತಿಳಿಸುವುದು ಮತ್ತು
ಅವುಗಳನ್ನು ಮುಂದಿನ ೭೧ನೇ ದಿನದಲ್ಲಿ ಚರ್ಚಿಸುವುದಾಗಿ ತಿಳಿಸುವುದು.
ಶಿಕ್ಷಕರು ೨ ಮತ್ತು ೩ನೇ ತರಗತಿಯ ಮಕ್ಕಳು ೧ನೇ ತರಗತಿಯ ಮಕ್ಕಳೊಂದಿಗೆ ಪರಸ್ಪರ ಸಹಾಯ ಒದಗಿಸಲು
ಸೂಚಿಸುವುದು ಮತ್ತು ವಿಷಯದ ವಿಸ್ತಾರವನ್ನು ಚರ್ಚಿಸುವಾಗ ಎಲ್ಲಾ ಮಕ್ಕಳೂ ಅಭಿವ್ಯಕ್ತಿಸುವುದನ್ನು
ಖಾತ್ರಿಪಡಿಕೊಳ್ಳುವುದು. ಜೊತೆಗೆ ೨ನೇ ಮತ್ತು ೩ನೇ ತರಗತಿಯ ಮಕ್ಕಳಿಗೂ ಸ್ವತಂತ್ರವಾಗಿ ಚಿತ್ರ ಬರೆಯಲು ಮತ್ತು
ಬಣ್ಣ ಹಾಕಲು ಅವಕಾಶ ನೀಡಿ ಅವರೂ ಸಹ ತಮ್ಮ ಕೃತಿಸಂಪುಟಗಳಲ್ಲಿ ಸಂಗ್ರಹಿಸಲು ಅವಕಾಶ ನೀಡುವುದು.
(ಸದರಿ ಚಟುವಟಿಕೆಯ ಮುಂದುವರೆದ ಭಾಗವು ೭೧ ನೇ ದಿನದಲ್ಲಿ ಮುಂದುವರೆಯುವುದು
*ಉದ್ದೇಶಿತ ಬರಹ*
ಸಾಮರ್ಥ್ಯ: ಉದ್ದೇಶಿತ ಬರವಣಿಗೆ, ಸೃಜನಶೀಲ ಚಿಂತನೆ, ಪದಸಂಪತ್ತಿನ ಅಭಿವೃದ್ಧಿ, ಆಲಿಸಿ ಅರ್ಥ
ಮಾಡಿಕೊಳ್ಳುವುದು, ಪರಿಸರದ ಅರಿವು.
ಚಟುವಟಿಕೆ: ಪಟ್ಟಿ ಮಾಡೋಣ (ಗುರಿ-೨) ಇಅW-೧೦
ಉದ್ದೇಶಗಳು:
• ಉದ್ದೇಶಕ್ಕನುಸಾರವಾಗಿ ಬರವಣಿಗೆ ಮಾಡಲು ಅವಕಾಶ ನೀಡುವುದು.
• ಸೃಜನಶೀಲ ಚಿಂತನೆಯನ್ನು ಬೆಳೆಸುವುದು.
• ಪರಿಸರದ ಅರಿವು ಮೂಡಿಸುವುದು.
• ಪದಸಂಪತ್ತನ್ನು ಹೆಚ್ಚಿಸುವುದು.
• ಸೂಚನೆಗಳನ್ನು ಆಲಿಸಿ ಅರ್ಥಮಾಡಿಕೊಳ್ಳುವುದು.
ಅಗತ್ಯ ಸಾಮಗ್ರಿಗಳು: ನೋಟ್ ಪುಸ್ತಕ, ಕಾಗದ, ಕ್ರೇಯಾನ್ಸ್
ವಿಧಾನ : ಮಕ್ಕಳ ಪದಸಂಪತ್ತನ್ನು ಹೆಚ್ಚಿಸಲು ಹಾಗೂ ಉದ್ದೇಶಿತ ಬರವಣಿಗೆಗೆ ಅವಕಾಶ ಕಲ್ಪಿಸಲು, ವಿವಿಧ
ವಿಷಯಗಳಿಗೆ ಸಂಬ0ಧಿಸಿದ ಪದಗಳನ್ನು ಪಟ್ಟಿಮಾಡಲು ತಿಳಿಸಿ.
ಸೂಚಿತ ವಿಷಯಗಳು:
• ನಾವು ನೋಡಿದ ವಸ್ತುಗಳು
• ಮಾರುಕಟ್ಟೆಯಲ್ಲಿ ಖರೀದಿಸುವ ವಸ್ತುಗಳು
• ಬಣ್ಣಗಳ ಹೆಸರುಗಳು
• ನಗರ/ ಹಳ್ಳಿಯಲ್ಲಿ ಕಂಡುಬರುವ ಪ್ರಾಣಿಗಳು, ಪಕ್ಷಿಗಳು ಇತ್ಯಾದಿ
ಇಡೀ ತರಗತಿಯನ್ನು ಒಳಗೊಂಡ0ತೆ ಒಂದು ಚಾರ್ಟ್/ ಪೇಪರ್‌ನಲ್ಲಿ ಪಟ್ಟಿ ಮಾಡುವ ಚಟುವಟಿಕೆಯನ್ನು
ಆಯೋಜಿಸಬಹುದು. ಈ ಚಾರ್ಟ್ನಲ್ಲಿ ಬಳಸಬಹುದಾದ ಸಾಮಾನ್ಯ ಪದಗಳ ಪಟ್ಟಿಯನ್ನು ಶಿಕ್ಷಕರೇ ಸಿದ್ಧಪಡಿಸಿ,
ಮಕ್ಕಳು ಇವುಗಳನ್ನು ನೋಡಲು ಹಾಗೂ ಓದಲು ಸಹಾಯಕವಾಗುವಂತೆ ತರಗತಿ ಕೋಣೆಯಲ್ಲಿ ಪ್ರದರ್ಶಿಸುವುದು.
ಹೆಚ್ಚುವರಿಯಾಗಿ ಬಣ್ಣಗಳ ಪಟ್ಟಿ, ಮಕ್ಕಳ ಹೆಸರುಗಳ ಪಟ್ಟಿ, ಪಕ್ಷಿಗಳ ಪಟ್ಟಿ ಇತ್ಯಾದಿ ಪಟ್ಟಿಗಳನ್ನು ತಯಾರಿಸಬಹುದು.
ತರಗತಿವಾರು ವಿವರ: ೧ನೇ ತರಗತಿಯವರು ತಯಾರಿಸಿರುವ ಪಟ್ಟಿಗೆ ೨ನೇ ತರಗತಿಯ ಮಕ್ಕಳು ಹೆಚ್ಚುವರಿಯಾಗಿ
ಪದಗಳನ್ನು ಸೇರಿಸಲಿ. ೩ನೇ ತರಗತಿಯವರು ಪಟ್ಟಿಯಲ್ಲಿರುವ ಪದಗಳಿಗೆ ಸ್ವಂತ ವಾಕ್ಯಗಳನ್ನು ರಚಿಸಲು ಅವಕಾಶ
ಮಾಡಿಕೊಡಿ.
ಬರವಣಿಗೆಯ ಮಾದರಿ:
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು
ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು
ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
--------------------------------
ಅವಧಿ - 6(40ನಿ)
*ಹೊರಾಂಗಣ ಆಟಗಳು*
ಚಟುವಟಿಕೆ : ಹುಲಿ ಮತ್ತು ಹಸು
ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ,
ಬೇಕಾಗುವ ಸಾಮಗ್ರಿ: ಹಸು ಹುಲಿ ಮುಖವಾಡ
ವಿಧಾನ:
• ಮಕ್ಕಳನ್ನು ಆಟದ ಮೈದಾನಕ್ಕೆ ಕರೆದುಕೊಂಡು ಹೋಗುವುದು.
• ಒಂದು ವೃತ್ತದಲ್ಲಿ ಮಕ್ಕಳನ್ನು ನಿಲ್ಲಲು ಸೂಚಿಸುವುದು.
• ಒಂದು ಮಗುವಿಗೆ ಹಸುವಿನ ಮುಖವಾಡ ಹಾಗು ಮತ್ತೊಂದು ಮಗುವಿಗೆ ಹುಲಿಯ ಮುಖವಾಡ ವನ್ನು
ನೀಡುವುದು.
• ಉಳಿದ ಮಕ್ಕಳು ವೃತಾಕಾರದಲ್ಲಿ ಕೈ ಕೈ ಜೋಡಿಸಿ ನಿಲ್ಲಲು ಸೂಚಿಸುವುದು .
• ಹಸುವಿನ ಮುಖವಾಡ ಧರಿಸಿದ ಮಗು ವೃತ್ತದಲ್ಲಿ ನಿಲ್ಲುತ್ತದೆ ಮತ್ತು ಹುಲಿ ಮುಖವಾಡ ಧರಿಸಿದ ಮಗು
ವೃತ್ತದ ಹೊರಗೆ ಇರಬೇಕು ಎಂದು ಸೂಚಿಸುವುದು. ಹುಲಿ ಮುಖವಾಡವನ್ನು ಧರಿಸಿರುವ ಮಗು ಹಸುವಿನ
ಮುಖವಾಡವನ್ನು ಧರಿಸಿರುವ ಮಗುವನ್ನು ಹಿಡಿಯಲು ಪ್ರಯತ್ನಿಸುತ್ತದೆ;
• ವೃತ್ತದಲ್ಲಿ ನಿಂತಿರುವ ಮಕ್ಕಳು ಹಸುವನ್ನು ರಕ್ಷಿಸಲು ಸೂಚಿಸುವುದು.
ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಇದೇ ಚಟುವಟಿಕೆಯನ್ನು ಮುಂದುವರಿಸುವುದು
--------------------------------
ಅವಧಿ - 7(40ನಿ)
*ಕಥಾ ಸಮಯ*
ಶೀರ್ಷಿಕೆ : ಟೋ ಟೋ & ದ ಕ್ಯಾಪ್
ಸಾಮಗ್ರಿಗಳು : ಚಿತ್ರಗಳು, ಆಟಿಕೆಗಳು ಉದ್ದೇಶಗಳು :
ಆಸಕ್ತಿಯನ್ನು ಮೂಡಿಸುವುದು,
- ಸೃಜನಶೀಲತೆಯನ್ನು ಹೆಚ್ಚಿಸುವುದು,
ವಿಧಾನ : ಶಿಕ್ಷಕರು ಸಾಹಿತ್ಯವನ್ನು ಆಧರಿಸಿ, ಆಟಿಕೆಗಳನ್ನು ಪ್ರದರ್ಶಿಸಿ, ಮಾತೃಭಾಷೆಯಲ್ಲಿ ಕಥೆಯನ್ನು ಹೇಳುವುದು.
ಚಿತ್ರಗಳು/ಆಟಿಕೆಗಳನ್ನು ಪ್ರದರ್ಶಿಸಿ ಕಥೆಯಲ್ಲಿನ ಮಾತೃಭಾಷೆಯಲ್ಲಿ ಸಂಭಾಷಣೆಯನ್ನು ಹೇಳುವುದು,
ಕಥೆಯ ನಡುವೆ ಮುಖ್ಯ ಪದಗಳನ್ನು ಇಂಗ್ಲೀಷಿನಲ್ಲಿ ಹೇಳುವುದು.
TOTO AND THE CAP
This is Toto, the baby cat. He lives with Papa cat and Mama Cat. Papa cat has a cap. Mama cat
has a cap. Toto also wanted a cap. Papa cat said "baby cats do not wear caps". One day, Papa
cat was going out. He hid the cap in a pot. He put the pot on the cot and went out. Toto cat
got on to the cot, put his hand in the pot and pulled out the cap. Toto cat put the cap on his
head. He was very happy.
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು) ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ
-----------------------------------
ಅವಧಿ -8(20ನಿ)
*ಮತ್ತೆ ಸಿಗೋಣ*
ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ
ಸದಸ್ಯರೊಂದಿಗೆ ಹಂಚಿಕೊಳ್ಳಲ ಪ್ರೋತ್ಸಾಹಿಸಿ. ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, ಬೀಳ್ಕೊಡಿ.
ಗಮನಿಸಿ :
ಕಲಿಕಾ ಫಲಗಳನ್ನು ಪರಿಶೀಲಿಸಿ, ಪೋಷಕರಿಗೆ ವರದಿ ಮಾಡಲು ದಾಖಲೆಗಳನ್ನು ಸಿದ್ಧಪಡಿಸಿ ನಿಮ್ಮ ಮಕ್ಕಳು ಒಂದನೇ ತರಗತಿಯ ಚಟುವಟಿಕೆಗಳನ್ನು ಕಲಿಯಲು ಸಿದ್ಧರಿದ್ದಾರೆ ಎನ್ನುವುದನ್ನು ಮನದಟ್ಟು
ಒಂದನೇ ತರಗತಿಯ ಚಟುವಟಿಕೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಇದೇ ಮಾದರಿಯಲ್ಲಿ ನಿರ್ವಹಿಸಲು ಸಿದ್ಧರಾಗಿ ಮತ್ತು ಪೋಷಕರೊಂದಿಗೆ ಮಾತನಾಡಿ, ಅವರನ್ನೂ ಇವುಗಳಲ್ಲಿ ತೊಡಗಿಸಿ ಕೊಳ್ಳಲು ಪೂರ್ವ ಸಿದ್ಧತೆ ಮಾಡಿಕೊಳ್ಳಿ
http://diethassan.karnataka.gov.in
【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment