Thursday, 25 August 2022

ವಿದ್ಯಾಪ್ರವೇಶ ದಿನ 65

 *ವಿದ್ಯಾಪ್ರವೇಶ ದಿನ-65* 

✒️🚁🎮🎨🎲🧮📏🔍


*ಅವಧಿ -1* (40ನಿ)

*ಶುಭಾಶಯ ವಿನಿಮಯ* 

(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)೬೪ ನೇ ದಿನದ ಚಟುವಟಿಕೆಗಳನ್ನು ಮಾಡಿಸುವುದು 

    *ಮಾತು ಕತೆ* 

( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)   

ಚಟುವಟಿಕೆ: ನನ್ನ ಹಳ್ಳಿಯಲ್ಲಿ ಜಾತ್ರೆ

ಸಾಮಗ್ರಿಗಳು: ಹಳ್ಳಿಯ ಜಾತ್ರೆಗೆ ಸಂಬ0ಧಿಸಿದ ಚಿತ್ರಗಳು.

ವಿಧಾನ:

೧. ಮಕ್ಕಳನ್ನು ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವಂತೆ ಮಾಡಿ.

೨. ಮಕ್ಕಳನ್ನು ಒಂದೊ0ದಾಗಿ ಕರೆಯಿರಿ ಮತ್ತು ಅವರಿಗೆ ಚಿತ್ರ ಕಾರ್ಡ್ ತೋರಿಸಿ.

೩. ಚಿತ್ರವನ್ನು ಗುರುತಿಸಲು ಮತ್ತು ಅವರು ಅದನ್ನು ಎಲ್ಲಿ ನೋಡಿದ್ದಾರೆ ಅವರಿಗೆ ಸೂಚಿಸಲು ಅವರಿಗೆ ತಿಳಿಸಿ.

೪. ಅವರ ಆಲೋಚನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸುವುದು.

೫. ಪ್ರಶ್ನೆಗಳು:

ಚಿತ್ರದಲ್ಲಿ ಏನಿದೆ?

ಚಿತ್ರ ಕಾರ್ಡ್ ನಲ್ಲಿರುವ ವಿಷಯವನ್ನು ನೀವು ನೋಡಿದ್ದೀರಾ?

ನೀವು ಅದನ್ನು ಎಲ್ಲಿ ನೋಡಿದ್ದೀರಿ?

ನೀವು ಯಾವುದೇ ಹಳ್ಳಿಯ ಜಾತ್ರೆಗೆ ಭೇಟಿ ನೀಡಿದ್ದೀರಾ?

ಜಾತ್ರೆಯಲ್ಲಿ ಏನು ಮಾಡಿದಿರಿ?

ಜಾತ್ರೆಯಲ್ಲಿ ನೀವು ಏನನ್ನು ನೋಡಬಹುದು?

ಹಳ್ಳಿಯ ಜಾತ್ರೆಯಲ್ಲಿ ನೀವು ಆಡುವ ಆಟಗಳು ಯಾವುವು?

---–------------------------------ 

ಅವಧಿ-2 (40ನಿ)

*ನನ್ನ ಸಮಯ* 

ಮಕ್ಕಳು ತಾವು ನಿರ್ವಹಿಸಲಿಚ್ಛಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.

ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.

----------------------------–----–-

    ಅವಧಿ-3(40ನಿ)

*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)   

ಸಾಮರ್ಥ್ಯ: ಪರಿಸರದ ಅರಿವು, ಸೃಜನಾತ್ಮಕ ಚಿಂತನೆ ಮತ್ತು ಸೂಕ್ಷö್ಮ ಸ್ನಾಯು ಚಲನ ಕೌಶಲಗಳ ಬೆಳವಣಿಗೆ

ಚಟುವಟಿಕೆ : ತರಕಾರಿಗಳ ತಿಳಿಯೋಣ (ಗುರಿ ೩)

ಉದ್ದೇಶ:- ವಿವಿಧ ತರಹದ ತರಕಾರಿಗಳನ್ನು ತಿಳಿಯುವುದು.

