ವಿದ್ಯಾಪ್ರವೇಶ ದಿನ 66
ವಾರ-೧೧ ನನ್ನ ಸಾಧನೆ ದಿನ-೬೬ (ಶನಿವಾರ)
ಪ್ರತಿಬಿಂಬ(ವಾರದ ಚಟುವಟಿಕೆಗಳ ಪುನರಾವಲೋಕನ ಮಾಡುವುದು)
(ತರಗತಿಯಲ್ಲಿನ ನಿರ0ತರ ಮೌಲ್ಯಮಾಪನ)
* ವಿವಿಧ ತಂತ್ರಗಳ ಮೂಲಕ (ವೀಕ್ಷಣೆ, ತಪಶೀಲು ಪಟ್ಟಿ,
ಮಕ್ಕಳು ಮಾಡಿದ ಅಭ್ಯಾಸದ ಹಾಳೆಗಳು,
ವೀಡಿಯೋ, ಆಡಿಯೋ ತುಣುಕುಗಳು, ಸಾಂದರ್ಭಿಕ ಟಿಪ್ಪಣಿಗಳು ಇತ್ಯಾದಿ) ನೀವು ಸಂಗ್ರಹಿಸಿದ
ಮೌಲ್ಯಮಾಪನ ದತ್ತಾಂಶವನ್ನು ಪುನರಾವಲೋಕಿಸಿ.
* ಪ್ರತಿ ಮಗುವಿನ ವೈಯಕ್ತಿಕ ಅಗತ್ಯತೆಗನುಗುಣವಾಗಿ ಮುಂದಿನ ವಾರದ ಕಲಿಕಾ ಪ್ರಕ್ರಿಯೆಯನ್ನು ಯೋಜಿಸಿ.
ಕಲಿಕೆಯ ಮೂರೂ ಅಭಿವೃದ್ಧಿ ಗುರಿಗಳಲ್ಲಿ ಸಾಧನೆಯ ಮೌಲ್ಯಮಾಪನವನ್ನು ಪುನರಾವಲೋಕಿಸಿ.
ಕಲಿಕಾಫಲಗಳು ಅಪರೂಪಕ್ಕೆ ಕೆಲವೊಮ್ಮೆ ಯಾವಾಗಲೂ
೧ ಹಬ್ಬಗಳು, ಘಟನೆಗಳು ಮತ್ತು ಸ್ನೇಹಿತರ ಬಗ್ಗೆ ಮಾತನಾಡುವರು.
೨ ಸ್ಪರ್ಶಜ್ಞಾನದಿಂದ ವಿನ್ಯಾಸವನ್ನು ಗುರುತಿಸುವರು.
೩ ಸಮಸ್ಯೆ ಗುರುತಿಸಿ ಪರಿಹರಿಸುವರು.
೪ ಶಿಶುಗೀತೆ/ಹಾಡುಗಳನ್ನು ಹಾಡಿ ಆನಂದಿಸುವರು.
೫ ಧ್ವನಿ ಹಾಗೂ ಸಂಕೇತಗಳ ನಡುವಿನ ಸಹಸಂಬAಧ ಗುರುತಿಸುವರು.
೬ ಆಟಗಳು, ನೃತ್ಯ ಮತ್ತು ಯೋಗ ಚಟುವಟಿಕೆಗಳಲ್ಲಿ ಭಾಗವಹಿಸುವರು.
೭ ಓದುವ ಮತ್ತು ಬರೆಯುವ ಸಾಮಾನ್ಯ ನಿಯಮಗಳನ್ನು
ಗುರುತಿಸುವರು.
೮ ಗುಂಪು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವರು.
೯ ಚಟುವಟಿಕೆಗಳು ನಡೆಯುವಾಗ ಮುಂದಾಳತ್ವ ತೆಗೆದುಕೊಳ್ಳುವರು.
೧೦ ಸರಳ ಹಾಗೂ ಅನೌಪಚಾರಿಕ ಅಳತೆಯನ್ನು ಸ್ವತಂತ್ರವಾಗಿ ಮಾಡುವರು.
೧೧ ಚಿಕ್ಕದು-ದೊಡ್ಡದು, ಎತ್ತರ-ಗಿಡ್ಡ, ಭಾರ-ಹಗುರ ಈ ಪದಗಳನ್ನು ಬಳಸಿ ಹೇಳುವರು.
೧೨ ಚಿತ್ರಗಳನ್ನು ಸರಳ ಪದಗಳಲ್ಲಿ ವಿವರಿಸುವರು.
೧೩ ವಸ್ತುಗಳನ್ನು ಕ್ರಮವಾಗಿ ಜೋಡಿಸುವರು.(ಗಾತ್ರ, ಉದ್ದ, ಎತ್ತರ ಆಧರಿಸಿ)
೧೪ ಸರಳ ಚಿತ್ರ, ಒತ್ತುಚಿತ್ರ ರಚಿಸುವರು.
ಶಿಕ್ಷಕರ ಸಹಿ
ನನ್ನ ಸಾಧನೆ ಲಿಂಕ್ pdf
https://drive.google.com/file/d/1Joj8HDex9vJGdMC-glOV-exnTaXQdQcf/view?usp=drivesdk
ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment