*ವಿದ್ಯಾಪ್ರವೇಶ ದಿನ-64*
✒️🚁🎮🎨🎲🧮📏🔍
*ಅವಧಿ -1* (40ನಿ)
*ಶುಭಾಶಯ ವಿನಿಮಯ*
(ಮಕ್ಕಳೊಂದಿಗೆ ಶಿಕ್ಷಕರ ಬೆಳಗಿನ ಕುಶಲೋಪರಿ)
ಚಟುವಟಿಕ 1:
1. ಶಾಲೆಗೆ ಮೊದಲು ಆಗಮಿಸಿದ 3 ಮಕ್ಕಳಿಗೆ ಪೇಪರಿನಿಂದ ಮಾಡಿದ ಹೂವುಗಳನ್ನು ನೀಡುವ ಮೂಲಕ ಸ್ವಾಗತಿಸುವುದು.
2. ಹೀಗೆ ಮಗುವಿಗೆ ಸರಿಯಯಾದ ಸಮಯಕ್ಕೆ ಶಾಲೆಗೆ ಬರಲು ಪ್ರೇರೆಪಿಸುವುದು
ಚಟುವಟಿಕೆ 2:
ಹಿಂದಿನ ದಿನಗಳಲ್ಲಿ ಮಾಡಿದ TPR ಚಟುವಟಿಕೆಗಳನ್ನು ಮಾಡಿಸುವುದು
*ಮಾತು ಕತೆ*
( ಶಿಕ್ಷಕರು - ಮಕ್ಕಳೊಂದಿಗಿನ ಬೆಳಗಿನ ಸಾಮೂಹಿಕ ಚಟುವಟಿಕೆ)
ಚಟುವಟಿಕೆ 1:
ದಿನ 63 ರ ಚಟುವಟಿಕೆಯನ್ನು ಮುಂದುವರೆಸಿ,
ಚಟುವಟಿಕೆ 2: ನಮ್ಮ ಹಬ್ಬಗಳ ಸುತ್ತಲೂ
ಅಗತ್ಯವಿರುವ ಸಾಮಗ್ರಿಗಳು: ತಮ್ಮ ಪ್ರದೇಶದಲ್ಲಿ ಆಚರಿಸುತ್ತಿರುವ ವಿವಿಧ ರೀತಿಯ ಹಬ್ಬಗಳ ಚಿತ್ರ ಕಾರ್ಡ್‌ಗಳು
ವಿಧಾನ: 1. ಮಕ್ಕಳನ್ನು ಅರೆ-ವೃತ್ತದಲ್ಲಿ ಕುಳಿತುಕೊಳ್ಳುವಂತೆ ಮಾಡಿ 2. ಚಿತ್ರ ಕಾರ್ಡ್ ಗಳನ್ನು ಚೀಲದಲ್ಲಿ ಇರಿಸಿ,
3. ಚೀಲವನ್ನು ಪಾಸ್ ಮಾಡಿ ಮತ್ತು ಸಂಗೀತವನ್ನು ನುಡಿಸಿ.
4. ನಡುವೆ ಸಂಗೀತವನ್ನು ನಿಲ್ಲಿಸಿ. 5. ಮ್ಯೂಸಿಕ್ ನಿಂತಾಗ, ಚೀಲವನ್ನು ಹೊಂದಿರುವ ಮಗುವು ತನ್ನ ಕೈಯನ್ನು ಚೀಲದೊಳಗೆ ಹಾಕಿ ಚೀಲದಿಂದ ಕಾರ್ಡ್ ಅನ್ನು ಹೊರತೆಗೆಯಬೇಕಾಗುತ್ತದೆ
6. ಕಾರ್ಡ್ ನಲ್ಲಿ ಹಬ್ಬದ ಚಿತ್ರವನ್ನು ನೋಡಿದ ನಂತರ, ಮಗುವು ತನ್ನ ಮನೆಯಲ್ಲಿ ಆಚರಿಸುತ್ತಿರುವ ಹಬ್ಬಗಳಬಗ್ಗೆ ತನ್ನ ಅಭಿಪ್ರಾಯವನ್ನು ಹಂಚಿಕೊಳ್ಳಬೇಕು.
7. ಹಬ್ಬಗಳಂದು ಅವರ ಆಲೋಚನೆಗಳನ್ನು / ಆಲೋಚನೆಗಳನ್ನು ಹೊರತರಲು ಅವರಿಗೆ ಕೆಲವು ಪ್ರಶ್ನೆಗಳನ್ನು
---–------------------------------
ಅವಧಿ-2 (40ನಿ)
*ನನ್ನ ಸಮಯ*
ಮಕ್ಕಳು ತಾವು ನಿರ್ವಹಿಸಲಿಚ್ಚಿಸಿದ ಕಲಿಕಾ ಮೂಲೆಗಳಿಗೆ ಸಾಗಿ ಚಟುವಟಿಕೆಗಳನ್ನು ನಿರ್ವಹಿಸುವುದು.
ಶಿಕ್ಷಕರು ಅನುಪಾಲನಾ ಸೂಚಿಯಂತೆ ಕಾರ್ಯ ನಿರ್ವಹಿಸುವುದು.
----------------------------–----–-
ಅವಧಿ-3(40ನಿ)
*ಬುನಾದಿ ಸಂಖ್ಯಾ ಜ್ಞಾನ, ಪರಿಸರದ ಅರಿವು ಮತ್ತು ವೈಜ್ಞಾನಿಕ ಚಿಂತನೆ* (ಶಿಕ್ಷಕರಿಂದ ನಿರ್ದೇಶಿತ ಚಟುವಟಿಕೆ)
ಸಾಮರ್ಥ್ಯ: ಪರಿಸರದ ಅರಿವು, ಹೆಚ್ಚು ಕಡಿಮೆ ಪರಿಕಲ್ಪನೆ, ವೈಯಕ್ತಿಕ ಅಭಿವೃದ್ಧಿ
ಚಟುವಟಿಕೆ : ಹಣ್ಣುಗಳ ವಿಂಗಡಣೆ (ಗುರಿ-3) ಉದ್ದೇಶ:-
ವಿವಿಧ ತರಹದ ಹಣ್ಣುಗಳನ್ನು ತಿಳೆಯುವುದು. ಅಗತ್ಯ ಸಾಮಗ್ರಿಗಳು : ವಿವಿಧ ರೀತಿಯ ಹಣ್ಣುಗಳು ಮಾದರಿ
ವಿಧಾನ : ವಿವಿಧ ಹಣ್ಣುಗಳ ಮಾದರಿಗಳನ್ನು ಮಕ್ಕಳಿಗೆ ನೀಡಿ ಅವುಗಳಲ್ಲಿರುವ ಬೀಜಗಳ ಆಧಾರದ ಮೇಲೆ ವಿಂಗಡಿಸಲು ತಿಳಿಸುವುದು. ಉದಾ: ಮಾವಿನ ಹಣ್ಣು (ಒಂದು ಬೀಜ ಹೊಂದಿರುವ), ಸೇಬು ಹಣ್ಣು (ಕೆಲವು
ಬೀಜ ಹೊಂದಿರುವ), ಕಿತ್ತಳೆ ಪಪ್ಪಾಯಿ ಹಣ್ಣು(ಹಲವು ಬೀಜ ಹೊಂದಿರುವ)
2ನೇ ತರಗತಿ : ನೀಡಿರುವ ವಿವಿಧ ಹಣ್ಣುಗಳ ಮಾದರಿಗಳನ್ನು ಗಮನಿಸಿ ಹುಳಿ ಮತ್ತು ಸಿಹಿ ಆಧಾರದ ಮೇಲೆ
ವಿಂಗಡಿಸಲು ಹೇಳುವುದು,
3ನೇ ತರಗತಿ : ವಿವಿಧ ಮಾದರಿಯ ಹಣ್ಣಿನ ಚಿತ್ರಗಳನ್ನು ನೀಡಿ ಬೀಜಗಳ ಆಧಾರದ ಮೇಲೆ ವಿಂಗಡಿಸಿ ಹಣ್ಣಿನ ಹೆಸರುಗಳನ್ನು ಪಟ್ಟಿ ಮಾಡಲು ಹೇಳುವುದು. (ಒಂದು ಬೀಜವಿರುವ, ಕೆಲವು ಬೀಜಗಳಿರುವ ಮತ್ತು ಬಹಳ ಬೀಜಗಳಿರುವ ಹಣ್ಣುಗಳು)
ಆಕಾರಗಳ ಪರಿಕಲ್ಪನೆ.