ಅಗತ್ಯ ಸಾಮಗ್ರಿಗಳು :ಬಿಳಿಹಾಳೆಗಳು, ಬಣ್ಣಗಳು, ಬೆಂಡೆಕಾಯಿ, ಬಟಾಟಿ ಅಥವಾ ಈರುಳ್ಳಿ

ವಿಧಾನ : ವಿವಿಧ ತರಕಾರಿಗಳನ್ನು ಮಕ್ಕಳಿಗೆ ತೋರಿಸಿ ಅವುಗಳ ಬಗ್ಗೆ ಕೆಲವು ವಾಕ್ಯಗಳಲ್ಲಿ ಮಾತನಾಡಲು 

ಪ್ರೋತ್ಸಾಹಿಸುವುದು. ಕಣ್ಣಿಗೆ ಪಟ್ಟಿಕಟ್ಟಿ ಮಕ್ಕಳು ಮುಟ್ಟಿನೋಡುವ ಮೂಲಕ ತರಕಾರಿಗಳನ್ನು ಗುರುತಿಸಿ ಹೆಸರಿಸಲು 

ಹೇಳುವುದು. ತರಕಾರಿಗಳು ಸಸ್ಯದ ಭಾಗಗಳು ಮತ್ತು ಅವುಗಳನ್ನು ಆಹಾರವಾಗಿ ನಾವು ಮತ್ತು ಕೆಲವು ಪ್ರಾಣಿಗಳು 

ಸೇವಿಸುತ್ತವೆ ಎಂದು ವಿವರಿಸುವುದು. ತರಕಾರಿಗಳು ಬೇರು, ಕಾಂಡ, ಎಲೆ ಹಾಗೂ ಹೂವಿನ ರೂಪದಲ್ಲಿ 

ಇರಬಹುದು. ಮಕ್ಕಳು ತರಕಾರಿಗಳನ್ನು ನಿಯಮಿತವಾಗಿ ಹೆಚ್ಚು ಸೇವಿಸಲು ಹೇಳುವುದು. ತರಕಾರಿಗಳಿಂದ ಚಿತ್ರ 

ರಚಿಸಬಹುದು. ಮೊದಲಿಗೆ ಬೆಂಡೆಕಾಯಿ, ಈರುಳ್ಳಿಗಳನ್ನು ಅರ್ಧ ಕತ್ತರಿಸಿ ಬಣ್ಣಗಳಲ್ಲಿ ಅದ್ದಿ ಬಿಳಿಹಾಳೆಗಳ ಮೇಲೆ 

ಒತ್ತುವ ಮೂಲಕ ಚಿತ್ರ ರಚಿಸುವುದು.

೨ನೇ ತರಗತಿ

ಮಕ್ಕಳ ಕಣ್ಣಿಗೆ ಬಟ್ಟೆ ಕಟ್ಟಿ ತರಕಾರಿಗಳನ್ನು ಮುಟ್ಟಿ ನೋಡಿ ಹೆಸರು ಹೇಳಲು ತಿಳಿಸುವುದು.

೩ನೇ ತರಗತಿ

ಬೇರು, ಗಡ್ಡೆ, ಎಲೆ ಮತ್ತು ಕಾಯಿಗಳ ರೂಪದಲ್ಲಿರುವ ತರಕಾರಿಗಳನ್ನು ಪಟ್ಟಿ ಮಾಡಲು ತಿಳಿಸುವುದು

* ----------------------–---------

ಅವಧಿ -4    (40ನಿ)

*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)   

 

ಸಾಮರ್ಥ್ಯ : ಸೂಕ್ಷö್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. 

ವಿನ್ಯಾಸಗಳ ರಚನೆ.

ಚಟುವಟಿಕೆ: ಎಲೆ ಮತ್ತು ಹೂಗಳನ್ನು ವಿವಿಧ ವಿನ್ಯಾಸಗಳಲ್ಲಿ ಜೋಡಿಸುವುದು. (ಗುರಿ - ೧)

ಉದ್ದೇಶಗಳು:

    ಸೂಕ್ಷö್ಮ ಸ್ನಾಯುಗಳ ಅಭಿವೃದ್ದಿಯಾಗುವುದು.

    ಆಕಾರ ಮತ್ತು ಗಾತ್ರವನ್ನು ಗುರುತಿಸುವುದರ ಜೊತೆಗೆ ವಿವಿಧ ವಿನ್ಯಾಸಗಳನ್ನು ರಚಿಸುವುದು.

    ಗ್ರಹಣಶಕ್ತಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯವಾಗುವುದು.

ಸಾಮಗ್ರಿಗಳು : ವಿವಿಧ ಹೂಗಳು, ಎಲೆಗಳು ಮತ್ತು ದಾರದ ಉಂಡೆ.