----------------------–---------
ಅವಧಿ -4 (40ನಿ)
*ಸೃಜನಶೀಲ ಕಲೆ ಹಾಗೂ ಸೂಕ್ಷ್ಮ ಸ್ನಾಯು ಚಲನಾ ಕೌಶಲಗಳು* (ಮಕ್ಕಳಚಟುವಟಿಕೆ)
ಸಾಮರ್ಥ್ಯ : ಸೂಕ್ಷ್ಮ ಚಲನಾ ಕೌಶಲಗಳ ಅಭಿವೃದ್ಧಿ ಮತ್ತು ಸೃಜನಶೀಲತೆಯ ವಿಕಾಸ, ಕಣ್ಣು ಕೈಗಳ ಸಮನ್ವಯತೆ. ಚಟುವಟಿಕೆ: ಅಕ್ಷರಗಳ ಆಕಾರದ ಒಳಗೆ ಬಣ್ಣ ತುಂಬುವುದು (ಗುರಿ-I)
ಉದ್ದೇಶಗಳು: ಸೂಕ್ಷ್ಮ ಸ್ನಾಯುಗಳ ಅಭಿವೃದ್ಧಿಯಾಗುತ್ತದೆ.
ಕಣ್ಣು ಕೈಗಳ ನಡುವೆ ಸಮನ್ವಯ ಸಾಧಿಸಲು ಸಾಧ್ಯವಾಗುತ್ತದೆ. ಸ್ಥಳದ ಪರಿಕಲ್ಪನೆಯನ್ನು ತಿಳಿಯುತ್ತಾರೆ.
ಸಾಮಗ್ರಿಗಳು ಮರಳು ಮತ್ತು ಕಡ್ಡಿ,
ವಿಧಾನ : ಮಕ್ಕಳಿಗೆ ಅಂಕಿಗಳ ಆಕಾರದ ರೇಖಾ ಚಿತ್ರಗಳನ್ನು ಕೊಟ್ಟು ಬಣ್ಣ ತುಂಬಲು ಹೇಳುವುದು, ಮಗು ತ ಬರುವ ಅಂಕಿಗಳ ರೇಖಾ ಚಿತ್ರಗಳನ್ನು ಬರೆದು ಬಣ್ಣ ತುಂಬಿಸಲು ಹೇಳುವುದು, ವಿವರ: 2 ಮತ್ತು 3 ನೇ ತರಗತಿಗೆ 2-3 ಅಂಕಿಯ ಸಂಖ್ಯೆಗಳನ್ನು ಆಯ್ಕೆ ಮಾಡಿ ಅದರಿಂದ ರೇಖಾ ಚಿತ್ರಗಳನ್ನು ಬರೆದು ಬಣ್ಣ ತುಂಬಲು ಹೇಳುವುದು
-------------------------------
ಅವಧಿ -5(60ನಿ)
*ಭಾಷಾ ಅಭಿವೃದ್ಧಿ ಮತ್ತು ಬುನಾದಿ ಸಾಕ್ಷರತೆ*
*ಆಲಿಸುವುದು ಮತ್ತುಮಾತನಾಡುವುದು*
ಸಾಮರ್ಥ್ಯ:- ಧ್ವನಿ ಸಂಕೇತಗಳ ಅರಿವು, ಅಕ್ಷರ ಶಬ್ದ ಸಹ ಸಂಬ0ಧ.
ಚಟುವಟಿಕೆ : ಹೆಸರಿನ ಆರಂಭಿಕ ಅಕ್ಷರದಿಂದ ವಸ್ತುವನ್ನು ಪತ್ತೆ ಹಚ್ಚುವುದು (ಗುರಿ-೨) ಇಅಐ-೨ (೫೨ ನೇ
ದಿನದಿಂದ ಮುಂದುವರೆದಿದೆ.)
ಉದ್ದೇಶಗಳು:-
* ಧ್ವನಿ ಸಂಕೇತಗಳ ಅರಿವು ಮೂಡಿಸುವುದು.
* ಅಕ್ಷರಗಳು ಮತ್ತು ಪದಗಳ ನಡುವಿನ ಸಹಸಂಬAಧವನ್ನು ಗ್ರಹಿಸುವುದು.
* ಪದಗಳನ್ನು ಗ್ರಹಿಸಿ ಗುರುತಿಸುವುದು.
* ಅಂತ್ಯಾಕ್ಷರಿ ಪದಗಳನ್ನು ಬರೆಯುವುದು.
ಅಗತ್ಯ ಸಾಮಗ್ರಿಗಳು- ಇಲ್ಲ
ಸಲಹಾತ್ಮಕ ವಿಷಯ : ಆಹಾರ ಪದಾರ್ಥಗಳು
ವಿಧಾನ:- ಸುಳಿವುಗಳ ಮೂಲಕ ಆಹಾರ ಪದಾರ್ಥಗಳ ಹೆಸರನ್ನು ಊಹಿಸಿ ಹೇಳುವ ಚಟುವಟಿಕೆಯನ್ನು
ಆಯೋಜಿಸಿ. ಉದಾಹರಣೆಗಾಗಿ ಶಿಕ್ಷಕರು ‘ನನ್ನ ಮನಸ್ಸಿನಲ್ಲಿರುವ ಆಹಾರ ಪದಾರ್ಥವನ್ನು ನಾವು ಚಪಾತಿಯನ್ನು
ಮಾಡಲು ಬಳಸುತ್ತೇವೆ. ಅದರ ಹೆಸರು ಗೋ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ಹೇಳಿದಾಗ ಮಕ್ಕಳು
ಗೋಧಿ ಎಂದು ಗುರುತಿಸುವುದು. ಹೀಗೆಯೇ ವಿವಿಧ ಉದಾಹರಣೆಗಳನ್ನು ನೀಡುವುದು.
ತರಗತಿವಾರು ವಿವರ: ೨ನೇ ಮತ್ತು ೩ನೇ ತರಗತಿ ಮಕ್ಕಳಿಗೆ ಪದಗಳ ಮುಂದುವರೆದ ಭಾಗವಾಗಿ ವಾಕ್ಯಗಳನ್ನು
ರಚಿಸುವಂತೆ ಹಾಗೂ ಸರಳ ವಾಕ್ಯಗುಚ್ಚಗಳನ್ನು ರಚಿಸುವಂತೆ ಚಟುವಟಿಕೆಗಳನ್ನು ಮುಂದುವರೆಸುವುದು. (೭೦ನೇ
ದಿನಕ್ಕೆ ಮುಂದುವರೆದಿದೆ)
ಬಳಸಬೇಕಾದ ಅಭ್ಯಾಸದ ಹಾಳೆಗಳು: EC-೧೭ (ತರಗತಿ ೧, ೨, ೩)
.
*ಅರ್ಥಗ್ರಹಿಕೆಯೊಂದಿಗಿನ ಓದು*
ಸಾಮರ್ಥ್ಯ: ಪದಗಳನ್ನು ಗುರುತಿಸುವುದು, ಮುದ್ರಿತ ಪಠ್ಯದ ಅರಿವು, ಅರ್ಥಗ್ರಹಿಕೆ
ಚಟುವಟಿಕೆ : ವಾಕ್ಯ ವಿಭಜನೆ. (ಗುರಿ-೨)
ಉದ್ದೇಶ : ಕಥೆ / ಪ್ರಾಸಗೀತೆಗಳಲ್ಲಿಯ ಪದಗಳನ್ನು ಗುರುತಿಸುವರು ರಚಿಸುವರು ಮತ್ತು ವಿಭಜಿಸುವರು.
ಅಗತ್ಯ ಸಾಮಗ್ರಿಗಳು : ಪ್ರಾಸಗೀತೆ, ಹಾಡು, ಕಥೆ, ನೆಚ್ಚಿನ ಪುಸ್ತಕ, ಖಾಲಿ ಕಾರ್ಡ್ಗಳು, ಚಾರ್ಟ ಪೇಪರ್.
ವಿಧಾನ :
* ಸರಳ ಪರಿಚಿತ ಪ್ರಾಸ, ಹಾಡು, ಕಥೆಗಳ ಚಾರ್ಟ್ ತಯಾರಿಸಿ ಅದರಲ್ಲಿಯ ಪ್ರಮುಖ ಪದ/ ವಾಕ್ಯಗಳನ್ನು
ದಪ್ಪ ಅಕ್ಷರಗಳಲ್ಲಿ ತೊರಿಸುವಂತೆ ಬರೆದು ಕಪ್ಪುಹಲಗೆ ಮೇಲೆ ಚಾರ್ಟನ್ನು ಪ್ರದರ್ಶೀಸುವುದು.
* ಮಕ್ಕಳಿಗೆ ಕಥೆ/ ಪ್ರಾಸಗೀತೆಯಲ್ಲಿಯ ವಾಕ್ಯಗಳನ್ನು ಪುನರಾವರ್ತಿಸಿ ಓದುವುದು ಮತ್ತು ಹೇಳಿಕೊಡುವುದು.