ವಿಧಾನ : ಮಕ್ಕಳಿಗೆ ಹೂಗಳು, ಎಲೆಗಳು ಮತ್ತು ದಾರ ನೀಡಿ ವಿವಿಧ ವಿನ್ಯಾಸಗಳಲ್ಲಿ ಹಾರ ಮತ್ತು ತೋರಣಗಳನ್ನು 

ಮಾಡಲು ಹೇಳುವುದು. ರಚಿಸಲು ಹೇಳುವುದು.

ವಿವರ: ೨ ಮತ್ತು ೩ ನೇ ತರಗತಿಗೆ ಮೇಲ್ಕಂಡ ಚಟುವಟಿಕೆಯನ್ನು ಮಾಡಿಸುವುದು

    -------------------------------

ಅವಧಿ -5(60ನಿ)

 *ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ* 

 ಆಲಿಸುವುದು ಮತ್ತುಮಾತನಾಡುವುದು* 

ಸಾಮರ್ಥ್ಯ : ಪದ ಸಂಪತ್ತಿನ ಅಭಿವೃದ್ಧಿ, ಊಹಿಸುವುದು, ತಂಡದ ಸದಸ್ಯರೊಂದಿಗೆ ಸಹಕಾರದಿಂದ ಕೆಲಸ. 

ಸೂಚನೆಗಳ ಪಾಲನೆ.

ಚಟುವಟಿಕೆ : ವಸ್ತುವನ್ನು ಊಹಿಸು (ಗುರಿ-೨)

ಉದ್ದೇಶಗಳು:

* ಸೂಕ್ತ ಪದ ರಚಿಸುವುದು.

* ಸಾಂಘಿಕ ಮನೋಭಾವನೆ ಬೆಳೆಸುವುದು.

* ಸೂಚನೆಗಳನ್ನು ಎಚ್ಚರಿಕೆಯಿಂದ ಆಲಿಸಿ ಅನುಸರಿಸುವುದು.

* ಪದ ಸಂಪತ್ತನ್ನು ಅಭಿವೃದ್ಧಿ ಪಡಿಸುವುದು.

ಅಗತ್ಯ ಸಾಮಗ್ರಿಗಳು : ಬ್ಯಾಗ್, ಲಭ್ಯ ವಸ್ತುಗಳು

ವಿಧಾನ : ತರಗತಿಯಲ್ಲಿರುವ ಸೀಮೆ ಸುಣ್ಣ, ರಬ್ಬರ್, ಡಸ್ಟರ್, ಡೈಸ್ ಮೊದಲಾದ ವಸ್ತುಗಳನ್ನು ಒಂದು ಚೀಲದಲ್ಲಿ 

ಹಾಕಿ..

- ಮಕ್ಕಳನ್ನು ಒಬ್ಬೊಬ್ಬರಾಗಿ ಕರೆದು ಬ್ಯಾಗ್‌ನಲ್ಲಿರುವ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಸ್ಪರ್ಶಿಸಿ, 

ಆ ವಸ್ತುಗಳನ್ನು ಊಹಿಸಲು ಹೇಳುವುದು. ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳು ವಸ್ತುವನ್ನು ಸರಿಯಾಗಿ 

ಗುರುತಿಸಲು ಸಹಾಯ ಮಾಡುವುದು.

ಉದಾಹರಣೆಗಾಗಿ:

    ನೀನು ಸ್ಪರ್ಶಿಸುತ್ತಿರುವ ವಸ್ತು ದೊಡ್ಡದೋ ಚಿಕ್ಕದೋ ?

    ನೀನು ಸ್ಪರ್ಶಿಸುತ್ತಿರುವ ವಸ್ತುವಿನ ಆಕಾರ ಹೇಗಿದೇ?

    ಯಾವುದರಿಂದ ಆ ವಸ್ತು ಮಾಡಲ್ಪಟ್ಟಿದೆ?

    ನೀನು ಸ್ಪರ್ಶಿಸುತ್ತಿರುವ ವಸ್ತು ಗಟ್ಟಿಯಾಗಿದೆಯೇ? ಮೃದುವಾಗಿದೆಯೇ?

    ನೀನು ಸ್ಪರ್ಶಿಸುತ್ತಿರುವ ವಸ್ತು ಏನಿರಬಹುದು?

- ಮಕ್ಕಳು ಗುರುತಿಸಿದ ವಸ್ತುಗಳ ಕುರಿತು ಅವರೊಂದಿಗೆ ಚರ್ಚಿಸುವುದು.

ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ತಾವು ಗುರುತಿಸಿದ ವಸ್ತುವಿನ ಬಗ್ಗೆ ೩-೪ ವಾಕ್ಯಗಳಲ್ಲಿ 

ಮಾತನಾಡುವುದು. ೩ನೇ ತರಗತಿಯ ಮಕ್ಕಳು ೨ ರಿಂದ ೩ ನಿಮಿಷ ಆ ವಸ್ತುವಿನ ಬಗ್ಗೆ ಮಾತನಾಡುವುದು.

*ಅರ್ಥಗ್ರಹಿಕೆಯೊಂದಿಗಿನ ಓದು*

ಸಾಮರ್ಥ್ಯ: ಧ್ವನಿ ಸಂಕೇತಗಳನ್ನು ಹೊಂದಿಸುವುದು, ಪದ ಗುರ್ತಿಸುವುದು, ಅಕ್ಷರಗಳನ್ನು ಗುರ್ತಿಸುವುದು, ಪದ 

ಸಂಪತ್ತಿನ ಅಭಿವೃದ್ಧಿ

ಚಟುವಟಿಕೆ : ಅರ್ಥಪೂರ್ಣ ಪದ ರಚಿಸುವುದು (ಗುರಿ-೨)

ಉದ್ದೇಶ : ಅಕ್ಷರಗಳನ್ನು/ ಧ್ವನಿಗಳನ್ನು ಜೋಡಿಸುವ ಮೂಲಕ ಪದಗಳನ್ನು ರಚಿಸುವರು.

ಅಗತ್ಯ ಸಾಮಗ್ರಿಗಳು : ಮಕ್ಕಳ ಹೆಸರಿನಲ್ಲಿರುವ ಅಕ್ಷರಗಳ ಮಿಂಚುಪಟ್ಟಿಗಳು.

ವಿಧಾನ : ಮಕ್ಕಳನ್ನು ಇಬ್ಬರಂತೆ ಗುಂಪು ಮಾಡುವುದು.

* ಅವರವರ ಹೆಸರಿನ ಅಕ್ಷರಗಳ ಮಿಂಚು ಪಟಿಗಳನ್ನು ಮಕ್ಕಳಿಗೆ ನೀಡುವುದು.

* ಅಕ್ಷರಗಳ ಮಿಂಚುಪಟ್ಟಿ ಬಳಸಿ ಅವರ ಹೆಸರನ್ನು ಜೋಡಿಸಲು ಮಾರ್ಗದರ್ಶಿಸುವುದು.

* ಇದೇ ಚಟುವಟಿಕೆಯನ್ನು ಪರಿಚಿತ ಹಾಡು/ ಕಥೆ/ ಪ್ರಾಸಗೀತೆಗಳಲ್ಲಿನ ಪದಗಳೊಂದಿಗೆ ಚಟುವಟಿಕೆಯನ್ನು 

ಕೈಗೊಳ್ಳುವುದು.

೨ ಮತ್ತು ೩ನೇ ತರಗತಿ : ಪದಗಳ ಮಿಂಚುಪಟ್ಟಿಗಳನ್ನು ತಯಾರಿಸಿಕೊಂಡು ಸರಳ ವಾಕ್ಯಗಳನ್ನು ರಚಿಸುವ ಮೂಲಕ 

ಚಟುವಟಿಕೆಯನ್ನು ನಿರ್ವಹಿಸುವುದು.

      *ಉದ್ದೇಶಿತ ಬರಹ*      

ಸಾಮರ್ಥ್ಯ : ಮಕ್ಕಳೊಂದಿಗೆ ಬರವಣಿಗೆ, ಉದ್ದೇಶಿತ ಬರವಣಿಗೆ, ಅವಧಾನ ಮತ್ತು ಆಲಿಸುವುದು, ಸೃಜನಶೀಲ 

ಚಿಂತನೆ, ಪದಸಂಪತ್ತಿನ ಅಭಿವೃದ್ಧಿ.

ಚಟುವಟಿಕೆ : ಹಂಚಿತ ಬರೆಹ (ಗುರಿ : ೨) 

ಉದ್ದೇಶಗಳು:

    ಹಂಚಿತ ಬರವಣಿಗೆಯನ್ನು ಪರಿಚಯಿಸುವುದು.

    ಉದ್ದೇಶಕ್ಕನುಸಾರವಾಗಿ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿಸುವುದು.

    ಅವಧಾನದೊಂದಿಗೆ ಉದ್ದೇಶಿತ ಬರೆಹದಲ್ಲಿ ತೊಡಗಿಸುವುದು.

    ಸೃಜನಾತ್ಮಕವಾಗಿ ಚಿಂತಿಸಿ ಅವುಗಳನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸುವುದು.

    ಪದ ಸಂಪತ್ತನ್ನು ಅಭಿವೃದ್ಧಿಪಡಿಸುವುದು.

ಅಗತ್ಯ ಸಾಮಗ್ರಿಗಳು: ಕಪ್ಪುಹಲಗೆ ಡ್ರಾಯಿಂಗ್ ಶೀಟ್

ವಿಧಾನ: ಹಂಚಿತ ಬರೆಹ ಚಟುವಟಿಕೆಗಳನ್ನು ತಿಂಗಳಿಗೆ ಎರಡು ಅಥವಾ ಮೂರು ಬಾರಿ ಆಯೋಜಿಸುವುದು. 

ಒಂದು ವಿಷಯವನ್ನು ನೀಡಿ ಆ ವಿಷಯಕ್ಕೆ ಸಂಬ0ಧಿಸಿದ0ತೆ ತಮ್ಮ ಅನುಭವಗಳನ್ನು ಕಥೆಯ ಮೂಲಕ ಅಥವಾ 

ಬರವಣಿಗೆ ಮೂಲಕ ಹಂಚಿಕೊಳ್ಳಲು ತಿಳಿಸುವುದು.

ಸಲಹಾತ್ಮಕ ಸೂಚಿತ ವಿಷಯ:- ನಾವು ಸಾಕುವ ಪ್ರಾಣಿಗಳು

ಗಮನಿಸಬೇಕಾದ ಅಂಶಗಳು:

    ಪ್ರತಿ ವಿಷಯಕ್ಕೆ ಸಂಬ0ಧಿಸಿದ0ತೆ ವಾಕ್ಯಗಳನ್ನು ರಚಿಸಲು ಅಗತ್ಯ ಸುಳಿವುಗಳನ್ನು ನೀಡುವುದು. ಮಕ್ಕಳೊಂದಿಗೆ 

ಬರವಣಿಗೆಯಲ್ಲಿ ತೊಡಗಿಕೊಳ್ಳುವ ಮೂಲಕ ಬರವಣಿಗೆಯ ಪ್ರಾತ್ಯಕ್ಷಿಕೆ ನೀಡುವುದು

    ಶಿಕ್ಷಕರು ಮೊದಲನೇ ವಾಕ್ಯವನ್ನು ಬರೆದು ಓದುವುದು. ನಂತರ ಮಕ್ಕಳು ತಮ್ಮ ಸ್ವಂತ ವಾಕ್ಯವನ್ನು ಹೇಳಿ 

ಬರೆಯಲು ತಿಳಿಸುವುದು.

    ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಪ್ರತಿಕ್ರಿಯಿಸಲು ಅವಕಾಶ ಕಲ್ಪಿಸಬಹುದು. ಅಂತಹ ಸನ್ನಿವೇಶದಲ್ಲಿ ಶಿಕ್ಷಕರು 

ಅದನ್ನು ಶಾಲಾ ಭಾಷೆಯಲ್ಲಿ ಅನುವಾದಿಸಿ ಹೇಳುವುದು.

ತರಗತಿವಾರು ವಿವರ: ೧ನೇ ತರಗತಿಯವರು ವಿವರಿಸಿದ ಅಂಶಗಳನ್ನು ೨ನೇ ಹಾಗೂ ೩ನೇ ತರಗತಿಯ ಮಕ್ಕಳು 

ಬರವಣಿಗೆ ಮೂಲಕ ಅಭಿವ್ಯಕ್ತಿಪಡಿಸಲು ತಿಳಿಸುವುದು.

ಬರವಣಿಗೆಯ ಮಾದರಿ:

ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು ನೋಡಲು 

ಅವಕಾಶ ಕಲ್ಪಿಸುವುದು.

ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು. ಶಿಕ್ಷಕರು 

ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.

--------------------------------

 ಅವಧಿ - 6(40ನಿ)

*ಹೊರಾಂಗಣ ಆಟಗಳು* 

ಚಟುವಟಿಕೆ - ಸ್ಥಿರ ಸಮತೋಲನ 

ಸಾಮರ್ಥ್ಯ: ಸ್ಥೂಲ ಸ್ನಾಯು ಚಲನ ಕೌಶಲ ಬೆಳವಣಿಗೆ ದೇಹದ ಬೇರೆ ಬೇರೆ ಭಾಗಗಳ ಸಮತೋಲನ 

ಸಾಧಿಸುವುದು.