* ಶಿಕ್ಷಕರು ವಾಕ್ಯದಲ್ಲಿನ ಪದವನ್ನು ಗಟ್ಟಿಯಾಗಿ ಓದಬೇಕು ನಂತರ ಮಕ್ಕಳನ್ನು ಕಪ್ಪುಹಲಗೆ ಬಳಿ ಕರೆದು ತಾವು
ಹೇಳಿದ ಪದವನ್ನು ಚಾರ್ಟ್ನಲ್ಲಿ ಮುಟ್ಟುವ ಮೂಲಕ ಆ ಪದವನ್ನು ತೋರಿಸಲು ಹೇಳಬೇಕು.
* ಶಿಕ್ಷಕರು ಒಂದು ವಾಕ್ಯವನ್ನು ಓದಬೇಕು ಅದೇ ವಾಕ್ಯದಲ್ಲಿ ಒಂದು ಪದವನ್ನು ಬದಲಾಯಿಸಿ ಓದಬೇಕು.
ಬದಲಾಯಿಸಿದ ಪದ ಯಾವುದು ಎಂದು ಮಕ್ಕಳು ಬೋರ್ಡ್ನಲ್ಲಿ ಮುಟ್ಟುವ ಮೂಲಕ ತೋರಿಸಬೇಕು.
ಉದಾ; ರವಿಯ ಬಳಿ ಒಂದು ಕುರಿ ಇತ್ತು.
ರವಿಯ ಬಳಿ ಒಂದು ಬೆಕ್ಕು ಇತ್ತು
ಶಿಕ್ಷಕರು ಯಾವ ಪದ ಬದಲಾಯಿಸಿದ್ದಾರೆ ಎಂಬುದನ್ನು ಮಕ್ಕಳು ತೋರಿಸಬೇಕು.
೨ ಮತ್ತು ೩ನೇ ತರಗತಿ : ಶಿಕ್ಷಕರು ಮಕ್ಕಳಿಗೆ ಕಥೆ/ ಪ್ರಾಸಗೀತೆಗಳಲ್ಲಿಯ ಪ್ರಮುಖ ಪಾತ್ರಗಳ ಹೆಸರುಗಳನ್ನು
ಹೊರ ತೆಗೆದು ಬೇರೆ ಪಾತ್ರಗಳನ್ನು ಹೊಸದಾಗಿ ಸೇರಿಸುವ ಮೂಲಕ ಅದೇ ಕಥೆ ಪ್ರಾಸಗೀತೆಗಳನ್ನು ರಚಿಸಲು
ಮಾರ್ಗದರ್ಶಿಸುವುದು.
ಗಮನಿಸಿ: ಈ ಚಟುವಟಿಕೆಯನ್ನು ದಿನ ೬೯ರಲ್ಲಿ ಪುನರಾವರ್ತಿಸುವುದು
*ಉದ್ದೇಶಿತ ಬರಹ*
ಸಾರ‍್ಥ್ಯ: ಉದ್ದೇಶಿತ ಬರವಣಿಗೆ, ವೀಕ್ಷಣೆ, ಕಲ್ಪನೆ, ಸೃಜನಶೀಲ ಚಿಂತನೆ, ಪರಿಸರ ಪ್ರಜ್ಞೆ,
ಚಟುವಟಿಕೆ: ಹವಾಮಾನ ನಕ್ಷೆ (ಗುರಿ-೨) (೫೮ನೇ ದಿನದಿಂದ ಮುಂದುವರೆದಿದೆ)
ಉದ್ದೇಶಗಳು:
• ಉದ್ದೇಶಿತ ಬರವಣಿಗೆಯನ್ನು ರೂಢಿಸುವುದು.
• ವೀಕ್ಷಣಾ ಕೌಶಲವನ್ನು ಬೆಳೆಸುವುದು.
• ಸೃಜನಶೀಲ ಚಿಂತನೆಯನ್ನು ಉತ್ತೇಜಿಸುವುದು.
• ಪರಿಸರ ಪ್ರಜ್ಞೆ ಮೂಡಿಸುವುದು.
ಅಗತ್ಯ ಸಾಮಗ್ರಿಗಳು : ಕಾಗದ/ ಹಾಳೆಗಳು, ಪೆನ್ಸಿಲ್
ವಿಧಾನ : ವಾರದ ದಿನಗಳ ಬಗ್ಗೆ ಮಕ್ಕಳೊಂದಿಗೆ ರ‍್ಚಿಸುವುದು.
- ವಾರದ ದಿನಗಳ ಪಟ್ಟಿಯನ್ನು ತರಗತಿಯಲ್ಲಿ ಪ್ರರ‍್ಶೀಸುವುದು.
- ಗುಂಪು ಚಟುವಟಿಕೆಯ ಸಮಯದಲ್ಲಿ ಆ ದಿನದ ಹವಾಮಾನವನ್ನು ಗಮನಿಸಲು ತಿಳಿಸುವುದು.
- ಇದರ ಬಗ್ಗೆ ಮಕ್ಕಳೊಂದಿಗೆ ರ‍್ಚಿಸಿ ಖಾಲಿ ಹಾಳೆಗಳನ್ನ ನೀಡಿ ನಿನ್ನೆ-ಇಂದಿನ ಹವಾಮಾನದ ಚಿತ್ರವನ್ನು
ಬರೆಯಲು ತಿಳಿಸುವುದು.
- ಮಕ್ಕಳ ಕರ‍್ಯಗಳನ್ನು ತರಗತಿಯಲ್ಲಿ ಪ್ರರ‍್ಶಿಸುವುದು.
ತರಗತಿವಾರು ವಿವರ: ೨ನೇ ತರಗತಿಯ ಮಕ್ಕಳು ದಿನದ ಹವಾಮಾನವನ್ನು ತಮ್ಮ ಪುಸ್ತಕದಲ್ಲಿ ದಾಖಲಿಸುವಂತೆಯೂ
೩ನೇ ತರಗತಿಯ ಮಕ್ಕಳು ತರಗತಿ ಹವಾಮಾನ ನಕ್ಷೆಯಲ್ಲಿ ದಿನದ ಹವಾಮಾನವನ್ನು ದಾಖಲಿಸಲು ತಿಳಿಸುವುದು.
(೭೦ನೇ ದಿನಕ್ಕೆ ಮುಂದುವರೆದಿದೆ)
ಬರವಣಿಗೆಯ ಮಾದರಿ:
ಶಿಕ್ಷಕರು ಮಕ್ಕಳೆದುರು ಕಪ್ಪುಹಲಗೆಯಲ್ಲಿ ಬರೆಯುವುದು. ಬರವಣಿಗೆಯ ಸರಿಯಾದ ಕ್ರಮವನ್ನು ಮಕ್ಕಳು
ನೋಡಲು ಅವಕಾಶ ಕಲ್ಪಿಸುವುದು.
ಮಕ್ಕಳ ಹೆಸರು, ಮಕ್ಕಳು ಬರೆದ ಚಿತ್ರಗಳ ಹೆಸರು ಮೊದಲಾದವುಗಳನ್ನು ಮಕ್ಕಳೆದುರೇ ಬರೆಯುವುದು.
ಶಿಕ್ಷಕರು ತರಗತಿಯಲ್ಲಿ ಏನನ್ನೇ ಬರೆಯುವುದಾದರೂ ಮಕ್ಕಳ ಎದುರಿನಲ್ಲಿಯೇ ಬರೆಯುವುದು.
ಅವಧಿ - 6(40ನಿ)
*ಹೊರಾಂಗಣ ಆಟಗಳು*
ದಿನ ೬೨ರ ಚಟುವಟಿಕೆಗಳನ್ನು ಪುನರಾರ‍್ತಿಸುವುದು.
--------------------------------
ಅವಧಿ - 7(40ನಿ)
*ಕಥಾ ಸಮಯ*
ಶರ‍್ಷಿಕೆ : ಒಂಟೆ ಮತ್ತು ನರಿ
ಸಾಮಗ್ರಿಗಳು : ಸಾಹಿತ್ಯ
ಉದ್ದೇಶಗಳು :
ಆಲೋಚನಾ ಶಕ್ತಿಯನ್ನು ಹೆಚ್ಚಿಸುವುದು.
ಪ್ರಶ್ನಿಸುವ ಮನೋಭಾವ ಉಂಟುಮಾಡುವುದು.
ಓದುವ ಹವ್ಯಾಸವನ್ನು ಬೆಳೆಸುವುದು.
ವಿಧಾನ : ಕಥೆಯ ಸಾಹಿತ್ಯ ಓದು
ಕಥೆಯ ಸಾರಾಂಶವನ್ನು ಹೇಳಿದ ನಂತರ ಸಾಹಿತ್ಯವನ್ನು ಯಥಾವತ್ತಾಗಿ ಗಟ್ಟಿಯಾಗಿ ಓದಿ, ಕಥೆಯ ಸಂಭಾಷಣೆಯಲ್ಲಿನ
ಸಾಲುಗಳನ್ನು ಪುನರುಚ್ಚರಿಸುವುದು ಮತ್ತು ಬರೆಯುವುದು. ಕಥಾಸಮಯವನ್ನು ಮನೋರಂಜನಾತ್ಮಕವಾಗಿ
ಸೃಜಿಸುವುದು. ನಂತರ ಹಿರಿಯ ವಿದ್ಯರ‍್ಥಿಗಳು ಓದುವ ಮೂಲೆಯಲ್ಲಿ ಇಟ್ಟಿರುವ ಕಥಾ ಪುಸ್ತಕಗಳನ್ನು ಓದಲು
ಸೂಚಿಸುವುದು.
ಕಥೆಯನ್ನು ಹೇಳಿದ ನಂತರ ಸರಳ ಪ್ರಶ್ನೆಗಳನ್ನು ಕೇಳಿ.
• ಕಾವಲುಗಾರರಿಂದ ಒಂಟೆಗೆ ತಪ್ಪಿಸಿಕೊಳ್ಳಲು ಆಗಲಿಲ್ಲ ಏಕೆ?
(ಕಥೆಯನ್ನು ಆನಂದಿಸುವುದರ ಜೊತೆಗೆ ಆಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು)
--------------------------------
-----------------------------------
ಅವಧಿ -8(20ನಿ)
*ಮತ್ತೆ ಸಿಗೋಣ*
• ಈ ದಿನ ನರ‍್ವಹಿಸಿದ ಚಟುವಟಿಕೆಗಳನ್ನು ಪುನರಾರ‍್ತಿಸಿ/ನೆನಪಿಸಿ
• ಈ ದಿನ ಮಕ್ಕಳು ನರ‍್ವಹಿಸಿದ ಎಲ್ಲಾ ಚಟುವಟಿಕೆಗಳನ್ನು ಪೋಷಕರೊಂದಿಗೆ ಮತ್ತು ಕುಟುಂಬದ
ಸದಸ್ಯರೊಂದಿಗೆ ಹಂಚಿಕೊಳ್ಳಲು ಪ್ರೋತ್ಸಾಹಿಸಿ.
• ಮರುದಿನ ಮಕ್ಕಳು ಸಂತೋಷದಿಂದ ಹಿಂದಿರುಗಲು ಒಂದು ಚಿಕ್ಕ ಸಂತಸದಾಯಕ ಸನ್ನಿವೇಶವನ್ನು ಏರಪಡಿಸಿ,
ಬೀಳ್ಕೊಡಿ.
【ವಿದ್ಯಾ ಪ್ರವೇಶ ಮತ್ತು ಕಲಿಕಾ ಹಾಳೆಗಳ ಮಾಹಿತಿಯ ಅಪ್ ಡೇಟ್ ವೀಕ್ಷಿಸಲು ಮೇಲೆ ಕ್ಲಿಕ್ ಮಾಡಿ ಅದರಲ್ಲಿ ಶಾಲಾ ವಿಭಾಗಕ್ಕೆ ಹೋಗಿ ಅದರಲ್ಲಿ ಕಲಿಕಾ ಚೇತರಿಕೆಯ ಅಪ್ಡೇಟ್ ವೀಕ್ಷಿಸಬಹುದು】
[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]
ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್
------------------------------
*ವಂದನೆಗಳೊಂದಿಗೆ* ,
ರೇಣುಕಾರಾಧ್ಯ ಪಿ ಪಿ
ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ, ಹಾಸನ
*ಸಲಹೆ ಮತ್ತು ಮಾರ್ಗದರ್ಶನ*
ಶ್ರೀಯುತ ಎಂ.ಎಸ್.ಫಣೀಶ
ಹಿರಿಯ ಉಪನ್ಯಾಸಕರು ಡಯಟ್ ಹಾಸನ
ಶ್ರೀಯುತ ಆರ್.ಡಿ.ರವೀಂದ್ರ
ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ
No comments:
Post a Comment