ಬೇಕಾಗುವ ಸಾಮಗ್ರಿ: ಮೃದುವಾದ ಜಾಗ, ಚಾಪೆ, ಜಮಖಾನ

ವಿಧಾನ : • ಈ ಚಟುವಟಿಕೆಯನ್ನು ತರಗತಿ ಕೋಣೆಯೊಳಗೆ/ ಸಭಾಂಗಣದಲ್ಲಿ ಮಾಡಿಸುವುದು.

• ಈ ವಾರ ಪರಿಚಯಿಸಿದ ಎಲ್ಲ ಸ್ಥಿರ ಸಮತೋಲನ ವ್ಯಾಯಾಮಗಳನ್ನು ಇಂದು ಮಾಡಲು ಸೂಚಿಸುವುದು.

ಎರಡನೇ ಮತ್ತು ಮೂರನೇ ತರಗತಿ ಮಕ್ಕಳಿಗೆ ಇದೇ ಚಟುವಟಿಕೆಯನ್ನು ಮುಂದು ವರಿಸುವುದು.


    -------------------------------- 

ಅವಧಿ - 7(40ನಿ)

*ಕಥಾ ಸಮಯ* 

ಶೀರ್ಷಿಕೆ : ಒಂಟೆ ಮತ್ತು ನರಿ

ಸಾಮಗ್ರಿಗಳು : ಸಂಭಾಷಣೆಯ ಮಿಂಚುಪಟ್ಟಿಗಳು.

ಉದ್ದೇಶಗಳು :

    ಅಭಿನಯ ಕೌಶಲ ಹೆಚ್ಚಿಸುವುದು.

    ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.

    ಓದುವ ಹವ್ಯಾಸವನ್ನು ಬೆಳೆಸುವುದು.

    ನಾಯಕತ್ವದ ಗುಣಗಳನ್ನು ಬೆಳೆಸುವುದು.

ವಿಧಾನ : ಪಾತ್ರಾಭಿನಯ

    ಕಥೆಯನ್ನು ಪುನರಾವಲೋಕನ ಮಾಡಿಕೊಳ್ಳುವುದು.

    ಕಥೆಯ ನಿರೂಪಣೆಯನ್ನು ಮಾಡಲು ಎರಡು ಮತ್ತು ಮೂರನೇ ತರಗತಿಯ ಮಕ್ಕಳಿಗೆ ಸಹಕರಿಸುವುದು.

    ಮಿಂಚುಪಟ್ಟಿಗಳಲ್ಲಿರುವ ಕಥೆಯ ಪಾತ್ರಗಳ ಸಂಭಾಷಣೆಗಳನ್ನು ಓದಲು ಹಿರಿಯ ಮಕ್ಕಳಿಗೆ ಹೇಳುವುದು.

    ಅಂತಿಮವಾಗಿ ಶಿಕ್ಷಕರು ಕಥೆಯ ಸಾರಾಂಶವನ್ನಾಗಲಿ ಅಥವಾ ವಿವರಣೆಯನ್ನಾಗಲಿ ನೀಡದೇ ಕೇವಲ 

ಸಾಹಿತ್ಯವನ್ನು ಓದುವುದು. ಇದನ್ನು ಕೇಳಿಸಿಕೊಂಡ ಮಕ್ಕಳು ಕಥೆಯನ್ನು ಅರ್ಥೈಸಿಕೊಳ್ಳಲು ನಂತರ ಹೇಳಲು 

ಅವಕಾಶ ಒದಗಿಸುವುದು.

-----------------------------------

    ಅವಧಿ -8(20ನಿ)

*ಮತ್ತೆ ಸಿಗೋಣ*    

ಮತ್ತೆ ಸಿಗೋಣ

    ಈ ದಿನ ನಿರ್ವಹಿಸಿದ ಚಟುವಟಿಕೆಗಳನ್ನು ಪುನರಾವರ್ತಿಸಿ/ನೆನಪಿಸಿ

    ಈ ದಿನ ಮಕ್ಕಳು ನಿರ್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ 

ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.

    ಮರುದಿನ ಮಕ್ಕಳು ಸಂತೋಷದಿ0ದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರ್ಪಡಿಸಿ, 

ಬೀಳ್ಕೊಡಿ.

http://diethassan.karnataka.gov.in


【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು  ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]

ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 

    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ

ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment